ಆಂಡ್ರಾಯ್ಡ್ ಕರೆ ಸ್ಟ್ರೀನ್‌ನಲ್ಲಿನ ಬದಲಾವಣೆಗಳು:
ಕಾರಣ ಮತ್ತು ಪರಿಹಾರ
ಕೆಲವು ದಿನಗಳಿಂದ. ಅನೇಕ ಆಂಡ್ರಾಯ್ ಬಳಕೆದಾರರು ತಮ್ಮ ಫೋನ್ ಕರೆ ಸ್ಕ್ರೀನ್ ಬದಲಾವಣೆ ಗೊಂದಲಕ್ಕೊಳಗಾಗಿದ್ದಾರೆ. ಗೂಗಲ್ ಫೋನ್ ಅಪ್ಲಿಕೇಶನ್‌ನಲ್ಲಿ ‘ಮೆಟೀರಿಯಲ್ 3 ಎಕ್ಸ್‌ಪ್ರೆಸಿವ್’ ಎಂಬ ಹೊಸ ವಿನ್ಯಾಸ ಪರಿಚಯಿಸಿರುವುದೇ ಇದಕ್ಕೆ ಮುಖ್ಯ ಕಾರಣ. ಈ ಹೊಸ ಬಳಕೆದಾರರ ಅನುಭವವನ್ನು ಆಧುನಿಕ ಮತ್ತು ಸುಲಭಗೊಳಿಸಲು ಮಾಡಿದ್ದರೂ, ಕೆಲವು ಬಳಕೆದಾರರಿಗೆ ಹಳೆಯ ವಿನ್ಯಾಸ ಹೆಚ್ಚು ಇಷ್ಟವಾಗಿದೆ.
ಮುಖ್ಯ ಬದಲಾವಣೆಗಳು
ಕರೆ ಲಾಗ್‌ಗಳು ಮತ್ತು ಫೇವರಿಟ್‌ಗಳು (favourite):
ಈಗ, ಫೋನ್ ಸ್ಟ್ರೀನ್‌ನಲ್ಲಿಯೇ ಫೇವರಿಟ್ ನಂಬರ್ ಪ್ರತ್ಯೇಕವಾಗಿ ಪಟ್ಟಿ ಮಾಡಲಾಗಿದೆ. ಇದರಿಂದ ತುರ್ತು ಸಂದರ್ಭದಲ್ಲಿ ಬೇಗ ಕರೆ ಮಾಡಬಹುದು.
ಕೀಪ್ಯಾಡ್ (key pad):
ಕೀಪ್ಯಾಡ್ ಈಗ ರೌಂಡ್ ಆಕಾರದ ಬಟನ್‌ನಂತೆ ಕಾಣುತ್ತದೆ. ಮೊದಲು ಇದ್ದ ಫ್ಲೋಟಿಂಗ್ ಬಟನ್ ಬದಲಿಗೆ ಇದು ಎರಡನೇ ಟ್ಯಾಬ್‌ಗೆ ಸ್ಥಳಾಂತರಗೊಂಡಿದೆ.
Incoming ಸ್ಕಿನ್ ಕರೆ ಸ್ವೀಕರಿಸಲು ಅಥವಾ ತಿರಸ್ಕರಿಸಲು ಹಾರಿಜಾಂಟಲ್ ಸ್ಟೈಪ್( side swip) ಅಥವಾ ಸಿಂಗಲ್ ಟ್ಯಾಪ್ ಆಯ್ಕೆ ಮಾಡಿ. ಇದರಿಂದ ಆಕಸ್ಮಿಕವಾಗಿ ಕರೆ ಸ್ವೀಕರಿಸುವುದು ಅಥವಾ ಕರೆ ತಪ್ಪಿಸಬಹುದು.
ನ್ಯಾವಿಗೇಷನ್ ಬಟನ್: ಸರ್ಚ್ ಬಾರ್‌ನಿಂದಲೇ ನ್ಯಾವಿಗೇಷನ್ ಬಟನ್ ಅನ್ನು ತೆರೆಯಬಹುದು ಇದರಲ್ಲಿ ಕಾಂಟ್ಯಾಕ್ಟ್‌ಗಳು(contact ) ,ಸೆಟ್ಟಿಂಗ್‌ಗಳು (setting )ಮತ್ತು ಸಹಾಯದಂತಹ ಆಯ್ಕೆಗಳು ಇಲ್ಲಿದೆ.
ಪ್ರೊಫೈಲ್ ಚಿತ್ರಗಳು ಕರೆ ಮಾಡುವವರ ಪ್ರೊಫೈಲ್ ಚಿತ್ರಗಳು ಈಗ ವೃತ್ತಾ ಅಕಾರದಲ್ಲಿ(round) ಕಾಣುತ್ತವೆ.
ಹಳೆಯ ವಿನ್ಯಾಸಕ್ಕೆ ಹೇಗೆ ಮಾಡುವುದು ?
ಸದ್ಯಕ್ಕೆ incoming Call Gesture ಉತ್ತರಿಸುವ ಗೆಸ್ಟರ್ ಅನ್ನು ಮಾತ್ರ ಬದಲಾವಣೆ ಮಾಡಲು ಸಾಧ್ಯವಿದೆ.
ಹೇಗೆ ಮಾಡುವುದು:
1. ಫೋನ್ ಅಪ್ಲಿಕೇಶನ್‌ಗೆ ಹೋಗಿ.
2. ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ.
3. incoming Call Gesture .
4. ಸಿಂಗಲ್ ಟ್ಯಾಪ್ ಆಯ್ಕೆ ಮಾಡಿ.
ಆದರೆ, ಇತರ ಬದಲಾವಣೆಗಳು ಶಾಶ್ವತವಾಗಿರುತ್ತವೆ. ಗೂಗಲ್ ಭವಿಷ್ಯದಲ್ಲಿ ‘ಕ್ಲಾಸಿಕ್ ವ್ಯೂ’ ಆಯ್ಕೆ ನೀಡುವ ಸಾಧ್ಯತೆಯಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.