Ather Scooter – ಬಾರಿ ಸದ್ದು ಮಾಡಲಿವೆ ಎಥರ್‌ನ ಹೊಸ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್, ಇಲ್ಲಿದೆ ಮಾಹಿತಿ

Ather new 450 S and X scooties

ಮುಂಬರುವ ವರ್ಷಗಳಲ್ಲಿ ದೇಶೀಯ ಮಾರುಕಟ್ಟೆಗೆ ಎಥರ್ ಹೊಸ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ (Ather New Family Electric scooter) ಅನ್ನು ಬಿಡುಗಡೆ ಮಾಡುತ್ತಾರೆ ಎಂದು ಎಥರ್(Ather) ಸಿಇಒ, ಖಚಿತಪಡಿಸಿದ್ದಾರೆ. ಈ ಸ್ಕೂಟರ್ ನ ಸ್ಪೈ ಚಿತ್ರವೊಂದು ಆನ್‌ಲೈನ್ ನಲ್ಲಿ ವೈರಲ್ ಆಗಿದೆ, ಹಾಗೂ ಹಲವು ವೈಶಿಷ್ಟ್ಯಗಳನ್ನು ನಿರೀಕ್ಷಿಸಿಲಾಗಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Ather ನ ಹೊಸಾ ಸ್ಕೂಟರ್ ಬರಲಿದೆ :

ಕಳೆದ ಎರಡು ವರ್ಷಗಳಿಂದ ಜನರಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳ ಕ್ರೇಜ್ ಹೆಚ್ಚುತ್ತಲೇ ಇದೆ, ಇದೆ ಕ್ರೇಜ್ ನಲ್ಲಿ ಸುಮಾರು ದೊಡ್ಡ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಒಂದರ ಮೇಲೊಂದು ಹೊಸ ಹೊಸ ಫೀಚರ್ ಗಳ ಎಲೆಕ್ಟ್ರಿಕ್ ಸ್ಕೂಟರ್(electric scooters) ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇವೆ. ಆದರಿಂದ ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್‌ ಬೈಕ್‌ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಮತ್ತು ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ.

ಓಲಾ(Ola), ಎಥರ್(Ather) ಹಾಗೂ ಸಿಂಪಲ್ ಎನರ್ಜಿ(Simple Energy) ಇವು ಬೆಂಗಳೂರು ಮೂಲದ ಕಂಪನಿಯಾಗಿದ್ದು, ಭಾರೀ ಪ್ರಮಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉತ್ಪಾದನೆ ಮಾಡುತ್ತವೇ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕೂಡಾ ಮಾರಾಟವಾಗುತ್ತಿವೆ. ಸದ್ಯ, ಎಥರ್‌ (Ather) ಹೊಸ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಎಥರ್ ಎನರ್ಜಿಯ ಸಿಇಒ ತರುಣ್ ಮೆಹ್ತಾ ಅವರು, 2024 ರ ಆರಂಭದಲ್ಲಿ ‘ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್’ ಪರಿಚಯಿಸುವ ತಯಾರಿಯಲ್ಲಿದೆ ಎಂದು ಕಂಪನಿ ಖಾತರಿಪಡಿಸಿದೆ. ಮುಂದಿನ ವರ್ಷ ಅದೇ ಸಮಯದಲ್ಲಿ 450 ಸರಣಿಯನ್ನು ನವೀಕರಿಸಲಾಗುವುದು ಎಂದು ಮೆಹ್ತಾ ಘೋಷಿಸಿದರು ಹಾಗೂ ಅಗ್ಗದ ಬೆಲೆಯಲ್ಲಿ ಸ್ಕೂಟರ್ ಗಳು ಸಿಗಲಿದೆ ಎಂದು ಅವರು ದೃಢಪಡಿಸಿದ್ದಾರೆ.

ಭಾರತೀಯ ಮಾರುಕಟ್ಟೆಯಲ್ಲಿನ ಇತರ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಪ್ರಸ್ತುತ 450 ಸರಣಿಯು ಉತ್ತಮ ಕಾರ್ಯಕ್ಷಮತೆ, ವೈಶಿಷ್ಟ್ಯಗಳು ಮತ್ತು ನಿರ್ವಹಣೆಯನ್ನು ಹೊಂದಿದೆ. ಹೀಗಿರುವಾಗ 450 ಸರಣಿಯ ನವೀಕರಿಸಲಾದ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡುವುದಾಗಿ ಮೆಹ್ತಾ ಅವರು ಸ್ಪಷ್ಟಿಸಿದ್ದಾರೆ. 450 ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಎಥರ್ 450S ಮತ್ತು ಎಥರ್ 450X ನಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ಸ್ಕೂಟರ್‌ಗಳ ವಿವರವು ಹೀಗಿವೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್:

Ather 450 S

ಎಥರ್ 450S ಮಾದರಿಯ ಎಲೆಕ್ಟ್ರಿಕ್ ಸ್ಕಾಟರ್ ರೂ.1,29,999 ದರದಲ್ಲಿ ಬಿಡುಗಡೆಯಾಗಿದೆ.
2.9 kWh ಬ್ಯಾಟರಿ ಪ್ಯಾಕ್‌ನೊಂದಿಗೆ (battery pack) ಬರುತ್ತದೆ.
ಅಥರ್ 450S ಒಂದೇ ಚಾರ್ಜ್‌ನಲ್ಲಿ 115 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ.
ಮುಂಭಾಗ ಹಾಗೂ ಹಿಂಭಾಗ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.
ಅಥರ್ 450S ಮೋಟಾರ್ 5.4 kW (7.2 hp) ಪವರ್ ಅನ್ನು ಹೊರಹಾಕುತ್ತದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಕೇವಲ 3.9 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ನೀಡುತ್ತದೆ ಮತ್ತು 90 kmph ಟಾಪ್ ಸ್ವೀಡ್(Top-speed)ಹೊಂದಿದೆ.
ಬ್ಯಾಟರಿ ಸಂಪೂರ್ಣ ಚಾರ್ಜ್ ಆಗಲು 8 ಗಂಟೆ 36 ನಿಮಿಷಗಳು ತೆಗೆದುಕೊಳ್ಳುತ್ತದೆ.

ಎಥರ್ 450X ಎಲೆಕ್ಟ್ರಿಕ್ ಸ್ಕೂಟರ್:

ಎಥರ್ 450X ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ 2.9 kWh ಮತ್ತು 3.7 kWh ಬ್ಯಾಟರಿ ಪ್ಯಾಕ್ (battery pack)ಆಯ್ಕೆಯನ್ನು ಒಳಗೊಂಡಿದೆ.
ಎಥರ್ 450X 2.9 kWh ಬ್ಯಾಟರಿ ಪ್ಯಾಕ್ ರೂ.1,38,000 ಮತ್ತು
3.7 kWh ಬ್ಯಾಟರಿ ಪ್ಯಾಕ್ ರೂ.1,44,921 ಬೆಲೆಯಲ್ಲಿ ಲಭ್ಯವಿದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ಒಂದು ಸಂಪೂರ್ಣ ಚಾರ್ಜ್ ನಲ್ಲಿ 115 km ಯಿಂದ 145 km ವ್ಯಾಪ್ತಿಯಲ್ಲಿ ನೀಡುತ್ತದೆ.
12- ಇಂಚಿನ ಮಿಶ್ರಲೋಹದ ಚಕ್ರಗಳು ಮತ್ತು ಇದರ ಎರಡು ತುದಿಯಲ್ಲಿ ಡಿಸ್ಕ್ ಬ್ರೇಕ್ ನೊಂದಿಗೆ ಸಜ್ಜುಗೊಂಡಿದೆ.

ಮುಂಬರುವ ವರ್ಷದಲ್ಲಿ ಬಿಡುಗಡೆಗೊಳ್ಳುವ ಎಥರ ಎಲೆಕ್ಟ್ರಿಕ್ ಸ್ಕೂಟರ್ಗಳು ಅನೇಕ ನೂತನ ಸ್ಕೂಟರ್ ಗಳಾದ ಟಿವಿಎಸ್ ಐಕ್ಯೂಬ್ (TVS iQube) ಹಾಗೂ ಬಜಾಜ್ ಚೇತಕ್ (Bajaj Chetak) ಸ್ಕೂಟರ್‌ಗಳಿಗೆ ಉತ್ತಮ ಪ್ರತಿಸ್ಪರ್ಧಿಯಾಗಲಿದೆ. ಹಾಗೂ ಕೈಗುಟುಕುವ ಬೆಲೆಯಲ್ಲಿ ಕೂಡ ದೊರೆಯಲಿದೆ. ಹಾಗೆಯೇ
ಇಂತಹ ಉತ್ತಮ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮೆಲ್ಲ ಸ್ನೇಹಾತರೊಂದಿಗೆ ಶೇರ್ ಮಾಡಿ, ಧನ್ಯವಾದಗಳು.

ಈ ಸ್ಕೂಟರ್‌ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!