ಬೌರ್ನ್‌ವಿಟಾ ಆರೋಗ್ಯಕರ ಅಲ್ಲಾ..! ಹೆಲ್ತ್​​​ ಡ್ರಿಂಕ್ಸ್​​​ ಪಟ್ಟಿಯಿಂದ ತೆಗೆದುಹಾಕುವಂತೆ ಕೇಂದ್ರ ಆದೇಶ. ಕಾರಣ ಇಲ್ಲಿದೆ

bournvita

ಹಲವು ದಿನಗಳ ಹಿಂದೆ ಯೂಟ್ಯೂಬರ್ ಒಬ್ಬರು ಬೋರ್ನ್ ವೀಟಾ ಬಗ್ಗೆ ಆರೋಪ ಮಾಡಿದ್ದರು. ಹೌದು ವಿಡಿಯೋ ಒಂದರಲ್ಲಿ ಈ ಪೌಡರ್ ಸಪ್ಲಿಮೆಂಟ್ ನಲ್ಲಿ ಅತಿಯಾದ ಸಕ್ಕರೆ ಕೋಕೋ ಮತ್ತು ಹಾನಿಕಾರಕ ಬಣ್ಣಗಳು ಇವೆ, ಆದ್ದರಿಂದ ಬೋರ್ನ್ವಿಟಾ ಮಕ್ಕಳಿಗೆ ಕೊಡುವುದರಿಂದ ಕ್ಯಾನ್ಸರ್ ಮತ್ತು ಇನ್ನಿತರ ಖಾಯಿಲೆಗಳು ಬರುತ್ತವೆ ಎಂದು ಆರೋಪಿಸಿದ್ದರು. ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಸರ್ಕಾರ ಏಪ್ರಿಲ್ 10ರಂದು ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ.

ಬೋರ್ನ್‌ವೀಟಾದಲ್ಲಿ ಸ್ವೀಕಾರಾರ್ಹ ಮಿತಿಗಿಂತ ಹೆಚ್ಚಿನ ಸಕ್ಕರೆ ಮಟ್ಟವಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ ನಡೆಸಿದ ತನಿಖೆಯಲ್ಲಿ ಕಂಡುಬಂದಿತ್ತು. ಸುಮಾರು ಒಂದು ವರ್ಷ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಈ ಸೂಚನೆ ನೀಡಿದ್ದು, ಅವರ ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ಬೋರ್ನ್‌ವಿಟಾ ಸೇರಿದಂತೆ ಎಲ್ಲಾ ಪಾನೀಯಗಳನ್ನು ‘ ಆರೋಗ್ಯಕರ ಡ್ರಿಂಕ್ಸ್ ವರ್ಗದಿಂದ ತೆಗೆದು ಹಾಕುವಂತೆ ನಿರ್ದೇಶಿಸಿದೆ.

2005ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (CPCR) ಕಾಯಿದೆಯ ಸೆಕ್ಷನ್ (3) ಅಡಿಯಲ್ಲಿ ರಚಿತವಾದ ಶಾಸನಬದ್ಧ ಸಂಸ್ಥೆಗಳು ಎಫ್‌ಎಸ್‌ಎಸ್ ಕಾಯಿದೆ 2006ರ ಅಡಿಯಲ್ಲಿ ಆರೋಗ್ಯ ಪಾನೀಯಗಳ ಬಗ್ಗೆ ಎಫ್‌ಎಸ್‌ಎಸ್‌ಎಐ ಮತ್ತು ಮೊಂಡೆಲೆಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವಂತೆ ಏಪ್ರಿಲ್ 10ರ ಅಧಿಸೂಚನೆಯಲ್ಲಿ ತಿಳಿಸಿದೆ.

ಬೌರ್ನ್‌ವಿಟಾಕ್ಕೆ ಅಯೋಗ ಕಳಿಸಿದ ನೋಟಿಸ್​​ನಲ್ಲಿ, ಪಾನೀಯಕ್ಕೆ ಹಾಕುವ ಸಿಹಿ ಹಾಗೂ ಅದರ ಮಟ್ಟದ ಬಗ್ಗೆ ವರದಿ ನೀಡುವಂತೆ ಆದೇಶವನ್ನು ನೀಡಿದೆ. ಈ ಪಾನೀಯದಿಂದ ಅನೇಕಗೆ ಆರೋಗ್ಯ ಸಮಸ್ಯೆಗಳು ಕಾಡಿದೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.

 

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

 

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!