ಕರ್ನಾಟಕದಲ್ಲಿ ಕೆಲವು ದಿನಗಳಿಂದ ಎಳನೀರು ಪ್ರಿಯರ ಜೇಬಿಗೆ ಕತ್ತರಿ ಬೀಳುತ್ತಿದೇ ಎಂದು ಹೇಳಬಹುದು, ಹಾಗಂತ ನಾವು ಕೊಡುತ್ತಿರುವ ಎಳನೀರಿನ ಈ ಹಣ ನೇರವಾಗಿ ರೈತರಿಗೆ ಸಿಗುತ್ತೆ ಎಂದರೆ ನಮ್ಮ ಪರಿಕಲ್ಪನೆ ತಪ್ಪು, ರೈತರ ( Formers )ಸಂಕಷ್ಟ ಕೇಳುವವರಾರು , ರೈತರು ಇದೀಗ ಸುಮಾರು ಎಲ್ಲ ಬೆಳೆಗಳಲ್ಲೂ ನಷ್ಟವನ್ನು ಅನುಭವಿಸುತ್ತಿದ್ದಾರೆ. ಹಾಗೆಯೇ ಎಳನೀರು ಮಾರಾಟದಲ್ಲೂ ಕೂಡ ಅಪಾರವಾದ ನಷ್ಟವನ್ನು ( Loss ) ಅನುಭವಿಸುತ್ತಿದ್ದಾರೆ. ಹೌದು ಎಳನೀರು ( Tender Coconut ) ಬೆಳೆದ ರೈತ ಮಾರಾಟದ ದರದಲ್ಲಿ ನಷ್ಟ ವನ್ನು ಅನುಭವಿಸುತ್ತಿದ್ದಾನೆ ಬೆಳೆ ಬೆಳೆದ ರೈತನಿಗೆ ನಷ್ಟ , ರೈತನಿಂದ ಖರೀದಿ ಮಾಡಿ ಮಾರುಕಟ್ಟೆಯಲ್ಲಿ ( Market ) ಮಾರಾಟ ಮಾಡುವ ಮಧ್ಯವರ್ತಿಗೆ ಲಾಭ ಸಿಗುತ್ತಿದೆ. ಹೀಗಾದ್ರೆ ರೈತರ ಗತಿ ಏನು ?
ಮಧ್ಯವರ್ತಿಗಳಿಗೆ ಝಣ ಝಣ ಕಾಂಚಾಣ!

ತೆಂಗಿಗೆ ( Coconut ) ಅಪಾರ ನಷ್ಟ ಉಂಟಾಗಿದೆ. ಮೂರು ನಾಲ್ಕು ವರ್ಷದಿಂದ ತೆಂಗಿನಕಾಯಿ ಬೆಳೆಯುವ ರೈತರಿಗೆ ಸರಿಯಾದ ಬೆಲೆ ಸಿಗದೇ ಹೋಗಿದೆ. ಹಾಗೆಯೇ ತೆಂಗಿನ ಯಾವುದೇ ವ್ಯಾಪರದಲ್ಲೂ ಕೂಡ ಸರಿಯಾದ ಬೆಲೆ ಸಿಗುತ್ತಿಲ್ಲ. ಹೀಗಾಗಿ ಬೆಳೆ ಬೆಳೆಯುತ್ತಿರುವ ರೈತರು ಹೈರಾಣಾಗಿದ್ದಾರೆ.
ಈಗ ನೋಡುವಾದರೆ ಎಳನೀರಿಗೆ ಬಹಳ ಬೆಲೆ ಇದೆ ಜನಸಾಮಾನ್ಯ ನಿಗೆ ಕೊಂಡು ಕೊಂಡು ಕುಡಿವಂತೆ ಆಗುತ್ತಿಲ್ಲ. ಆದರೆ ಬೆಳೆ ಬೆಳೆದ ರೈತನಿಗೂ ಕೂಡ ಲಾಭವಿಲ್ಲ. ಎಳನೀರು ಮಾರಾಟ ವಿಷಯದಲ್ಲಿ ನಿಯಂತ್ರಣವೇ ಇಲ್ಲದಂತಾಗಿದೆ. ಆದರೆ ಇದರ ನಡುವೆ ಮಧ್ಯವರ್ತಿಗಳು ಲಾಭವನ್ನು ಪಡೆಯುತ್ತಿದ್ದರೆ. ರೈತ ಮತ್ತು ಗ್ರಾಹಕರಾದ ಜನಸಾಮಾನ್ಯರು ಶೋಷಣೆಗೆ ಇದೀಗ ( Exploitation ) ಒಳಗಾಗುತ್ತಿದ್ದಾರೆ.
ಕಳೆದ ಹಲವು ವರ್ಷದಿಂದ ಏಳನೀರಿಗೆ ಸರಿಯಾದ ಬೆಲೆಯೇ ಇಲ್ಲದೆ ಬೆಳೆಗಾರ ಹೈರಾಣಾಗಿದ್ದಾನೆ. ಹಾಗೆಯೇ ಎಳನೀರು ಖರೀದಿಸುವ ಗ್ರಾಹಕನಿಗೆ ಕೊಂಡು ಕೊಳ್ಳುವಷ್ಟು ಹೊರೆ ಆಗಿದೆ. ರೈತ ಮತ್ತ ಗ್ರಾಹಕನ ನಡುವೆ ಬರೋಬ್ಬರಿ 24 ರೂ. ವ್ಯತ್ಯಾಸವಿದೆ. ಎಲ್ಲಿ ಏನಾಗುತ್ತಿದೆಯೆ ಮತ್ತು ಯಾರು ಏನು ಮಾಡುತ್ತಿದ್ದಾರೆ ಎಂದು ಹೇಳುವವರು ಕೇಳುವವರು ಇಲ್ಲದಂತಾಗಿದೆ.
ದಾವಣಗೆರೆಯಿಂದ ಹುಬ್ಬಳ್ಳಿ ವರೆಗೂ ನೀವು ಪ್ರಯಾಣಿಸುತ್ತಿದ್ದರೆ ಮಾರ್ಗ ಮಧ್ಯದಲ್ಲಿ ಒಂದು ಎಳೆನೀರಿನ ಬೆಲೆ 35 ರಿಂದ 40 ರೂಪಾಯಿಗಳು.
ಇದನ್ನೂ ಓದಿ – ಉಚಿತ ಅಡುಗೆ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ, ಪ್ರಧಾನ್ ಮಂತ್ರಿ ಉಜ್ವಲ ಯೋಜನೆ 2023
ಎಳನೀರು ಬೆಳೆದ ರೈತನಿಗೆ ಸಿಗುವ ಲಾಭವೆಷ್ಟು ?

ರೈತನು ಬೆಳೆದ ಒಂದು ಎಳನೀರಿಗೆ 10 ರಿಂದ 11 ರೂ ನೀಡಲಾಗುತ್ತದೆ. ಆದರೆ ಅದೇ ಎಳನೀರು ರೈತರಿಂದ ಮಧ್ಯವರ್ತಿಗಳ ಮುಖಾಂತರ ನಗರ ( City ) ಸೇರಿ ಗ್ರಾಹಕನಾದ ಜನಸಾಮಾನ್ಯರಿಗೆ ಮುಟ್ಟುವ ಹೊತ್ತಿಗೆ 35 ರೂ ಆಗುತ್ತದೆ. ಇನ್ನೂ ನೋಡುವದಾದರೆ ಆಸ್ಪತ್ರೆಗಳ ಅಕ್ಕ ಪಕ್ಕ ಈ ಎಳನೀರು ಬೆಲೆ 40 ರೂ. ಬೆಲೆಗಿಂತಲೂ ಹೆಚ್ಚು ದಾಟುತ್ತದೆ. ಹಾಗೆಯೇ ಒಂದು ಸ್ಥಳದಿಂದ ಮತ್ತೊಂದು ಕಡೆಗೆ ಸಾಗುವ ಏಳನೀರಿನ ದರ ಸುಮಾರು 50 ರೂ ಗಿಂತಲೂ ಹೆಚ್ಚು ದಾಟುತ್ತದೆ.
ಹೀಗೆ ಆದರೆ ಇಲ್ಲಿ ಬೆಳೆ ಬೆಳೆದ ರೈತನಿಗೆ ಅಪಾರ ನಷ್ಟ ಸಂಭವಿಸುತ್ತದೆ. ವರ್ಷಗಟ್ಟಲೆ ಕಷ್ಟ ಪಟ್ಟು ಉತ್ತುಬಿತ್ತು ಬೆಳೆದ ರೈತನಿಗೆ ಕೇವಲ 10 ರಿಂದ 11 ರೂ. ಅಲ್ಲಿಂದ ನಗರಕ್ಕೆ ( City ) ತಂದು ಮಾರಾಟ ಮಾಡುವವರು ಅದನ್ನು ಎಳನೀರು ಮಾರಾಟಗಾರರಿಗೆ 25 ರಿಂದ 30 ರೂ.ಗೆ ಮಾರಾಟ ಮಾಡಿ, 14 ರಿಂದ 19 ರೂ. ಲಾಭವನ್ನು ಜೇಬಿಗೆ ಇಳಿಸುತ್ತಿದ್ದಾರೆ. ಸಿಟಿಯಲ್ಲಿಎಳನೀರು ಮಾರಾಟ ಮಾಡುವವರಿಗೆ ಒಂದು ಎಳನೀರಿಗೆ 5 ರೂ.ಲಾಭ ಸಿಗುತ್ತಿದೆ.
ಹೀಗೆ ರೈತರು ಮತ್ತು ಗ್ರಾಹಕರು ಬಹಳ ವಂಚಿತರಾಗಿದ್ದಾರೆ. ಮತ್ತು ಬೆಳೆ ಬೆಳೆಯುವ ರೈತರ ಜೇಬಿಗೆ ಕತ್ತರಿ ಬೀಳುತ್ತಿದೆ. ನಿಮ್ಮ ಊರಿನಲ್ಲಿ ಎಳನೀರಿನ ಬೆಲೆ ಎಷ್ಟಿದೆ ಅಂತ ಕಮೆಂಟ್ ನಲ್ಲಿ ತಿಳಿಸಿ
ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






