budget : ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಹೈಲೆಟ್ಸ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

2024 badget

ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆ 2024:

ನಿರ್ಮಲಾ ಸೀತಾರಾಮನ್ ಮೋದಿ ಸರ್ಕಾರ-2.0 ಅವಧಿಯ ಕೊನೆಯ ಬಜೆಟ್ ಮಂಡನೆ ಮಾಡಿದ್ದಾರೆ. ವಿತ್ತ ಸಚಿವರಾಗಿ ಅವಧಿ ಪೂರ್ಣಗೊಳಿಸಿದ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿಗೂ ನಿರ್ಮಲಾ ಸೀತಾರಾಮನ್ ಪಾತ್ರರಾಗಲಿದ್ದಾರೆ. ಆರನೇ ಬಾರಿಗೆ ನಿರ್ಮಲಾ ಸೀತಾರಾಮನ್(Nirmala Seetaraman) ಅವರು 2024ರ ಬಜೆಟ್ ಮಂಡನೆಯನ್ನು ಮಾಡಿದ್ದಾರೆ. ಆಶ್ಚರ್ಯವೇನೆಂದರೆ ಕೇವಲ 56 ನಿಮಿಷಗಳಲ್ಲಿ ಬಜೆಟ್ ಮಂಡನೆಯನ್ನು ಸೀತಾರಾಮನ್ ಅವರು ಮುಗಿಸಿದ್ದಾರೆ. ಲೋಕಸಭಾ ಚುನಾವಣೆ(Lok Sabha Elections) ಮುಂಬರುತಿರುವ ಸಂದರ್ಭದಲ್ಲಿ ಈ ಬಾರಿಯ ಬಜೆಟ್ ಮಂಡನೆಯೂ ಮುಖ್ಯ ಪಾತ್ರವನ್ನು ವಹಿಸಿದೆ. ಕೃಷಿ, ಆದಾಯ ತೆರಿಗೆ, ಮಹಿಳೆಯರಿಗೆ ಪ್ರೋತ್ಸಾಹ ಹೀಗೆ ಎಲ್ಲಾ ವಿಭಾಗಗಳನ್ನು ಈ ಮಂಡಳಿಯು ಒಳಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

2024ರ ಮಧ್ಯಂತರ ಬಜೆಟ್ ಮಂಡನೆಯ ಮುಖ್ಯಾಂಶಗಳು :

ಆದಾಯ ತೆರಿಗೆ(Income Tax)ಯ ನೀತಿಯಲ್ಲಿ ಯಾವುದೇ ರೀತಿಯ ಬದಲಾವಣೆಗಳಿಲ್ಲ. ಕಳೆದ ವರ್ಷದಂತೆ 7 ಲಕ್ಷದ ವರೆಗೂ ಆದಾಯವನ್ನು ಉಳ್ಳವರು ಯಾವುದೇ ರೀತಿಯ ತೆರಿಗೆಯನ್ನು ಕಟ್ಟಬೇಕಾಗಿಲ್ಲ.

ಎಲೆಕ್ಟ್ರಿಕ್ ವಾಹನಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಅವುಗಳ ಉತ್ಪಾದನೆ ಹಾಗೂ ಚಾರ್ಜಿಂಗ್ ಸ್ಟೇಷನ್ಗಳನ್ನು ಹೆಚ್ಚಿಸುವಂತೆ ಸರ್ಕಾರವು ತೀರ್ಮಾನಿಸಿದೆ.

ಅಷ್ಟೇ ಅಲ್ಲದೆ ಹಳೆಯ ರೀತಿಯ ರೈಲ್ವೆ ಭೋಗಿಗಳನ್ನು ಒಂದೇ ಭಾರತ್ ರೈಲಿನಂತೆ ಮಾರ್ಪಾಡಿಸಲಾಗುವುದು ಎಂದು ಆದೇಶ ನೀಡಿದೆ.

ಆಯುಷ್ಮಾನ್ ಭಾರತ್ ಅಡಿಯಲ್ಲಿ ಎಲ್ಲಾ ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಸಹಾಯಕಿಯರಿಗೆ ಆರೋಗ್ಯ ರಕ್ಷಣೆ ಸೇವೆಯನ್ನು ವಿಸ್ತರಿಸಲಾಗುವುದು

whatss

ಕೃಷಿಗೆ ಹೆಚ್ಚಿನ ಒತ್ತು:

ಪ್ರಧಾನಮಂತ್ರಿ ಮತ್ಸ ಸಂಪದ ಯೋಜನೆಯನ್ನು ವಿಸ್ತರಿಸಲಾಗುವುದು. ಅಷ್ಟೇ ಅಲ್ಲದೆ ಹಾಲಿನ ಡೈರಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಮತ್ತು ಅವರಿಗೆ ಪ್ರೋತ್ಸಾಹವನ್ನು ನೀಡಲಾಗುತ್ತದೆ.
ಪಿಎಂ ಫಸಲ್ ಬೀಮಾ ಯೋಜನೆ(PM Pasal beema yojana) ಅಡಿ 4 ಕೋಟಿ ಕೃಷಿಕರಿಗೆ ಬೆಳೆ ವಿಮೆಯನ್ನು ನೀಡಲಾಗುವುದು.
ಕಾಲು ಬಾವಿ ರೋಗವನ್ನು ತಡೆಗಟ್ಟಲು ಸರ್ಕಾರದಿಂದ ಕ್ರಮವನ್ನು ಕೈಗೊಳ್ಳಲಾಗುವುದು.

ಆರೋಗ್ಯ ವಲಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು, 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆಯನ್ನು ಹಾಕಲಾಗುವುದು.

ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒಲವನ್ನು ನೀಡಿದ್ದಾರೆ. ಅಲ್ಲಿ ಮೂಲಸೌಕರ್ಯಗಳಿಗೆ ಗಮನವನ್ನು ಹರಿಸಲಾಗುವುದು. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಬಡ್ಡಿ ರಹಿತ ಸಾಲ(loan)ವನ್ನು ನೀಡಲಾಗುವುದು.

ಬಾಡಿಗೆ ಮನೆಗಳು ಹಾಗೂ ಕೊಳಗೇರಿಯಲ್ಲಿ ವಾಸಿಸುವವರಿಗೆ ಹೊಸ ಮನೆಗಳನ್ನು ಖರೀದಿಸಲು ಪ್ರಧಾನ ಮಂತ್ರಿ ಆವಾಸ್ ಯೋಜನೆ(PM aavas scheme) ಅಡಿಯಲ್ಲಿ ಸಹಾಯ ಮಾಡಲಾಗುವುದು.

ಯುವಕರು, ಅನ್ನದಾತರು ಹಾಗೂ ಮಹಿಳೆಯರೇ ಸರ್ಕಾರದ ಆದ್ಯತೆಯೆಂದು ಮಂಡನೆಯಲ್ಲಿ ಘೋಷಿಸಿದ್ದಾರೆ. ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಹಾಗೂ ಜೈ ಅನುಸಂಧಾನ್’ ಮೋದಿ ಸರ್ಕಾರದ ಮಂತ್ರವಾಗಿದೆ. ಸಬ್‌ ಕಾ ಸಾಥ್ ಸಬ್‌ ಕಾ ವಿಕಾಸ್’ ನಮ್ಮ ಧ್ಯೇಯ ಎಂದು ಹೇಳಿದ್ದಾರೆ. ಇದು ಇಂದಿನ, 2024ರ ಬಜೆಟ್ ಮಂಡನೆಯಾಗಿತ್ತು. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಎಲ್ಲರೂ ತಿಳಿದುಕೊಳ್ಳುವುದು ಅವಶ್ಯಕತೆವಾಗಿದೆ. ಅದರಿಂದ ಈ ವರದಿಯನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

tel share transformed

 

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!