Jio Laptop – ಮೊಬೈಲ್ ಗಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ ಜೀಯೋ ಕ್ಲೌಡ್ ಲ್ಯಾಪ್ಟಾಪ್..! ಇಲ್ಲಿದೆ ಡೀಟೇಲ್ಸ್

cloud laptop

ಎಲ್ಲರಿಗೂ ಒಂದು ಖುಷಿಯ ವಿಚಾರ ಏನೆಂದರೆ, ರಿಲಾಯನ್ಸ್ ಜಿಯೋ ಕಂಪೆನಿಯು ( Reliance Jio company ) ಇದೀಗ ಮಾರುಕಟ್ಟೆಗೆ ಹೊಸ ಲ್ಯಾಪ್ ಟಾಪ್( Laptop ) ಒಂದನ್ನು ಬಿಡುಗಡೆ ಮಾಡಲು ರೆಡಿ ಆಗಿದೆ. ಈ ಒಂದು ವಿಚಾರ ಸಂತಸ ತರಬಹುದು, ಯಾಕೆಂದರೆ ನೀವು ಕಡಿಮೆ ಬೆಲೆಗೆ ಮೊಬೈಲ್ ಫೋನ್ ಗಳನ್ನು ಕೊಂಡುಕೊಳ್ಳುತ್ತೀರಿ ಆದರೆ ಲ್ಯಾಪ್ ಟಾಪ್ ಗಳ ವಿಚಾರಕ್ಕೆ ಬಂದರೆ ಸ್ವಲ್ಪ ಯೋಚನೆ ಮಾಡುತ್ತೀರಿ ಅಲ್ಲವೇ? ಹೌದು, ಯಾಕೆಂದರೆ ಲ್ಯಾಪ್ ಟಾಪ್ ಗಳ ಬೆಲೆ ಬಹಳ ದುಬಾರಿ ಕೊಂಡು ಕೊಳ್ಳಲು ಸ್ವಲ್ಪಮಟ್ಟಿಗೆ ಅಸಾಧ್ಯ ಅನ್ನಿಸಬಹುದು. ಆದರೆ ಇದೀಗ ಜಿಯೋ ಕಂಪೆನಿ ರಿಲೀಸ್ ಮಾಡಿರುವ ಈ ಒಂದು ಹೊಸ ಲ್ಯಾಪ್ ಟಾಪ್ ಅನ್ನು ಕೊಂಡು ಕೊಳ್ಳಬಹುದು. ಅತೀ ಕಡಿಮೆ ಬೆಲೆಗೆ ಈ ಲ್ಯಾಪ್ ಟಾಪ್ ಅನ್ನು ಬಿಡುಗಡೆ ಮಾಡಿತ್ತಿದೆ. ಅದರ ಬಗ್ಗೆ ಪೂರ್ಣ ಮಾಹಿತಿ ತಿಕಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜಿಯೋದ ಹೊಸ ಕ್ಲೌಡ್‌ ಲ್ಯಾಪ್‌ಟಾಪ್‌ (Cloud Laptop):

ರಿಲಯನ್ಸ್‌ ಜಿಯೋ (Reliance Jio) ಕಂಪೆನಿ ಬಿಡುಗಡೆ ಮಾಡುವ ಲ್ಯಾಪ್ ಟಾಪ್ ಕ್ಲೌಡ್‌ ಲ್ಯಾಪ್‌ಟಾಪ್‌ (Cloud Laptop) ಆಗಿದ್ದು ಆದಷ್ಟು ಬೇಗ ಬಿಡುಗಡೆ ಮಾಡಲು ಕಂಪೆನಿಯು ನಿರ್ಧರಿಸಿದೆ.

ಜಿಯೋ ಕಂಪೆನಿಯು ಈ ವರ್ಷದ ಜುಲೈನಲ್ಲಿ 16,499 ರೂ.ಗಳ ಬೆಲೆಯ ಲ್ಯಾಪ್‌ಟಾಪ್‌ ಬಿಡುಗಡೆ ಮಾಡಿದೆ. ಆದರೆ ಇದೀಗ ಆ ಒಂದು ಲ್ಯಾಪ್ ಟಾಪ್ ಅನ್ನು ಕೇವಲ 15,000 ರೂ. ಬೆಲೆಯಲ್ಲಿ ಕ್ಲೌಡ್‌ ಲ್ಯಾಪ್‌ಟಾಪ್‌ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.

ರಿಲಾಯನ್ಸ್ ಜಿಯೋ ಕಂಪೆನಿಯ ಈ ವಿಷಯ ಕೇಳಿ ನಿಮಗೆ ಖುಷಿಯ ಜೊತೆಗೆ ಅಚ್ಚರಿ ಕೂಡ ಮೂಡಿರಬಹುದು. ನಿಮಗೆ ಈಗ ಆಲೋಚನೆ ಬಂದಿರಬಹುದು ಯಾಕೆಂದರೆ ನಾವು ಬೇರೆ ಯಾವುದೇ ಸೆಕೆಂಡ್ ಹ್ಯಾಂಡ್ ( Second Hand ) ಲ್ಯಾಪ್‌ಟಾಪ್‌ ಅನ್ನು ಕೂಡ ಈ ಬೆಲೆಗೆ ಖರೀದಿಸಲು ಸಾಧ್ಯವಿಲ್ಲ. ಆದರೆ ಇದೀಗ ರಿಲಾಯನ್ಸ್ ಜಿಯೋ ಕಂಪೆನಿ ಈಗ ಆ ಒಂದು ಕೊರತೆಯನ್ನು ನಿಗಿಸಿದೆ. ಕೇವಲ15,000 ರೂ ಗಳಿಗೆ ಕ್ಲೌಡ್ ಲ್ಯಾಪ್‌ಟಾಪ್ (Jio Cloud Laptop) ಅನ್ನು ಬಿಡುಗಡೆ ಮಾಡಲು ತಯಾರಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಏನಿದು ಕ್ಲೌಡ್ ಲ್ಯಾಪ್‌ಟಾಪ್?, ಇಷ್ಟು ಕಡಿಮೆ ಬೆಲೆಯಲ್ಲಿ ಯಾಕೆ ಬಿಡುಗಡೆ ಮಾಡುತ್ತಿದ್ದಾರೆ ಗೊತ್ತಾ?:

ಈ ಒಂದು ಕ್ಲೌಡ್‌ ಲ್ಯಾಪ್‌ಟಾಪ್‌ ಅನ್ನು ತಯಾರಿ ಮಾಡಲು ಹಲವು ಕಂಪನಿಗಳು ಕೈ ಜೋಡಸಲು ಮುಂದಾಗಿವೆ. ಅವುಗಳಲ್ಲಿ ಹಾರ್ಡ್‌ವೇರ್‌ ಗೆ ಹೆಸರು ವಾಸಿಯಾದ ಕಂಪನಿಗಳಾದ ಹೆಚ್‌ಪಿ, ಏಸರ್‌, ಲೆನೊವೊ ಆಗಿವೆ. ಈಗ ಈ ಒಂದು ಕ್ಲೌಡ್‌ ಲ್ಯಾಪ್‌ಟಾಪ್‌ ಬಗ್ಗೆ ತಿಳಿದುಕೊಳ್ಳೋಣ.

ಈ ಲ್ಯಾಪ್‌ಟಾಪ್‌ನ ಬೆಲೆ ಕೇವಲ ಅದರಲ್ಲಿರುವ ಹಾರ್ಡ್‌ವೇರ್‌ ಭಾಗಗಳಾದ ಮೆಮೊರಿ, ಪ್ರೊಸೆಸಿಂಗ್ ಪವರ್, ಚಿಪ್‌ಸೆಟ್, ಬ್ಯಾಟರಿ ಮೇಲೆ ಅಷ್ಟೇ ನಿಗದಿಪಡಿಸಲಾಗಿದೆ. ಕಡಿಮೆ ಸಾಮರ್ಥ್ಯ ಇರುವ ಲ್ಯಾಪ್ ಟಾಪ್ ನ ಸ್ಟಾರ್ಟಿಂಗ್ ಬೆಲೆ ಇದಾಗಿದೆ. ಹಾಗೆಯೇ ನಿಮಗೆ ಹೆಚ್ಚು ಸಾಮರ್ಥ್ಯದ ಹಾರ್ಡ್‌ವೇರ್‌ ಬೇಕಾದರೆ ಆ ಲ್ಯಾಪ್ ಟಾಪ್ ನ ಬೆಲೆ ಜಾಸ್ತಿ ಇರುತ್ತದೆ. ಹಾಗೆಯೇ ರಿಲಯನ್ಸ್ ಜಿಯೋ ಕಂಪೆನಿ ಈಗ ಈ ಲ್ಯಾಪ್‌ಟಾಪ್‌ನ ಸಂಪೂರ್ಣ ಪ್ರಕ್ರಿಯೆಯನ್ನು ಕ್ಲೌಡ್‌ನಲ್ಲೇ ನಡೆಸಲು ನಿರ್ಧರಿಸಿದೆ.

ಇನ್ನೊಂದು ಮುಖ್ಯ ವಿಚಾರ ಎಂದರೆ ಈ ಕ್ಲೌಡ್ ಆಧಾರಿತ ಕಂಪ್ಯೂಟರ್‌ ಅನ್ನು ಬಳಸಬೇಕಾದರೆ ಯಾವಾಗಲೂ ಈ ಲ್ಯಾಪ್‌ಟಾಪ್‌ಗೆ ಇಂಟರ್ನೆಟ್ ಕನೆಕ್ಷನ್ ಇರಲೇಬೇಕು. ಇಂಟರ್ನೆಟ್ ಇರದೆ ಕೆಲಸ ಮಾಡಲು ಈ ಲ್ಯಾಪ್ ಟಾಪ್ ನಲ್ಲಿ ಸಾಧ್ಯವಿಲ್ಲ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಈ ಲ್ಯಾಪ್‌ಟಾಪ್‌ ನಿಂದ ಯಾರಿಗೆಲ್ಲ ಪ್ರಯೋಜನ ಇದೆ :

ಈ ಒಂದು ವಿಶೇಷ ಲ್ಯಾಪ್‌ಟಾಪ್‌ ಮುಖ್ಯವಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಇಂಟರ್ನೆಟ್ ಕಂಪನಿಗಳಲ್ಲಿ ಬಳಸಬಹುದು. ಹಾಗೆಯೇ ಈ ಜಿಯೋ ಕ್ಲೌಡ್ ಲ್ಯಾಪ್‌ಟಾಪ್ ಬಳಸಲು ಒಳ್ಳೆಯ ಇಂಟರ್ನೆಟ್ ಸಂಪರ್ಕ (Internet connection) ಅಗತ್ಯವಿದೆ.

ಆಪಲ್‌ನ ಐಕ್ಲೌಡ್ ಅಥವಾ ಗೂಗಲ್ ಒನ್ ಚಂದಾದಾರಿಕೆಯಂತಹ ಮಾಸಿಕ ಕ್ಲೌಡ್ ಚಂದಾದಾರಿಕೆಯೊಂದಿಗೆ ಲ್ಯಾಪ್‌ಟಾಪ್ ಅನ್ನು ಜೋಡಿಸಲು ಜಿಯೋ ಯೋಜಿಸಿದೆ ಎಂದು ವರದಿ ಹೇಳಿದೆ. ಕ್ಲೌಡ್ ಸದಸ್ಯತ್ವದ ಬೆಲೆಯನ್ನು ನಂತರದ ದಿನಾಂಕದಲ್ಲಿ ಅಂತಿಮಗೊಳಿಸಲಾಗುತ್ತದೆ. ಕ್ಲೌಡ್ ಚಂದಾದಾರಿಕೆಯು ಹೆಚ್ಚಿನ ಶ್ರೇಣಿಯ ಯೋಜನೆಯಲ್ಲಿ ಲಭ್ಯವಿರುವ ವಿಶೇಷ ವೈಶಿಷ್ಟ್ಯಗಳೊಂದಿಗೆ ಜಿಯೋ ಸೇವೆಗಳ ಹೋಸ್ಟ್ ಅನ್ನು ಸಹ ಸಂಯೋಜಿಸುತ್ತದೆ.

ಈ ಲ್ಯಾಪ್‌ಟಾಪ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!