Picsart 25 11 26 22 49 35 328 1 scaled

ಅರೋಗ್ಯ ಇಲಾಖೆಯಿಂದ ಪುರುಷರಿಗೆ ಮಕ್ಕಳಾಗದಂತ ಆಪರೇಷನ್ ಯೋಜನೆಗೆ ನಿರ್ಧಾರ.

Categories:
WhatsApp Group Telegram Group

ಜನಸಂಖ್ಯೆ ಸಮತೋಲನ, ಕುಟುಂಬಗಳ ಆರ್ಥಿಕ ಸ್ಥಿರತೆ ಮತ್ತು ಮಹಿಳೆಯರ ಆರೋಗ್ಯ ಈ ಮೂರು ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಗತ್ತಿನಾದ್ಯಂತ ಸರ್ಕಾರಗಳು ಕುಟುಂಬ ಯೋಜನೆ ನೀತಿಗಳನ್ನು ಜಾರಿಗೊಳಿಸುತ್ತಿವೆ. ಸಾಮಾನ್ಯವಾಗಿ ಗರ್ಭನಿರೋಧದ ಹೊಣೆ ಮಹಿಳೆಯರ ಮೇಲಿರುವ ಸಂದರ್ಭಗಳಲ್ಲಿ, ಪುರುಷರ ಪಾಲ್ಗೊಳ್ಳುವಿಕೆ ಕಡಿಮೆ ಇರುವುದೇ ವಾಸ್ತವ. ಈ ಹಿನ್ನೆಲೆ, ಪುರುಷರ ಮೂಲಕ ಶಾಶ್ವತ ಗರ್ಭನಿರೋಧವನ್ನು ಉತ್ತೇಜಿಸಲು ಕರ್ನಾಟಕ ಆರೋಗ್ಯ ಇಲಾಖೆ ಇದೀಗ ಪುರುಷ ಸಂತಾನ ನಿರೋಧ ಶಸ್ತ್ರಚಿಕಿತ್ಸೆ (NSV – No-Scalpel Vasectomy) ಅಭಿಯಾನಕ್ಕೆ ವೇಗ ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಈ ಅಭಿಯಾನದ ಭಾಗವಾಗಿ ಸೋಷಿಯಲ್‌ ಮೀಡಿಯಾ ಮೂಲಕ ಜಾಗೃತಿ ಮೂಡಿಸಲಾಗುತ್ತಿದ್ದು, ಜನಸಾಮಾನ್ಯರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಕೆಲವರು ಇದನ್ನು ಆರೋಗ್ಯ ಹಾಗೂ ಕುಟುಂಬದ ಭವಿಷ್ಯಕ್ಕಾಗಿ ಸ್ವಾಗತಿಸಿದರೆ, ಇನ್ನೂ ಕೆಲವರು ರಾಜ್ಯದ ಜನಸಂಖ್ಯೆ ಕುಸಿತದ ಭೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

NSV ಎಂದರೇನು?:

ಸಾಂಪ್ರದಾಯಿಕ ವ್ಯಾಸೆಕ್ಟಮಿ ವಿಧಾನಕ್ಕೆ ಹೋಲಿಸಿದರೆ NSV ಹೊಲಿಗೆ ರಹಿತ, ಕತ್ತರಿಸುವ ಅಗತ್ಯವಿಲ್ಲ,
ರಕ್ತಸ್ರಾವ ಮತ್ತು ಸೋಂಕಿನ ಅಪಾಯ ಕಡಿಮೆ,
ನೋವು ಕಡಿಮೆ,
ಶೀಘ್ರ ಚೇತರಿಕೆ ಆದ್ದರಿಂದ ಇದು ಶಾಶ್ವತ ಗರ್ಭನಿರೋಧಕ್ಕೆ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ವಿಧಾನ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಅಭಿಯಾನದ ಘೋಷಣೆ:
ಕುಟುಂಬ ಯೋಜನೆ ಅನುಸರಿಸುವ ಪುರುಷರು  ಸಂತೋಷದ ಕುಟುಂಬಕ್ಕೆ ಅಡಿಪಾಯ.

ಕರ್ನಾಟಕದ ಒಟ್ಟು ಫಲವತ್ತತೆ ಪ್ರಮಾಣ (TFR) ಈಗಾಗಲೇ 2.1 ಕ್ಕಿಂತ ಕಡಿಮೆ. ಇದು ಜನಸಂಖ್ಯೆ ಸ್ಥಿರವಾಗಿರಲು ಬೇಕಾದ ಮಟ್ಟಕ್ಕಿಂತ ಕಡಿಮೆ ಇರುವುದನ್ನು ಸೂಚಿಸುತ್ತದೆ.

ಇದರಿಂದ ಕೆಲವು ಕನ್ನಡಿಗರು ಪ್ರಶ್ನೆ ಮಾಡುತ್ತಿದ್ದಾರೆ:

ಜನಸಂಖ್ಯೆ ಇಳಿಯುತ್ತಿರುವ ನಮ್ಮ ಪ್ರದೇಶದಲ್ಲಿ ಯಾಕೆ ಇಂತಹ ಅಭಿಯಾನ?
ಮೊದಲು ಜನಸಂಖ್ಯೆ ಹೆಚ್ಚಿರುವ ಉತ್ತರ ಭಾರತದಲ್ಲಿ ಜಾರಿ ಮಾಡಿ!
ಇನ್ನೂ ಕೆಲವರ ಅಭಿಪ್ರಾಯ:
ಕರ್ನಾಟಕದ ಸಮಸ್ಯೆ ಜನಸಂಖ್ಯೆ ಹೆಚ್ಚಳವಲ್ಲ ಈಗಿರುವ ಜನರ ಆರೋಗ್ಯ ಸುಧಾರಣೆ ಮುಖ್ಯ ಎಂದು ಹೇಳುತ್ತಿದ್ದಾರೆ.

ಒಟ್ಟಾರೆಯಾಗಿ, ಜನಸಂಖ್ಯಾ ನೀತಿ ಎಂದರೆ ಕೇವಲ ಅಂಕಿ-ಅಂಶವಲ್ಲ ಅದು ಸಂಸ್ಕೃತಿ, ಸಮಾಜ ಮತ್ತು ಭವಿಷ್ಯದ ತಲೆಮಾರುಗಳ ಭದ್ರತೆ ಕೂಡ. ಆದ್ದರಿಂದ ಸರ್ಕಾರದ ಜಾಗೃತಿ ಅಭಿಯಾನಕ್ಕೆ ಜೊತೆಗೆ ಸಾಮಾಜಿಕ ವಿಶ್ವಾಸ ಮೂಡಿಸುವ ಕೆಲಸ ಕೂಡ ಅತಿ ಅವಶ್ಯಕವಾಗಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories