5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

aayushman bharat card

ಇದೀಗ ಎಲ್ಲರಿಗೂ ಒಂದು ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಸರ್ಕಾರವು ಬಡವರಿಗೆ ಅಂತ ರೂಪಿಸಿದ ಹಲವು ಯೋಜನೆಗಳು ಇವೆ. ಅದರಲ್ಲಿ ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯು ( Ayushman Arogya Card ) ಕೂಡ ಒಂದು. ಈ ಒಂದು ಯೋಜನೆಯಿಂದ ಬಡವರ ಯಾವುದೇ ಆರೋಗ್ಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರ ರೂಪಿಸಿರುವ “ಆಯುಷ್ಮಾನ್ ಭಾರತ್ – ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ – ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ” ಕಾರ್ಡ್‍ಗಳನ್ನು ಪಡೆದವರಿಗೆ ಆರೋಗ್ಯ ಸಮಸ್ಯೆಗಳ ಚಿಕಿತ್ಸಾ ಸಂದರ್ಭದಲ್ಲಿ ಬಿಪಿಎಲ್ ( BPL ) ಕುಟುಂಬಗಳಿಗೆ ವಾರ್ಷಿಕ ರೂ.5 ಲಕ್ಷ ಹಾಗೂ ಎಪಿಎಲ್ ಕುಟುಂಬಗಳಿಗೆ 1.5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚದ ಸೌಲಭ್ಯ ಪಡೆದುಕೊಳ್ಳಬಹುದು. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

5 ಲಕ್ಷ ಉಚಿತ ಚಿಕಿತ್ಸೆಯ ಉದ್ದೇಶ ( Purpose ) :

ಕೇಂದ್ರ ಸರ್ಕಾರವು ( Central Government ) ನಡೆಸುತ್ತಿರುವ ಈ ಯೋಜನೆಯು ಆರೋಗ್ಯ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಈ ಯೋಜನೆ ಅಡಿಯಲ್ಲಿ ಫಲಾನುಭಾವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗುವುದು. ಈ ಯೋಜನೆಯಡಿಯಲ್ಲಿ, ಕುಟುಂಬದ ಸದಸ್ಯರು ದೀರ್ಘಾವಧಿಯವರೆಗೆ ಆಸ್ಪತ್ರೆಗೆ ದಾಖಲಾಗಬೇಕಾದರೆ, ವೈದ್ಯಕೀಯ ವೆಚ್ಚವನ್ನು ಸರಿದೂಗಿಸಲು 5 ಲಕ್ಷದವರೆಗೆ ಆರ್ಥಿಕ ನೆರವು ನೀಡುವ ಉದ್ದೇಶವಾಗಿದೆ.

ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳು ( Qualifications ) :

ಆಯುಷ್ಮಾನ್ ಭಾರತ್ ( Ayushman Bharat scheme) ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವೊಂದು ಮಾನದಂಡಗಳನ್ನು ವಿಧಿಸಲಾಗಿದೆ. ಇದರಲ್ಲಿ ಮುಖ್ಯವಾಗಿ, ಆಯುಷ್ಮಾನ್ ಭಾರತ್ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಬೇಕಾದರೆ ಕುಟುಂಬದ ಸದಸ್ಯರ ಹೆಸರನ್ನು ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ (SECC) 2011 ರಲ್ಲಿ ಸೇರಿಸಿರಬೇಕು.

ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು ( Documents ) :

ಆಧಾರ್ ಕಾರ್ಡ್‌
ಪಡಿತರ ಚೀಟಿ
ಮೊಬೈಲ್ ಸಂಖ್ಯೆ
ನಿವಾಸ ಪ್ರಮಾಣಪತ್ರ
ಕುಟುಂಬದ ಎಲ್ಲಾ ಸದಸ್ಯರ ದಾಖಲೆಗಳು

whatss

ಆಯುಷ್ಮಾನ್ ಭಾರತ್ ಯೋಜನೆ 2023 ರ ಪ್ರಯೋಜನಗಳು :

ಈ ಯೋಜನೆಯಡಿಯಲ್ಲಿ ಫಲಾನುಭವಿಗಳು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಬಹುದು.
ABHA ಕಾರ್ಡ್ ಫಲಾನುಭವಿಗಳಿಗೆ ನಗದು ರಹಿತ ಚಿಕಿತ್ಸೆ ಮತ್ತು ಪ್ರವೇಶ ಸೇವೆಗಳು ಲಭ್ಯವಿದೆ.
ಈ ಯೋಜನೆಯಡಿ, ಪಟ್ಟಿ ಮಾಡಲಾದ ರಾಜ್ಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತದೆ.
ಆಸ್ಪತ್ರೆಗೆ ದಾಖಲಾದರೆ, 15 ದಿನಗಳ ವರೆಗಿನ ನಿಮ್ಮ ವೆಚ್ಚಗಳನ್ನು ಭಾರತ ಸರ್ಕಾರದ ಈ ಯೋಜನೆಯಡಿ ಒಳಗೊಂಡಿರುತ್ತದೆ.
ಇದು ಸಂಪೂರ್ಣ ನಗದು ರಹಿತ ಯೋಜನೆಯಾಗಿದೆ ಮತ್ತು ಪ್ರಯೋಜನಗಳನ್ನು ಪಡೆಯಲು ನಗದು ಅಗತ್ಯವಿಲ್ಲ.

ಆಯುಷ್ಮಾನ್ ಭಾರತ್ ಕಾರ್ಡ್ ಆನ್‌ಲೈನ್ ಅಪ್ಲಿಕೇಶನ್ ( Online Application ) :

ಆನ್‌ಲೈನ್‌ ನಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ಪಡೆಯಲು ಅರ್ಜಿದಾರರು pmjay.gov.in ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಪೋರ್ಟಲ್‌ಗೆ ಹೋಗಿ ಕ್ರಿಯೇಟ್ ABHA ಕಾರ್ಡ್ ಮೇಲೆ ಕ್ಲಿಕ್ ಮಾಡಿ.
ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ OTP ಹಾಕಿ.
ಈಗ ಅರ್ಜಿ ನಮೂನೆಗೆ ವಿವರಗಳನ್ನು ನಮೂದಿಸಿ.
ನೋಂದಣಿಯನ್ನು ಪೂರ್ಣಗೊಳಿಸಲು ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಿ.
ಅರ್ಜಿಯನ್ನು ಸಬ್ಮಿಟ್ ಮಾಡಿ ಮತ್ತು ಅಧಿಕಾರಿಗಳಿಂದ ಅನುಮೋದನೆಗಾಗಿ ಕಾಯಿರಿ.

tel share transformed

ಆಯುಷ್ಮಾನ್ ಭಾರತ್ ಕಾರ್ಡ್ ಡೌನ್‌ಲೋಡ್ ಪ್ರಕ್ರಿಯೆ ( Download Process ) :

pmjay.gov.inಗೆ ಭೇಟಿ ನೀಡುವ ಮೂಲಕ ಆಯುಷ್ಮಾನ್ ಭಾರತ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
pmjay.gov.inಗೆ ಹೋಗಿ ಮತ್ತು ಡೌನ್‌ಲೋಡ್ ಆಯುಷ್ಮಾನ್ ಕಾರ್ಡ್ ಬಟನ್ ಮೇಲೆ ಕ್ಲಿಕ್ ಮಾಡಿ.
ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ OTP ಹಾಕಿ.
ನಿಮ್ಮ ಆಯುಷ್ಮಾನ್ ಕಾರ್ಡ್‌ನ ಡಿಜಿಟಲ್ ಕಾಪಿಯನ್ನು ಪರಿಶೀಲಿಸಿ ಅದನ್ನು ಡೌನ್‌ಲೋಡ್ ಮಾಡಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

  1. ಪ್ರತಿ ದಿನಾ ಒಳ್ಳೊಳ್ಳೆ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಿರುವನಿಮಗೆ ಹೃತ್ಪೂರಕ ವಂದನೆಗಳು

Leave a Reply

Your email address will not be published. Required fields are marked *

error: Content is protected !!