ಬೆಂಗಳೂರುಗೆ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಕನಕಪುರ ರಸ್ತೆಯ ಆಯ್ಕೆ ಬಹುತೇಕ ಖಚಿತ!
ಬೆಂಗಳೂರಿನ ವಿಸ್ತರಣೆಯು ಹೆಚ್ಚಳವಾಗಿದ್ದು, ಇದರ ಪರಿಣಾಮವಾಗಿ ಅಗತ್ಯ ಮೂಲಸೌಕರ್ಯಗಳ (Basic amenities) ಅಭಿವೃದ್ಧಿಯೂ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದೆ. ಇಂದು 1.5 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಮಹಾನಗರವು ಮುಂಬರುವ ದಶಕಗಳಲ್ಲಿ ಇನ್ನಷ್ಟು ವೇಗವಾಗಿ ಬೆಳೆಯಲಿದೆ. ದೇಶದ ಐಟಿ ರಾಜಧಾನಿ (IT capital city) ಎಂಬ ಹೆಗ್ಗಳಿಕೆಗೆ ತಕ್ಕಂತೆ, ಬೆಂಗಳೂರು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಸಂಚಾರದಲ್ಲೂ ಪ್ರಮುಖವಾಗಿದ್ದು, ಇದನ್ನು ಗಮನದಲ್ಲಿಟ್ಟುಕೊಂಡು ಎರಡನೇ ವಿಮಾನ ನಿಲ್ದಾಣದ ಅಗತ್ಯಕ್ಕೆ ಸರ್ಕಾರ ತೀವ್ರ ಒತ್ತು ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರವು (Karnataka Government) ನಗರದ ಹೊರವಲಯದಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಚಿಂತನೆ ನಡೆಸುತ್ತಿದೆ. ಈಗಾಗಲೇ ಈ ಯೋಜನೆಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಮೂರು ಪ್ರಮುಖ ಸ್ಥಳಗಳನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.ಈ ಮೂರು ಸ್ಥಳಗಳಲ್ಲಿ ಕುಣಿಗಲ್ (Kunigal) ಬಳಿಯ ಹಾಸನ ಹೆದ್ದಾರಿ ಮತ್ತು ಕನಕಪುರ ರಸ್ತೆಯ ಎರಡು ಸ್ಥಳಗಳು ಶಾರ್ಟ್ ಲಿಸ್ಟ್ ಆಗಿವೆ. ಮೂಲಗಳ ಪ್ರಕಾರ, ಕನಕಪುರ ರಸ್ತೆಯಲ್ಲಿಯೇ ಹೊಸ ವಿಮಾನ ನಿಲ್ದಾಣ ಸ್ಥಾಪನೆ ಬಹುತೇಕ ಖಚಿತವಾಗಿದೆ. ಏಕೆ ಕನಕಪುರದಲ್ಲೇ ಏರ್ಪೋರ್ಟ್ (Airport) ಆಗುವ ಸಾಧ್ಯತೆ ಇದೆ? ಇದರಿಂದ ಪ್ರಯಾಣಿಕರಿಗೇನು ಯಾವ ರೀತಿಯ ಲಾಭ ಸಿಗಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಏಕೆ ಕನಕಪುರದಲ್ಲೇ ಏರ್ಪೋರ್ಟ್ ಆಗುವ ಸಾಧ್ಯತೆ ಇದೆ?:
ಭೌಗೋಳಿಕ ಮತ್ತು ಲಾಜಿಸ್ಟಿಕ್ (Logistic) ಅನುಕೂಲ:
ಕನಕಪುರ ರಸ್ತೆ, ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಪ್ರಮುಖ ಸಂಪರ್ಕ ಮಾರ್ಗವಾಗಿದ್ದು, ಇದು ಐಟಿ ಉದ್ಯಾನಗಳು, ಕೈಗಾರಿಕಾ ವಲಯಗಳು ಮತ್ತು ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಮುಂತಾದ ಜಿಲ್ಲೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಇಲ್ಲಿಂದ ಬೆಂಗಳೂರು ನಗರಕ್ಕೆ ಮೈಸೂರು ರಸ್ತೆ, ನೈಸ್ ರಸ್ತೆ, ಮತ್ತು ಇತರ ಪ್ರಮುಖ ಹೆದ್ದಾರಿಗಳ ಮೂಲಕ ತ್ವರಿತ ಸಂಪರ್ಕ ಕಲ್ಪಿಸಬಹುದು.
ಕೈಗಾರಿಕಾ ಮತ್ತು ವಾಣಿಜ್ಯ ಅಭಿವೃದ್ಧಿ(Industrial and commercial development) :
ಇನ್ನು,ಈ ಪ್ರದೇಶದಲ್ಲಿ ಈಗಾಗಲೇ ಹಲವು ಕೈಗಾರಿಕಾ ವಲಯಗಳಿದ್ದು, ಉದ್ಯಮಗಳ ಚಟುವಟಿಕೆಗಳು ಹೆಚ್ಚುತ್ತಿದೆ. ನೂತನ ವಿಮಾನ ನಿಲ್ದಾಣ ಇದನ್ನು ಮತ್ತಷ್ಟು ಉತ್ತೇಜಿಸುವ ಸಾಧ್ಯತೆ ಇದೆ. ಅದಲ್ಲದೆ, ಬಹುಮಟ್ಟಿಗೆ ಇದು ನಗರ ವ್ಯಾಪ್ತಿಯಲ್ಲೇ ಬರಲಿದೆ, ಅಂದರೆ ಇಲ್ಲಿಂದ ನಗರಕೇಂದ್ರಕ್ಕೆ ತಲುಪಲು ಪ್ರಯಾಣಿಕರಿಗೆ ಹೆಚ್ಚು ಅವಧಿ ಬೇಕಾಗುವುದಿಲ್ಲ.
ರಾಜಕೀಯ ಲೆಕ್ಕಾಚಾರ:
ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಮುಂಬರುವ ಮುಖ್ಯಮಂತ್ರಿ (Chief Minister) ಆಕಾಂಕ್ಷಿಯೂ ಆಗಿರುವ ಡಿಕೆ ಶಿವಕುಮಾರ್ ಅವರ ತವರು ಪ್ರದೇಶವಾಗಿರುವುದರಿಂದ ಈ ಭಾಗದಲ್ಲಿ ಹೆಚ್ಚುವರಿ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಸಾಧ್ಯತೆ ಇದೆ. ಕನಕಪುರ ಭಾಗವನ್ನು ಅಭಿವೃದ್ಧಿಪಡಿಸಲು ಅವರಿಂದಲೇ ಹಲವು ಯೋಜನೆಗಳನ್ನು (Some schemes) ಈ ಹಿಂದೆ ಪ್ರಾರಂಭಿಸಲಾಗಿದ್ದು, ಇದೀಗ ಎರಡನೇ ವಿಮಾನ ನಿಲ್ದಾಣವೂ ಈ ಭಾಗದಲ್ಲಿ ಅಂತಿಮವಾದರೆ, ಇದು ಅವರ ರಾಜಕೀಯ ಪ್ರಭಾವಕ್ಕೂ ಪೂರಕವಾಗಬಹುದು.
ಈ ಮೇಲಿನ ಎಲ್ಲಾ ಕಾರಣಗಳಿಂದ ಕನಕಪುರದಲ್ಲೇ ಏರ್ಪೋರ್ಟ್ ಆಗುವ ಸಾಧ್ಯತೆ ಹೆಚ್ಚಿದೆ.
ಹೊಸೂರು ವಿಮಾನ ನಿಲ್ದಾಣಕ್ಕೆ ಸ್ಪರ್ಧೆ? :
ಇದರ ಜೊತೆಗೆ, ತಮಿಳುನಾಡು ಸರ್ಕಾರವೂ (Thamilnadu Government) ಹೊಸೂರಿನಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಹೂಡಿಕೊಂಡಿದೆ. ಹೊಸೂರು, ಬೆಂಗಳೂರು-ಚೆನ್ನೈ ರೈಲು ಮತ್ತು ರಸ್ತಾ ಸಂಪರ್ಕದ ಪ್ರಮುಖ ತಾಣವಾಗಿದ್ದು, ಕರ್ನಾಟಕದ ವ್ಯಾಪ್ತಿಗೆ ಭಾರೀ ಸ್ಪರ್ಧೆ ನೀಡಬಲ್ಲದು. ಈ ಕಾರಣದಿಂದಾಗಿ, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವನ್ನು ಕನಕಪುರ ರಸ್ತೆಯಲ್ಲಿಯೇ (Kanakapura Road) ಸ್ಥಾಪಿಸಿದರೆ ತಮಿಳುನಾಡಿನ ಹೊಸೂರು ಯೋಜನೆಗೆ ತಡೆಯೊಡ್ಡಬಹುದು ಎಂಬ ಲೆಕ್ಕಾಚಾರವೂ ಸರ್ಕಾರದಲ್ಲಿದೆ.
ಹಾಗಿದ್ದರೆ ಹಾಸನ ಹೆದ್ದಾರಿ ಬಳಿಯ ಆಯ್ಕೆ ಏಕೆ ಕಡಿಮೆಯಾಗಿದೆ?:
ಕುಣಿಗಲ್ ಬಳಿಯ ಹಾಸನ ಹೆದ್ದಾರಿ ಸಮೀಪವೂ ವಿಮಾನ ನಿಲ್ದಾಣಕ್ಕಾಗಿ ಒಂದು ಸ್ಥಳವನ್ನು ಪರಿಗಣಿಸಲಾಗಿತ್ತು. ಆದರೆ, ಹಲವಾರು ಅಡೆತಡೆಗಳಿಂದಾಗಿ ಇದನ್ನು ಕೈ ಬಿಡುವ ಸಾಧ್ಯತೆ ಹೆಚ್ಚಾಗಿದೆ.
ಈ ಭಾಗವು ತೀರಾ ಬೇಸಾಯ ಪ್ರದೇಶವಾಗಿದ್ದು, ನೇರವಾದ ತ್ವರಿತ ಸಂಪರ್ಕ ವ್ಯವಸ್ಥೆ(Connectivity system) ಕಡಿಮೆಯಾಗಿದೆ ಆದ್ದರಿಂದ ಈ ಜಾಗವನ್ನು ಕೈ ಬಿಡುವ ಸಾಧ್ಯತೆ ಇದೆ.
ಹಾಸನ ಹೆದ್ದಾರಿ ಕಡೆ ವಿಮಾನ ನಿಲ್ದಾಣ ನಿರ್ಮಾಣವಾದರೆ, ಪ್ರಯಾಣಿಕರಿಗೆ ಬೆಂಗಳೂರಿನ ಕೇಂದ್ರ ಭಾಗಕ್ಕೆ ತಲುಪಲು ಹೆಚ್ಚಿನ ಸಮಯ ಬೇಕಾಗಬಹುದು. ಆದ್ದರಿಂದ ಬಹುತೇಕ ಈ ಜಾಗವನ್ನು ಕೈ ಬಿಡುವಂತಹ ಸಾಧ್ಯತೆ ಹೆಚ್ಚಿದೆ.
ಪ್ರಯಾಣಿಕರಿಗೇನು ಲಾಭ?:
ಈ ಹೊಸ ವಿಮಾನ ನಿಲ್ದಾಣ (New airport) ನಿರ್ಮಾಣದಿಂದ ದಕ್ಷಿಣ ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು ಮುಂತಾದ ಭಾಗಗಳ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಬೆಂಗಳೂರಿನ ಆರ್ಥಿಕ, ವ್ಯಾಪಾರಿಕ, ಪ್ರವಾಸೋದ್ಯಮ ಕ್ಷೇತ್ರಕ್ಕೆ ಇದು ಬಲವಾದ ಉತ್ತೇಜನ ನೀಡುವ ಸಾಧ್ಯತೆ ಇದೆ. ಇದಲ್ಲದೇ, ಈ ಪ್ರದೇಶದಲ್ಲಿ ಹೊಸ ಉದ್ಯೋಗಾವಕಾಶಗಳೂ (Jobs) ಸೃಷ್ಟಿಯಾಗಲಿವೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು (AAI) ಶೀಘ್ರದಲ್ಲೇ ಇತ್ತೀಚಿನ ಅಧ್ಯಯನ ವರದಿ ಪ್ರಕಟಿಸಲಿದೆ. ಕೇಂದ್ರ ಸರ್ಕಾರದ (Central government) ಅನುಮೋದನೆಯ ನಂತರ, ಅಂತಿಮ ಸ್ಥಳವನ್ನು ಘೋಷಣೆ ಮಾಡಲಾಗುವುದು. ಆದರೆ, ಇದೀಗ ಲಭ್ಯವಿರುವ ಮಾಹಿತಿ ಆಧರಿಸಿ, ಕನಕಪುರ ರಸ್ತೆಯಲ್ಲೇ ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (International Airport) ಸ್ಥಾಪನೆ ಬಹುತೇಕ ಖಚಿತ ಎಂಬುದಾಗಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ತೀವ್ರವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಹೊಸ ವಿಮಾನ ನಿಲ್ದಾಣ ಅನಿವಾರ್ಯವಾಗಿದೆ. ಲಾಜಿಸ್ಟಿಕ್, ಕೈಗಾರಿಕಾ ವೃದ್ಧಿ, ರಾಜಕೀಯ ಲೆಕ್ಕಾಚಾರ, ಮತ್ತು ಹೊಸೂರುಗೆ ಪ್ರತಿಸ್ಪರ್ಧೆ ನೀಡುವ ಕಾರಣಗಳಿಂದ ಕನಕಪುರ ರಸ್ತೆಯ ಆಯ್ಕೆ ಹೆಚ್ಚು ಲಾಭದಾಯಕವೆನ್ನಿಸುತ್ತದೆ. ಮುಂದಿನ ದಿನಗಳಲ್ಲಿ ಈ ಯೋಜನೆಗೆ ಅಧಿಕೃತ ಘೋಷಣೆ (Official announcement) ನೀಡುವ ನಿರೀಕ್ಷೆಯಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




