ದಾವಣಗೆರೆಯಲ್ಲಿ ಭಾರತ್ ಬ್ರಾಂಡ್ ಅಕ್ಕಿಗೆ ಚಾಲನೆ, ಕೇವಲ 29 ರೂ.ಗೆ ಕೆಜಿ ಅಕ್ಕಿ : ಜಿ ಎಂ ಸಿದ್ದೇಶ್ವರ

bhaarat rice dvg

ದಾವಣಗೆರೆ ಮಾರ್ಚ್ 08: ದೇಶದ ಎಲ್ಲ ವರ್ಗಗಳ ಶ್ರೀಸಾಮಾನ್ಯನಿಗೆ ಅತಿ ಕಡಿಮೆ ವೆಚ್ಚದಲ್ಲಿ ಅತ್ಯಂತ ಗುಣಮಟ್ಟದ ಅಕ್ಕಿ ವಿತರಿಸಲು ಪ್ರಧಾನಿ ಶ್ರೀ Narendra Modi ಸರ್ಕಾರ ಜಾರಿಗೆ ತಂದಿರುವ ಸ್ವಾತಂತ್ರ್ಯ ಭಾರತದ ಐತಿಹಾಸಿಕ ಮಹತ್ವಾಕಾಂಕ್ಷೆ ಯೋಜನೆಯಾದ “ಭಾರತ್ ಅಕ್ಕಿ” ಯೋಜನೆಗೆ ಇಂದು ನಗರದ ರಾಮ್& ಕೋ ಸರ್ಕಲ್ ನಲ್ಲಿ ಲೋಕಸಭಾ ಸದಸ್ಯರಾದ ಜಿ ಎಂ ಸಿದ್ದೇಶ್ವರ ರವರು ವಿದ್ಯುಕ್ತ ಚಾಲನೆ ನೀಡಿದರು.

ಭಾರತ್ ಬ್ರ್ಯಾಂಡ್ ಅಕ್ಕಿ ಪ್ರತಿ ಕಿಲೋಗೆ ರೂ. 29

ಈ ಉತ್ತಮವಾದ ಬೆಳೆಯ ಅಕ್ಕಿಯಿಂದಾಗಿ ಗಗನಕ್ಕೇರಿದ ಬೆಲೆಗಳಿಗೆ ಕಡಿವಾಣವಾಗಲಿದೆ ! ದಿನಸಿ, ಧಾನ್ಯಗಳ ಬೆಲೆ ಏರಿಕೆ, ಜನರ ಜೀವನವನ್ನು ಕಂಗೆಡಿಸಿದೆ. ಈ ಹಣದುಬ್ಬರದ ಕಾವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಒಂದು ಉತ್ತಮ ಕ್ರಮ ಕೈಗೊಂಡಿದೆ. ಈಗಾಗಲೇ ಭಾರತ್ ಬ್ರ್ಯಾಂಡ್ ಗೋಧಿ ಮತ್ತು ಬೇಳೆ ಕಾಳುಗಳನ್ನು ಮಾರಾಟ ಮಾಡುತ್ತಿರುವ ಸರ್ಕಾರ, ಈಗ ಅಕ್ಕಿಯನ್ನೂ ಈ ಯೋಜನೆಯಡಿ ಒಳಗೊಂಡಿದೆ.

whatss

ಕೇಂದ್ರ ಸರ್ಕಾರದಿಂದ ʼಭಾರತ್ ಅಟ್ಟಾ(Bharat atta)ʼ ಮತ್ತು ʼಭಾರತ್ ದಾಲ್(Bharat daal) ʼ ಯೋಜನೆಗೆ ಬೆಂಗಳೂರಿನ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 2023ರ ಆಗಸ್ಟ್‌ನಿಂದ 2024ರ ಜನವರಿವರೆಗೆ, ನಗರದಲ್ಲಿ 2,81,572 ಕೆ.ಜಿ ಭಾರತ್ ದಾಲ್ ಮತ್ತು 1,22,190 ಕೆ.ಜಿ ಭಾರತ್ ಅಟ್ಟಾ ಮಾರಾಟವಾಗಿದೆ. ಇದೀಗ ಭಾರತ್ ಬ್ರಾಂಡ್ ಅಡಿಯಲ್ಲಿ ಅಕ್ಕಿಯನ್ನು ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ, ಉತ್ತಮ ಗುಣಮಟ್ಟದ ಅಕ್ಕಿಯನ್ನು ಕಡಿಮೆ ದರದಲ್ಲಿ ಗ್ರಾಹಕರಿಗೆ ಒದಗಿಸಲಾಗುವುದು.

“ಅಂತ್ಯೋದಯ ಪರಿಕಲ್ಪನೆ-ಇದು ಮೋದಿ ಸರ್ಕಾರದ ಗ್ಯಾರಂಟಿ”

WhatsApp Image 2024 03 08 at 5.20.13 PM 1

ಮೋದಿ ಸರ್ಕಾರದ ಘೋಷವಾಕ್ಯ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್” ಎಂಬಂತೆ ಜಾಗತಿಕ ಮಟ್ಟದ ಏರುಪೇರಿನಿಂದ ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕುತ್ತಿದ್ದ ದೇಶದ ಜನ ಸಾಮಾನ್ಯನಿಗೆ ಆಧಾರಸ್ತಂಭವಾಗಿ ನಿಲ್ಲಲು ಈ ಯೋಜನೆಡಿ 5kg ಮತ್ತು 10kg ಅಕ್ಕಿಯ ಮೂಟೆ ಹೊರತಂದು ಪ್ರತಿ ಕಿಲೋ ಗ್ರಾಂಗೆ ರೂ. 29 ರಂತೆ ಜನ ಸಾಮಾನ್ಯನಿಗೆ ಅಕ್ಕಿ ಲಭಿಸಲಿದ್ದು, ಸಮಸ್ತ ಲೋಕಸಭಾ ಕ್ಷೇತ್ರದ ಮತದಾರ ಬಾಂಧವರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಎನ್ ರಾಜಶೇಖರ್, ಮಹಾನಗರ ಪಾಲಿಕೆ ವಿಪಕ್ಷ ನಾಯಕರಾದ ಪ್ರಸನ್ನ ಕುಮಾರ್ ಮಾಜಿ ಧೂಡಾ ಅಧ್ಯಕ್ಷರಾದ ದೇವರಮನೆ ಶಿವಕುಮಾರ್, ರಾಜ್ಯ ಓಬಿಸಿ ಮೋರ್ಚಾದ ಉಪಾಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್,ರಾಜ್ಯ ಯುವ ಮೋರ್ಚಾದ ಉಪಾಧ್ಯಕ್ಷರಾದ ಜಿಎಸ್‌ ಶಾಮ್, ಮಹಾನಗರ ಪಾಲಿಕೆ ಉಪಮಾಪೌರರಾದ ಯಶೋದ ಯಗ್ಗಪ್ಪ, ಉತ್ತರದ ಅಧ್ಯಕ್ಷರಾದ ಸಂಗನಗೌಡ್ರು, ಎಂ,ವಿ ಜಯಪ್ರಕಾಶ್, ಮಹಾನಗರ ಪಾಲಿಕೆ ಸದಸ್ಯರಾದ ಶಿಲ್ಪ ಜಯಪ್ರಕಾಶ್ ಗೌರಮ್ಮ ಗೀರಿಶ್, ಮಾಜಿ ಪಾಲಿಕೆ ಸದಸ್ಯರಾದ ಶಿವನಗೌಡ ಟಿ ಪಾಟೀಲ್,ರಾಜು ನಿಲಗುಂದ,ಗುರು ಸೋಗಿ, ಟಿಂಕರ್ ಮಂಜಣ್ಣ , ಅತಿಥ್ ಅಂಬರಕರ್ ಮಹಿಳಾ ಮುಖಂಡರಾದ ಪುಷ್ಪಾ ವಾಲಿ, ಬಾಗ್ಯ ಪಿಸಾಳೆ, ಸೇರಿದಂತೆ ಅನೇಕ ಪಕ್ಷದ ಮುಖಂಡರು ಸಾರ್ವಜನಿಕರು ಪಾಲ್ಗೊಂಡಿದ್ದರು

tel share transformed

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಈ ಮಾಹಿತಿಗಳನ್ನು ಓದಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!