ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ – ಮೊದಲ ನಾಮಿಮೇಟ್

IMG 20241001 WA0000

ಮೊದಲ ವಾರದಲ್ಲಿಯೇ ನಾಮಿನೇಟ್ ಆದ ಚೈತ್ರ ಕುಂದಾಪುರ :

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಮೊದಲ ದಿನವೇ ಬಿಗ್‌ ಮನೆಯಲ್ಲಿ ಕಿತ್ತಾಟದ ಕಾವು ಜೋರಾಗಿದೆ. ನರಕವಾಸಿಗಳೀಗ ಸ್ವರ್ಗಕ್ಕೆ ಬಂದು ಕೆಲಸಗಾರರಾಗಿದ್ದಾರೆ. ರೂಲ್ಸ್‌ ಬ್ರೇಕ್‌ ಮಾಡಿದ ಆರೋಪ ನರಕವಾಸಿ ಚೈತ್ರಾ ಕುಂದಾಪುರ ಮೇಲೆ ಬಂದಿದೆ. ಉಗ್ರಂ ಮಂಜು ಹಣ್ಣನ್ನು ತೊಳೆದುಕೊಂಡು ಬರುವಂತೆ ಚೈತ್ರಾಗೆ ಹೇಳಿದ್ದಾರೆ. ಆದರೆ ತೊಳೆಯುವ ನಪದಲ್ಲಿ ಚೈತ್ರ ಅವರು ಹಣ್ಣನ್ನು ಕಚ್ಚಿ ನರಕಕ್ಕೆ ಎಸೆದರು. ಹೀಗೆ ರೂಲ್ಸ್ ಬ್ರೇಕ್ ಮಾಡಿದರೂ ಕೂಡ ಅಗ್ರುಮೆಂಟ್ ಮಾಡುತ್ತಾರೆ ಎಂದು ಚೈತ್ರ ಅವರ ಮೇಲೆ ಯಮುನಾ, ಹಂಸ ಹಾಗೂ ಮಂಜು ಕಿಡಿ ಕಾಡಿದರು.  ಆರಂಭದಲ್ಲೇ ಬಿಗ್ ಬಾಸ್ ಮನೆಯ ಕಲರ್‌ಫುಲ್ ವಾತಾವರಣ ಬಿಸಿ ಏರಿಸಿದ ಚೈತ್ರಾ ಕುಂದಾಪುರ್ ಇದೀಗ ನಾಮಿನೇಟ್ ಆಗಿದ್ದಾರೆ. ಬಿಗ್ ಬಾಸ್ 11ರ ಮೊದಲ ವಾರದಲ್ಲಿ ನಾಮಿನೇಟ್ ಆದ ಮೊದಲ ಹಾಗೂ ಏಕೈಕ ಸ್ಪರ್ಧಿಯಾಗಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ನಾಮಿನೇಶನ್‌ಗೆ ಬಿಗ್‌ಬಾಸ್ ಸೂಚಿಸಿದ ಬೆನ್ನಲ್ಲೇ ಸ್ವರ್ಗವಾಸಿಗಳು ಚೈತ್ರಾ ಕುಂದಾಪುರ ವಿರುದ್ದ ಮತ ಚಲಾಯಿಸಿದ್ದಾರೆ. ಇದರ ಪರಿಣಾಮ ಚೈತ್ರಾ ಕುಂದಾಪುರ ಈ ಆವೃತ್ತಿಯಲ್ಲಿ ಮೊದಲು ನಾಮಿನೇಟ್ ಆಗಿರುವ ಸ್ಪರ್ಧಿಯಾಗಿದ್ದಾರೆ.

ಆರಂಭದಲ್ಲೇ ಚೈತ್ರಾ ಕುಂದಾಪರ ಗೂಗ್ಲಿಗೆ ಆರಾಮವಾಗಿದ್ದ ಸ್ವರ್ಗವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚೈತ್ರಾ ಮಾತು, ಗೇಮ್ ಪ್ಲಾನ್‌ಗೆ ಸ್ವರ್ವವಾಸಿಗಳು ಕಕ್ಕಾಬಿಕ್ಕಿಯಾಗಿದ್ದರು. ವಿಶೇಷ ಅಂದರೆ ನರಕವಾಸಿಗಳು ಸ್ವರ್ಗವಾಸಿಗಳಿಗಿಂತ ಹೆಚ್ಚಿನ ಖುಷಿ, ಸಂಭ್ರಮದಲ್ಲಿರುವಂತೆ ಕಂಡುಬಂದಿತ್ತು. ಆದರೆ ಸ್ವರ್ಗದಲ್ಲಿದ್ದರೂ ಸ್ವರ್ಗವಾಸಿಗಳು ಮಾತ್ರ ತಲೆನೋವಿನಲ್ಲೇ ದಿನ ದೂಡಿದ್ದಾರೆ. ಆದ್ದರಿಂದ ಸ್ವರ್ಗ ವಾಸಗಳಾದ ಹಂಸ, ಲಾಯರ್, ಐಶ್ವರ್ಯ, ಶ್ರೀನಿಧಿ ಮತ್ತು ಉಳಿದ ಇನ್ನಿತರು ಕೂಡ ಚೈತ್ರನನ್ನು ನಾಮಿನೇಟ್ ಮಾಡಿದ್ದಾರೆ. ಚೈತ್ರ ಅವರು ತುಂಬಾ ಆರ್ಗುಮೆಂಟ್ ಮಾಡುತ್ತಾರೆ ಎಂದು ಕಾರಣವನ್ನು ನೀಡಿದ್ದಾರೆ.

ರೂಲ್ಸ್‌ ಬಗ್ಗೆ ಹಲವರ ಮಧ್ಯೆ ಚೈತ್ರಾ ಕುಂದಾಪುರ ವಾದಕ್ಕಿಳಿದ್ದಾರೆ. ತಾನೇ ಸರಿ, ತನ್ನ ವಾದವೇ ಸರಿ ಅಂತ ಚೈತ್ರಾ ಕುಂದಾಪುರ ಆರ್ಭಟಿಸಿದ್ದಾರೆ. ‘’ನಾನು ಮಾತನಾಡಬಾರದು ಅಂತ ನೀವು ಹೇಳಂಗಿಲ್ಲ’’ ಅಂತಲೂ ಸ್ವರ್ಗನಿವಾಸಿಗಳ ವಿರುದ್ಧ ಚೈತ್ರಾ ಕುಂದಾಪುರ ಸಿಡಿದಿದ್ದಾರೆ. ಅಷ್ಟಕ್ಕೂ ಇದು ಚೈತ್ರಾ ಕುಂದಾಪುರ ಅವರ ಸ್ಟ್ರಾಟೆಜಿ! ಇಂದು ತಾವೇ ಉತ್ತರಿಸಿ ಮನೆಯಲ್ಲಿ ಕೋಲಾ ಅದಕ್ಕೆ ಕಾರಣವಾದರು ಜೊತೆಗೆ ಮೊದಲ ವಾರದಲ್ಲಿಯೇ ನೇರವಾಗಿ ನಾಮಿನೇಟ್ ಕೂಡ ಆಗಿದ್ದಾರೆ.

ಈ ಮಾಹಿತಿಗಳನ್ನು ಓದಿ

 


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!