ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗೆ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)” ಎಂಬ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ನೌಕರರು ಹಾಗೂ ಅವರ ಅವಲಂಬಿತರು ಸರ್ಕಾರಿ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ನಗದು ರಹಿತ (Cashless) ಚಿಕಿತ್ಸೆ ಪಡೆಯಬಹುದು. ಆದರೆ ಇದರ ಪ್ರಯೋಜನ ಪಡೆಯಲು ನೌಕರರು ಮತ್ತು ಅವರ ಕುಟುಂಬ ಸದಸ್ಯರು ಯೋಜನೆಗೆ ಸರಿಯಾಗಿ ನೊಂದಾಯಿಸಿಕೊಳ್ಳುವುದು ಕಡ್ಡಾಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈಗ ಸರ್ಕಾರದಿಂದ ಹೊಸ ಸೂಚನೆ ಹೊರಬಂದಿದ್ದು, ಎಲ್ಲಾ ಸರ್ಕಾರಿ ನೌಕರರು ತಮ್ಮ ಕುಟುಂಬ ಸದಸ್ಯರ ವಿವರಗಳೊಂದಿಗೆ ಅರ್ಜಿಯನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಲಾಗಿದೆ. ಕೆಳಗಿನಂತೆ ಈ ಯೋಜನೆಗೆ ಸಂಬಂಧಿಸಿದ ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಪ್ರಮುಖ ಸೂಚನೆಗಳನ್ನು ವಿವರವಾಗಿ ತಿಳಿದುಕೊಳ್ಳಿ.
ಅರ್ಜಿ ಸಲ್ಲಿಸುವ ವಿಧಾನ
ಅನುಬಂಧ-1 (Annexure-I) ಅನ್ನು ಕಛೇರಿಗೆ ಎರಡು ಪ್ರತಿಗಳಲ್ಲಿ ಸಲ್ಲಿಸಬೇಕು.
ಅರ್ಜಿಯಲ್ಲಿನ ಎಲ್ಲಾ ಮಾಹಿತಿಯನ್ನು ಕನ್ನಡ ಮತ್ತು ಆಂಗ್ಲ (CAPITAL LETTERS) ಭಾಷೆಗಳಲ್ಲಿ ಸ್ಪಷ್ಟವಾಗಿ ತುಂಬಬೇಕು.
ನೌಕರ ಮತ್ತು ಅವರ ಎಲ್ಲಾ ಅವಲಂಬಿತರ ಆಧಾರ್ ಕಾರ್ಡ್‌ನ ಪ್ರತಿಗಳನ್ನು ಲಗತ್ತಿಸಬೇಕು.
ಪ್ರತಿ ಅವಲಂಬಿತನ ಪಾಸ್‌ಪೋರ್ಟ್ ಅಳತೆಯ ಬಣ್ಣದ ಫೋಟೋ (White Background) ಇರಬೇಕು.
ನೌಕರರು ಮತ್ತು ಅವಲಂಬಿತರ ಫೋಟೋಗಳ ಹಿಂಭಾಗದಲ್ಲಿ ಸಹಿ ಮತ್ತು ದಿನಾಂಕ ನಮೂದಿಸಬೇಕು.
ಅನುಬಂಧ-1 ನಲ್ಲಿ ಉಲ್ಲೇಖಿಸಿದ ಅವಲಂಬಿತರ ವಿವರಗಳನ್ನು FORM-C ಯಲ್ಲಿಯೂ ತುಂಬಿ ಬ್ಲಾಕ್ ಶಿಕ್ಷಣಾಧಿಕಾರಿ (BEO) ಅವರ ಸಹಿಗೆ ಸಲ್ಲಿಸಬೇಕು.
ಫೋಟೋ ಮತ್ತು ಮಾಹಿತಿಯ ಮಹತ್ವ
ನೌಕರರ ಹಾಗೂ ಅವಲಂಬಿತರ ಫೋಟೋಗಳು ಒಮ್ಮೆ ಅಪ್‌ಲೋಡ್ ಆದ ಬಳಿಕ 5 ವರ್ಷಗಳವರೆಗೆ ಬದಲಾಯಿಸಲು ಅವಕಾಶ ಇರುವುದಿಲ್ಲ.
5 ವರ್ಷಗಳ ನಂತರ ಮಾತ್ರ ಹೊಸ ಫೋಟೋಗಳನ್ನು ಸಲ್ಲಿಸಬಹುದು.
ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರುಗಳು ಸರಿಯಾಗಿ ಹೊಂದಿಕೆಯಾಗಿರಬೇಕು. ಯಾವುದೇ ವ್ಯತ್ಯಾಸ ಇದ್ದರೆ ನೋಂದಣಿ ತಿರಸ್ಕೃತವಾಗಬಹುದು.
ಅವಲಂಬಿತರ ಪಟ್ಟಿ ಕುರಿತು ನಿಯಮಗಳು
ಪುರುಷ ನೌಕರರು – ಹೆಂಡತಿ, ಮಕ್ಕಳು, ತಂದೆ-ತಾಯಿ ಹಾಗೂ ಮಲತಾಯಿ ಮಾತ್ರ ಅವಲಂಬಿತರಾಗಬಹುದು. (ಹೆಂಡತಿಯ ತಂದೆ-ತಾಯಿ ಸೇರೋದಿಲ್ಲ.)
ಮಹಿಳಾ ನೌಕರರು – ಗಂಡ, ಮಕ್ಕಳು, ತಮ್ಮ ತಂದೆ-ತಾಯಿ ಹಾಗೂ ಮಲತಾಯಿ ಮಾತ್ರ ಅವಲಂಬಿತರಾಗಬಹುದು. (ಗಂಡನ ತಂದೆ-ತಾಯಿ ಅಂದರೆ ಅತ್ತೆ-ಮಾವ ಸೇರೋದಿಲ್ಲ.)
ಎರಡು ಮದುವೆ ಮಾಡಿಕೊಂಡಿದ್ದಲ್ಲಿ ಮೊದಲ ಹೆಂಡತಿ ಮತ್ತು ಆಕೆಯ ಮಕ್ಕಳು ಮಾತ್ರ ಯೋಜನೆಗೆ ಅರ್ಹರಾಗುತ್ತಾರೆ.
ಯೋಜನೆಗೆ ಸೇರಿದ ನಂತರದ ಬದಲಾವಣೆಗಳು
ಅರ್ಜಿಯನ್ನು ಸಲ್ಲಿಸಿದ ನಂತರ, ಕುಟುಂಬದಲ್ಲಿ ವಿವಾಹ, ಮಗುವಿನ ಜನನ ಅಥವಾ ಮರಣ ನಡೆದಿದ್ದರೆ, ಹೊಸ ಸದಸ್ಯರನ್ನು ಸೇರಿಸಲು ಅಥವಾ ತೆಗೆಯಲು FORM-44 ಬಳಸಿ ತಿದ್ದುಪಡಿ ಮಾಡಬಹುದು.
ಯೋಜನೆಯ ಪ್ರಾಮುಖ್ಯತೆ:
ಆರೋಗ್ಯ ಸಂಜೀವಿನಿ ಯೋಜನೆಗೆ ನೊಂದಾಯಿಸದ ನೌಕರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಕೇವಲ ತಮ್ಮ ಹೆಸರೇ ವೆಬ್‌ಸೈಟ್‌ನಲ್ಲಿ ಗೋಚರಿಸುತ್ತದೆ. ಇದರ ಪರಿಣಾಮವಾಗಿ ಅವಲಂಬಿತರಿಗೆ ಚಿಕಿತ್ಸೆ ನೀಡಲು ತೊಂದರೆ ಉಂಟಾಗಬಹುದು. ಆದರೆ ಯೋಜನೆಯಲ್ಲಿ ಒಳಗೊಂಡಿರುವ ನೌಕರರ ಎಲ್ಲ ಕುಟುಂಬ ಸದಸ್ಯರ ಹೆಸರು ಮತ್ತು ಫೋಟೋಗಳು ಜ್ಯೋತಿ ಸಂಜೀವಿನಿ ಯೋಜನೆ (Jyothi Sanjeevini) ಆಸ್ಪತ್ರೆ ಪೋರ್ಟಲ್‌ನಲ್ಲಿ ಗೋಚರಿಸುತ್ತವೆ, ಇದರಿಂದ ಎಲ್ಲರಿಗೂ ನಿರ್ವಿಘ್ನವಾಗಿ ಚಿಕಿತ್ಸೆ ಸಿಗುತ್ತದೆ.
ನೌಕರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ಸ್ವಯಂ ದೃಢೀಕರಿಸಿ, ನಿಗದಿತ ನಮೂನೆಗಳನ್ನು ಮೇಲಾಧಿಕಾರಿಗಳ ಮೂಲಕ ವೇತನ ಬಟವಾಡೆ ಅಧಿಕಾರಿಗಳಿಗೆ ತಕ್ಷಣ ಸಲ್ಲಿಸಬೇಕು. ವಿಳಂಬ ಮಾಡಿದರೆ ಯೋಜನೆಯ ಪ್ರಯೋಜನ ಪಡೆಯಲು ತೊಂದರೆ ಉಂಟಾಗುವ ಸಾಧ್ಯತೆ ಇದೆ.
ಒಟ್ಟಾರೆ , ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ರಾಜ್ಯ ಸರ್ಕಾರಿ ನೌಕರರ ಮತ್ತು ಅವರ ಕುಟುಂಬದ ಆರೋಗ್ಯ ರಕ್ಷಣೆಗೆ ಜೀವಾಳವಾದ ಯೋಜನೆ. ಸರಿಯಾದ ರೀತಿಯಲ್ಲಿ ನೋಂದಣಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಫೋಟೋಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸುವುದು ಅತ್ಯಂತ ಅಗತ್ಯ. ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲನೆ ಮಾಡಿದರೆ, ಭವಿಷ್ಯದಲ್ಲಿ ಯಾವುದೇ ತೊಂದರೆ ಇಲ್ಲದೆ ಎಲ್ಲ ಸದಸ್ಯರು ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ.












ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




