ಈ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಅಮೆಜಾನ್‌ನಿಂದ ರೂ.50,000/- ವಿದ್ಯಾರ್ಥಿವೇತನ

amazon scholarship

ವಿದ್ಯಾರ್ಥಿಗಳಿಗೆ ‘ಗುಡ್ ನ್ಯೂಸ್’, ಎಂಜಿನಿಯರಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಮೆಜಾನ್ (Amazon Future Engineer Scholarship) ಕಡೆಯಿಂದ ರೂ. 50,000 ವರೆಗೂ ಸ್ಕಾಲರ್ಷಿಪ್(Scholarship) ನೀಡಲಾಗುತ್ತಿದೆ. ಈ ಸ್ಕಾಲರ್ಷಿಪ್ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಶಿಕ್ಷಣ-ಸಂಬಂಧಿತ ವೆಚ್ಚಗಳ ಹೊರೆಯನ್ನು ನಿವಾರಿಸಿಕೊಳ್ಳಬಹುದು. ಇದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

Amazon Future Engineer Scholarship:

ಅಮೆಜಾನ್(Amazon) ಮತ್ತು ಫೌಂಡೇಷನ್‌ ಫಾರ್ ಎಕ್ಸಲೆನ್ಸ್‌ ಎಜ್‌ಜಿಒ (Foundation for Excellence) ಭಾರತದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ‘ಅಮೆಜಾನ್‌ ಫ್ಯೂಚರ್ ಇಂಜಿನಿಯರ್ ಸ್ಕಾಲರ್‌ಶಿಪ್‌’ ಘೋಷಿಸಿವೆ.
ಈ ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್(Computer Science Engineering) ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಅನುಸರಿಸುತ್ತಿರುವ ಪ್ರಥಮ ವರ್ಷದ BE/ B- Tech ವಿದ್ಯಾರ್ಥಿಗಳಿಗೆ ಲಭ್ಯವಿದೆ. ಈ ಸ್ಕಾಲರ್ಷಿಪ್ ಮೂಲಕ ವಿದ್ಯಾರ್ಥಿಗಳು ವರ್ಷಕ್ಕೆ INR 50,000, ಮತ್ತು ಫಲನುಭುವಿಗಳು ಅವರ ಮೊದಲ ವರ್ಷದ ಅಧ್ಯಯನದಲ್ಲಿ ಲ್ಯಾಪ್‌ಟಾಪ್ (Laptop) ಅನ್ನು ಸಹ ಸ್ವೀಕರಿಸುತ್ತಾರೆ. ಇದಲ್ಲದೆ, ಕೌಶಲ್ಯ-ನಿರ್ಮಾಣ ಮತ್ತು ನೆಟ್‌ವರ್ಕಿಂಗ್ ಅವಕಾಶಗಳು ಹಾಗೂ ಅಮೆಜಾನ್ ಇಂಟರ್ನ್‌ಶಿಪ್‌(Internship) ನಲ್ಲಿ ಭಾಗವಹಿಸಲು ಅವಕಾಶವನ್ನು ಸಹ ಕಲ್ಪಿಸುತ್ತದೆ. 2023-2024 ವಿದ್ಯಾರ್ಥಿವೇತನ ಅರ್ಜಿಗಳು ಸಲ್ಲಿಸಲು ಡಿಸೆಂಬರ್ 31, 2023 ಕೊನೆಯ ದಿನಾಂಕ ಆಗಿರುತ್ತದೆ.

tel share transformed

ಈ ಸ್ಕಾಲರ್‌ಶಿಪ್‌ ಪಡೆಯಲು ಬೇಕಾಗಿರುವ ಅರ್ಹತೆಗಳು:

ಭಾರತೀಯ ನಾಗರಿಕರಾಗಿರಬೇಕು
2023-24ರಲ್ಲಿ BE ಅಥವಾ B-Tech ನಲ್ಲಿ ಪ್ರಥಮ ವರ್ಷದಲ್ಲಿ ಪ್ರವೇಶ ಪಡೆದಿರಬೇಕು.
ಇಂಜಿನಿಯರಿಂಗ್ ಇನ್ ಕಂಪ್ಯೂಟರ್ ಸೈನ್ಸ್‌ ಅಥವಾ ಸಂಬಂಧಿತ ವೃತ್ತಿಪರ ಕೋರ್ಸ್‌ ಅನ್ನು ಅಧ್ಯಯನ ಮಾಡುತ್ತಿರಬೇಕು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.3,00,000 ಮೀರಿರಬಾರದು.

AFE ಸ್ಕಾಲರ್‌ಶಿಪ್‌ ಪ್ರಯೋಜನಗಳು:

ಪ್ರತಿ ವರ್ಷ ರೂ.50,000 ನೀಡಲಾಗುತ್ತದೆ.

ಮೊದಲ ವರ್ಷ ಲ್ಯಾಪ್‌ಟಾಪ್‌ ನೀಡಲಾಗುತ್ತದೆ.

ಅಮೆಜಾನ್‌ ಇಂಟರ್ನ್‌ಶಿಪ್‌(Internship)ನಲ್ಲಿ ಭಾಗವಹಿಸಲು ಅವಕಾಶ

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಅಮೆಜಾನ್‌ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳ ವಿವರ :

ಆಧಾರ್ ಕಾರ್ಡ್‌
ವಿದ್ಯಾರ್ಥಿ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ
ದ್ವಿತೀಯ ಪಿಯುಸಿ ಅಂಕಪಟ್ಟಿ
BE/ B-Tech ಕೋರ್ಸ್‌ಗೆ ಪ್ರವೇಶ ಪಡೆದ ದಾಖಲೆ
ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌
ವಿದ್ಯಾರ್ಥಿನಿಯ ಆದಾಯ ಪ್ರಮಾಣ ಪತ್ರ
ಟ್ಯೂಷನ್‌ ಶುಲ್ಕ, ಹಾಸ್ಟೆಲ್‌ ಶುಲ್ಕ, ಇತರೆ ಶೈಕ್ಷಣಿಕ ವೆಚ್ಚಗಳ ರಶೀದಿ.
ಪೋಷಕರ ಅನುಮತಿ ಪ್ರಮಾಣ ಪತ್ರ

whatss

ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-12-2023

AFE ವಿದ್ಯಾರ್ಥಿವೇತನವು ಜೀವನವನ್ನು ಬದಲಾಯಿಸುವ ಅವಕಾಶಗಳನ್ನು ಒದಗಿಸುತ್ತದೆ, ವಿದ್ಯಾರ್ಥಿಗಳು ಇಂತಹ ಒಳ್ಳೆಯ ಅವಕಾಶವನ್ನು ತಪ್ಪಿಸದೆ ಈ ಕಾರ್ಯಕ್ರಮದ ಲಾಭಗಳನ್ನು ಪಡೆದುಕೊಂಡು ತಮ್ಮ ಶೈಕ್ಷಣಿಕ ಕನಸುಗಳನ್ನು ಪೂರೈಸಿಕೊಳ್ಳಬಹುದು. ಹಾಗೆಯೇ ಇಂತಹ ಉತ್ತಮ ಸ್ಕಾಲರ್‌ಶಿಪ್ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ಅರ್ಜಿ ಸಲ್ಲಿಸುವ ವಿಧಾನ 

https://www.buddy4study.com/page/amazon-future-engineer-scholarship

ಹಂತ 1:  ಕೆಳಗಿನ ‘Apply Now’ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 2: ನಿಮ್ಮ ನೋಂದಾಯಿತ ID ಯೊಂದಿಗೆ Buddy4Study ಗೆ ಲಾಗಿನ್ ಮಾಡಿ Buddy4Study ಗೆ ನೋಂದಾಯಿಸದಿದ್ದರೆ – ನಿಮ್ಮ ಇಮೇಲ್/ಮೊಬೈಲ್ ಸಂಖ್ಯೆ/Gmail ಖಾತೆಯೊಂದಿಗೆ Buddy4Study ನಲ್ಲಿ ನೋಂದಾಯಿಸಿ.

ಹಂತ 3: ಈಗ ನಿಮ್ಮನ್ನು ‘ಸ್ಕಾಲರ್‌ಶಿಪ್ ಪ್ರೋಗ್ರಾಂ’ ಅರ್ಜಿ ನಮೂನೆಯ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

ಹಂತ 4: ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ‘Start Application’ ಬಟನ್ ಮೇಲೆ ಕ್ಲಿಕ್ ಮಾಡಿ.

ಹಂತ 5: ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
ಸಂಬಂಧಿತ ದಾಖಲೆಗಳನ್ನು ಅಪ್ಲೋಡ್ ಮಾಡಿ.

ಹಂತ 6: ‘ನಿಯಮಗಳು ಮತ್ತು ಷರತ್ತುಗಳನ್ನು’ ಒಪ್ಪಿಕೊಳ್ಳಿ ಮತ್ತು ‘ಪೂರ್ವವೀಕ್ಷಣೆ’ ಮೇಲೆ ಕ್ಲಿಕ್ ಮಾಡಿ.

ಹಂತ 7: ಅರ್ಜಿದಾರರು ಭರ್ತಿ ಮಾಡಿದ ಎಲ್ಲಾ ವಿವರಗಳನ್ನು ಪೂರ್ವವೀಕ್ಷಣೆ ಪರದೆಯಲ್ಲಿ ಸರಿಯಾಗಿ ತೋರಿಸುತ್ತಿದ್ದರೆ, ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ‘Submit’ ಬಟನ್ ಕ್ಲಿಕ್ ಮಾಡಿ.

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

One thought on “ಈ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಅಮೆಜಾನ್‌ನಿಂದ ರೂ.50,000/- ವಿದ್ಯಾರ್ಥಿವೇತನ

Leave a Reply

Your email address will not be published. Required fields are marked *