LPG Cylinder – ಉಚಿತ ಅಡುಗೆ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ, ಪ್ರಧಾನ್ ಮಂತ್ರಿ ಉಜ್ವಲ ಯೋಜನೆ 2023

Ujwala free gas connection

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ LPG ಗ್ಯಾಸ್(Free Gas) ಗೆ ಅರ್ಜಿ ಸಲ್ಲಿಸಬಹುದಾಗಿದೆ. ಏನಿದು ಹೊಸ ಯೋಜನೆ, ಇದು ಯಾರಿಗೆ ಸಂಬಂಧ ಪಟ್ಟಿದೆ ಮತ್ತು ಈ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳ ಬಗ್ಗೆ ಪೂರ್ಣ ಮಾಹಿತಿಬೇಕೇ ಹಾಗಿದ್ದಲ್ಲಿ ನೀ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ(Pradhana mantri ujwala scheme)ಯು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸಮಾಜ ಕಲ್ಯಾಣ ಯೋಜನೆಯಾಗಿದೆ. ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ, ದೇಶದಲ್ಲಿನ ಬಿಪಿಎಲ್ ( BPL ) ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಉದ್ದೇಶಗಳು( purpose ) :

ಉಜ್ವಲಾ ಯೋಜನೆಯು ದೇಶಾದ್ಯಂತ ಬಿಪಿಎಲ್ ( BPL ) (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಗಳಲ್ಲಿರುವ ಮಹಿಳೆಯರ ಹೆಸರಿನಲ್ಲಿ 5 ಕೋಟಿ ಎಲ್‌ಪಿಜಿ ( LPG ) ಸಂಪರ್ಕಗಳನ್ನು ಒದಗಿಸುವುದಾಗಿದೆ. ಈ ಯೋಜನೆ ಅಡಿಯಲ್ಲಿ ದೇಶಾದ್ಯಂತ ಬಿಪಿಎಲ್ ಕುಟುಂಬಗಳಿಗೆ 5 ಕೋಟಿ ಎಲ್‌ಪಿಜಿ ಸಂಪರ್ಕಗಳನ್ನು ವಿತರಿಸುವುದಾಗಿದೆ.

ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!

ಈ ಯೋಜನೆಯ ಕೆಲವುಮುಖ್ಯ ಉದ್ದೇಶಗಳು ಏನೆಂದು ನೋಡೋಣ ಬನ್ನಿ,

ಮಹಿಳೆಯರ ಸಬಲೀಕರಣ ( Women Empoverment ) ಮತ್ತು ಅವರ ಆರೋಗ್ಯವನ್ನು ರಕ್ಷಿಸುವುದು. ಪಳೆಯುಳಿಕೆ ಇಂಧನವನ್ನು ಆಧರಿಸಿದ ಅಡುಗೆಗೆ ಸಂಬಂಧಿಸಿದ ಗಂಭೀರ ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡುವುದು. ಮತ್ತು ಅಶುದ್ಧ ಅಡುಗೆ ಇಂಧನದಿಂದ ಭಾರತದಲ್ಲಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡುವುದು. ಪಳೆಯುಳಿಕೆ ಇಂಧನವನ್ನು ಸುಡುವ ಮೂಲಕ ಒಳಾಂಗಣ ವಾಯು ಮಾಲಿನ್ಯದಿಂದ ಉಂಟಾಗುವ ತೀವ್ರವಾದ ಉಸಿರಾಟದ ಕಾಯಿಲೆಗಳಿಂದ ಚಿಕ್ಕ ಮಕ್ಕಳನ್ನು ತಡೆಗಟ್ಟುವುದಾಗಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:

BPL ಕುಟುಂಬದ ಅರ್ಹ ಮಹಿಳಾ ಅಭ್ಯರ್ಥಿಗಳು ಉಜ್ವಲಾ ಯೋಜನೆ KYC ಅರ್ಜಿ ನಮೂನೆಯನ್ನು (ನಿಗದಿತ ನಮೂನೆಯಲ್ಲಿ) ಭರ್ತಿ ಮಾಡುವ ಮೂಲಕ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು 2 ಪುಟದ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕಾಗುತ್ತದೆ ಮತ್ತು ಫಾರ್ಮ್‌ನೊಂದಿಗೆ ಅಗತ್ಯ ದಾಖಲೆಗಳನ್ನು ನೀಡಬೇಕು. ಅರ್ಜಿಯನ್ನು ಭರ್ತಿ ಮಾಡಲು ಹೆಸರು, ಸಂಪರ್ಕ ವಿವರಗಳು, ಜನ್ ಧನ್ / ಬ್ಯಾಂಕ್ ಖಾತೆ(Bank Account) ಸಂಖ್ಯೆ, ಆಧಾರ್ ಕಾರ್ಡ್(Aadhar card) ಸಂಖ್ಯೆ ಮುಂತಾದ ಮೂಲ ವಿವರಗಳು ಅಗತ್ಯವಿದೆ. ಉಜ್ವಲ ಯೋಜನೆಗಾಗಿ KYC ಅರ್ಜಿಯನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಬಹುದು ಮತ್ತು ಜೊತೆಗೆ ಹತ್ತಿರದ ಎಲ್‌ಪಿಜಿ ಔಟ್‌ಲೆಟ್‌ಗೆ ಸಲ್ಲಿಸಬಹುದು.

ಉಜ್ವಲ ಯೋಜನೆಯ LPG ಅರ್ಜಿಗೆ ಅಗತ್ಯವಿರುವ ದಾಖಲೆಗಳು :

BPL ಪ್ರಮಾಣಪತ್ರ
ಬಿಪಿಎಲ್ ಪಡಿತರ ಚೀಟಿ(BPL Ration Card).
ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ
ಒಂದು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ.

ಇದನ್ನೂ ಓದಿ – Smartphones – 15 ಸಾವಿರ ರೂ. ಒಳಗೆ ಸಿಗುವ ಬೆಸ್ಟ್ 5G ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ ನೋಡಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

One thought on “LPG Cylinder – ಉಚಿತ ಅಡುಗೆ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಆಹ್ವಾನ, ಪ್ರಧಾನ್ ಮಂತ್ರಿ ಉಜ್ವಲ ಯೋಜನೆ 2023

Leave a Reply

Your email address will not be published. Required fields are marked *

error: Content is protected !!