WhatsApp Image 2025 08 18 at 3.44.43 PM

ಧರ್ಮಸ್ಥಳ ಕೇಸ್ ಗೆ ಇದೀಗ ದೊಡ್ಡ ಟ್ವಿಸ್ಟ್ -ಮೂವರ ಗುಂಪು ನನಗೆ ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು – ಮಾಸ್ಕ್‌ ಮ್ಯಾನ್ ಸ್ಫೋಟಕ ಮಾಹಿತಿ

Categories:
WhatsApp Group Telegram Group

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಹೆಣ ಹೂತಿದ್ದ ಆರೋಪ ಮಾಡಿದ್ದ ಮುಸುಕುಧಾರಿ ಕೇಸ್ ಗೆ ಇದೀಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮುಸುಕುಧಾರಿ ಎಸ್‌ಐಟಿ ಮುಂದೆ ನೀಡಿರುವ ಮಾಹಿತಿ ಪ್ರಕಾರ ಇದೀಗ ಮತ್ತೆ ಕುತೂಹಲ ಕೆರಳಿಸಿದೆ.

ಕಾನೂನು ಪ್ರಕಾರವೇ ಹೆಣ ಹೂತಿದ್ದರೂ, ಕಾನೂನು ಉಲ್ಲಂಘಿಸಿ ಹೂತಿದ್ದಾಗಿ ಹೇಳುವಂತೆ ಒಂದು ಗುಂಪು ಬಂದು ಹೀಗೆ ಹೇಳಿ ಫೋಲೀಸರಿಗೆ ಶರಣಾಗುವಂತೆ ಹೇಳಿದ್ದರು ನಾನು 2014 ರಲ್ಲಿ ತಮಿಳಿನಾಡಿನಲ್ಲೆ ವಾಸವಾಗಿದ್ದೆ ,, 2023ರಲ್ಲಿ ತಮಿಳುನಾಡಿನಿಂದ ಕರೆದುಕೊಂಡು ಬಂದಿದ್ದ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಸುಜಾತ ಭಟ್ ದೂರು ನೀಡುವ ಮುನ್ನ ಯಾವುದೇ ಹೇಳಿಕೆಯಾಗಲೀ, ಏನೂ ಹೇಳಬಾರದು ಎಂದು ಇದ್ದೆ . ಆದರೇ ಸುಜಾತ ಭಟ್ ದೂರು ಕೊಟ್ಟ ಬಳಿಕ ಬಾ ಎಂದು ಮೂವರು ನನಗೆ  ಹೇಳಿದ್ದರು. ಸುಜಾತಾ ಭಟ್ ದೂರು ನೀಡುವ ತನಕ ನನಗೆ ಭಯ ಆಗ್ತಿತ್ತು. ಹೀಗಾಗಿ ನಾನು ಬಂದೆ. ಮೂವರು ಪೊಲೀಸರ ಮುಂದೆ ಏನು ಹೇಳಬೇಕು ಎಂಬ ಕುರಿತಂತೆ ನಂಗೆ ಮೊದಲೇ ಹೇಳಿ ಕೊಟ್ಟು ರೆಡಿ ಮಾಡಿದ್ದರು.  ಕೋರ್ಟ್ ನಲ್ಲಿಯೂ ಕೂಡಾ ಏನು ಹೇಳಬೇಕು ಎಂಬ ಕುರಿತಂತೆಯೂ ಹೇಳಿದ್ದರು. ಆ ಗುಂಪು ಬುರುಡೆ ಕೊಟ್ಟು ಪೊಲೀಸರಿಗೆ ಶರಣಾಗುವಂತೆ ಹೇಳಿತ್ತು ಎಂದು ಮುಸುಕುಧಾರಿ ಇದೀಗ  ಎಸ್ ಐಟಿ ಅಧಿಕಾರಿಗಳ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ

ಬುರುಡೆ ತಂದು ಮೂವರ ಗುಂಪು ಹೇಳಿದಂತೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಈ ವಿಡಿಯೋವನ್ನು ಎಸ್ ಐಟಿ ಅಧಿಕಾರಿಗಳು ದಾಖಲೆ ಮಾಡಿಕೊಂಡಿದ್ದಾರೆ. ನಾನು ಕಾನೂನು ಬದ್ಧವಾಗಿಯೇ ಹೆಣಗಳನ್ನು ಹೂತಿದ್ದೆ ಎಂದೆ. ಆದ್ರೆ,
ಮೂವರ ಗುಂಪು ಹೆಣವನ್ನು ಹೂತಿರುವುದಾಗಿ ಹೇಳು ಎಂದು ನನ್ನ ತಲೆಗೆ ತುಂಬಿದ್ದರು. ಮಹಿಳೆಯ ದೂರಿನ ನಂತರ ತಪ್ಪು ಹೇಳಿಕೆ ನೀಡುವಂತೆ ಹೇಳಿದ್ದರು. ಪೊಲೀಸರ ಮುಂದೆ ಏನು ಹೇಳಬೇಕೆಂಬ ಕುರಿತಂತೆಯೂ ನನಗೆ ಹೇಳಿದ್ದರು
ಎಂದು ತಿಳಿಸಿದ್ದಾನೆ.

2014ರ ನಂತರ ನಾನು ತಮಿಳುನಾಡಿನಲ್ಲಿ ನಾನು ವಾಸವಾಗಿದ್ದೆ. ಆದ್ರೆ, 2023ರಲ್ಲಿ ನನ್ನನ್ನು ಗುಂಪೊಂದು ಸಂಪರ್ಕಿಸಿತು. ನಾನು ಲೀಗಲ್ ಆಗಿಯೇ ಶವಗಳನ್ನು ಹೂತಿದ್ದಾಗಿಯೇ ಹಲವುಬಾರಿ ಅವರ ಹತ್ತಿರ ಹೇಳಿದರೂ . ಅವರು ಕೇಳಲಿಲ್ಲ. ಮಹಿಳೆ ದೂರು ನೀಡುತ್ತಾರೆ. ಆಮೇಲೆ ನೀನು ಬಾ ಎಂದರು. ಅದೇ ರೀತಿಯಲ್ಲಿ ನಾನು ಬಂದೆ ಎಂಬ ಮಾಹಿತಿ ನೀಡಿದ್ದಾನೆ. ಈ ಮೂಲಕ ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತು ಹಾಕಿರುವ ಕೇಸ್ ಮತ್ತೊಂದು ಚರ್ಚೆಗೆ ಹುಟ್ಟು ಹಾಕಿದೆ.

ಇದೀಗ ಗೃಹ ಸಚಿವರ ಭೇಟಿ ನಂತರ ಮುಂದುವರಿಕೆನಾ ಅಂತ್ಯನಾ ಅನ್ನೋದು ಎಸ್‌ ಐ ಟಿ ನಿರ್ಧಾರ ಮಾಡುತ್ತೆ ಸದ್ಯಕ್ಕೆ ಎಫ್‌ ಎಸ್‌ ಲ್‌ ವರದಿ ಬರೋತನ್ಕ ಶೋಧ ಕಾರ್ಯಕ್ಕೆ ಬ್ರೇಕ್‌ ಅಂತಾ ಇದೀಗ ಗೃಹ ಸಚಿವರಾದ ಪರಮೇಶ್ವರ್‌ ಸಧನದಲ್ಲಿ ಹೇಳಿದ್ದಾರೆ

ಈ ವಿಚಾರಣೆ ಏನಾಗುತ್ತೆ ಅಂತಾ ಕಾದು ನೋಡಬೇಕಾಗಿದೆ ಮುಂದಿನ ಅಪ್ಡೇಟ್ಸ್‌ ಗಳಿಗೆ ನಮ್ಮ ಫೇಜ್‌ ಫಾಲೋ ಮಾಡಿ

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories