ಇದೀಗ ಬೆಂಗಳೂರಿನಿಂದ ಬೀದರ್ ಇನ್ನಷ್ಟು ಹತ್ತಿರದ ಪ್ರಯಾಣವಾಗಲಿದೆ. ಯಾಕೆಂದರೆ ಕಲಬುರಗಿ, ಕಮಲಾಪುರ, ಹುಮನಾಬಾದ್ ಸೇರಿದಂತೆ ವಿವಿಧ ಪ್ರಮುಖ ನಿಲ್ದಾಣಗಳ ಮೂಲಕ ಹಾದುಹೋಗುವ ಹೊಸ ಯಶವಂತಪುರ ಬೀದರ್ ಸಾಪ್ತಾಹಿಕ ಎಕ್ಸ್‍ಪ್ರೆಸ್ ರೈಲಿ(weekly express train)ಗೆ ರೈಲ್ವೆ ಸಚಿವಾಲಯ(Ministry of Railways) ಅನುಮೋದನೆ ನೀಡಿದೆ. ಹೀಗಾಗಿ ಕಲ್ಯಾಣ ಕರ್ನಾಟಕದ ಜನರಿಗೆ ಇದು ಸಂತಸದ ಸುದ್ದಿ ಎಂದು ತಿಳಿಸಬಹುದು. ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಯಶವಂತಪುರ ಬೀದರ್ ಎಕ್ಸ್ ಪ್ರೆಸ್ ಸಾಪ್ತಾಹಿಕ ರೈಲು ಯಾರಿಗೆ ಸಹಾಯವಾಗುತ್ತದೆ ?
ಬೆಂಗಳೂರಿನಿಂದ ಬೀದರ್ ತನಕ ಇರುವ ಹಲವಾರು ಪ್ರಮುಖ ಪ್ರದೇಶಗಳ ಮೂಲಕ ಈ ಸಾಪ್ತಾಹಿಕ ರೈಲು ಹಾದು ಹೋಗುತ್ತದೆ. ಇದರ ಪ್ರಮುಖ ಉದ್ದೇಶ ಈ ಪ್ರದೇಶಗಳ ಜನರಿಗೆ ರೈಲ್ವೆ ಸಂಪರ್ಕವನ್ನು ಒದಗಿಸುವುದಾಗಿದೆ, ಎಂದು ಬೀದರ್ ಸಂಸದ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ರೈಲು ಸಂಚಾರಕ್ಕೆ ಅನುಮೋದಿತ ಮಾರ್ಗಗಳ ವಿವರ ಹೀಗಿದೆ :
ರೈಲ್ವೇ ಸಚಿವಾಲಯವು ಅಕ್ಟೋಬರ್ 16, 2023 ರ ಸಿಸಿ 277/2023 ರ ಆದೇಶದ ಮೂಲಕ ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಮೂಲಕ ರೈಲು ಸಂಖ್ಯೆ 16577/78 ಯಶವಂತಪುರ ಬೀದರ್ ಎಕ್ಸ್‍ಪ್ರೆಸ್ ಅನ್ನು ಹೊರಡಿಸಲು ಸೌತ್ ವೆಸ್ಟರ್ನ್ ರೈಲ್ವೇಸ್ ( south western railways ) ಮುಂದಿಟ್ಟಿರುವ ಪ್ರಸ್ತಾವನೆಗೆ ಈಗಾಗಲೇ ಹಸಿರು ನಿಶಾನೆ ಸಿಕ್ಕಿದೆ. ವಾರಕ್ಕೊಮ್ಮೆ ಈ ರೈಲು ಈ ಪ್ರದೇಶಗಳ ಸಂಪರ್ಕಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಸಲಾಗಿದೆ.
ರೈಲು ಸಂಚಾರದ ವಿವರ :
ಯಶವಂತಪುರ ಬೀದರ್ ಎಕ್ಸ್‍ಪ್ರೆಸ್ ರೈಲು ಪ್ರತಿ ಶನಿವಾರ 11:15 ಕ್ಕೆ ಯಶವಂತಪುರದಿಂದ ಹೊರಡುತ್ತದೆ. ಮತ್ತು ಮರುದಿನ 1:30 ಕ್ಕೆ ಕೊನೆಯ ಸ್ಟಾಪ್ ಬೀದರ್ ಅನ್ನು ತಲುಪುತ್ತದೆ. ಹಾಗೆಯೇ ಬೀದರ್ ಯಶವಂತಪುರ ಎಕ್ಸ್‍ಪ್ರೆಸ್ ಪ್ರತಿ ಭಾನುವಾರ ಬೀದರ್ ನಿಂದ 2:30 ಕ್ಕೆ ಹೊರಡಲಿದೆ, ಮರುದಿನ 4:00 ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ.
ಈ ರೈಲು ಹೊರಡುವ ವಿವಿಧ ಪ್ರದೇಶಗಳ ಪ್ರಮುಖ ನಿಲ್ದಾಣಗಳಲ್ಲಿ ನಿಲ್ಲಿಸಲು ತಿಳಿಸಲಾಗಿದೆ. ಆ ನಿಲ್ದಾಣಗಳೆಂದರೆ ಯಲಹಂಕ, ಗೌರಿಬಿದನೂರು, ಹಿಂದೂಪುರ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ ರಸ್ತೆ, ರಾಯಚೂರು, ಯಾದಗಿರಿ, ವಾಡಿ, ಶಹಾಬಾದ್, ಕಲಬುರಗಿ, ಕಮಲಾಪುರ ಮತ್ತು ಹುಮನಾಬಾದ್ ಮುಂತಾದ ಪ್ರಮುಖ ಸ್ಥಳಗಳು. ಈ ರೈಲು ಒಟ್ಟು 16 ಕೋಚ್‍ಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣವನ್ನು ಒದಗಿಸುತ್ತದೆ.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






