BBK 10: ಬಿಗ್ ಬಾಸ್ ಗೆಲ್ಲೋದು ಯಾರು ಗೊತ್ತಾ..? ಕಪ್ ತಗೊಂಡು ಹೋಗೋ ಸ್ಪರ್ಧಿ ಇವರೇ ನೋಡಿ!

bigboss winner

ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ ( Big boss season 10 ) ಫಿನಾಲೆಗೆ ( Finale ) ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಬಿಗ್ ಬಾಸ್ ಮನೆಯ ಒಡೆಯ ಯಾರಾಗುತ್ತಾರೆ ಎಂಬ ಕಾತುರ ಪ್ರತಿಯೊಬ್ಬರಲ್ಲೂ ಇದೆ. ಹೌದು, ಬಿಗ್ ಬಾಸ್ ಶುರುವಾದಗಿನಿಂದಲೂ ಬಿಗ್ ಬಾಸ್ ಮನೆಯಲ್ಲಿ ಉಳಿದು ಕೊಳ್ಳಲು ಹಲವು ಪೈಪೋಟಿ ( Competition ) ಇದ್ದೆ ಇರುತ್ತವೆ. ಆದರೆ ಕೊನೆಯ ಹಂತಕ್ಕೆ ಬಂದು ತಲುಪಿದಾಗ ಬಿಗ್ ಬಾಸ್ ನ ಟ್ರೋಫಿಗಾಗಿ ಪೈಪೋಟಿ ನಡೆಯುತ್ತದೆ. ಈ ಬಿಗ್ ಬಾಸ್ ಸೀಸನ್ 10 ವಿನ್ನರ್ ( Big boss season 10 winner ) ಯಾರಗಬಹುದು ಎಂಬ ಮಾಹಿತಿಯ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮಿಡ್ ವೀಕ್ ಎಲಿಮಿನೇಶನ್ ( There is no mid week elimination ) ಇಲ್ಲ ಎಂದ ಕಿಚ್ಚ :

ಫಿನಾಲೆ ವಾರದಲ್ಲಿ ಬಿಗ್ ಬಾಸ್ ಮನೆಯೊಳಗೆ ಸಂಗೀತಾ, ವಿನಯ್, ಕಾರ್ತಿಕ್, ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಸೇರಿ ಒಟ್ಟು ಆರು ಸದಸ್ಯರು ಉಳಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ವಾರದಲ್ಲಿ ಮಿಡ್‌ ವೀಕ್ ಎಲಿಮಿನೇಷನ್ ಇರುವುದಿಲ್ಲ ಎಂದು ಈಗಾಗಲೇ ಬಿಗ್‌ ಬಾಸ್ ಹೇಳಿದ್ದಾರೆ. ಬಿಗ್ ಬಾಸ್ ನ ಈ ಫಿನಾಲೆ ಮತ್ತಷ್ಟು ಕಾತುರ ಪಡಿಸಿದೆ.

ಬಿಗ್ ಬಾಸ್ ನಲ್ಲಿ ಎಲಿಮಿನೇಟ್ ಆಗಿ ಹೊರ ಹೋಗಿರುವ ಸ್ಪರ್ಧಿಗಳ ವಿನ್ನರ್ ಯಾರಗಬಹುದು ಎಂದು ತಿಳಿಸಿದ್ದಾರೆ. ಯಾರು ಯಾರ ಹೆಸರನ್ನು ಹೇಳಿದ್ದಾರೆ ಎಂದು ತಿಳಿದು ಕೊಳ್ಳೋಣ.

bigboss finalist

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ಯಾರು ಗೆಲ್ಲುತ್ತಾರೆ? ಎಂಬುದರ ಬಗ್ಗೆ ಇದೀಗ ಶೋಷಿಯಲ್ ಮೀಡಿಯಾಗಳಲ್ಲಿ ( social Media ) ಸಾಕಷ್ಟು ಚರ್ಚೆಗಳಾಗುತ್ತಿದೆ. ಪ್ರತಿಯೊಬ್ಬ ಸದಸ್ಯರ ಅಭಿಮಾನಿಗಳೂ ತಮ್ಮ ಮೆಚ್ಚಿನ ಸ್ಪರ್ಧಿಯ ಪರವಾಗಿ ಹೋರಾಡುತ್ತಿದ್ದಾರೆ. ಪ್ರತೀ ವಾರ ಬಿಗ್‌ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಸ್ಪರ್ಧಿಗಳು ಹೊರಗೆ ಬರುತ್ತಿದ್ದ ಹಾಗೇ ಜಿಯೋ ಸಿನಿಮಾ ಅವರೊಂದಿಗೆ ಎಕ್ಸ್‌ಕ್ಲೂಸಿವ್ ‘ಬಿಗ್‌ಬ್ಯಾಂಗ್‌’ ಸಂದರ್ಶನ ( Exclusive big big interview ) ನಡೆಸುತ್ತಿತ್ತು. ಅದರಲ್ಲಿ ಅವರು ಬಿಗ್ ಬಾಸ್ ಸೀಸನ್ 10 ನ ವಿನ್ನರ್ ಯಾರಗಬಹುದು ಎಂದು ತಿಳಿಸಿದ್ದಾರೆ.

ಪ್ರತಿಯೊಬ್ಬ ಸ್ಪರ್ಧಿಯ ‘ಬಿಗ್‌ಬ್ಯಾಂಗ್ ಸಂದರ್ಶನ’ದಲ್ಲಿ ಕೇಳಲಾದ ಸಾಮಾನ್ಯ ಪ್ರಶ್ನೆಗಳು, ಅಂತಿಮ ಹಂತದಲ್ಲಿರುವ ಐವರು ಸ್ಪರ್ಧಿಗಳು ಯಾರು? ಮತ್ತು ಯಾರು ಗೆಲ್ಲಬಹುದು? ಎಂಬುದಾಗಿತ್ತು. ಎಲಿಮಿನೇಟ್ ಆದ ಎಲ್ಲ ಸ್ಪರ್ಧಿಗಳ ಅಭಿಪ್ರಾಯ, ಊಹೆಯ ಪ್ರಕಾರ, ಈ ಬಾರಿಯ ಬಿಗ್‌ ಬಾಸ್‌ ಅನ್ನು ಯಾರು ಗೆಲ್ಲುತ್ತಾರೆ? ಕಪ್ ಯಾರ ಕೈ ಸೇರಲಿದೆ? ಇದು ಎಲಿಮಿನೇಟೆಡ್ ಆದ ಸ್ಪರ್ಧಿಗಳ ಅಭಿಪ್ರಾಯ, ಅವರ ಊಹೆಯ ಆಧಾರದ ಮೇಲೆ ಈ ಹೆಸರುಗಳು ಕೇಳಿಬಂದಿವೆ.

whatss

ಸಂಗೀತಾ ಶೃಂಗೇರಿ (sangeetha sringeri ) :

bigboss season 10 kannada finale

ಭಾಗ್ಯಶ್ರೀ, ನೀತು, ಸ್ನೇಹಿತ್, ಪವಿ ಪೂವಪ್ಪ, ಅವಿನಾಶ್, ಸಿರಿ, ತನಿಷಾ ನಮೃತಾ ಇವರೆಲ್ಲರೂ ಟಾಪ್‌ 5ನಲ್ಲಿ ಸಂಗೀತಾ ಇರುತ್ತಾರೆ ಎಂದು ಊಹಿಸಿದ್ದರು. ಯಾಕೆಂದರೆ, ಸಂಗೀತ ಅವರು ಬಿಗ್ ಬಾಸ್ ಶುರುವಾದಗಿನಿಂದಲೂ ಅವರ ಹೆಸರು ಬಹಳ ಕೇಳಿ ಬರುತ್ತಿತ್ತು. ಯಾಕೆಂದರೆ, ಅವರು ಟಾಸ್ಕ್ ಗಳಲ್ಲಿ, ಮನೆಯ ಸ್ಪರ್ಧಿಗಳ ಜೊತೆಗಿನ ಒಡನಾಟ,ಮುಂತಾದ ವಿಚಾರದಲ್ಲಿ ಬಹಳ ಮುಂದೆ ಇದ್ದ ಕಾರಣ ಅವರ ಹೆಸರು ಕೇಳಿ ಬರುತ್ತಿತ್ತು. ಆದರೆ ಇದೀಗ ತನಿಷಾ ಮತ್ತು ನಮ್ರತಾ ಅವರು ಈ ಬಾರಿಯ ಬಿಗ್‌ ಬಾಸ್‌ ಅನ್ನು ಸಂಗೀತಾ ಅವರೇ ಗೆಲ್ಲಬಹುದು ಎಂದು ಊಹಿಸಿದ್ದಾರೆ.

ತುಕಾಲಿ ಸಂತೋಷ್ ( tukali santhosh ) :

ಇನ್ನು ತುಕಾಲಿ ಸಂತೋಷ್ ಅವರ ಬಗ್ಗೆ ಹೇಳುದಾದರೆ, ಇವರು ಕೂಡ ಬಿಗ್ ಬಾಸ್ ಮನೆಯೊಳಗೆ ಸ್ವಲ್ಪ ಮಟ್ಟಿಗೆ ಹೆಸರು ಮಾಡಿದ್ದಾರೆ. ಹೌದು, ತುಕಾಲಿ ಅವರ ಜಾಣತನ, ತಂತ್ರಗಾರಿಕೆ, ಹಾಗೂ ಅವರ ಮನರಂಜೆನೆ ಈ ವರೆಗೂ ಬಿಗ್ ಬಾಸ್ ಮನೆಯಲ್ಲಿ ಇರಲು ಸಾಧ್ಯವಾಯಿತು. ಅಷ್ಟೇ ಅಲ್ಲದೆ ವರ್ತುರ್ ಸಂತೋಷ್ ಅವರೊಂದಿಗಿನ ಸ್ನೇಹ ಕೂಡ ಕಾರಣ. ನಮ್ರತಾ, ಮೈಕಲ್, ಸಿರಿ, ಸ್ನೇಹಿತ್, ಭಾಗ್ಯಶ್ರೀ ಮತ್ತು ನೀತು ಅವರು ತುಕಾಲಿ ಅವರನ್ನು ಟಾಪ್‌ 5ನಲ್ಲಿ ನೋಡುತ್ತೇವೆ ಎಂದು ಹೇಳಿದ್ದರು.

ಕಾರ್ತಿಕ್ ಮಹೇಶ್‌ ( karthik mahesh ) :

ಕಾರ್ತಿಕ್ ಮಹೇಶ್ ಅವರದ್ದು ಲವಲವಿಕೆಯ ವ್ಯಕ್ತಿತ್ವ, ಇನ್ನು ಕಾರ್ತಿಕ್ ಮಹೇಶ್ ಅವರು ಪ್ರತಿಯೊಂದು ಟಾಸ್ಕ್ ನಲ್ಲಿ ಉತ್ತಮ ಪರ್ಫಾರ್ಮೆನ್ಸ್ (performance) ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರು ಸ್ನೇಹ ಜೀವಿಯು ಕೂಡ ಹೌದು. ಕಾರ್ತಿಕ್ ಮಹೇಶ್ ಎಂದರೆ, ಎಲ್ಲ ಸ್ಪರ್ಧಿಗಳು ಕೂಡ ಇಷ್ಟ ಪಡುತ್ತಾರೆ. ಇದುವರೆಗೆ ಕಾರ್ತಿಕ್ ಅವರನ್ನು ಫೇಕ್‌ ಎಂದು ಮನೆಯ ಉಳಿದ ಸದಸ್ಯರು ಉಲ್ಲೇಖಿಸಿದ್ದು ತುಂಬಾನೇ ಕಡಿಮೆ.

ತನಿಷಾ, ಮೈಕಲ್, ಪವಿ, ಸಿರಿ, ಸ್ನೇಹಿತ್, ಭಾಗ್ಯಶ್ರೀ, ನೀತು ಅವರು ಕಾರ್ತಿಕ್ ಅವರನ್ನು ಟಾಪ್ 5ನಲ್ಲಿ ನೋಡುತ್ತೇವೆ ಎಂದು ಊಹಿಸಿದ್ದರು. ಅದರಲ್ಲಿಯೂ ಮನೆಯೊಳಗೆ ಆಪ್ತಸ್ನೇಹವನ್ನು ಕಾಪಾಡಿಕೊಂಡಿದ್ದ ತನಿಷಾ ಅವರು, ಕಾರ್ತಿಕ್ ಗೆಲ್ಲಬೇಕು ಎಂಬ ಆಸೆ ಇದೆ. ಆದರೆ ಸಂಗೀತಾ ಗೆಲ್ಲಬಹುದು ಅನಿಸುತ್ತಿದೆ ಎಂದು ಹೇಳಿದ್ದರು. ಸಿರಿ ಕೂಡ, ಕಾರ್ತಿಕ್ ಗೆಲ್ಲಬೇಕು ಎಂದು ಹೇಳಿದ್ದಾರೆ.

ವಿನಯ್ ಗೌಡ ( vinay gowda ) :

ವಿನಯ್ ಗೌಡ ಅವರು ಬಿಗ್ ಬಾಸ್ ನ ವಿನ್ನರ್ ಗಳ ಪೈಪೋಟಿ ಸ್ಪರ್ಧಿಗಳಲ್ಲಿ ಒಬ್ಬರು, ಯಾಕೆಂದರೆ ಬಿಗ್ ಬಾಸ್ ಮನೆಯಲ್ಲಿ ಇವರ ಹೆಸರು ಕೂಡ ಬಹಳ ಹೆಚ್ಚಾಗಿ ಕೇಳಿ ಬಂದಿದೆ. ಇವರನ್ನು ಬಿಗ್ ಬಾಸ್ ಮನೆಯ ಆನೆ ಎಂದೇ ಕರೆಯುತ್ತಿದ್ದರು. ಇನ್ನು ಟಾಸ್ಕ್ , ತಂತ್ರಗಾರಿಕೆ (strategy) ವಿಷಯದಲ್ಲೂ ಕೂಡ ವಿನಯ್ ಅವರು ಬಹಳ ಮುಂದೆ ಇದ್ದಾರೆ. ಇದೀಗ ಫಿನಾಲೆಯಲ್ಲಿ ಇರುವ ಸ್ಪರ್ಧಿಗಳಲ್ಲಿ ಒಬ್ಬರು ವಿನಯ್. ನಮ್ರತಾ, ಮೈಕಲ್, ಪವಿ, ಸ್ನೇಹಿತ್‌ ಎಲ್ಲರೂ ವಿನಯ್ ಹೆಸರನ್ನು ಉಲ್ಲೇಖಿಸಿದ್ದಾರೆ. ಮೈಕಲ್‌, ನಮ್ರತಾ ಮತ್ತು ಸ್ನೇಹಿತ್ ವಿನಯ್ ಗೆಲ್ಲಬೇಕು ಎಂಬುದು ನನ್ನ ಆಸೆ ಎಂದು ಹೇಳಿಕೊಂಡಿದ್ದಾರೆ.

ಪ್ರತಾಪ್ ( prathap ) :

ಇನ್ನು ಡ್ರೋನ್ ಪ್ರತಾಪ್ ಅವರು ಈ ಹಿಂದೆ ಬಹಳ ಟ್ರೋಲ್ ಗೆ ಒಳಗಾಗಿದ್ದರು. ಹೌದು ಅವರು ಬಿಗ್ ಬಾಸ್ ಮನೆಗೆ ಬಂದ ನಂತರ ಅವರಿಗೆ ಬೆಂಬಲಿಗರು ಬಹಳ ಜನ ಇದ್ದಾರೆ. ಅವರು ಕೂಡ ಈಗ ಬಹಳ ಸುದ್ದಿಯಲ್ಲಿ ಮತ್ತು ಸಾಕಷ್ಟು ಜನಪ್ರಿಯ ವ್ಯಕ್ತಿಯಲ್ಲಿ ಒಬ್ಬರಾಗಿದ್ದರೆ.

ವರ್ತೂರ್ ಸಂತೋಷ್ ( Varthur Santhosh ) :

6 ನೇ ಸ್ಪರ್ಧಿ ವರ್ತುರ್ ಸಂಶೋಷ್ ಕೂಡ ಬಹಳ ಬಹಳ ಕಾಂಟ್ರಾವರ್ಸಿ ಮಾಡಿಕೊಂಡಿದ್ದರು. ಒಮ್ಮೆ ಬಿಗ್ ಬಾಸ್ ಮನೆಯಿಂದ ಜೈಲು ಪಾಲಾಗಿದ್ದರು ಮತ್ತೆ ಅದಾದ ನಂತರ ಬಿಗ್ ಬಾಸ್ ಮನೆಗೆ ಕಾಲಿಟ್ಟರು. ಇವರಿಗೂ ಕೂಡ ಬಹಳ ಜನ ಬೆಂಬಲಿಗರಿದ್ದಾರೆ. ದಿನವೂ ಕೂಡ ಗೆಲ್ಲಲಿ ಎಂಬ ಶುಭ ಹಾರೈಕೆಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿದೆ.

ಈ ಆರು ಸ್ಪರ್ಧಿಗಳಲ್ಲಿ ಬಿಗ್ ಬಾಸ್ ಸೀಸನ್ 10 ವಿನ್ನರ್ ಯಾರಗಬಹುದು ಎಂಬ ಅಚ್ಚರಿ ಎಲ್ಲರಲ್ಲೂ ಇದೆ. ಯಾವುದೇ ಊಹೆಯ ಪ್ರಕಾರ ಯಾರು ವಿನ್ನರ್ ಆಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಅದೆಲ್ಲವೂ ಜನರ ವೋಟಿಂಗ್ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಸೀಸನ್ ನ ವಿನ್ನರ್ ಯಾರಗಬಹುದು ಎಂದು ಕಾದು ನೋಡೋಣ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!