SBI Amrit Kalash: ಅಧಿಕ ಬಡ್ಡಿ ಸಿಗುವ SBI ಅಮೃತ್ ಕಳಶ್ ಎಫ್.ಡಿ ಯೋಜನೆಯ ದಿನಾಂಕ ವಿಸ್ತರಣೆ.

sbi amrit kalash scheme

ಅಮೃತ್ ಕಲಶದಲ್ಲಿ ಹೂಡಿಕೆ ಮಾಡಲು ಕೊನೆಯ ದಿನಾಂಕ ವಿಸ್ತರಣೆ :

ಫಿಕ್ಸೆಡ್ ಡೇಪೊಸಿಟ್ ಸ್ಕೀಮ್ ( Fixed Deposit Scheme ) ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಹಲವಾರು ಜನರು ಈ ಫಿಕ್ಸೆಡ್ ಡೇಪೋಸಿಟ್ ನಲ್ಲಿ ಹಣ ಹೂಡಿಕೆ(Invest) ಮಾಡಿದ್ದಾರೆ. SBI ನಲ್ಲಿಯೂ ಕೂಡ ಒಂದು ಉತ್ತಮವಾದ FD ಯೋಜನೆಯು ಇದೆ. ಅದೇ ಅಮೃತ್ ಕಳಸ್ ಯೋಜನೆ. ಯಾರೆಲ್ಲ ಈ ಬ್ಯಾಂಕಿನಲ್ಲಿ ಹೂಡಿಕೆಯನ್ನು ಮಾಡಲು ಕೊನೆಯ ದಿನಾಂಕ ಮುಗಿದು ಹೋಗಿದೆ ಎಂದು ನಿರಾಶರಾಗಿದ್ದೀರೋ ಅವರಿಗೊಂದು ಸಿಹಿ ಸುದ್ದಿ ಇದೆ. ಅದೇನಂದರೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆರಂಭಿಸಿದ ಅಮೃತ್ ಕಳಶ್ ವಿಶೇಷ ಎಫ್ ಡಿ ಸ್ಕೀಮ್ (SBI Amrit Kalash FD scheme) ನ ದಿನಾಂಕವನ್ನು ವಿಸ್ತರಿಸಿದ್ದಾರೆ. ಇದು ಇದರ ಬಗ್ಗೆ ಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

SBI ಗ್ರಾಹಕರು ಸೆಪ್ಟೆಂಬರ್ 30, 2024 ರವರೆಗೆ ಅಮೃತ್ ಕಲಾಶ್‌ನಲ್ಲಿ ಹೂಡಿಕೆ ಮಾಡಬಹುದು. ಬ್ಯಾಂಕ್ ವೆಬ್‌ಸೈಟ್ ಪ್ರಕಾರ, “400 ದಿನಗಳ” (ಅಮೃತ್ ಕಲಾಶ್) ನಿರ್ದಿಷ್ಟ ಟೆನರ್ ಸ್ಕೀಮ್ 7.10 % ಬಡ್ಡಿ ದರದಲ್ಲಿ 12- ಏಪ್ರಿಲ್- 2023. ಹಿರಿಯ ನಾಗರಿಕರು 7.60% ಬಡ್ಡಿದರಕ್ಕೆ ಅರ್ಹವಾಗಿದೆ. ಈ ಯೋಜನೆಯು 30-ಸೆಪ್ಟೆಂಬರ್-2024 ರವರೆಗೆ ಮಾನ್ಯವಾಗಿರುತ್ತದೆ.

ಅಮೃತ್ ಕಳಶ್ ಸ್ಕೀಮ್ನಲ್ಲಿ ಬಡ್ಡಿ ಹಣ ಪಾವತಿ, ಟಿಡಿಎಸ್ ಕಡಿತದ ವಿವರ ಹೀಗಿದೆ :

ಎಸ್ಬಿಐನ 400 ದಿನಗಳ ಅಮೃತ್ ಕಳಶ್ ಸ್ಕೀಮ್ನಲ್ಲಿ ಗ್ರಾಹಕರಿಗೆ ಸಿಗುವ ಬಡ್ಡಿ(Interest) ಹಣಕ್ಕೆ ಟಿಡಿಎಸ್(TDS) ಕಡಿತ ಮಾಡಲಾಗುತ್ತದೆ. ಇನ್ನು, ಬಡ್ಡಿ ಹಣವನ್ನು ಠೇವಣಿಯಲ್ಲೇ ಮುಂದುವರಿಸುವ ಬದಲು ಗ್ರಾಹಕ ಖಾತೆಗೆ ವರ್ಗಾಯಿಸಲಾಗುತ್ತದೆ. ಮಾಸಿಕವಾಗಿಯಾದರೂ ಬಡ್ಡಿಹಣ ಪಡೆಯಬಹುದು. ಅಥವಾ ಮೂರು ತಿಂಗಳಿಗೊಮ್ಮೆಯೋ ಅಥವಾ ಅರ್ಧ ವರ್ಷಕ್ಕೆ ಒಮ್ಮೆಯೋ ಬಡ್ಡಿಹಣವನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಇರುತ್ತದೆ. ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತವಾದರೂ ಆ ಹಣವನ್ನು ಐಟಿ ರಿಟರ್ನ್(IT Returns) ಸಲ್ಲಿಸುವ ವೇಳೆ ಡಿಡಕ್ಷನ್ ಕ್ಲೈಮ್ ( Deduction Claim ) ಮಾಡಬಹುದು.

ಈ ಸ್ಕೀಮ್ ನಲ್ಲಿ ನೀಡಲಾದ ಬಡ್ಡಿ ದರದ ವಿವರ ಹೀಗಿದೆ :

ಅಮೃತ್ ಕಳಶ್ ಸ್ಕೀಮ್ 400 ದಿನಗಳ ಠೇವಣಿ ಯೋಜನೆಯಾಗಿದೆ. ಹಾಗೆಯೇ ಇದರಲ್ಲಿ ಡೇಪೋಸಿಟ್ ಮಾಡಿದ ಪ್ರತಿಯೊಬ್ಬರಿಗೂ ಗರಿಷ್ಠ ಬಡ್ಡಿ ಸಿಗುತ್ತದೆ. ಈ ಸ್ಕೀಮ್ ನಲಿ ಸಾಮಾನ್ಯ ಎಸ್ ಬಿಐ ಗ್ರಾಹಕರಿಗೆ ಶೇ. 7.1 ಮತ್ತು ಹಿರಿಯ ನಾಗರಿಕರಿಗೆ ಶೇ. 7.6ರಷ್ಟು ಬಡ್ಡಿಯನ್ನು ನೀಡಿದೆ.

whatss

ಎಸ್ ಬಿಐ ಅಮೃತ್ ಕಳಶ್ ಎಫ್ ಡಿ ಸ್ಕೀಮ್ ಅಂದರೆ ಏನು ? ಅದು ಹೇಗೆ ಗ್ರಾಹಕರಿಗೆ ಉಪಯೋಗ ಆಗಲಿದೆ ?

ಈ ಸ್ಕೀಮ್ 400 ದಿನಗಳ ಅವಧಿಯದ್ದಾದ್ದರಿಂದ ಅಮೃತ್ ಕಳಶ್ ಎಂದು ಹೆಸರು ಇಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುರು ಮಾಡಿದ ಅಮೃತ್ ಕಳಶ್ ಎಫ್ ಡಿ ಸ್ಕೀಮ್ ಇತರ ನಿಶ್ಚಿತ ಠೇವಣಿಯಂತೆಯೇ ಇದ್ದು. ಉತ್ತಮ ಬಡ್ಡಿ ದರವನ್ನು ನೀಡುತ್ತದೆ.
ಆದರೆ ಈ ಸ್ಕೀಮ್ ನ ಅವಧಿಯಲ್ಲಿ ಮತ್ತು ಬಡ್ಡಿದರಲ್ಲಿ ಮಾತ್ರ ವ್ಯತ್ಯಾಸ ಇರುತ್ತದೆ.
ಇದರಲ್ಲಿ ಠೇವಣಿ ಅವಧಿ 400 ದಿನ ಇದೆ.
ಸಾಮಾನ್ಯ ಗ್ರಾಹಕರಿಗೆ ಈ ಅವಧಿ ಠೇವಣಿಗೆ ಶೇ. 7.1ರಷ್ಟು ಬಡ್ಡಿ ಸಿಗುತ್ತದೆ.
ಮತ್ತು ಹಿರಿಯ ನಾಗರಿಕರ ಠೇವಣಿಗೆ ಶೇ. 7.6ರಷ್ಟು ಬಡ್ಡಿ ಕೊಡಲಾಗುತ್ತದೆ.

ಎಸ್ ಬಿಐ ಅಮೃತ್ ಕಳಶ್ ಎಫ್ ಡಿ ಸ್ಕೀಮ್ ನಲ್ಲಿ ನೀಡಲಾದ ಇತರ ಲಾಭಗಳು ಈ ಕೆಳಗಿನಂತಿದೆ :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಈ 400 ದಿನಗಳ ವಿಶೇಷ ಎಫ್ ಡಿ ಸ್ಕೀಮ್ ಭಾರತೀಯರಿಗೆ ಮಾತ್ರವಲ್ಲ ಎನ್ ಆರ್ ಐ ಗ್ರಾಹಕರಿಗೂ ಲಭ್ಯ ಇದೆ.
ಎರಡು ಕೋಟಿ ರೂಗಿಂತ ಕಡಿಮೆ ಮೊತ್ತದ ಹಣವನ್ನು ಠೇವಣಿ ಇಡಬಹುದು.
ಈ ಠೇವಣಿಯಿಂದ ಬರುವ ಬಡ್ಡಿಯನ್ನು ತಿಂಗಳಿಗೊಮ್ಮೆ ಅಥವಾ ಮೂರು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಪಡೆಯುವ ಅವಕಾಶ ಇದೆ. ಈ ಬಡ್ಡಿ ಹಣವು ಗ್ರಾಹಕರ ಖಾತೆಗೆ ಠೇವಣಿ ಆಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!