WhatsApp Image 2025 11 29 at 1.03.32 PM

ಬ್ಯಾಂಕ್ ಗಳು ರೈತರ ಬೆಳೆ ಪರಿಹಾರ ಹಣವನ್ನು ಸಾಲ ತೀರಿಸಿಕೊಳ್ಳಲು ಬಳಸಿಕೊಳ್ಳುವಂತಿಲ್ಲಾ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ರಾಜ್ಯ ಸರ್ಕಾರದಿಂದ ರೈತರಿಗೆ ನೀಡಲಾಗಿರುವ ಬೆಳೆಹಾನಿ ಪರಿಹಾರ ಹಣಯನ್ನು ಅನುಚಿತವಾಗಿ ಸಾಲ ತೀರಿಸಲು ಬ್ಯಾಂಕುಗಳು ಬಳಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿ, ಈ ವಿಷಯದ ಮೇಲೆ ಸರ್ಕಾರದ ಇದೀಗ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ . ನೈಸರ್ಗಿಕ ವಿಕೋಪಗಳಾದ ಅತಿಯಾದ ಮಳೆ, ಪ್ರವಾಹ, ಬರಪರಿಸ್ಥಿತಿ, ಆಲಿಕಲ್ಲು ಬೀಳುವಿಕೆ ಇತ್ಯಾದಿ ಕಾರಣಗಳಿಂದ ಬೆಳೆ ನಷ್ಟ ಅನುಭವಿಸಿದ ರೈತರ ಪರಿಸ್ಥಿತಿ ಸುಧಾರಿಸಲು ಸರ್ಕಾರವು ನೀಡುವ ಆರ್ಥಿಕ ಸಹಾಯಹಸ್ತವೇ ಈ ಬೆಳೆಹಾನಿ ಪರಿಹಾರ ಹಣ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ….

ಈ ಪರಿಹಾರದ ಹಣವನ್ನು ಸರ್ಕಾರದ ನೇರ ತೆರಿಗೆ ಲಾಭ (DBT) ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ, ಕಳೆದ ಕೆಲವು ದಿನಗಳಿಂದ, ಕೆಲವು ಬ್ಯಾಂಕ್ ಶಾಖೆಗಳ ಅಧಿಕಾರಿಗಳು ಈ ಪರಿಹಾರದ ಹಣವನ್ನು, ರೈತರು ತಮ್ಮ ಬ್ಯಾಂಕಿನಿಂದ ತೆಗೆದುಕೊಂಡ ಸಾಲದ ಮೊತ್ತಕ್ಕೆ ಸರಿದೂಗಿಸಿಕೊಳ್ಳುತ್ತಿರುವುದಾಗಿ ರೈತರು ತೀವ್ರ ಆಕ್ರೋಸವ ವ್ಯಕ್ತಪಡಿಸುತ್ತಿದ್ದರು. ರೈತರ ಕಷ್ಟನಷ್ಟಗಳನ್ನು ಲೆಕ್ಕಿಸದೆ, ಅವರ ಬ್ಯಾಂಕ್ ಖಾತೆಗೆ ಬಂದ ಈ ನೆರವು ಹಣವನ್ನು ಸಾಲ ತೀರಿಸಲು ಸ್ವಯಂಚಾಲಿತವಾಗಿ (Auto-Debit) ಹೊಂದಾಣಿಕೆ ಮಾಡಿಕೊಳ್ಳುವ ಪ್ರವೃತ್ತಿ ಕಂಡುಬಂದಿದೆ.

ಈ ಗಂಭೀರ ಸಮಸ್ಯೆಯನ್ನು ಪರಿಗಣಿಸಿದ ಧಾರವಾಡ ಜಿಲ್ಲಾಧಿಕಾರಿ ಶ್ರೀಮತಿ ದಿವ್ಯ ಪ್ರಭು ಅವರು ತುರ್ತು ಕ್ರಮ ಕೈಗೊಂಡಿದ್ದಾರೆ. ಜಿಲ್ಲೆಯ ಎಲ್ಲಾ ಬ್ಯಾಂಕುಗಳಿಗೆ ಕಟ್ಟಾದ ನಿರ್ದೇಶನಗಳನ್ನು ಹೊರಡಿಸಿರುವ ಅವರು, “ಸರ್ಕಾರದಿಂದ DBT ಮೂಲಕ ರೈತರ ಖಾತೆಗೆ ಬಂದ ಬೆಳೆ ಪರಿಹಾರ, ಬರಪರಿಹಾರ, ಅತಿವೃಷ್ಟಿ ಅಥವಾ ಇತರ ನೈಸರ್ಗಿಕ ವಿಕೋಪ ಪರಿಹಾರದ ಮೊತ್ತವನ್ನು ಯಾವುದೇ ಸಂದರ್ಭದಲ್ಲಿ ರೈತರ ಸಾಲ ಖಾತೆಗೆ ಹೊಂದಾಣಿಕೆ ಮಾಡಿಕೊಳ್ಳಬಾರದು” ಎಂದು ಸ್ಪಷ್ಟವಾಗಿ ಆದೇಶಿಸಿದ್ದಾರೆ.

ಈ ಆದೇಶವನ್ನು ಜಿಲ್ಲೆಯ ಎಲ್ಲಾ ಬ್ಯಾಂಕ್ ಶಾಖೆಗಳ ಮುಖ್ಯಸ್ಥರು, ವ್ಯವಸ್ಥಾಪಕರು ಮತ್ತು ಕ್ಷೇತ್ರೀಯ ಅಧಿಕಾರಿಗಳಿಗೆ ತಕ್ಷಣವೇ ತಲುಪಿಸುವಂತೆ ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿದೆ. ರೈತರಿಗೆ ಯಾವುದೇ ರೀತಿಯ ಅಸೌಕರ್ಯ ಅಥವಾ ಆರ್ಥಿಕ ತೊಂದರೆ ಉಂಟಾಗದಂತೆ ಕಾಪಾಡುವುದು ಮತ್ತು ಸರ್ಕಾರದ ಪರಿಹಾರ ಹಣವು ಅದರ ಮೂಲ ಉದ್ದೇಶಕ್ಕೆ ಅನುಗುಣವಾಗಿ ರೈತರಿಗೆ ಸಂಪೂರ್ಣವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಬ್ಯಾಂಕುಗಳ ಮೇಲೆ ವಹಿಸಲಾಗಿದೆ. ರೈತರ ಆರ್ಥಿಕ ಸುರಕ್ಷತೆ ಮತ್ತು ಹಿತಾಸಕ್ತಿ ರಕ್ಷಣೆಗೆ ಸರ್ಕಾರದ ಈ ನಿರ್ಣಯವನ್ನು ಒಂದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *


Popular Categories