ಜಿಯೋ ರಿಚಾರ್ಜ್ (jio recharge) ಶುಲ್ಕ 12 ರಿಂದ ಶೇ. 27% ಏರಿಕೆ, 5ಜಿ ಸೇವೆಗಳ ಅನಿಯಮಿತ(unlimited) ಬಳಕೆ ಮೇಲೆ ನಿರ್ಬಂಧ.
ಜುಲೈ 3ರಿಂದ ರಿಲಯನ್ಸ್ ಜಿಯೋ (Reliance jio ) ಮೊಬೈಲ್ ಕರೆ ಹಾಗೂ ಇಂಟರ್ನೆಟ್ ದರಗಳನ್ನು ಹೆಚ್ಚಿಸಲಿದೆ. ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿಯು (jio president Akash Ambani) ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಬೇರೆ ಎಲ್ಲಾ ಸಿಮ್(Sim) ಗಳಿಗೆ ಹೋಲಿಸಿದರೆ, ರಿಲಯನ್ಸ್ ಜಿಯೋ ಕಡಿಮೆ ದರಗಳಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತಿತ್ತು. ಹಾಗೂ 5 ಜಿ ಅನಿಯಮಿತ ಸೇವೆಗಳ ಬಳಕೆಯನ್ನು ನೀಡಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿತ್ತು.12ರಿಂದ ಶೇ. 27ರವರೆಗೂ ದರ ಏರಿಕೆ ಮಾಡಿದ್ದು, ಏರಿಕೆ ಮಾಡಿರುವ ದರಗಳು ಜುಲೈ 3ರಿಂದ ಅನ್ವಯವಾಗಲಿವೆ. ಷೇರು ಮಾರುಕಟ್ಟೆಯು ಸಕಾರಾತ್ಮಕವಾಗಿ ಸ್ಪಂದನೆ ಸಿಗುವ ಜೊತೆಯಲ್ಲಿ ಟೆಲಿಕಾಂ ಕಂಪನಿಗಳಿಗೂ (Telecom company) ಹೆಚ್ಚು ಲಾಭವನ್ನು ತಂದುಕೊಡಲಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
ಜಿಯೋ ರಿಚಾರ್ಜ್ ಪ್ಲಾನ್ ಹೆಚ್ಚು ಇಷ್ಟಪಡುತ್ತಿದ್ದಂತಹ ಗ್ರಾಹಕರಿಗೆ ಇದು ಬೇಸರದ ಸಂಗತಿಯಾಗಿದೆ. ಮೊಬೈಲ್ ರೀಚಾರ್ಜ್ ಶುಲ್ಕವು 12 ರಿಂದ ಶೇ. 27% ಏರಿಕೆಯಾಗಿರುವುದರಿಂದ ಗ್ರಾಹಕರಿಗೆ ಅನಾನುಕೂಲವಾಗಲಿದೆ. ಜಿಯೋ ಸಿಮ್(Jio sim) ಗಳನ್ನು ಜನರು ಹೆಚ್ಚು ಇಷ್ಟ ಪಡಲು ಕಾರಣ 5ಜಿ ಸೇವೆಗಳು. ಇತ್ತೀಚಿನ ದಿನಗಳಲ್ಲಿ ಜನರು 5ಜಿ ಸೇವೆಗಳನ್ನು ಹೆಚ್ಚು ಬಳಸುತ್ತಿದ್ದರು. ಅದರಲ್ಲೂ ಜಿಯೋ ಸಿಮ್ ಗಳಲ್ಲಿ ನೆಟ್ವರ್ಕ್ (Network) ಸಮಸ್ಯೆಗಳು ಕೂಡ ಕಡಿಮೆ ಇದ್ದಿದ್ದರಿಂದ 5ಜಿ ಸೇವೆಗಳನ್ನು ತುಂಬಾ ಸುಲಭವಾಗಿ ಪಡೆದುಕೊಳ್ಳುತ್ತಿದ್ದರು. ಆದರೆ ಇದೀಗ 5 ಜಿ ಸೇವೆಗಳ ಅನಿಯಮಿತಿ ಬಳಕೆಯ ಮೇಲು ಕೂಡ ನಿರ್ಬಂಧವನ್ನು ಹಾಕಲಾಗಿದೆ.
ರಿಚಾರ್ಜ್ ದರವನ್ನು 15 ರೂ ನಿಂದ 19 ರೂ.ಗೆ ಏರಿಕೆ ಮಾಡಲಾಗಿದ್ದು, 1 ಜಿಬಿ ಡಾಟಾ ಆಡ್ ಆನ್ ಪ್ಯಾಕ್ (data add on )ನಾ ಶುಲ್ಕವು 19 ರೂ ಗೆ ಆಗಲಿದೆ.84 ದಿನಗಳ 666 ರೂ ಪ್ಲಾನ್ 799 ರೂ ಗೆ ಏರಿಕೆಮಾಡಲಾಗಿದೆ. 75 ಜಿಬಿ ಪೋಸ್ಟ್ ಪೇಯ್ಡ್ ಡಾಟಾ ಬೆಲೆ 399 ರೂ ನಿಂದ 499 ರೂ ಇರಲಿದ್ದು, 1599 ರೂ ರಿಚಾರ್ಜ್ ಬೆಲೆ 1899 ರೂ ಆಗಲಿದೆ. 2999 ರೂ. ವಾರ್ಷಿಕ ಪ್ಯಾಕ್ 3599 ರೂ. ಗೆ ಏರಿಕೆಯಾಗಿದೆ.
ಜಿಯೋ ರಿಚಾರ್ಜ್ ಪ್ಲಾನ್ ಗಳ ದರವನ್ನು ಹೆಚ್ಚಳ ಮಾಡುವುದರ ಜೊತೆಯಲ್ಲಿ ಎರಡು ಹೊಸ ಅಪ್ಲಿಕೇಶನ್ ಗಳನ್ನು ಪರಿಚಯಿಸಿದೆ. ಜಿಯೊ ಸೇಫ್ (JioSafe) ಮತ್ತು ಜಿಯೊ ಟ್ರಾನ್ಸ್ಲೇಟ್ (JioTranslate) ಎಂಬ ಎರಡು ಅಪ್ಲಿಕೇಷನ್ಗಳನ್ನು ಬಿಡುಗಡೆಗೊಳಿಸಿದೆ.
ಜಿಯೊ ಸೇಫ್ (JioSafe):
ಜಿಯೊ ಸೇಫ್‌ನ ಮಾಸಿಕ ದರ ₹199 ಆಗಿದೆ. ಸುರಕ್ಷಿತ ಕರೆ, ಮೆಸೇಜಿಂಗ್ ಮತ್ತು ಫೈಲ್ ಟ್ರಾನ್ಸ್‌ಫರ್ ಸೇವೆಯನ್ನು ಒದಗಿಸಲಿ
ಜಿಯೊ ಟ್ರಾನ್ಸ್ಲೇಟ್(JioTranslate):
ಜಿಯೊ ಟ್ರಾನ್ಸ್‌ಲೇಟ್ ಅಪ್ಲಿಕೇಷನ್‌ನಲ್ಲಿ ತಿಂಗಳಿಗೆ ₹99 ನೀಡಿದರೆ ಕೃತಕ ಬುದ್ಧಿಮತ್ತೆಯಿಂದ ಚಾಲಿತ ಅಪ್ಲಿಕೇಷನ್, ಧ್ವನಿ, ಕರೆ, ಸಂದೇಶವನ್ನು ಭಾಷಾಂತರ ಮಾಡಬಹುದಾಗಿದೆ.
ಜಿಯೊ ಬಳಕೆದಾರರಿಗೆ ಒಂದು ವರ್ಷದವರೆಗೆ ಈ ಎರಡೂ ಅಪ್ಲಿಕೇಷನ್‌ಗಳು ಉಚಿತವಾಗಿ ದೊರೆಯಲಿವೆ.
2 ಜಿಬಿ ಪ್ಲಾನ್ ಗೆ ಮಾತ್ರ 5 ಜಿ ಇಂಟರ್ನೆಟ್ (5G internet) :
41 ಕೋಟಿ ಗ್ರಾಹಕರ ಮೂಲಕ ಮಾರುಕಟ್ಟೆಯಲ್ಲಿ ಶೇ.41 ಪಾಲುದಾರಿಕೆ ಹೊಂದಿರುವ ಜಿಯೋ ಪ್ರಥಮ ಸ್ಥಾನದಲ್ಲಿದೆ. ಈವರೆಗೆ 239 ರೂ. ರಿಚಾರ್ಜ್ ಮಾಡಿಕೊಂಡರೆ ಅನಿಯಮಿತ 5ಜಿ ಡಾಟಾ (5G data) ನೀಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಪ್ರತಿದಿನ 2 ಜಿಬಿ ಡಾಟಾ ಪ್ಲಾನ್ ಗಳಿಗೆ ಮಾತ್ರ ಅನಿಯಮಿತಿ 5 ಜಿ ಇಂಟರ್ನೆಟ್ ದೊರೆಯಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.