ಮೊದಲನೆಯ ದಿನವೇ ರೂಲ್ಸ್ ಬ್ರೇಕ್ ಮಾಡಿದ ಲಾಯರ್ ಜಗದೀಶ್ :
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11(Bigboss kannada season 11) ಮೊದಲನೆಯ ದಿನದಿಂದಲೇ ರೋಚಕತೆಯನ್ನು ಸೃಷ್ಟಿ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ನರಕ ವಾಸಿಗಳು ಹಾಗೂ ಸ್ವರ್ಗ ವಾಸಿಗಳು ಎಂದು ವಿಂಗಡಿಸಲಾಗಿತ್ತು. ಸ್ವರ್ಗ ವಾಸಿಗಳಿಗೆ ಹಲವಾರು ಲಕ್ಸರಿ ಪದಾರ್ಥಗಳನ್ನು ನೀಡಿದ್ದರು. ಆದರೆ ಆ ಪದಾರ್ಥಗಳೆಲ್ಲವನ್ನು ಹಿಂತಿರುಗಿ ಬಿಗ್ ಬಾಸ್ ತೆಗೆದುಕೊಳ್ಳಲು ಕಾರಣ ಏನು ಎಂಬುದನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಿಗ್ ಬಾಸ್ ಸ್ವರ್ಗ ವಾಸಿಗಳಿಗೆ ಪತ್ರದ ಮೂಲಕ ತಿಳಿಸಿದ್ದೇನೆಂದರೆ, ಇಬ್ಬರು ನರಕವಾಸಿಗಳಿಂದ ಎಲ್ಲಾ ಮನೆಯ ಕೆಲಸಗಳನ್ನು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದ್ದರು. ಸ್ವರ್ಗ ವಾಸಿಗಳು ಚೈತ್ರ ಕುಂದಾಪುರ ಹಾಗೂ ಗೋಲ್ಡ್ ಸುರೇಶ್ ಅವರನ್ನು ಕೆಲಸ ಮಾಡಲು ಆರಿಸಿಕೊಂಡರು. ಚೈತ್ರ ಅವರು ಹೇಳಿದ ಕೆಲಸಗಳನ್ನು ಸರಿಯಾಗಿ ಮಾಡುತ್ತಿರಲಿಲ್ಲ ಅಷ್ಟೇ ಅಲ್ಲದೆ ಮಂಚೂರಿ ಪದಾರ್ಥವಾದ ಹಣ್ಣನ್ನು ಕೂಡ ತಿಂದು ನರಕದ ಉಳಿದ ಜನರಿಗೆ ನೀಡಿದ್ದರು. ಆದರೆ ಸುರೇಶ ಅವರು ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರು. ನಂತರ ಲಾಯರ್ ಜಗದೀಶ್ ಅವರು ಚೈತ್ರ ಕುಂದಾಪುರ ಅವರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಅವರೇ ಮಾಡಲು ಹೊರಟಿದ್ದರು. ಸ್ವರ್ಗ ವಾರ್ತೆಗಳು ಲಾಯರ್ ಜಗದೀಶ್ ಅವರಿಗೆ ನೀವು ಯಾವ ಕೆಲಸವನ್ನು ಮಾಡುವಂತಿಲ್ಲ ನರಕವಾಸಿಗಳಿಗೆ ಹೇಳಬೇಕು ಎಂದು ಹೇಳಿದಾಗ, ಚೈತ್ರ ಕುಂದಾಪುರ ಅವರಿಗೆ ಅವರದೇ ಆದ ಫ್ಯಾನ್ ಬೇಸ್ ಇದೆ, ಹೀಗೆಲ್ಲ ಮಾಡಿದ್ದಾರೆ ಸರಿಯಾಗುವುದಿಲ್ಲ ಎಂದು ಹೇಳಿದರು ಅದಕ್ಕೆ ಎದುರಾಗಿ ಸ್ವರ್ಗ ವಾಸಿಗಳು ನಮಗೂ ಫ್ಯಾನ್ ಇದ್ದಾರೆ, ನೀನು ಹೀಗೆ ಹೇಳಬೇಡಿ ಎಂದರು.
ನರಕವಾಸಿಗಳಿಗೆ ಲಾಯರ್ ಜಗದೀಶ್ ಅವರು ಬಿಸಿ ನೀರನ್ನು ಕಾಯಿಸಿ ಕೊಟ್ಟಿದ್ದರು. ಆದರೆ ಬಿಗ್ ಬಾಸ್ ನಿಯಮದ ಪ್ರಕಾರ ಇದು ತಪ್ಪು. ಆದರಿಂದ ಬಿಗ್ ಬಾಸ್ ಅವರು ಎಲ್ಲಾ ಲಗ್ಜುರಿ ಬಜೆಟನ್ನು ಹಿಂಪಡೆದಿದ್ದಾರೆ. ಇದು ಉಳಿದ ಮನೆಯ ಸ್ವರ್ಗ ವಾಸಿಗಳಲ್ಲಿ ಬೇಸರವನ್ನು ತಂದುಕೊಟ್ಟಿದೆ. ಸ್ವರ್ಗವಾಸಿಗಳ ಲಕ್ಸರಿ ಪದಾರ್ಥಗಳನ್ನು ಹಿಂಪಡೆದಿದ್ದರಿಂದ ನರಕವಾಸಿಗಳು ಮನಸಲ್ಲಿಯೇ ಖುಷಿ ಪಟ್ಟರು.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.