ಭಾರತೀಯ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ (Congress and BJP) ನಡುವೆ ತೀವ್ರ ವಾಗ್ವಾದಗಳು ಹೊಸದಲ್ಲ. ಆದರೆ, ಇದೀಗ ಬಿಜೆಪಿ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಗಂಭೀರ ಆರೋಪವೊಂದನ್ನ ಮಾಡುತ್ತಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರ ಪ್ರಕಾರ, ಸೋನಿಯಾ ಗಾಂಧಿಯವರು ಭಾರತೀಯ ನಾಗರಿಕತ್ವ ಪಡೆಯುವ ಮುನ್ನವೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಂಡಿದ್ದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ವಿವಾದವು ಕೇವಲ ಇಂದಿನ ರಾಜಕೀಯ ಪ್ರತಿಸ್ಪರ್ಧೆಯ ಭಾಗವಲ್ಲ, ಅದು 1980ರ ದಶಕದ ರಾಜಕೀಯ ಪರಿಸ್ಥಿತಿ, ಚುನಾವಣಾ ನಿಯಮಾವಳಿ, ಮತ್ತು ಗಾಂಧಿ ಕುಟುಂಬದ (Gandhi family) ರಾಜಕೀಯ ಪ್ರಭಾವದ ಮೇಲೆ ಬೆಳಕು ಚೆಲ್ಲುತ್ತದೆ.
ಆರೋಪದ ಮೂಲ ಏನು ಎಂದು ನೋಡುವುದಾದರೆ,
ಅಮಿತ್ ಮಾಳವೀಯ (Amith Malaviya) ಅವರ ಹೇಳಿಕೆಯಲ್ಲಿ, ಸೋನಿಯಾ ಗಾಂಧಿಯವರು ಅಧಿಕೃತವಾಗಿ ಭಾರತೀಯ ನಾಗರಿಕರಾಗುವ ಮೂರು ವರ್ಷಗಳ ಮೊದಲೇ ಮತದಾರರ ಪಟ್ಟಿಯಲ್ಲಿ ಹೆಸರು ಪಡೆದಿದ್ದರು. 1980ರಲ್ಲಿ ನವದೆಹಲಿ ಸಂಸದೀಯ ಕ್ಷೇತ್ರದ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ (Revising the parliamentary voters’ list) ಸಂದರ್ಭದಲ್ಲಿ, ಅವರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅಂದು, ಗಾಂಧಿ ಕುಟುಂಬವು ಪ್ರಧಾನಿ ಇಂದಿರಾ ಗಾಂಧಿಯವರ (Prime minister Indhira Gandhi) ಅಧಿಕೃತ ನಿವಾಸವಾದ 1, ಸಫರ್ಜಂಗ್ ರಸ್ತೆ, ನವದೆಹಲಿಯಲ್ಲಿ ವಾಸಿಸುತ್ತಿತ್ತು. ಆ ವಿಳಾಸದಲ್ಲಿ ಮತದಾರರ ಪಟ್ಟಿಯಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಮತ್ತು ಮೇನಕಾ ಗಾಂಧಿ ಹೆಸರುಗಳ ಜೊತೆಗೆ ಸೋನಿಯಾ ಗಾಂಧಿಯವರ ಹೆಸರೂ ಸೇರಿಸಲ್ಪಟ್ಟಿತ್ತು.
ಯಾವ ಯಾವ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ಬದಲಾವಣೆ ಆಗಿದೆ,
1980: ನವದೆಹಲಿ ಮತದಾರರ ಪಟ್ಟಿಯಲ್ಲಿ (In the electoral roll) ಸೋನಿಯಾ ಗಾಂಧಿಯವರ ಹೆಸರನ್ನು ಸೇರಿಸುವಿಕೆ.
1982: ವ್ಯಾಪಕ ಆಕ್ರೋಶದ ನಂತರ ಪಟ್ಟಿಯಿಂದ ಹೆಸರು ಅಳಿಕೆ.
1983, ಜನವರಿ 1: ಚುನಾವಣಾ ನೋಂದಣಿಗೆ ಅರ್ಹತಾ ದಿನಾಂಕ.
1983, ಏಪ್ರಿಲ್ 30: ಭಾರತೀಯ ಪೌರತ್ವ ಅಧಿಕೃತ ಮಂಜೂರು.
1983, ಮತ್ತೆ ಸೇರಿಕೆ: ಮತದಾರರ ಪಟ್ಟಿಯ ಹೊಸ ಪರಿಷ್ಕರಣೆಯಲ್ಲಿ, ಮತಗಟ್ಟೆ 140ರಲ್ಲಿ, ಕ್ರಮ ಸಂಖ್ಯೆ 236ರಲ್ಲಿ ಹೆಸರು ದಾಖಲು.
ಬಿಜೆಪಿಯ ಟೀಕೆ ಏನು?:
ಮಾಳವೀಯ ಪ್ರಕಾರ, ಸೋನಿಯಾ ಗಾಂಧಿಯವರ ಹೆಸರು ಪೌರತ್ವ (Citizenship) ಅವಶ್ಯಕತೆಗಳನ್ನು ಪೂರೈಸದೆ ಎರಡು ಬಾರಿ ಮತದಾರರ ಪಟ್ಟಿಯಲ್ಲಿ ದಾಖಲಾಗಿರುವುದು ಚುನಾವಣಾ ಕಾನೂನು ಉಲ್ಲಂಘನೆಗೆ ಸಮಾನ. “ರಾಜೀವ್ ಗಾಂಧಿಯನ್ನು ಮದುವೆಯಾದ ನಂತರವೂ ಪೌರತ್ವ ಪಡೆಯಲು ಏಕೆ 15 ವರ್ಷ ತೆಗೆದುಕೊಂಡರು ಎಂಬುದು ವಿಷಯವಲ್ಲ, ಆದರೆ ಪೌರತ್ವವಿಲ್ಲದೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವುದು ಅಕ್ರಮ ಅಲ್ಲವೇ?” ಎಂದು ಟೀಕಿಸಿದ್ದಾರೆ.
ಒಟ್ಟಾರೆಯಾಗಿ, ಸೋನಿಯಾ ಗಾಂಧಿಯವರ ಮತದಾರರ ಪಟ್ಟಿ ಸೇರ್ಪಡೆ ಕುರಿತ ವಿವಾದ, 1980ರ ದಶಕದಲ್ಲಿ ನಡೆದದ್ದಾಗಿದ್ದರೂ, ಇಂದಿನ ರಾಜಕೀಯದಲ್ಲಿ (Today’s Political) ಮತ್ತೆ ಪ್ರಸ್ತಾಪವಾಗಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಪೌರತ್ವ, ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ರಾಜಕೀಯ ಪ್ರಭಾವ ಈ ಮೂರು ಅಂಶಗಳ ಸುತ್ತಲೇ ಈ ವಿವಾದದ ಬಿರುಗಾಳಿ ಬೀಸುತ್ತಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಸರ್ಕಾರದಿಂದ `ನಿರುದ್ಯೋಗಿಗಳಿಗೆ ಬಂಪರ್ ಗಿಫ್ಟ್’ : ಎಲೆಕ್ಟ್ರಿಕ್ ವಾಹನ ಖರೀದಿಗೆ 3 ಲಕ್ಷ ರೂ. ಸಹಾಯಧನ ಸೇರಿ 17 ಬಿಲ್ ಗೆ ಸಂಪುಟ ಒಪ್ಪಿಗೆ.!
- Labour Card Scholarship: ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.!
- ರಾಜ್ಯದ ಕಾರ್ಮಿಕರಿಗೆ ಸರ್ಕಾರದಿಂದ 8 ಲಕ್ಷ ರೂ. ಸಹಾಯಧನ | ಯಾವ ಕಾರ್ಮಿಕರಿಗೆ ಈ ಸೌಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ…
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.