ಕ್ರೆಡಿಟ್ ಕಾರ್ಡ್ ಪಡೆಯಲು ಆರ್‌ಬಿಐ ನಿಂದ ಹೊಸ ರೂಲ್ಸ್! ಬ್ಯಾಂಕ್ ಅಕೌಂಟ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

credit card new rule

ಇತ್ತೀಚಿನ ದಿನಗಳಲ್ಲಿ ಕ್ರೆಡಿಟ್ ಕಾರ್ಡ್ (Credit card ) ಪಡೆದುಕೊಳ್ಳುವರ ಸಂಖ್ಯೆ ಹೆಚ್ಚಾಗುತ್ತಿದೆ. ಆನ್ಲೈನ್ ಶಾಪಿಂಗ್ ನಲ್ಲಿ ವಿವಿಧ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಗಳ ಮೇಲೆ ಭಾರಿ ಆಫರ್ ಗಳು ಮತ್ತು ನೋ ಕಾಸ್ಟ್ ಇಎಂಐ ( No cost EMI ) ಯೋಜನೆಗಳನ್ನು ಕೊಡುತ್ತಿರುವುದರಿಂದ ಹಲವು ಜನರು ಹೊಸ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳುತ್ತಿರುವುದು ಸಾಮಾನ್ಯ ವಾಗಿದೆ. ಹೊಸ ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಎಲ್ಲಾ ಬ್ಯಾಂಕುಗಳಿಗೆ ಆರ್‌ಬಿಐ (RBI)ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿಗಾಗಿಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇದೇ ದಿನಾಂಕ ಮಾರ್ಚ್ 6, ಬುಧವಾರದಂದು ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ವಿತರಿಸುವ ಎಲ್ಲಾ ಬ್ಯಾಂಕುಗಳಿಗೆ ಮತ್ತು ಹಣಕಾಸು ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಮಾರ್ಗಸೂಚಿ ಪ್ರಕಟಿಸಿ ಆದೇಶ ಹೊರಡಿಸಿದೆ. ಹೌದು, ಭಾರತದಲ್ಲಿ 2023ರ ಡಿಸೆಂಬರ್‌ವರೆಗೆ 9.79 ಕೋಟಿ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಿಸಲಾಗಿದೆ ಎಂದು ಆರ್‌ಬಿಐ ಅಂಕಿಅಂಶಗಳು ತಿಳಿಸಿವೆ.

ಈ ಹೊಸ ಆದೇಶದ ಪ್ರಕಾರ, ಬ್ಯಾಂಕುಗಳಲ್ಲಿ ಹೊಸ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ (Debit card ) ಪಡೆಯುವ ಗ್ರಾಹಕರಿಗೆ ಬ್ಯಾಂಕುಗಳಲ್ಲಿ ಒಂದಕ್ಕಿಂತ ಹೆಚ್ಚು ಕಾರ್ಡ್ ನೆಟ್ವರ್ಕ್ ಗಳ ಆಯ್ಕೆಯನ್ನು ಗ್ರಾಹಕರಿಗೆ ಬ್ಯಾಂಕ ಒದಗಿಸಬೇಕು ಎಂದು ಹೇಳಲಾಗಿದೆ. ಇದರಿಂದ ಗ್ರಾಹಕರು ತಮಗೆ ಬೇಕಾದ ಕಾರ್ಡ್ ನೆಟವರ್ಕ್ ಪಡೆಯಲು ಅನುಕೂಲವಾಗುತ್ತದೆ. ಕಾರ್ಡ್ ವಿತರಕರು ಮತ್ತು ನೆಟ್ ವರ್ಕ್ ಗಳೊಂದಿಗೆ ಈಗಿರುವ ವ್ಯವಸ್ಥೆಯಲ್ಲಿ ಗ್ರಾಹಕರು ತಾವು ಇಚ್ಛೆಸಿರುವ ನೆಟ್ವರ್ಕ್ ಸೇವೆ ಪಡೆಯಲು ಅವಕಾಶ ಇರುವುದಿಲ್ಲ ಹಾಗಾಗಿ ಈ ಆದೇಶ ಹೊರಡಿಸಿದೆ ಎಂದು ಆರ್ ಬಿ ಐ ಹೇಳಿದೆ.

whatss

ಕಾರ್ಡ್ ವಿತರಕರು ಯಾವುದೇ ಕಾರಣಕ್ಕೂ ನೆಟ್ವರ್ಕ್ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಾರದು, ಎಂದು ಸೂಚಿಸಲಾಗಿದೆ. ಈಗಾಗಲೇ ಕ್ರೆಡಿಟ್ ಕಾರ್ಡ್ ಹೊಂದಿದ ಗ್ರಾಹಕರು ನವೀಕರಣ ಮಾಡುವಾಗ ಹೊಸ ನೆಟ್ವರ್ಕ್ ಗೆ ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆದರೆ 10 ಲಕ್ಷಕ್ಕಿಂತ ಕಡಿಮೆ ಕಾರ್ಡ್ ವಿತರಿಸಿದ ಬ್ಯಾಂಕುಗಳಿಗೆ ಅಥವಾ ಹಣಕಾಸು ಸಂಸ್ಥೆಗಳಿಗೆ ಈ ಹೊಸ ನಿಯಮ ಅನ್ವಯವಾಗುವುದಿಲ್ಲ. ಈ ಮಾರ್ಗಸೂಚಿ ಪ್ರಕಟವಾದ ಮುಂದಿನ ಆರು ತಿಂಗಳವರೆಗೆ ಈ ಹೊಸ ನಿಯಮಗಳು ಜಾರಿಯಲ್ಲಿರುತ್ತವೆ.

ಕಾರ್ಡ್ ನೆಟ್ ವರ್ಕ್ ಎಂದರೇನು?

ಈಗಾಗಲೇ ಭಾರತದಲ್ಲಿ ವೀಸಾ ವರ್ಲ್ಡ್‌ ವೈಡ್, ಮಾಸ್ಟರ್‌ಕಾರ್ಡ್ ಏಷ್ಯಾ/ಫೆಸಿಪಿಕ್ ಲಿಮಿಟೆಡ್, ಅಮೆರಿಕನ್ ಎಕ್ಸ್‌ಪ್ರೆಸ್‌ ಬ್ಯಾಂಕಿಂಗ್ ಕಾರ್ಪೊರೇಷನ್, ಡೈನರ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಲಿಮಿಟೆಡ್, , ರಾಷ್ಟ್ರೀಯ ಪಾವತಿಗಳ ನಿಗಮದ (ಎನ್‌ಪಿಸಿಐ) ರುಪೇ ಕಂಪನಿಯನ್ನು ಕಾರ್ಡ್ ನೆಟ್‌ವರ್ಕ್‌ಗಳೆಂದು ಆರ್‌ಬಿಐ ಅಧಿಕೃತಗೊಳಿಸಿದೆ. ರುಪೇ ನಮ್ಮ ದೇಶೀಯ ಕಾರ್ಡ್ ನೆಟ್‌ವರ್ಕ್ ಆಗಿದೆ.

ಈಗಾಗಲೇ ಭಾರತದಲ್ಲಿ ಅತಿ ಹೆಚ್ಚು ಕಾರ್ಡ್ ಗಳನ್ನು ವಿತರಿಸಿದ ಹೆಗ್ಗಳಿಕೆ HDFC ಬ್ಯಾಂಕ್ ಗೆ ಸಲ್ಲುತ್ತದೆ. ಹೌದು ಸುಮಾರು 2 ಕೋಟಿ ಕಾರ್ಡ್ ವಿತರಿಸಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಮುಂಚೂಣಿಯಲ್ಲಿದೆ. ಶೇ 70ರಷ್ಟು ಕಾರ್ಡ್‌ಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಹಾಗೂ ಎಕ್ಸಿಸ್ ಬ್ಯಾಂಕ್ ವಿತರಿಸಿವೆ. ಎಸ್‌ಬಿಐ 1.84 ಕೋಟಿ ಕಾರ್ಡ್‌ಗಳನ್ನು ವಿತರಿಸಿದೆ. ಮತ್ತು ನಿಮ್ಮ ಹತ್ತಿರ ಯಾವ ಬ್ಯಾಂಕಿನ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಇದೇ ಎಂಬುದನ್ನು ಕಮೆಂಟ್ ನಲ್ಲಿ ತಿಳಿಸಿ.

ಭಾರತೀಯ ರಿಸರ್ವ್ ಬ್ಯಾಂಕ್ ನ ಹೊಸ ಆದೇಶದ ಪ್ರಕಾರ ಇನ್ನು ಮುಂದೆ ಬ್ಯಾಂಕ್ ಗಳಲ್ಲಿ ಗ್ರಾಹಕರು ತಮಗೆ ಬೇಕಾದ ನೆಟ್ವರ್ಕ್ ಕಾರ್ಡ್ ಗಳನ್ನು ಕೇಳಿ ಪಡೆಯಬಹುದು. ಈ ಉತ್ತಮ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ ಅವರಿಗೂ ಈ ಕುರಿತು ತಿಳಿಸಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!