BSNL:  ಬಿಎಸ್‌ಎನ್‌ಎಲ್ ನಿಂದ ಗುಡ್‌ ನ್ಯೂಸ್! ಕಮ್ಮಿ ಬೆಲೆಗೆ ಹೊಸ ರಿಚಾರ್ಜ್ ಪ್ಲಾನ್!

IMG 20240706 WA0001

WhatsApp Group Telegram Group
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಆದ ಬಿಎಸ್ಎನ್ಎಲ್ (BSNL) ಇದೀಗ ಹೊಸ ಪ್ಲ್ಯಾನ್ ಪರಿಚಯಿಸಿ, ಗುಡ್ ನ್ಯೂಸ್ ನೀಡಿದೆ!

ಟೆಲಿಕಾಂ ಕಂಪನಿಗಳು ತಮ್ಮ ಸೇವಾದರಗಳನ್ನು ಹೆಚ್ಚಿಸಿದ್ದು, ಪ್ರತಿ ಬಳಕೆದಾರರಿಂದ ಸಂಗ್ರಹಿಸುವ ಸರಾಸರಿ ಆದಾಯ (ಎಆರ್‌ಪಿಯು) ಹೆಚ್ಚಿಸಲು ಕಂಪನಿಗಳು ಮುಂದಾಗಿವೆ. ಏಕರೂಪವಾಗಿ ಶುಲ್ಕ ಹೆಚ್ಚಿಸಿವೆ. 5ಜಿ ನೆಟ್‌ವರ್ಕ್‌ಗಾಗಿ (5G Network) ಕಂಪನಿಗಳು ಹೆಚ್ಚಿನ ಹಣ ಹೂಡಿಕೆ (money investment) ಮಾಡಿವೆ. ಹೀಗಾಗಿ ಲಾಭ ಹೆಚ್ಚಿಸಿಕೊಳ್ಳಲು ಶುಲ್ಕವನ್ನು ಹೆಚ್ಚಿಸುವುದು ಟೆಲಿಕಾಂ ಕಂಪನಿಗಳಿಗೆ ಇರುವ ಏಕೈಕ ಮಾರ್ಗವಾಗಿದೆ.

ರೀಚಾರ್ಜ್ ಬೆಲೆ ಏರಿಕೆ (recharge price increased) ಮಾಡಿ ಗ್ರಾಹಕರಿಗೆ ಶಾಕ್ ನೀಡಿದ ಟೆಲಿಕಾಂ ಕಂಪನಿಗಳು :

ಇಂದು ಹಲವಾರು ಟೆಲಿಕಾಂ ಕಂಪನಿಗಳು (Telecom company) ವಿಶೇಷ ಪ್ಲ್ಯಾನ್, ರೀಚಾರ್ಜ್, ರಿಯಾಯಿತಿ ದರಗಳನ್ನು ನೀಡುತ್ತಿದ್ದು ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಹಾಗೆಯೇ ರೀಚಾರ್ಜ್ ಪ್ಲ್ಯಾನ್ ಗಳ ಬೆಲೆ ವಿಷಯಕ್ಕೆ ಬಂದರೆ ಈ ಹಿಂದೆ ಅಷ್ಟೇ ಬೆಲೆ ಏರಿಕೆ ಆಗಿದ್ದು, ಖಾಸಗಿ ಟೆಲಿಕಾಂ ಕಂಪನಿಗಳು ತಮ್ಮ ಪ್ರಮುಖ ರೀಚಾರ್ಜ್‌ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್‌ ನೀಡಿದೆ. ಹಾಗೆಯೇ ಇದೀಗ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗಾಗಿ ಹೊಸ ಪ್ಲ್ಯಾನ್‌ ಅನ್ನು ಪರಿಚಯಿಸುವ ಮೂಲಕ ಗುಡ್‌ ನ್ಯೂಸ್‌ ನೀಡಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ವಿವಿಧ ಟೆಲಿಕಾಂ ಕಂಪನಿಗಳ ರೀಚಾರ್ಜ್ ಬೆಲೆ ಶೇಕಡ 26% ಏರಿಕೆಯಾಗಿದೆ :

ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್(Airtel), ಜಿಯೋ(jio) ಮತ್ತು ವೊಡಾಫೋನ್(Vodafone)ಗಳು, ಇಂಡಿಯಾ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಸುಮಾರು 26% ರಷ್ಟು ಏರಿಸಿವೆ. ಮತ್ತು ಈ ಬೆಲೆ ಏರಿಕೆಗಳು ಭಾರತದಾದ್ಯಂತ ಜುಲೈ 4 ರಿಂದ ಪ್ರಾರಂಭವಾಗಿದೆ. ಇದರಿಂದ ಖಾಸಗಿ ಟೆಲಿಕಾಂ ಗ್ರಾಹಕರಿಗೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ ಇದೀಗ ಖಾಸಗಿ ಟೆಲಿಕಾಂ ಕಂಪನಿಗಳು ಕೂಡ ಗ್ರಾಹಕರಿಗೆ ವಿಶೇಷ ಪ್ಲ್ಯಾನ್ ಮತ್ತು ರೀಚಾರ್ಜ್ ಅನ್ನು ನೀಡುತ್ತಿವೆ.

ಬಿಎಸ್‌ಎನ್‌ಎಲ್‌ ನ 249 ರೂ. ಗಳ ಹೊಸ ರೀಚಾರ್ಜ್ ಪ್ಲ್ಯಾನ್‌ (BSNL 249Rs. New recharge plan) :

ಈ ಬೆಲೆ ಏರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಿಎಸ್‌ಎನ್‌ಎಲ್‌ ಹೊಸದಾಗಿ 249 ರೂ. ಪ್ಲ್ಯಾನ್‌ ಅನ್ನು ಬಿಡುಗಡೆ ಮಾಡಿದೆ. ಇದು ತನ್ನ ಗ್ರಾಹಕರಿಗೆ ಗಣನೀಯ ಪರಿಹಾರ ಒದಗಿಸುವ ಗುರಿಯನ್ನು ಹೊಂದಿದೆ. ಇದರಲ್ಲಿ 249 ರೂ.ನ ಪ್ಲ್ಯಾನ್‌ನ ವ್ಯಾಲಿಡಿಟಿ 45 ದಿನಗಳವರೆಗೆ (45 days validity) ಇರಲಿದೆ. ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ನೊಂದಿಗೂ ಅನ್‌ಲಿಮಿಟೆಡ್‌ ಕಾಲ್‌ ಹಾಗೂ ದಿನಕ್ಕೆ 2 ಜಿಬಿಯಂತೆ ಒಟ್ಟು 90 ಜಿಬಿ ಡೇಟಾ(Data) ಗ್ರಾಹಕರಿಗೆ ದೊರೆಯುತ್ತದೆ.

ಬಿಎಸ್‌ಎನ್‌ಎಲ್‌ನ ಈ ಪ್ಲ್ಯಾನ್‌ ಅನ್ನು ಏರ್ಟೆಲ್‌ನೊಂದಿಗೆ ಹೋಲಿಸಿದರೆ, ಏರ್ಟೆಲ್‌ನ 249 ರೂ.ಯ ಪ್ಲ್ಯಾನ್‌ 28 ದಿನಗಳ ವರೆಗೆ ಇರುತ್ತದೆ. ಅದೇ ಬಿಎಸ್‌ಎನ್‌ಎಲ್‌ನ 249 ರೂ.ಯ ಪ್ಲ್ಯಾನ್‌ 17 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡುತ್ತದೆ. ಏರ್ಟೆಲ್‌ 1 ಜಿಬಿ ಡೇಟಾ ನೀಡಿದರೆ ಬಿಎಸ್‌ಎನ್‌ಎಲ್‌ ಅದೇ ಬೆಲೆಗೆ 2 ಜಿಬಿ ಡೇಟಾ ನೀಡುತ್ತದೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!