Picsart 25 10 19 22 49 18 382 scaled

ರಾಜ್ಯದ ಭವಿಷ್ಯ ನಿರ್ಮಾಣಕ್ಕೆ ಮಹತ್ವದ ಜಾತಿ ಗಣತಿ ಸಮೀಕ್ಷೆ.! ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ

Categories:
WhatsApp Group Telegram Group

ಇತ್ತೀಚಿಗೆ ನಡೆಸಲಾಗುತ್ತಿರುವ ಜಾತಿ ಗಣತಿ ಸಮೀಕ್ಷೆ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ರಾಜ್ಯದ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸಲಿರುವ ಒಂದು ಐತಿಹಾಸಿಕ ಪ್ರಕ್ರಿಯೆ. ರಾಜ್ಯದ ಪ್ರತಿಯೊಬ್ಬ ನಾಗರಿಕನೂ ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಕೇವಲ ಕರ್ತವ್ಯವಲ್ಲ, ಮುಂದಿನ ಪೀಳಿಗೆಗಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಹಿತಕ್ಕಾಗಿ ನೀಡುವ ಪ್ರಮುಖ ಸಹಕಾರವೂ ಹೌದು. ಸರ್ಕಾರ ಈ ಸಮೀಕ್ಷೆಯ ಮೂಲಕ ರಾಜ್ಯದ ವಿಭಿನ್ನ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಯ ಮಾಹಿತಿ ಸಂಗ್ರಹಿಸುತ್ತಿದೆ. ಈ ದತ್ತಾಂಶವನ್ನು ಆಧಾರವಾಗಿಸಿಕೊಂಡು ಸರ್ಕಾರ ಹೊಸ ನೀತಿ, ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಸಮೀಕ್ಷೆ ಕೇವಲ ಅಂಕಿಅಂಶಗಳ ಸಂಗ್ರಹವಲ್ಲ ಇದು ಸಮಾನತೆ, ನ್ಯಾಯ ಹಾಗೂ ಅಭಿವೃದ್ಧಿಯ ಭವಿಷ್ಯವನ್ನು ರೂಪಿಸುವ ಒಂದು ಪ್ರಮುಖ ಹಂತವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಸಮೀಕ್ಷಾ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಕುಟುಂಬದ ಸದಸ್ಯರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ವೇಳೆ ನಾಗರಿಕರು ನಿಖರ ಹಾಗೂ ಸಂಪೂರ್ಣ ಮಾಹಿತಿಯನ್ನು ನೀಡುವುದು ಅತ್ಯಂತ ಅಗತ್ಯ. ನಿಮ್ಮ ಮನೆಗೆ ಸಮೀಕ್ಷಾ ಸಿಬ್ಬಂದಿ ಭೇಟಿ ನೀಡದೆ ಹೋಗಿದ್ದರೆ, ಅಥವಾ ನೀವು ಸಮೀಕ್ಷೆಯ ಸಮಯದಲ್ಲಿ ಮನೆಯಲ್ಲಿ ಇರದಿದ್ದರೆ ತಕ್ಷಣ 8050770004 ಸಂಖ್ಯೆಗೆ ಕರೆ ಮಾಡಿ ನಿಮ್ಮ ಮಾಹಿತಿಯನ್ನು ದಾಖಲಿಸಿಕೊಳ್ಳಬಹುದು ಎಂದು ರಾಜ್ಯ ಸರ್ಕಾರ(State government) ತಿಳಿಸಿದೆ. ಸಮೀಕ್ಷೆ ಯಶಸ್ವಿಯಾಗಲು ನಾಗರಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಮುಖ್ಯ.

ಸಮೀಕ್ಷೆಯ ಅವಧಿ ವಿಸ್ತರಣೆಗೆ ಕಾರಣವೇನು?:

ಸರ್ಕಾರದ ಮೂಲಗಳ ಪ್ರಕಾರ, ಸಮೀಕ್ಷೆ ಆರಂಭದಲ್ಲಿ ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸಂಪರ್ಕ ಸಮಸ್ಯೆ ಎದುರಾದ ಕಾರಣ ದತ್ತಾಂಶ ದಾಖಲಿಸುವ ಪ್ರಕ್ರಿಯೆ ನಿಧಾನಗತಿಯಲ್ಲಿತ್ತು. ಮೊದಲು ಮೂರು ನಾಲ್ಕು ವಿಭಿನ್ನ ಆಪ್‌ಗಳನ್ನು ಅಭಿವೃದ್ಧಿಪಡಿಸಿ ಕಾರ್ಯಗತಗೊಳಿಸಲು ಎರಡು ಮೂರು ದಿನಗಳನ್ನು ತೆಗೆದುಕೊಳ್ಳಲಾಯಿತು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಶಿಕ್ಷಕರ ಬದಲಿಗೆ ಸರ್ಕಾರಿ ನೌಕರರನ್ನು ಸಮೀಕ್ಷೆಗೆ ಬಳಸಲಾಗಿದ್ದರಿಂದ, ದೀಪಾವಳಿ ರಜಾದಿನಗಳಲ್ಲಿ ಪ್ರಕ್ರಿಯೆ ತಾತ್ಕಾಲಿಕವಾಗಿ ನಿಧಾನವಾಗಿದ್ದು, ಈ ಎಲ್ಲಾ ಕಾರಣಗಳಿಂದ ಸಮೀಕ್ಷೆಯ ಅವಧಿಯನ್ನು ಸರ್ಕಾರ ವಿಸ್ತರಿಸಿದೆ. ಇಂದು ಸಂಜೆ 4ಗಂಟೆಗೆ ಸಿಎಂ ಸಿದ್ದರಾಮಯ್ಯ(CM Siddaramaiah) ಅವರ ನಿವಾಸದಲ್ಲಿ ಈ ಕುರಿತಾಗಿ ಸಭೆ ನಡೆಸಲಾಗುತ್ತಿದ್ದು, ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಸಾಧ್ಯತೆ ಇದೆ.

ಸಮೀಕ್ಷೆಯನ್ನು ಆತುರದಲ್ಲಿ ನಡೆಸಲಾಗುತ್ತಿದ್ದೇಯೇ?:

ಆರಂಭದಲ್ಲಿ ಸಮೀಕ್ಷೆಯ ಕುರಿತು ಮಾಧ್ಯಮಗಳಲ್ಲಿ ಕೆಲವು ತಪ್ಪು ಮಾಹಿತಿಗಳು ಹರಿದಾಡಿದ್ದರಿಂದ ಜನರಲ್ಲಿ ಗೊಂದಲ ಉಂಟಾಯಿತು. ಶಿಕ್ಷಕರಲ್ಲಿ ಪ್ರಾರಂಭದಲ್ಲಿ ಉತ್ಸಾಹದ ಕೊರತೆ ಇದ್ದರೂ, ಅವರಿಗೆ ತರಬೇತಿ ನೀಡಿ ಕ್ರಮೇಣ ಕಾರ್ಯಗತಗೊಳಿಸಲಾಯಿತು. ತಂತ್ರಜ್ಞಾನ ಆಧಾರಿತ ಸಮೀಕ್ಷೆ ಆದ್ದರಿಂದ, ಆರಂಭಿಕ ಹಂತದಲ್ಲಿ ಕೆಲವು ತಾಂತ್ರಿಕ ಸವಾಲುಗಳು ಎದುರಾದವು. ಸರ್ಕಾರ ಹೇಳುವಂತೆ, ಈಗ ಸಮೀಕ್ಷೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ.

ಒಟ್ಟಾರೆಯಾಗಿ, ಸರ್ಕಾರದ ಈ ಸಮೀಕ್ಷೆ ಯಶಸ್ವಿಯಾಗಿ ನಡೆಯುವುದೇ ರಾಜ್ಯದ ಭವಿಷ್ಯ ನೀತಿಗಳ ಮೂಲ. ಆದ್ದರಿಂದ ನಾಗರಿಕರು ಜವಾಬ್ದಾರಿಯುತವಾಗಿ ಮಾಹಿತಿಯನ್ನು ಹಂಚಿ, ಸಮೀಕ್ಷಾ ಸಿಬ್ಬಂದಿಗೆ ಸಹಕರಿಸಬೇಕು. ಯಾರಾದರೂ ಕುಟುಂಬ ಈ ಸಮೀಕ್ಷೆಯಿಂದ ತಪ್ಪಿಹೋಗಿದ್ದರೆ, ತಕ್ಷಣ 8050770004 ಕ್ಕೆ ಕರೆ ಮಾಡಿ ನಿಮ್ಮ ಮಾಹಿತಿ ದಾಖಲಿಸಿ, ಈ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸಿ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories