ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಹಣ ಜಮಾ ಆಗಿರುವ, ಡಿಬಿಟಿ ಹೀಗೆ ಚೆಕ್ ಮಾಡಿಕೊಳ್ಳಿ

IMG 20231221 WA0000

ಇದೀಗ ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಹಾಗೂ ಅನ್ನಭಾಗ್ಯ ಯೋಜನೆ (Annabhagya scheme) ಯ ಅಡಿಯಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ (Bank Account) ವರ್ಗಾವಣೆ ಮಾಡಿದೆ. ಹೀಗೆ ಖಾತೆಗೆ ಜಮಾ ಆದ ಹಣದ ಮಾಹಿತಿ ತಿಳಿದು ಕೊಳ್ಳುವುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈಗಾಗಲೇ ಹಲವಾರು ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ (Money Deposit) ಆಗಿದೆ. ಅವರು ಇದರ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ್ದಾರೆ. ಆದರೆ ಇನ್ನೂ ಕೆಲವರ ಖಾತೆಗೆ ಹಣ ಬಾರದೆ ಇರುವುದಕ್ಕೆ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ. ಇದರ ಬಗ್ಗೆ ಸರ್ಕಾರ ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸುತ್ತದೆ.

ಗೃಹಲಕ್ಷಿ ಯೋಜನೆಗೆ ಹಣ ಜಮಾ ಆಗಲು ರೇಷನ್ ಕಾರ್ಡ್ ಮುಖ್ಯ :

ಸರ್ಕಾರ ಮಾಹಿತಿ ನೀಡಿದ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಹಣ ಮಹಿಳೆಯರ ಖಾತೆಗೆ (Bank Account) ಜಮಾ ಆಗಬೇಕು ಅಂದರೆ ರೇಷನ್ ಕಾರ್ಡ್ ನಲ್ಲಿ (ration card) ಮೊದಲ ಹೆಸರು ಮನೆಯ ಯಜಮಾನಿಯದ್ದೇ ಆಗಿರಬೇಕು. ಇನ್ನು ನೋಡುವುದಾದರೆ, ಕರ್ನಾಟಕದಲ್ಲಿ ಗೃಹಲಕ್ಷಿ ಯೋಜನೆಯ ಎಲ್ಲಾ ಫಲಾನುಭವಿ ಬಿಪಿಎಲ್ ಕಾರ್ಡ್ (BPL card) ದಾರರ ಪಟ್ಟಿಯಲ್ಲಿ ಮೊದಲ ಹೆಸರು ಮನೆಯ ಯಜಮಾನೀಯದ್ದೆ ಆಗಿರುತ್ತದೆ.

ಅನ್ನಭಾಗ್ಯ ಯೋಜನೆಯ ಹಣ ಕೂಡ ಮನೆಯ ಯಜಮಾನಿಯರದ್ದೇ :

ರೇಷನ್ ಕಾರ್ಡ್ ನಲ್ಲಿ ಮೊದಲ ಹೆಸರು ಮನೆಯ ಯಜಮಾಣಿಯರದ್ದೇ ಆಗಿರುವುದರಿಂದ ಅನ್ನಭಾಗ್ಯ ಯೋಜನೆಯ ಹಣವು ಕೂಡ ಮನೆಯ ಗೃಹಿಣಿಯ ಹೆಸರಿಗೆ ಜಮಾ ಆಗಿರುವ ಸಾಧ್ಯತೆ ಹೆಚ್ಚು ಎಂದು ತಿಸಿದ್ದಾರೆ.

ಹೀಗೆ ಜಮಾ ಆದ ಹಣ ಬಂದಿದೆಯೋ ಬಂದಿಲ್ಲವೋ ಎಂಬ ಒಂದು ಅನುಮಾನ ಎಲ್ಲರಿಗೂ ಇದ್ದೇ ಇರುತ್ತದೆ. ಅದಕ್ಕಾಗಿ ಈಗ ಚಿಂತಿಸುವ ಅಗತ್ಯವಿಲ್ಲ. ನೀವು ನೇರವಾಗಿ ಒಂದೇ ಒಂದು ಲಿಂಕ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಖಾತೆಗೆ ಹಣ ಆಗಿ ವರ್ಗಾವಣೆ ಆಗಿರುವ ಸಂಪೂರ್ಣ ಮಾಹಿತಿ ಪಡೆಯಬಹುದು. ಅದು ಹೇಗೆ ಎಂದು ತಿಳಿದು ಕೊಳ್ಳೋಣ ಬನ್ನಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ರೇಷನ್ ಕಾರ್ಡ್ ಆಕ್ಟಿವ್ ಇದಿಯಾ ಎಂದು ತಿಳಿದುಕೊಳ್ಳುವುದು ಹೇಗೆ ?

ಹಲವು ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಹಾಗೆಯೇ ಇನ್ನು ಕೆಲವರ ಖಾತೆಗೆ ಹಣ ಜಮಾ ಆಗಿಲ್ಲ. ಏಕೆಂದ್ರೆ ಹಲವು ತಂತ್ರಾಂಶಗಳ ಸಮಸ್ಯೆಗಳು ಇದ್ದಾವೆ. ಮುಖ್ಯವಾಗಿ ಕೆ ವೈ ಸಿ (E-KYC) ಮಾಡಿಸುವುದು ಆಧಾ‌ರ್ ಸೀಡಿಂಗ್ ಮೊದಲಾದವುಗಳನ್ನು ಮಾಡಿಸುವುದು ಕಡ್ಡಾಯವಾಗಿದೆ.

ಇಷ್ಟೆಲ್ಲ ಮಾಡಿದರೂ ಕೂಡ ಕೆಲವರ ರೇಷನ್ ಕಾರ್ಡ್ ಅಥವಾ ಖಾತೆ ಆಕ್ಟಿವ್ ಆಗಿರದೆ ಇರಬಹುದು ಇದನ್ನ ತಿಳಿದುಕೊಳ್ಳಲು ನೀವು ಮಾಹಿತಿ ಕಣಜ ಎನ್ನುವ ವೆಬ್ಸೈಟ್ ಅನ್ನು ಓಪನ್ ಮಾಡಿ. ಈ ಕೆಳಗೆ ನೀಡಿರುವ ವಿಧಾನವನ್ನು ಬಳಸಿ :

ಮಾಹಿತಿ ಕಣಜ ವೆಬ್ಸೈಟ್ ಗೆ ( Website ) ಭೇಟಿ ನೀಡಿ:  https://mahitikanaja.karnataka.gov.in/department
ಪಡಿತರ ಚೀಟಿ ಪ್ರತ್ಯೇಕವಾಗಿ ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಿ
ನಂತರ ಕೇಳುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡುವುದರ ಮೂಲಕ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ತಿಳಿಯಬಹುದಾಗಿದೆ.

whatss

ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹೇಗೆ? (How to check DBT status) :

ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ https://ahara.kar.nic.in/Home/EServices ಮೇಲೆ ಕ್ಲಿಕ್ ಮಾಡಿ.
ಈಗ ಈ ಸರ್ವಿಸ್ (e service) ವಿಭಾಗದಲ್ಲಿ ಎಡಭಾಗದಲ್ಲಿ ಮೂರು ಡಾಟ್ ಕಾಣಬಹುದು ಅದರ ಮೇಲೆ ಕ್ಲಿಕ್ ಮಾಡಿದರೆ ಇ ಸ್ಥಿತಿ ಮೇಲೆ ಕ್ಲಿಕ್ ಮಾಡಿ.
ಈಗ ಡಿಬಿಟಿ ಸ್ಥಿತಿ (DBT status) ಎನ್ನುವ ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ಜಿಲ್ಲಾ ಅವರು ವಿಭಜನೆ ಆಗಿರುವ ಜಿಲ್ಲೆಗಳ ಪಟ್ಟಿ ಕಾಣಿಸುತ್ತಿದೆ. ಇದರಲ್ಲಿ ಮೂರು ವಿಭಾಗಗಳಲ್ಲಿ ಜಿಲ್ಲೆಗಳ ಹೆಸರು ನೀಡಲಾಗಿದೆ ನಿಮ್ಮ ಜಿಲ್ಲೆ ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲ್ಬಾಗದಲ್ಲಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ ಸ್ಟೇಟಸ್ ಆಫ್ ಡಿ ಬಿ ಟಿ ಎನ್ನುವ ಪುಟ ತೆಗೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ರೇಷನ್‌ ಕಾರ್ಡ್ ಸಂಖ್ಯೆ ಹಾಗೂ ಕ್ಯಾಪ್ಟ ನಂಬ‌ರ್ ನಮೂದಿಸುವುದರ ಮೂಲಕ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವ ಮಾಹಿತಿ ತಿಳಿಯಬಹುದು. ಯಾವ ತಿಂಗಳಲ್ಲಿ ಹಣ ವರ್ಗಾವಣೆ ಆಗಿದೆ ಎನ್ನುವ ಸ್ಟೇಟಸ್ ಚೆಕ್ ಮಾಡಬಹುದು.

ಈ ಮೇಲೆ ನೀಡಿರುವುದು ಅನ್ನಭಾಗ್ಯ ಯೋಜನೆಯ ಹಣ ಜಮಾ ಆಗಿದೆಯೇ ಎಂದು ಚೆಕ್ ಮಾಡುವ ವಿಧಾನ ಆಗಿದೆ. ರೇಷನ್ ಕಾರ್ಡ್ ನಲ್ಲಿ ಯಜಮಾನ ಅಥವಾ ಯಜಮಾನೀಯ ಹೆಸರಿಗೆ ಹಣ ಜಮಾ ಆಗುತ್ತದೆ. ಹಾಗೆಯೇ ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆ ಹಾಗೂ ಎಷ್ಟು ಹಣ ಜಮಾ ಆಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ಕಾಣಬಹುದು.

ಗೃಹಲಕ್ಷಿ ಯೋಜನೆಯ ಹಣವನ್ನು ಕೂಡ ಇಲ್ಲಿ ಚೆಕ್ ಮಾಡಬಹುದು :

ಅನ್ನಭಾಗ್ಯ ಯೋಜನೆ(Annabhagya scheme )ಯ ಹಣ ಜಮಾ ಆಗಿದೆ ಎಂದಾದರೆ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಬಂದಿರುತ್ತದೆ ಎಂದು ಅರ್ಥ, ಯಾಕಂದರೆ ಈ ಎರಡು ಖಾತೆಗಳು ಒಂದೇ ಆಗಿರುವುದರಿಂದ ಸರ್ಕಾರ ಮಿಸ್‌ ಮಾಡದೆ ನಿಮ್ಮ ಖಾತೆಗೆ ಹಣ ಜಮಾ ಮಾಡಿರುತ್ತದೆ. ಆದ್ದರಿಂದ ಸರಿಯಾಗಿ ಚೆಕ್ ಮಾಡಿಕೊಳ್ಳಬೇಕು.

ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬಂದಾಗ ಎಸ್‌ಎಂಎಸ್‌ (SMS) ಅನ್ನು ನಿಮ್ಮ ಮೊಬೈಲ್ ಗೆ ಕಳುಹಿಸಲಾಗುತ್ತದೆ, ಒಂದು ವೇಳೆ ನಿಮಗೆ ಎಸ್‌ಎಂಎಸ್‌ ಬಾರದೆ ಇದ್ದಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ಬಿಡುಗಡೆ ಆದಾಗ ನೇರವಾಗಿ ಬ್ಯಾಂಕ್ ಗೆ ಭೇಟಿ ನೀಡಿ (check your bank account) ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ.

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!