PMEGP Scheme: ಸ್ವಂತ ಬಿಸಿನೆಸ್ ಪ್ರಾರಂಭಿಸಲು ಕೇಂದ್ರದ ಈ ಯೋಜನೆಯಲ್ಲಿ ಸಿಗುತ್ತೆ 35% ಸಬ್ಸಿಡಿ.! ಅಪ್ಲೈ ಮಾಡಿ

pmegp

WhatsApp Group Telegram Group

ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ (PMEGP) ಅಡಿಯಲ್ಲಿ ನಿಮ್ಮ ಸ್ವಂತ ಉದ್ಯಮ/ವ್ಯವಸಾಯವನ್ನು ಪ್ರಾರಂಭಿಸಲು ಬಯಸುವವರಿಗೆ ಒಟ್ಟು ಸಾಲದ ಮೇಲೆ 35% ರಷ್ಟು ಸಬ್ಸಿಡಿ (ಆರ್ಥಿಕ ಸಹಾಯ) ಪಡೆಯುವ ಅವಕಾಶವಿದೆ. ಈ ಲೇಖನದಲ್ಲಿ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಈ ಸಮಯದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ವಂತ ಉದ್ಯಮ ಪ್ರಾರಂಭಿಸಲು ಬಯಸುವ ಅರ್ಹರಿಗೆ ಅನೇಕ ಸಬ್ಸಿಡಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇಲ್ಲಿ ನಾವು ಪ್ರಧಾನಿ ಮಂತ್ರಿ ರೋಜಗಾರ್ ಸೃಷ್ಟಿ ಯೋಜನೆ (PMEGP) ಬಗ್ಗೆ ಮುಖ್ಯ ಮಾಹಿತಿಯನ್ನು ನೀಡಿದ್ದೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಯಾವ ಉದ್ಯಮಗಳಿಗೆ ಸಬ್ಸಿಡಿ ಲಭ್ಯ?

ಪಿಎಂಇಜಿಪಿ ಯೋಜನೆಯಡಿ ಕೆಲವು ಉದ್ಯಮಗಳನ್ನು ಮಾತ್ರ ಸಬ್ಸಿಡಿ ನೀಡಲಾಗುತ್ತದೆ. ಕೆಳಗಿನ ಕೆಲವು ಉದ್ಯಮಗಳನ್ನು ಇಲ್ಲಿ ಸೇರಿಸಲಾಗಿದೆ:

  • ಸಿದ್ಧ ಉಡುಪು ತಯಾರಿಕೆ/ಟೈಲರಿಂಗ್
  • ಸೌಂದರ್ಯ ಕೇಂದ್ರ (ಬ್ಯೂಟಿ ಪಾರ್ಲರ್)
  • ಕಾಗದದ ಪ್ಲೇಟ್ ತಯಾರಿಕೆ
  • ವಿದ್ಯುತ್ ಸೇವಾ ಕೇಂದ್ರ
  • ಸೈಬರ್ ಕೇಂದ್ರ
  • ದ್ವಿಚಕ್ರ ವಾಹನ ಸೇವಾ ಕೇಂದ್ರ
  • ಧ್ವನಿ ಮತ್ತು ಬೆಳಕಿನ ಸಲಕರಣೆ ಸೇವಾ ಕೇಂದ್ರ
  • ಶಾಮಿಯಾನಾ ಸೇವಾ ಕೇಂದ್ರ
  • ಮರಗೆಲಸ
  • ಆಹಾರ ಉತ್ಪನ್ನ ತಯಾರಿಕೆ
  • ಅಡಿಕೆ ಹಾಳೆ ತಟ್ಟೆ ತಯಾರಿಕೆ
  • ಕೋಳಿ ಸಾಕಣೆ
  • ಹೈನುಗಾರಿಕೆ
  • ಹೋಟೆಲ್/ಕ್ಯಾಂಟೀನ್ (ಶಾಕಾಹಾರಿ)
  • ಅಕ್ಕಿ ಹಿಟ್ಟಿನ ಗಿರಣಿ
  • ಎಣ್ಣೆ ಗಿರಣಿ
  • ಬೇಕರಿ ವಸ್ತು ತಯಾರಿಕೆ

ಯಾರು ಅರ್ಜಿ ಸಲ್ಲಿಸಬಹುದು?

  • ಅರ್ಜಿದಾರರು ಭಾರತದ ನಿವಾಸಿಯಾಗಿರಬೇಕು.
  • ಎಲ್ಲಾ ವರ್ಗ/ಜಾತಿಯ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
  • ಈ ಯೋಜನೆಯಡಿ ಈಗಾಗಲೇ ಒಮ್ಮೆ ಸಹಾಯಧನ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
  • ಗ್ರಾಮೀಣ ಮತ್ತು ನಗರ ಪ್ರದೇಶದ ವಾಸಿಗಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿಧಾನಗಳಲ್ಲಿ ಒಂದರ ಮೂಲಕ ಅರ್ಜಿ ಸಲ್ಲಿಸಬಹುದು:

  1. ನೇರವಾಗಿ ನಿಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕಾ ಕೇಂದ್ರ (DIC) ಅನ್ನು ಭೇಟಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
  2. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಒನ್ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು.
  3. ಆನ್ಲೈನ್ ಮೂಲಕ ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು.  “PMEGP Loan Apply Online

ಅಗತ್ಯ ದಾಖಲೆಗಳು

ಆನ್ಲೈನ್ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

  • ಅರ್ಜಿದಾರರ ಆಧಾರ್ ಕಾರ್ಡ್
  • ಜಾತಿ ಪ್ರಮಾಣಪತ್ರ
  • ನಿವಾಸ ಪ್ರಮಾಣಪತ್ರ (ಸ್ಥಳೀಯ ಪಂಚಾಯತ್ ಅಥವಾ ಮುನ್ಸಿಪಾಲಿಟಿಯಿಂದ)
  • ಪಾನ್ ಕಾರ್ಡ್
  • ಪಾಸ್ಪೋರ್ಟ್ ಗಾತ್ರದ ಫೋಟೋ
  • ಬ್ಯಾಂಕ್ ಪಾಸ್ಬುಕ್
  • ಯೋಜನೆಯ ವರದಿ (ಪ್ರಾಜೆಕ್ಟ್ ರಿಪೋರ್ಟ್)

ಅರ್ಜಿ ಸಲ್ಲಿಸುವ ಮುನ್ನ ಕ್ರಮ

ನೇರವಾಗಿ ಅರ್ಜಿ ಸಲ್ಲಿಸುವ ಮುನ್ನ, ನಿಮ್ಮ ಬ್ಯಾಂಕ್ ಶಾಖೆಯನ್ನು ಭೇಟಿ ಮಾಡಿ ಯೋಜನೆಗೆ ಅಗತ್ಯವಾದ ಉಪಕರಣಗಳು, ಒಟ್ಟು ವೆಚ್ಚ ಮತ್ತು ಸಾಲದ ವಿವರ ತಿಳಿಯುವುದು ಒಳ್ಳೆಯದು. ನಿಮ್ಮ CIBIL ಸ್ಕೋರ್ 700 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಸಾಲ ಪಡೆಯಲು ಸುಲಭವಾಗುತ್ತದೆ.

ಸಬ್ಸಿಡಿ ಪಡೆಯುವ ವಿಧಾನ

ಅರ್ಜಿ ಸಲ್ಲಿಸಿದ ನಂತರ, ಜಿಲ್ಲಾ ಕೈಗಾರಿಕಾ ಕೇಂದ್ರವು ದಾಖಲೆಗಳನ್ನು ಪರಿಶೀಲಿಸಿ ನೀವು ತಿಳಿಸಿದ ಬ್ಯಾಂಕ್ ಶಾಖೆಗೆ ಅರ್ಜಿಯನ್ನು ಕಳುಹಿಸುತ್ತದೆ. ಬ್ಯಾಂಕ್ ಶಾಖೆಯು ನಿಮ್ಮ ಯೋಜನೆಯ ಸ್ಥಳವನ್ನು ಪರಿಶೀಲಿಸಿ, ಸಾಲವನ್ನು ಮಂಜೂರು ಮಾಡಿ, ಅಗತ್ಯ ಉಪಕರಣಗಳಿಗೆ ಹಣವನ್ನು ನೇರವಾಗಿ ಸಂಬಂಧಿತ ಕಂಪನಿಗೆ ವರ್ಗಾಯಿಸುತ್ತದೆ.

ಸಾಲ ಮಂಜೂರಾದ ನಂತರ, ಕೇಂದ್ರ ಸರ್ಕಾರದ 35% ಸಬ್ಸಿಡಿ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಆದರೆ ಈ ಹಣವನ್ನು ನೇರವಾಗಿ ನಿಮಗೆ ನೀಡದೆ, 3 ವರ್ಷಗಳ ಕಾಲ ಫಿಕ್ಸ್ಡ್ ಡಿಪಾಸಿಟ್ (FD) ಆಗಿ ಇಡಲಾಗುತ್ತದೆ. ನೀವು ಸಾಲವನ್ನು ಯಶಸ್ವಿಯಾಗಿ ಮರುಪಾವತಿ ಮಾಡಿದ ನಂತರ, 3 ವರ್ಷಗಳ ನಂತರ ಈ FD ಹಣವನ್ನು ನಿಮ್ಮ ಖಾತೆಗೆ జಮಾ ಮಾಡಲಾಗುತ್ತದೆ. ಸಾಲ ಮರುಪಾವತಿ ಪೂರ್ಣಗೊಂಡರೆ, ಈ ಹಣವನ್ನು ನೇರವಾಗಿ ನಿಮ್ಮ ಉಳಿತಾಯ ಖಾತೆಗೆ ವರ್ಗಾಯಿಸಲಾಗುತ್ತದೆ.

ಮೊಬೈಲ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ

  1. ಮೊದಲ ಹಂತ: “PMEGP e-Application” ಎಂದು ಗೂಗಲ್ ನಲ್ಲಿ ಹುಡುಕಿ ಅಥವಾ ನೇರವಾಗಿ PMEGP ಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
  2. ಎರಡನೇ ಹಂತ: ಹೋಮ್ ಪೇಜ್ ನಲ್ಲಿ “Application For New Unit” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  3. ಮೂರನೇ ಹಂತ: ತೆರೆದ ಅರ್ಜಿ ಫಾರಮ್ ನಲ್ಲಿ ಎಲ್ಲಾ ಅಗತ್ಯ ವಿವರಗಳನ್ನು ನಿಖರವಾಗಿ ನಮೂದಿಸಿ ಮತ್ತು ಕೊನೆಯಲ್ಲಿ “Submit” ಬಟನ್ ಮೇಲೆ ಕ್ಲಿಕ್ ಮಾಡಿ.
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *