ಬೆಂಗಳೂರು, ಜುಲೈ 24: ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇಂದು ಗಮನಾರ್ಹವಾಗಿ ಕುಸಿದಿವೆ. ನಿನ್ನೆ (ಬುಧವಾರ) 95 ರೂಪಾಯಿಗಳಷ್ಟು ಏರಿಕೆ ಕಂಡಿದ್ದ ಚಿನ್ನದ ದರವು, ಇಂದು (ಗುರುವಾರ) ಸುಮಾರು 125 ರೂಪಾಯಿಗಳಷ್ಟು ಕುಗ್ಗಿದೆ. ಅದೇ ರೀತಿ, ಬೆಳ್ಳಿಯ ಬೆಲೆಯೂ ಒಂದು ರೂಪಾಯಿ ಇಳಿಕೆ ಕಂಡಿದೆ. ಆಭರಣ ತಯಾರಿಕೆಗೆ ಬಳಸುವ 22 ಕ್ಯಾರಟ್ ಚಿನ್ನದ ಬೆಲೆ 9,380 ರೂಪಾಯಿಯಿಂದ 9,255 ರೂಪಾಯಿಗೆ ಇಳಿದಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆಯೂ ಸುಮಾರು ಹತ್ತು ಸಾವಿರ ರೂಪಾಯಿಯ ಸಮೀಪಕ್ಕೆ ತಗ್ಗಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತ ಮತ್ತು ವಿದೇಶಗಳಲ್ಲಿ ಚಿನ್ನದ ದರಗಳು
ವಿದೇಶಿ ಮಾರುಕಟ್ಟೆಗಳಲ್ಲೂ ಚಿನ್ನದ ಬೆಲೆಗಳು ಕುಸಿದಿವೆ. ಪ್ರಸ್ತುತ, ಭಾರತದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 92,550 ರೂಪಾಯಿಯಾಗಿದೆ. 24 ಕ್ಯಾರಟ್ ಚಿನ್ನದ ದರ 1,00,970 ರೂಪಾಯಿ ಮತ್ತು 100 ಗ್ರಾಮ್ ಬೆಳ್ಳಿಯ ಬೆಲೆ 11,800 ರೂಪಾಯಿಯನ್ನು ತಲುಪಿದೆ. ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ 92,550 ರೂಪಾಯಿ ಮತ್ತು 100 ಗ್ರಾಮ್ ಬೆಳ್ಳಿಯ ಬೆಲೆ 11,800 ರೂಪಾಯಿಯಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು
- 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ ಗೆ):
- ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ, ಕೇರಳ, ಭುವನೇಶ್ವರ್: 92,550 ರೂ
- ದೆಹಲಿ, ಜೈಪುರ್, ಲಕ್ನೋ: 92,700 ರೂ
- ಅಹ್ಮದಾಬಾದ್: 92,600 ರೂ
- 24 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ ಗೆ): 1,00,970 ರೂ
- 18 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ ಗೆ): 75,730 ರೂ
- ಬೆಳ್ಳಿ ಬೆಲೆ (10 ಗ್ರಾಮ್ ಗೆ): 1,180 ರೂ
ಬೆಳ್ಳಿಯ ದರಗಳು (100 ಗ್ರಾಮ್ ಗೆ):
- ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತಾ, ಅಹ್ಮದಾಬಾದ್, ಜೈಪುರ್, ಲಕ್ನೋ, ಪುಣೆ: 11,800 ರೂ
- ಚೆನ್ನೈ, ಕೇರಳ, ಭುವನೇಶ್ವರ್: 12,800 ರೂ
ವಿದೇಶಗಳಲ್ಲಿ ಚಿನ್ನದ ದರಗಳು (10 ಗ್ರಾಮ್ ಗೆ):
- ಮಲೇಷ್ಯಾ: 4,520 ರಿಂಗಿಟ್ (ಸುಮಾರು 92,470 ರೂ)
- ದುಬೈ: 3,777.50 ಡಿರಾಮ್ (ಸುಮಾರು 88,730 ರೂ)
- ಅಮೆರಿಕ: 1,060 ಡಾಲರ್ (ಸುಮಾರು 91,450 ರೂ)
- ಸಿಂಗಾಪುರ: 1,342 ಸಿಂಗಾಪುರ್ ಡಾಲರ್ (ಸುಮಾರು 90,790 ರೂ)
- ಕತಾರ್: 3,830 ರಿಯಾಲ್ (ಸುಮಾರು 90,650 ರೂ)
- ಸೌದಿ ಅರೇಬಿಯಾ: 3,870 ರಿಯಾಲ್ (ಸುಮಾರು 88,990 ರೂ)
- ಓಮನ್: 405.50 ರಿಯಾಲ್ (ಸುಮಾರು 90,860 ರೂ)
- ಕುವೇತ್: 307.80 ದಿನಾರ್ (ಸುಮಾರು 87,030 ರೂ)
ಈ ಬೆಲೆಗಳು ವಿವಿಧ ಅಭರಣ ಅಂಗಡಿಗಳು ಮತ್ತು ಮಾರುಕಟ್ಟೆಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿವೆ. ಆದರೆ, ನಿಖರವಾದ ದರಗಳು ಸ್ಥಳ, ಜಿಎಸ್ಟಿ, ಮೇಕಿಂಗ್ ಚಾರ್ಜ್ ಮತ್ತು ಇತರ ಶುಲ್ಕಗಳನ್ನು ಅವಲಂಬಿಸಿ ಬದಲಾಗಬಹುದು. ಹಾಗಾಗಿ, ಖರೀದಿ ಅಥವಾ ಮಾರಾಟ ಮಾಡುವ ಮೊದಲು ಸ್ಥಳೀಯ ವ್ಯಾಪಾರಿಗಳೊಂದಿಗೆ ದರಗಳನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.