ಹೀರೊ ಫಿನ್‌ಕಾರ್ಪ್ (Hero FinCorp) ಬೆಂಬಲಿತ ರಮಣ್ ಕಾಂತ್ ಮುಂಜಾಲ್ ಫೌಂಡೇಶನ್ ವತಿಯಿಂದ ವಾಣಿಜ್ಯ ಮತ್ತು ಹಣಕಾಸು ವಿಭಾಗದಲ್ಲಿ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ₹5.5 ಲಕ್ಷದವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳು ಆಗಸ್ಟ್ 31ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ..
Highlights:
- ರಮಣ್ ಕಾಂತ್ ಮುಂಜಾಲ್ ಸ್ಕಾಲರ್ಶಿಪ್ 2026-27 (Raman Kant Munjal Scholarships).
- ವಾರ್ಷಿಕ ₹40,000 ದಿಂದ ಗರಿಷ್ಠ ₹5,50,000 ವರೆಗೆ (ಮೂರು ವರ್ಷಗಳವರೆಗೆ).
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-ಆಗಸ್ಟ್-2026.
- ಪ್ರಥಮ ವರ್ಷದ BBA, B.Com, B.A. (Economics) ಮತ್ತು ಇತರ ಹಣಕಾಸು ಸಂಬಂಧಿತ ಪದವಿ ಓದುತ್ತಿರುವ ವಿದ್ಯಾರ್ಥಿಗಳಿಗೆ.
ರಮಣ್ ಕಾಂತ್ ಮುಂಜಾಲ್ ಸ್ಕಾಲರ್ಶಿಪ್ 2026-27: ವಾರ್ಷಿಕ ₹5.5 ಲಕ್ಷದವರೆಗೆ ಆರ್ಥಿಕ ನೆರವು, ಈಗಲೇ ಅರ್ಜಿ ಸಲ್ಲಿಸಿ
ವಾಣಿಜ್ಯ (Commerce) ಮತ್ತು ಹಣಕಾಸು (Finance) ವಿಭಾಗದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿದೆ ಉತ್ತಮ ಅವಕಾಶ. ಹೀರೊ ಗ್ರೂಪ್‌ನ ರಮಣ್ ಕಾಂತ್ ಮುಂಜಾಲ್ ಫೌಂಡೇಶನ್ (Raman Kant Munjal Foundation), ಹೀರೊ ಫಿನ್‌ಕಾರ್ಪ್ (Hero FinCorp) ಸಹಯೋಗದಲ್ಲಿ 2026-27ನೇ ಸಾಲಿನ ಸ್ಕಾಲರ್ಶಿಪ್‌ಗೆ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಡಿ ಆಯ್ಕೆಯಾಗುವ ಅರ್ಹ ವಿದ್ಯಾರ್ಥಿಗಳಿಗೆ ಗರಿಷ್ಠ ₹5.5 ಲಕ್ಷದವರೆಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. ಪದವಿ ಶಿಕ್ಷಣದ ಅವಧಿಯಲ್ಲಿ ಶಿಕ್ಷಣ ವೆಚ್ಚ ಭರಿಸಲು ಈ ಆರ್ಥಿಕ ನೆರವು ದೊರೆಯಲಿದ್ದು, ಅರ್ಹತೆ, ಅಗತ್ಯ ದಾಖಲೆಗಳು, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಈ ಸ್ಕಾಲರ್ಶಿಪ್ ಪಡೆಯಲು ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:
- ಶೈಕ್ಷಣಿಕ ಅರ್ಹತೆ: ಪ್ರಸ್ತುತ ಬಿಬಿಎ (BBA), ಬಿಎಫ್‌ಐಎ (BFIA), ಬಿ.ಕಾಂ (B.Com – H, E), ಬಿಎಂಎಸ್ (BMS), ಐಪಿಎಂ (IPM), ಬಿ.ಎ. ಅರ್ಥಶಾಸ್ತ್ರ (B.A. Economics), ಅಥವಾ ಬಿಬಿಎಸ್ (BBS) ಕೋರ್ಸ್‌ಗಳ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಅಂಕಗಳ ಮಿತಿ: 10ನೇ ಮತ್ತು 12ನೇ ತರಗತಿಯಲ್ಲಿ ಕನಿಷ್ಠ ಶೇಕಡಾ 80% ಅಂಕಗಳನ್ನು ಪಡೆದಿರಬೇಕು. (ಅಂಗವಿಕಲ ವಿದ್ಯಾರ್ಥಿಗಳಿಗೆ ಶೇ. 70% ಅಂಕಗಳನ್ನು ನಿಗದಿಪಡಿಸಲಾಗಿದೆ).
- ಆದಾಯ ಮಿತಿ: ಅರ್ಜಿದಾರರ ಪೋಷಕರ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ₹6 ಲಕ್ಷವನ್ನು ಮೀರಬಾರದು.
- ಭಾರತೀಯ ನಾಗರಿಕರಿಗೆ ಮಾತ್ರ: ಈ ಸ್ಕಾಲರ್ಶಿಪ್ ಕೇವಲ ಭಾರತೀಯ ವಿದ್ಯಾರ್ಥಿಗಳಿಗೆ ಮಾತ್ರ ಮುಕ್ತವಾಗಿದೆ.
ಸೂಚನೆ: Hero FinCorp, Raman Kant Munjal Foundation ಮತ್ತು Buddy4Study ಸಂಸ್ಥೆಗಳ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ).
ಸ್ಕಾಲರ್ಶಿಪ್ ಮೊತ್ತ ಮತ್ತು ಸೌಲಭ್ಯಗಳು
| ಸ್ಕಾಲರ್ಶಿಪ್ ವಿವರ | ಮಾಹಿತಿಗಳು |
| ವಾರ್ಷಿಕ ಮೊತ್ತ | ₹40,000 ದಿಂದ ₹5,50,000 ವರೆಗೆ |
| ಅವಧಿ | ಪದವಿ ಮುಗಿಯುವವರೆಗೆ (3 ವರ್ಷಗಳು) |
| ಒಳಗೊಂಡಿರುವ ವೆಚ್ಚಗಳು | ಕಾಲೇಜು ಶುಲ್ಕ, ಪರೀಕ್ಷಾ ಶುಲ್ಕ, ಪುಸ್ತಕಗಳು, ಸ್ಟೇಷನರಿ ಮತ್ತು ಇತರ ಶೈಕ್ಷಣಿಕ ವೆಚ್ಚಗಳು |
(ನೆನಪಿಡಿ: ವಿದ್ಯಾರ್ಥಿವೇತನದ ನಿಖರವಾದ ಮೊತ್ತವು ನೀವು ಓದುತ್ತಿರುವ ಕಾಲೇಜಿನ ಶುಲ್ಕ ಮತ್ತು ನಿಮ್ಮ ಶೈಕ್ಷಣಿಕ ಸಾಧನೆಯ ಆಧಾರದ ಮೇಲೆ ನಿರ್ಧರಿಸಲ್ಪಡುತ್ತದೆ).
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು
Buddy4Study ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ:
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.
- ಪೋಷಕರ ಪ್ಯಾನ್ ಕಾರ್ಡ್ (PAN Card) ಮತ್ತು ಮಾಸ್ಕ್ಡ್ ಆಧಾರ್ ಕಾರ್ಡ್.
- ಪ್ರಸಕ್ತ ಸಾಲಿನ ಪ್ರವೇಶಾತಿ ಪುರಾವೆ (ಕಾಲೇಜು ಐಡಿ ಕಾರ್ಡ್, ಶುಲ್ಕದ ರಶೀದಿ ಅಥವಾ ಬೋನಫೈಡ್ ಪ್ರಮಾಣಪತ್ರ).
- 10ನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು.
- ಅರ್ಜಿದಾರರ ಲಿಂಕ್ಡ್‌ಇನ್ (LinkedIn) ಪ್ರೊಫೈಲ್‌ನ URL ಲಿಂಕ್.
- ಪೋಷಕರ ವಾರ್ಷಿಕ ಆದಾಯ ಪ್ರಮಾಣಪತ್ರ (ಸಕ್ಷಮ ಪ್ರಾಧಿಕಾರದಿಂದ ಪಡೆದದ್ದು, ಅಥವಾ ITR/ವೇತನ ಚೀಟಿ).
- ಪೋಷಕರ ಬ್ಯಾಂಕ್ ಖಾತೆಯ ಸ್ಟೇಟ್‌ಮೆಂಟ್ (Bank Statement).
- ವಿದ್ಯಾರ್ಥಿಯ ಬ್ಯಾಂಕ್ ಖಾತೆ ವಿವರಗಳು (ಪಾಸ್‌ಬುಕ್ ಮುಖಪುಟ ಅಥವಾ ಕ್ಯಾನ್ಸಲ್ಡ್ ಚೆಕ್).
- ನೀಡಿರುವ ಎಲ್ಲಾ ಮಾಹಿತಿಗಳು ಸತ್ಯವೆಂದು ದೃಢೀಕರಿಸುವ ಅಫಿಡವಿಟ್ (Affidavit).
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ರಮಣ್ ಕಾಂತ್ ಮುಂಜಾಲ್ ಸ್ಕಾಲರ್ಶಿಪ್ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಮೆರಿಟ್ (Merit) ಮತ್ತು ಆರ್ಥಿಕ ಹಿನ್ನೆಲೆಯ (Means) ಆಧಾರದ ಮೇಲೆ ನಡೆಯುತ್ತದೆ.
ಹಂತ 1: ಶೈಕ್ಷಣಿಕ ಸಾಧನೆ ಮತ್ತು ಪ್ರೊಫೈಲ್ ಆಧಾರದ ಮೇಲೆ ಅರ್ಜಿಗಳ ಶಾರ್ಟ್‌ಲಿಸ್ಟ್.
ಹಂತ 2: ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ.
ಹಂತ 3: ಟೆಲಿಫೋನಿಕ್ ಸಂವಾದ ಅಥವಾ ವಿಡಿಯೋ ಅಸೆಸ್‌ಮೆಂಟ್.
ಹಂತ 4: ಸ್ಕಾಲರ್ಶಿಪ್ ತಂಡದೊಂದಿಗೆ ಮುಖಾಮುಖಿ ವರ್ಚುವಲ್ (Virtual) ಸಂದರ್ಶನ.
ಹಂತ 5: ಅಂತಿಮ ಆಯ್ಕೆ (ರೈತರ ಮಕ್ಕಳು ಮತ್ತು ದಾವಣಗೆರೆಯಂತಹ Tier-3, Tier-4 ನಗರದ ವಿದ್ಯಾರ್ಥಿಗಳಿಗೆ ಆದ್ಯತೆ).
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹಂತ-ಹಂತದ ವಿಧಾನ
ಹಂತ 1: ಮೊದಲಿಗೆ Buddy4Study ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆ ಅಥವಾ ಜಿಮೇಲ್ (Gmail) ಖಾತೆಯನ್ನು ಬಳಸಿ ಲಾಗಿನ್ ಆಗಿ ಅಥವಾ ಹೊಸದಾಗಿ ರಿಜಿಸ್ಟರ್ ಮಾಡಿ.
ಹಂತ 3: ನಂತರ ‘Raman Kant Munjal Scholarship 2026-27’ ಅರ್ಜಿ ನಮೂನೆಯ ಪುಟಕ್ಕೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ.

ಹಂತ 4: ಅಲ್ಲಿರುವ ‘Start Application’ ಬಟನ್ ಮೇಲೆ ಕ್ಲಿಕ್ ಮಾಡಿ.
ಹಂತ 5: ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ ಮತ್ತು ಮೇಲೆ ತಿಳಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
ಹಂತ 6: ನಿಯಮ ಮತ್ತು ಷರತ್ತುಗಳನ್ನು (Terms and Conditions) ಒಪ್ಪಿಕೊಂಡು, ‘Preview’ ಬಟನ್ ಕ್ಲಿಕ್ ಮಾಡಿ ನಿಮ್ಮ ಅರ್ಜಿಯನ್ನು ಒಮ್ಮೆ ಪರಿಶೀಲಿಸಿ.
ಹಂತ 7: ಎಲ್ಲವೂ ಸರಿಯಾಗಿದ್ದರೆ, ‘Submit’ ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
- ದೂರವಾಣಿ: 011-430-92248 (Ext-326) (ಸೋಮವಾರದಿಂದ ಶುಕ್ರವಾರ – ಬೆಳಿಗ್ಗೆ 10:00 ರಿಂದ ಸಂಜೆ 06:00 ರವರೆಗೆ)
- ಇಮೇಲ್: [email protected]
Raman Kant Munjal Scholarships 2026-27 : Important Links
- Apply Online: Click Here
- Official Notification PDF: Click here
- Official Website: Click here
- Join Telegram Channel: Click Here
- Join WhatsApp Channel: Click Here
- Download Mobile App: Click Here
ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್
ಇದೇ ರೀತಿಯ ನಿಖರ ಸುದ್ದಿಗಳಿಗೆ ನಮ್ಮ ನೀಡ್ಸ್ ಪಬ್ಲಿಕ್ ಆಪ್ ಡೌನ್ಲೋಡ್ App ಮಾಡಿ
ಈ ಮಾಹಿತಿಗಳನ್ನು ಓದಿ:

ಲಿಂಗರಾಜ ರಾಮಪುರ (Lingaraj Ramapur) ಅವರು NeedsOfPublic.in ನ ಸಂಸ್ಥಾಪಕರು ಮತ್ತು ಪ್ರಧಾನ ಸಂಪಾದಕರಾಗಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಐಟಿ (BCA, MCA) ಹಾಗೂ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ (M.A) ಪದವಿ ಪಡೆದಿರುವ ಇವರು ತಾಂತ್ರಿಕ ಮತ್ತು ಮಾಧ್ಯಮ ರಂಗದ ಅಪರೂಪದ ಸಂಗಮವಾಗಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ಕಾಲಿಡುವ ಮುನ್ನ ಬೆಂಗಳೂರಿನ ಪ್ರಖ್ಯಾತ ಬಹುರಾಷ್ಟ್ರೀಯ ಕಂಪನಿಗಳಾದ Infosys ಮತ್ತು Concentrix ನಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಕೆಲಸ ಮಾಡಿದ ಜಾಗತಿಕ ಅನುಭವ ಇವರಿಗಿದೆ. 2017 ರಿಂದ ಮಾಧ್ಯಮ ರಂಗದಲ್ಲಿದ್ದು, ಕಳೆದ 9 ವರ್ಷಗಳಿಂದ ಡೇಟಾ-ಆಧಾರಿತ ವರದಿಗಾರಿಕೆ, ನಿಖರವಾದ ಫ್ಯಾಕ್ಟ್-ಚೆಕಿಂಗ್ ಮತ್ತು ಸಾರ್ವಜನಿಕರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವ ಸಂಪಾದಕೀಯ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.


WhatsApp Group




Leave a Reply