Picsart 25 10 16 21 51 04 6471 scaled

ಮಧುಮೇಹ ನಿಯಂತ್ರಣಕ್ಕೆ ಹಾಗಲಕಾಯಿ ರಸ.! ನೈಸರ್ಗಿಕ ಆರೋಗ್ಯದ ಗುಟ್ಟು!

Categories:
WhatsApp Group Telegram Group

ಇತ್ತೀಚಿನ ಕಾಲದಲ್ಲಿ ನಗರ ಜೀವನಶೈಲಿ, ಸಕ್ಕರೆ ಹಾಗೂ ಸಂಸ್ಕರಿಸಿದ ಆಹಾರಗಳ ಅಧಿಕ ಸೇವನೆ, ಸ್ಮಾರ್ಟ್‌ಫೋನ್(Smart phone) ಮತ್ತು ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ಮಧುಮೇಹ (Diabetes) ಸಮಸ್ಯೆ ದೇಶಾದ್ಯಾಂತ ಹೆಚ್ಚುತ್ತಿದೆ. ಆಹಾರ ಪದ್ಧತಿಯಲ್ಲಿನ ಈ ಬದಲಾವಣೆ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹಾಗೂ ರಕ್ತದಲ್ಲಿ ಸಕ್ಕರೆ ಪ್ರಮಾಣದ ನಿಯಂತ್ರಣದಲ್ಲಿ ವ್ಯತ್ಯಯಗಳನ್ನು ಉಂಟುಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಹಾಗಲಕಾಯಿ (Bitter Gourd) ಎಂಬ ತರಕಾರಿ ಮಧುಮೇಹ ನಿರ್ವಹಣೆಯಲ್ಲಿ ಸಹಾಯಕವಾದ ಪ್ರಕೃತಿ ಆಧಾರಿತ ಪರಿಹಾರವೆಂದು ಪರಿಗಣಿಸಲಾಗಿದೆ. ಹಾಗಿದ್ದರೆ ಮಧುಮೇಹ ನಿರ್ವಹಣೆಗೆ ಹಾಗಲಕಾಯಿ ಹೇಗೆ ಸಹಾಯ ಮಾಡುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..

ಹಾಗಲಕಾಯಿಯು ಮೆದುಳಿನ ಗ್ರಂಥಿ ಮತ್ತು ಇನ್ಸುಲಿನ್(Insulin) ಉತ್ಪಾದನೆ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್, ವಿಟಮಿನ್ ಎ, ಬಿ, ಸಿ ಮತ್ತು ರಿಬೋಫ್ಲಾವಿನ್ ಮೆದುಳಿನ ಬೀಟಾ ಕೋಶಗಳನ್ನು ಬಲಪಡಿಸುತ್ತವೆ, ಇದರಿಂದ ದೇಹ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸಲು ಸಹಾಯವಾಗುತ್ತದೆ. ಪಾಲಿಪೆಪ್ಟೈಡ್-ಪಿ ಮತ್ತು ಚರಂಟಿನ್ ಮುಂತಾದ ಹೈಪೊಗ್ಲಿಸಿಮಿಕ್ (Hypoglycemic) ಗುಣಲಕ್ಷಣಗಳು ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಶಕ್ತಿಶಾಲಿಯಾದ ನೆರವನ್ನ ನೀಡುತ್ತವೆ.

ಹಾಗಲಕಾಯಿ ರಸ ತಯಾರಿಸುವುದು ಹೇಗೆ?:

ಸಾಮಗ್ರಿಗಳು,
2 ಹಾಗಲಕಾಯಿ(2 bitter gourds)
1 ಸೌತೆಕಾಯಿ1 (cucumber)
3 ಟೊಮೆಟೊ(3 tomatoes)
ವಿಧಾನ,
ಎಲ್ಲಾ ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ.
ತೊಳೆದ ತರಕಾರಿಗಳನ್ನು ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಳ್ಳಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.(ರುಚಿಗೆ ನಿಂಬೆ ರಸ ಕೂಡ ಸೇರಿಸಬಹುದು).

ಅಗತ್ಯ ಸೂಚನೆಗಳು:

ಕೇವಲ ಹಾಗಲಕಾಯಿ ರಸ ಮಧುಮೇಹವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ನಿಯಂತ್ರಣ ಮತ್ತು ವೈದ್ಯಕೀಯ ಸಲಹೆ ಜೊತೆಗೆ ಇದನ್ನು ಸೇವಿಸುವುದರಿಂದ ಅರೋಗ್ಯ ಕಾಪಾಡಿಕೊಳ್ಳಬಹುದು.

ಹಾಗಲಕಾಯಿ ರಸದ ಪ್ರಯೋಜನಗಳು ಯಾವುವು?:

ಇನ್ಸುಲಿನ್ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತದೆ.
ಹೊಟ್ಟೆ ನೋವು, ಉರುಳು ಸಮಸ್ಯೆ ಕಡಿಮೆ ಮಾಡುತ್ತದೆ.
ದೇಹದ ಕೊಬ್ಬಿನ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೃದಯ ಹಾಗೂ ಚರ್ಮಕ್ಕೆ ಪೋಷಕತತ್ತ್ವಗಳನ್ನು ಒದಗಿಸುತ್ತದೆ.
ಸೋಂಕುಗಳಿಗೆ ಪ್ರತಿರೋಧಶಕ್ತಿ ಹೆಚ್ಚಿಸುತ್ತದೆ.

ಗಮನಿಸಿ:
ಈ ಮಾಹಿತಿಯನ್ನು ಸಾಮಾನ್ಯ ಆರೋಗ್ಯ ಸಲಹೆಯಾಗಿ ನೀಡಲಾಗಿದೆ. ಮಧುಮೇಹದ ಸಮಸ್ಯೆ ಇರುವವರು ಯಾವುದೇ ಹೊಸ ಆಹಾರ ಅಥವಾ ಮನೆಮದ್ದು ಪ್ರಯೋಗಿಸುವ ಮುನ್ನ, ತಜ್ಞ ವೈದ್ಯರ ಸಲಹೆ ಪಡೆಯುವುದು ಅಗತ್ಯ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories