ಕಂದಾಯ ಇಲಾಖೆಯಿಂದ ರಾಜ್ಯದ ಜನಸಾಮಾನ್ಯರಿಗೆ ಸಿಗುವ ಎಲ್ಲಾ ಸೇವೆಗಳ ಸಂಪೂರ್ಣ ಪಟ್ಟಿ | Revenue Department

WhatsApp Image 2025 11 27 at 12.21.49 PM

WhatsApp Group Telegram Group

ಬೆಂಗಳೂರು : ಕರ್ನಾಟಕದ ಜನತೆಗೆ ಅತ್ಯಂತ ಮಹತ್ವದ ಮಾಹಿತಿ ಇಲ್ಲಿದೆ. ತಾಲೂಕು ಕಚೇರಿಗಳಲ್ಲಿರುವ ಕಂದಾಯ ಇಲಾಖೆ (ತಹಸೀಲ್ದಾರ್ ಕಚೇರಿ) ಒಂದೇ ಸೂರಿನಡಿ ಜಾತಿ, ಆದಾಯ, ನಿರುದ್ಯೋಗ, ಜನನ-ಮರಣ ಪ್ರಮಾಣಪತ್ರಗಳಿಂದ ಹಿಡಿದು ಭೂಮಿ ಸಂಬಂಧಿತ ದಾಖಲೆಗಳವರೆಗೆ 35ಕ್ಕೂ ಹೆಚ್ಚು ಪ್ರಮುಖ ಸೇವೆಗಳನ್ನು ಒದಗಿಸುತ್ತಿದೆ. ಈ ಎಲ್ಲಾ ಸೇವೆಗಳನ್ನು ನಾಡಕಛೇರಿ, ಅಟಲ್ ಜಿ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳ ಮೂಲಕವೂ ಪಡೆಯಬಹುದು. ಯಾವೆಲ್ಲ ಸೇವೆಗಳು ಲಭ್ಯವಿದೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..

ಕಂದಾಯ ಇಲಾಖೆಯಿಂದ ಲಭ್ಯವಿರುವ ಪ್ರಮುಖ ಸೇವೆಗಳು:

  1. ಹಕ್ಕುಗಳ ಪ್ರಮಾಣಪತ್ರ (RTC)
  2. ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ
  3. ಎಲ್ಲಾ ಬಗೆಯ ಜಾತಿ ಪ್ರಮಾಣಪತ್ರಗಳು
  4. ಎಲ್ಲಾ ಬಗೆಯ ಆದಾಯ ಪ್ರಮಾಣಪತ್ರಗಳು
  5. ಜಾತಿ ಪ್ರಮಾಣಪತ್ರದ ಪರಿಶೀಲನೆ ಮತ್ತು ಸಿಂಧುತ್ವ
  6. ವಿವಾದರಹಿತ ಪ್ರಕರಣಗಳಲ್ಲಿ 12(2) ನೋಟಿಸ್ ನಂತರ ಭೂ ಸ್ವಾಧೀನಕ್ಕೆ ಪರಿಹಾರ ವಿತರಣೆ
  7. ಜನನ ಪ್ರಮಾಣಪತ್ರ
  8. ಮರಣ ಪ್ರಮಾಣಪತ್ರ
  9. ಜನಸಂಖ್ಯಾ ಪ್ರಮಾಣಪತ್ರ
  10. ವಸತಿ ದೃಢೀಕರಣ ಪತ್ರ
  11. ಟೆನಾನ್ಸಿ ಇಲ್ಲದಿರುವುದರ ಪ್ರಮಾಣಪತ್ರ
  12. ಜೀವಂತಿಕೆ ಪ್ರಮಾಣಪತ್ರ
  13. ರೈತ ಕುಟುಂಬ ಸದಸ್ಯರ ಪ್ರಮಾಣಪತ್ರ
  14. ಮರುವಿವಾಹವಾಗಿಲ್ಲದ ಪ್ರಮಾಣಪತ್ರ
  15. ಭೂರಹಿತ ರೈತ ಪ್ರಮಾಣಪತ್ರ
  16. ಮೃತಪಟ್ಟ ವ್ಯಕ್ತಿಯ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ
  17. ನಿರುದ್ಯೋಗ ಪ್ರಮಾಣಪತ್ರ
  18. ಅನುಕಂಪಾ ನೇಮಕಾತಿಗಾಗಿ ಸರ್ಕಾರಿ ಉದ್ಯೋಗದಲ್ಲಿ ಇಲ್ಲದಿರುವುದರ ಪ್ರಮಾಣಪತ್ರ
  19. ರೈತ ದೃಢೀಕರಣ ಪತ್ರ
  20. ಸಣ್ಣ ಮತ್ತು ಅತಿ ಸಣ್ಣ ರೈತರ ದೃಢೀಕರಣ ಪತ್ರ
  21. ಕೃಷಿ ಕಾರ್ಮಿಕ ದೃಢೀಕರಣ ಪತ್ರ
  22. ಕೆನೆ ಪದರಕ್ಕೆ ಸೇರದಿರುವುದರ ಪ್ರಮಾಣಪತ್ರ
  23. ವಾಸಸ್ಥಳ ದೃಢೀಕರಣ ಪತ್ರ
  24. ಭೂ ಪರಿವರ್ತನೆ ಆದೇಶದ ಉತ (Conversion Order)
  25. ಖಾತಾ ಬದಲಾವಣೆ (ವಿವಾದರಹಿತ ಮ್ಯುಟೇಷನ್)
  26. ಯೋಜನಾ ನಿರಾಶ್ರಿತರ ದೃಢೀಕರಣ ಪತ್ರ
  27. ಬೆಳೆ ನಷ್ಟಕ್ಕೆ ಪ್ರಕೃತಿ ವಿಕೋಪ ಪರಿಹಾರ ಅನುಮೋದನೆ
  28. ಪ್ರಕೃತಿ ವಿಕೋಪದಿಂದ ಮನುಷ್ಯ ಪ್ರಾಣಹಾನಿಗೆ ಪರಿಹಾರ ಅನುಮೋದನೆ
  29. ಮನೆಗೆ ಹಾನಿಯಾದಾಗ ಪ್ರಕೃತಿ ವಿಕೋಪ ಪರಿಹಾರ ಅನುಮೋದನೆ
  30. ದನ-ಕುರಿ ಸಾವಿಗೆ ಪ್ರಕೃತಿ ವಿಕೋಪ ಪರಿಹಾರ ಅನುಮೋದನೆ
  31. ತೆರಿಗೆ ಪ್ರಮಾಣಪತ್ರ (Tax Paid Certificate)
  32. ಪಹಣಿ (RTC) ತಿದ್ದುಪಡಿ
  33. ಸರ್ವೆ ದಾಖಲೆಗಳ ನಕಲು – ಆಕಾರ್ ಬಂದ್, ILR, ಟಿಪ್ಪಣ್, ಅಟ್ಲಾಸ್, ಗ್ರಾಮ ನಕ್ಷೆ, ಖರಾಬ್ ಉತಾರ್
  34. ಪಿಟೀಷನ್‌ಕರಣ ನಿಯಮದಡಿ ಮಂಜೂರಾದ ಭೂಮಿಗೆ ಪರಭಾರೆ ಇಲ್ಲದ ನಿರಾಕ್ಷೇಪಣಾ ಪ್ರಮಾಣಪತ್ರ (PCL Certificate)

ಈ ಎಲ್ಲಾ ಸೇವೆಗಳನ್ನು ಸಾರ್ವಜನಿಕರು ತಮ್ಮ ತಾಲೂಕು ಕಂದಾಯ ಇಲಾಖೆ, ನಾಡಕಛೇರಿ ಕೇಂದ್ರಗಳು ಅಥವಾ ಆನ್‌ಲೈನ್ ಮೂಲಕವೇ ಸುಲಭವಾಗಿ ಪಡೆಯಬಹುದು. ದಾಖಲೆಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ದಾಖಲೆಗಳ ಪಟ್ಟಿ ಮತ್ತು ಶುಲ್ಕದ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್ ಅಥವಾ ಸಮೀಪದ ಕಂದಾಯ ಕಚೇರಿಗೆ ಭೇಟಿ ನೀಡಿ.

WhatsApp Image 2025 11 27 at 11.42.39 AM
WhatsApp Image 2025 11 27 at 11.42.39 AM 1
WhatsApp Image 2025 11 27 at 11.42.39 AM 2
WhatsApp Image 2025 09 05 at 11.51.16 AM 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *