BBK 10: ಬಿಗ್ ಬಾಸ್ ಮನೆಗೆ ಬಂದೇ ಬಿಡ್ತು ಪ್ರತಾಪ್ ಡ್ರೋನ್..!

drone to bigboss

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ನೀನು ಎರಡು ದಿನಗಳಲ್ಲಿ ಮುಕ್ತಾಯವನ್ನುಗೊಳ್ಳಲಿದೆ. ಮನೆಯ ಸ್ಪರ್ಧೆಗಳಿಗೆ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಬಿಗ್ ಬಾಸ್ ಒಂದು ಅವಕಾಶವನ್ನು ನೀಡಿದ್ದರು. ತಮ್ಮ ಆಸೆಗಳನ್ನು ಬಿಗ್ ಬಾಸ್ ಮುಂದೆ ಹೇಳಿ ತನ್ನ ಕೈಯಲ್ಲಿರುವ ಕಾಯಿನ್ ಗಳನ್ನು ಬಾವಿಯಲ್ಲಿ ಎಸೆಯಬೇಕಾಗಿತ್ತು. ಮನೆಯ 6 ಜನರು ಅವರ ಆಸೆಗಳೆಲ್ಲವನ್ನು ಬಿಗ್ ಬಾಸ್ ಮುಂದೆ ಈಗಾಗಲೇ ಹೇಳಿದ್ದಾರೆ. ಬಿಗ್ ಬಾಸ್ ಕೂಡ ಒಂದೊಂದೇ ಆಸೆಗಳನ್ನು ಈಡೇರಿಸುತ್ತಿದ್ದಾರೆ. ಅವುಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ. ಹೇಗೆಲ್ಲಾ ಮನೆಯವರ ಆಸೆಗಳನ್ನು ಈಡೇರಿಸಿದರು ಬಿಗ್ ಬಾಸ್ ಎಂಬುದರ ಈ ವರದಿಯನ್ನು ಸಂಪೂರ್ಣವಾಗಿ ಓದಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮನೆಗೆ ಬಂತು ಡ್ರೋನ್ :
IMG 20240126 WA0007

ಡ್ರೋನ್ ಪ್ರತಾಪ್ ಅವರು ಮನೆಯೊಳಗೆ ಅವರೇ ಮಾಡಿದ ಡ್ರೋನ್ ಅನ್ನು ಒಮ್ಮೆ ತರಿಸುವಂತೆ ಕೇಳಿಕೊಂಡಿದ್ದರು. ಅವರ ಆಸೆಯಂತೆಯೇ ಬಿಗ್ ಬಾಸ್ ಮನೆಯೊಳಗೆ ಡ್ರೋನ್ ಅನ್ನು ತರಿಸಿಕೊಟ್ಟರು. ಡ್ರೋನ್ ಪ್ರತಾಪ್ ಅವರಿಗೆ ತುಂಬಾ ಖುಷಿಯಾಯಿತು. ಡೋಂಟ್ ಪ್ರತಾಪ್ ಅವರು ಈ ಡ್ರೋನ್ ಹೇಗೆ ಕೆಲಸ ಮಾಡುತ್ತದೆ ಎಂದು ಹೇಳಿದರು. ರೈತರಿಗೆ ಈ ಡ್ರೋನ್ ಹೇಗೆ ಉಪಯೋಗವಾಗುತ್ತದೆ ಎಂದು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟರು. ಅಷ್ಟೇ ಅಲ್ಲದೆ ಆರ್ಗನ್ ಗಳನ್ನು ಒಂದು ಸಿಟಿಯಿಂದ ಇನ್ನೊಂದು ಸಿಟಿಗೆ ಹೇಗೆ ಡ್ರೋನ್ ಮುಖಾಂತರ ತಲುಪಿಸಬಹುದು ಎಂದು ಕೂಡ ವಿವರಿಸಿದ್ದರು. ಮನೆಯವರೆಲ್ಲ ಅವರ ಕೆಲಸಕ್ಕೆ ಮೆಚ್ಚುಗೆಯನ್ನು ನೀಡಿದರು.

Drone ಪ್ರತಾಪಗೆ ಸಿಕ್ತು ಬಂಪರ್ ಲಾಟರಿ :
IMG 20240126 WA0008

ತುಕಾಲಿ ಸಂತೋಷ್ ಹಾಗೂ ಪ್ರತಾಪ್ ಅವರು ಒಂದು ದಿನದ ಮಟ್ಟಿಗೆ ಮನೆಯ ಕ್ಯಾಪ್ಟನ್ ಆಗಿ ಇರಬೇಕು ಎಂದು ಆಶಿಸಿದ್ದರು. ಅದರಂತೆ ಬಿಗ್ ಬಾಸ್ ಅವರು ಇಬ್ಬರಿಗೂ ಕೂಡ ಮನೆಯ ಕ್ಯಾಪ್ಟನ್ ರೂಮನ್ನು ನೀಡಿದ್ದಾರೆ. ಇಬ್ಬರೂ ಕೂಡ ಒಂದು ದಿನದ ಮಟ್ಟಿಗೆ ಕ್ಯಾಪ್ಟನ್ ಆಗಿದ್ದಾರೆ. ಇಬ್ಬರಿಗೂ ಮನೆಯಿಂದ ಫೋಟೋಗಳು ಕೂಡ ಬಂದವು. ತುಕಾಲಿ ಸಂತೋಷ್ ಹಾಗೂ ಅವರ ಹೆಂಡತಿಯ ಫೋಟೋ ಬಂದಿದೆ ಅಷ್ಟೇ ಅಲ್ಲದೆ ಪ್ರತಾಪ್ ಅವರಿಗೆ, ಅವರ ಅಪ್ಪ ಅಮ್ಮನ ಜೊತೆ ನಿಂತಿರುವ ಫೋಟೋವನ್ನು ಮನೆಯಿಂದ ಕಳುಹಿಸಿಕೊಟ್ಟಿದ್ದಾರೆ. ಮನೆಯ ಕ್ಯಾಪ್ಟನ್ಸಿ ರೂಮ್ ಓಪನ್ ಆದ ನಂತರ ಇಬ್ಬರು ಹಾಸಿಗೆಯ ಮೇಲೆ ಜಿಗಿದು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿನಯ್ ಗೋಸ್ಕರ ಡಿನ್ನರ್ :

ವಿನಯ(vinay)ವರು ಆಸೆಯಾಗಿ ಮನೆಯವರಿಗೆಲ್ಲ ಡಿನ್ನರ್ ಕಳಿಸುವಂತೆ ಹೇಳಿದ್ದರು ಹಾಗಾಗಿ ಬಿಗ್ ಬಾಸ್ ರಾತ್ರಿಯ ಊಟನ್ನು ಏರ್ಪಡಿಸಿದರು. ಮನೆಯ ಮಂದಿಗಳೆಲ್ಲ ಸೇರಿ ಊಟವನ್ನು ಸಂತಸದಿಂದ ಸವಿದರು.

ಕಾರ್ತಿಕ್ ಅವರಿಗೆ ಮನೆಯಿಂದ ಕರೆ ಬಂತು :

ಕಾರ್ತಿಕ್(karthik) ಅವರು ತನ್ನ ತಂಗಿಯ ಜೊತೆ ಮಾತನಾಡುವುದಾಗಿ ಹೇಳಿದರು. ಅದಕ್ಕಾಗಿ ಬಿಗ್ ಬಾಸ್ ಅವರು ವಿಡಿಯೋ ಕಾಲನ್ನು ಏರ್ಪಡಿಸಿದರು. ತುಂಬಾ ದಿನಗಳ ನಂತರ ಕಾರ್ತಿಕ್ ಅವರಿಗೆ ಅವರ ತಂಗಿ ಹಾಗೂ ಮುದ್ದಾದ ಅಳಿಯನನ್ನು ನೋಡಿ ಖುಷಿ ಪಟ್ಟರು. ಅವರ ತಂಗಿ ತನ್ನ ಮಗು ನಿನ್ನ ಹಾಗೆ ಇದೆ ಎಂದು ಕಾರ್ತಿಕ್ ಅವರಿಗೆ ಹೇಳಿದರು. ತಂಗಿಯ ಜೊತೆ ಮಾತನಾಡಿ ಕಾರ್ತಿಕ್ ಅವರು ಖುಷಿಯಿಂದ ಹಿಗ್ಗಿದರು.

ಸಂತೋಷ್ ವರ್ತೂರು ಅವರ ಮನೆಯಲ್ಲಿ ಭೋಜನ ಬಂತು :

ವರ್ತೂರ್ ಸಂತೋಷ್(varthur santhosh)ಅವರು ತಮ್ಮ ಮನೆಯಿಂದ ಮನೆ ಎಲ್ಲರಿಗು ಬೋಜನವನ್ನು ಹಾಗೂ ಮುದ್ದೆಯನ್ನು ಕಳಿಸುವಂತೆ ಕೇಳಿದರು. ಹಾಗಾಗಿ ಅವರಿಗೋಸ್ಕರ ಮುದ್ದೆ, ಮಟನ್ ಬಿರಿಯಾನಿ ಹಾಗೂ ಇನ್ನಿತರ ಬಗೆ ಬಗೆಯ ಊಟವನ್ನು ಮನೆಯಿಂದ ಮಾಡಿ ಕಳುಹಿಸಲಾಗಿತ್ತು. ಎಲ್ಲರೂ ವರ್ತುರ್ ಸಂತೋಷ್ ಅವರಿಗೆ ಧನ್ಯವಾದ ತಿಳಿಸಿ ಊಟವನ್ನು ಖುಷಿಯಿಂದ ತಿಂದರು.

ತುಕಾಲಿ ಆದ್ರೂ ರಾಜ :

IMG 20240126 WA0006

ತುಕಾಲಿಯವರು ತನ್ನ ಆಸೆಯಾಗಿ, ಒಂದು ಸ್ವಲ್ಪ ಹೊತ್ತಿನ ಮಟ್ಟಿಗೆ ರಾಜನಾಗಿ ಇರಬೇಕು ಮನೆಯವರೆಲ್ಲ ನನ್ನ ಸೇವೆಯನ್ನು ಮಾಡಬೇಕು ಎಂದು ಬಯಸಿದರು. ಇಲ್ಲದಿದ್ದರೆ ಮನೆಯ ಕ್ಯಾಪ್ಟನ್ ಆಗಿ ಸ್ವಲ್ಪ ನಿಮಿಷಗಳ ಕಾಲ ಇರಬೇಕು ಎಂದು ಆಸೆಯನ್ನು ಪಟ್ಟಿದ್ದರು ಆದರೆ ಅದು ನೆರವೇರಲಿಲ್ಲ. ಆದರೆ ಬಿಗ್ ಬಾಸ್ ಅವರಿಗೆ ರಾಜನಾಗಲು ಅವಕಾಶವನ್ನು ನೀಡಿದರು. ತುಕಾಲಿಯವರು ಮನೆಯವರೆಲ್ಲರ ಜೊತೆ ಸೇವೆಯನ್ನು ಮಾಡಿಸಿಕೊಂಡರು. ವಿನಯ್ ಹಾಗೂ ಕಾರ್ತಿಕ್ ಅವರ ಜೊತೆ ಕೈಯನ್ನು ಒತ್ತಿಸಿಕೊಂಡರು. ಹೀಗೆ ಹಲವಾರು ಸೇವೆಗಳನ್ನು ಮಾಡಿಸಿಕೊಂಡು ರಾಜನಾಗಿ ಬಿಗಿದರು.

whatss

ಸಂಗೀತ ಅವರಿಗೆ ಸಿಹಿ ಸಿಕ್ಕಿತು :

ನಿಮಗೆಲ್ಲರಿಗೂ ತಿಳಿದಿರುವಂತೆ ಸಂಗೀತಅವರು ಚಾರ್ಲಿ 777 ಸಿನಿಮಾದ ಹೀರೋಯಿನ್, ಆ ಚಿತ್ರದ ನಿರ್ದೇಶಕರು ಸಂಗೀತ ಅವರೊಂದಿಗೆ ಮಾತನಾಡಿ ಅವರಿಗೆ ಶುಭವನ್ನು ಹಾರೈಸಿದರು. ಅಷ್ಟೇ ಅಲ್ಲದೆ, ಸಂಗೀತ ಅವರು ಮನೆಯಲ್ಲಿದ್ದ ಹರ್ಷಿಸ್ ಕಿಸಸ್ ಚಾಕ್ಲೇಟ್ ಬೇಕೆಂದು ಕೇಳಿ ಅದನ್ನು ಪಡೆದುಕೊಂಡರು. ಮನೆಯವರಿಗೆಲ್ಲಾ ಒಂದೊಂದು ಪಾಕೆಟ್ ಚಾಕಲೇಟ್ ನೀಡಿ ಅವರು ಕೂಡ ತಿಂದರು. ಹೀಗೆ ಮನೆಯವರೆಲ್ಲ ಕೊನೆಯ ವಾರದಲ್ಲಿ ತಮಗೆ ಬೇಕಾದದ್ದನ್ನೆಲ್ಲಾ ಆಸೆಯನ್ನಾಗಿ ಪಡೆದುಕೊಂಡು ಈಡೇರಿಸಿಕೊಂಡಿದ್ದಾರೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!