WhatsApp Image 2025 12 16 at 6.31.32 PM

ಬೆಂಗಳೂರು ವಿದ್ಯುತ್ ವ್ಯತ್ಯಯ: ನಾಳೆಯಿಂದ ಡಿಸೆಂಬರ್ 19 ರವರೆಗೆ 30ಕ್ಕೂ ಹೆಚ್ಚಿನ ಈ ಪ್ರದೇಶಗಳಲ್ಲಿ ಪವರ್ ಕಟ್.!

Categories:
WhatsApp Group Telegram Group

ಬೆಂಗಳೂರು (Bengaluru): ವಿದ್ಯುತ್ ವಿತರಣಾ ಜಾಲದಲ್ಲಿ ತುರ್ತು ನಿರ್ವಹಣೆ ಮತ್ತು ಸಾಮರ್ಥ್ಯ ಹೆಚ್ಚಳದ ಕಾರ್ಯವನ್ನು ಕೈಗೊಂಡಿರುವ ಬೆಸ್ಕಾಂ (BESCOM), ಈ ಹಿನ್ನೆಲೆಯಲ್ಲಿ ನಗರದ ಹಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದಾಗಿ ತಿಳಿಸಿದೆ, ಬ್ಯಾಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕನ್ವರ್ಟರ್ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವದ ಕಾಮಗಾರಿ ನಡೆಯುತ್ತಿದ್ದು, ಈ ಕಾರಣದಿಂದ ಡಿಸೆಂಬರ್ 19, 2025 ರವರೆಗೆ ಬ್ಯಾಡರಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಎಷ್ಟು ಗಂಟೆಗಳ ಕಾಲ ಪವರ್ ಕಟ್?

ಈ ಕಾಮಗಾರಿಯ ಹಿನ್ನೆಲೆಯಲ್ಲಿ ದಿನಾಂಕ ಡಿಸೆಂಬರ್ 19 ರವರೆಗೆ ಪ್ರತಿದಿನ ಬೆಳಿಗ್ಗೆ 10:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಒಟ್ಟು 12 ಗಂಟೆಗಳ ಕಾಲ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಈ ನಿಗದಿತ ಸಮಯದಲ್ಲಿ ವಿದ್ಯುತ್ ಸಂಪೂರ್ಣವಾಗಿ ಇರುವುದಿಲ್ಲ ಅಥವಾ ಏರುಪೇರಾಗುವ ಸಾಧ್ಯತೆ ಇದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ?

ಬೆಸ್ಕಾಂನ ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ನೀಡಿರುವ ಮಾಹಿತಿಯಂತೆ, ಬ್ಯಾಡರಹಳ್ಳಿ ವ್ಯಾಪ್ತಿಯ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ:

  • ಮಾದೇಶ್ವರನಗರ
  • ಪ್ರಸನ್ನ ಲೇಔಟ್
  • ಹೊಸಹಳ್ಳಿ
  • ಇಂಡಸ್ಟ್ರಿಯಲ್ ಏರಿಯಾ
  • ಹೇರೋಹಳ್ಳಿ
  • ತುಂಗಾನಗರ
  • ವಿಶ್ವೇಶ್ವರ ನಗರ
  • ಅಂಜನಾ ನಗರ
  • ಅನ್ನಪೂರ್ಣೇಶ್ವರಿ ನಗರ
  • ಸುಂಕದ ಕಟ್ಟಿ
  • ನೀಲಗಿರಿ ಹೆಗ್ಗನಹಳ್ಳಿ
  • ಕೊಡಿಗೆಹಳ್ಳಿ
  • ಸ್ಕಂದ ನಗರ
  • ಚಿಕ್ಕಗೊಲ್ಲರಹಟ್ಟಿ
  • ಸೀಗೆಹಳ್ಳಿ
  • ಪದ್ಮಾವತಿ ಇಂಡಸ್ಟ್ರಿಯಲ್ ಏರಿಯಾ
  • ಶಾಂತಿಲಾಲ್ ಲೇಔಟ್
  • ಬಿಬಿಎಂಪಿ ಪ್ಲಾಂಟ್
  • ರಂಗೇಗೌಡ ಲೇಔಟ್
  • ಕನ್ನಹಳ್ಳಿ
  • ಸುಂಕದಕಟ್ಟೆ ಇಂಡಸ್ಟ್ರಿಯಲ್ ಏರಿಯಾ
  • ಡಿ ಗ್ರೂಪ್ ಬಡಾವಣೆ
  • ಆರ್.ಎಚ್.ಸಿ.ಎಸ್ ಲೇಔಟ್ ಮತ್ತು ಇವುಗಳ ಸುತ್ತಲಿನ ಪ್ರದೇಶಗಳು.

ಬೆಸ್ಕಾಂ ಗ್ರಾಹಕರು ಈ ವ್ಯತ್ಯಯಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದೆ.

ದೂರು ನೀಡಲು ಸಂಪರ್ಕ ಸಂಖ್ಯೆಗಳು

ವಿದ್ಯುತ್ ಪೂರೈಕೆ ಸಂಬಂಧಿತ ಯಾವುದೇ ದೂರುಗಳು ಅಥವಾ ಸಮಸ್ಯೆಗಳಿದ್ದರೆ, ಗ್ರಾಹಕರು ವಾಟ್ಸ್​ಆ್ಯಪ್ ಮೂಲಕ ಅಥವಾ ನಿಗದಿಪಡಿಸಿದ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು.

ವೃತ್ತ ವಾಟ್ಸ್‌ಆ್ಯಪ್ ಸಹಾಯವಾಣಿ ಸಂಖ್ಯೆ
ದಕ್ಷಿಣ ವೃತ್ತ (South Circle)8277884011
ಪಶ್ಚಿಮ ವೃತ್ತ (West Circle)8277884012
ಪೂರ್ವ ವೃತ್ತ (East Circle)8277884013
ಉತ್ತರ ವೃತ್ತ (North Circle)8277884014

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories