ಇಂದಿನ ವೇಗದ ಜೀವನದಲ್ಲಿ ಆಹಾರ ಪದ್ಧತಿಯ ಅಸಮತೋಲನ, ಜಂಕ್ ಫುಡ್‌ಗಳ ಹೆಚ್ಚಾದ ಬಳಕೆ, ಮನಸ್ಸಿನ ಒತ್ತಡದ ಕಾರಣಗಳಿಂದ ದೇಹಕ್ಕೆ ಅಗತ್ಯವಿರುವ ಹಲವು ಪೌಷ್ಟಿಕಾಂಶಗಳು ಕಡಿಮೆಯಾಗುತ್ತಿರುವುದು ಸಾಮಾನ್ಯವಾಗಿದೆ. ಅದರಲ್ಲೂ ವಿಟಮಿನ್‌ಗಳ ಕೊರತೆ ಇತ್ತೀಚಿಗೆ ಕಂಡುಬರುತ್ತಿರುವ ಗಂಭೀರ ಸಮಸ್ಯೆಗಳಲ್ಲಿ ಒಂದಾಗಿದೆ. ಅಂತಹ ಪೌಷ್ಟಿಕಾಂಶಗಳ ಪೈಕಿ ವಿಟಮಿನ್ ಬಿ12 (Vitamin B12), ಅಥವಾ ವೈದ್ಯಕೀಯವಾಗಿ ಕೋಬಾಲಾಮಿನ್, ಮಾನವ ದೇಹದ ನರಮಂಡಲ ಮತ್ತು ರಕ್ತದ ಶುದ್ಧೀಕರಣಕ್ಕೆ ಅತ್ಯಂತ ಅವಶ್ಯಕವಾದ ಒಂದು ಪ್ರಮುಖ ವಿಟಮಿನ್. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ವಿಟಮಿನ್ ಬಿ12 ಕೊರತೆಯನ್ನು ಸಾಮಾನ್ಯವಾಗಿ ಆರಂಭಿಕ ಹಂತದಲ್ಲಿ ಗುರುತಿಸುವುದು ಕಷ್ಟ. ಆದರೆ, ಇದರ ಪರಿಣಾಮಗಳು ನಿಧಾನವಾಗಿ ನರಗಳಿಗೆ ತಟ್ಟುವುದರಿಂದ ಮೊದಲ ರೋಗಲಕ್ಷಣಗಳು ಪಾದಗಳಲ್ಲಿ ಕಾಣಿಸಿಕೊಳ್ಳುತ್ತವೆ. ಪಾದಗಳಲ್ಲಿ ಕಂಡುಬರುವ ಕೆಲವು ಸಣ್ಣ-ಪುಟ್ಟ ಅಸಹಜ ಲಕ್ಷಣಗಳನ್ನು ನಾವು ಸಾಮಾನ್ಯವಾಗಿ ಕಡೆಗಣಿಸುತ್ತೇವೆ. ಆದರೆ ಇವು ಮುಂದಿನ ದಿನಗಳಲ್ಲಿ ಗಂಭೀರ ನರ ಸಮಸ್ಯೆಗಳ ಸೂಚನೆಗಳಾಗಬಹುದು. ಆದ್ದರಿಂದ, ಆರೋಗ್ಯ ತಜ್ಞರು ವಿಟಮಿನ್ ಬಿ12 ಕೊರತೆಯನ್ನು ಪ್ರಾರಂಭದಲ್ಲೇ ಗುರುತಿಸಿ ಚಿಕಿತ್ಸೆಗೆ ಮುಂದಾಗಬೇಕು ಎಂದು ಎಚ್ಚರಿಸುತ್ತಾರೆ. ಹಾಗಿದ್ದರೆ ಪಾದಗಳಲ್ಲಿ ಕಾಣಿಸಿಕೊಳ್ಳುವ ವಿಟಮಿನ್ ಬಿ12 ಕೊರತೆಯ 5 ಪ್ರಮುಖ ಲಕ್ಷಣಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಪಾದಗಳಲ್ಲಿ ಮರಗಟ್ಟುವಿಕೆ ಅಥವಾ ಸಂವೇದನೆ ಕಳೆದುಕೊಳ್ಳುವುದು:
ಹಾರ್ವರ್ಡ್ ಹೆಲ್ತ್ ವರದಿ ಪ್ರಕಾರ, ವಿಟಮಿನ್ ಬಿ12 ಕೊರತೆಯಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುತ್ತದೆ, ಇದರಿಂದ ಆಮ್ಲಜನಕದ ಸರಿಯಾದ ಪೂರೈಕೆ ದುರ್ಬಲಗೊಳ್ಳುತ್ತದೆ. ಇದರ ಪ್ರಭಾವ ಮೊದಲು ಪಾದಗಳಲ್ಲಿ ಕಾಣಿಸಿಕೊಳ್ಳುವುದು ಸಹಜ.
ಪಾದಗಳು ಇದ್ದಕ್ಕಿದ್ದಂತೆ ಮರಗಟ್ಟಿದಂತೆ ಅನಿಸಿಕೊಳ್ಳುವುದು.
ಕೆಲವು ಕ್ಷಣಗಳಿಗಾಗಲೀ ಸಂವೇದನೆ ಕಳೆದುಕೊಳ್ಳುವುದು.
ತೀವ್ರ ಕೊರತೆಯಲ್ಲಿ ಕೈ-ಕಾಲುಗಳಲ್ಲಿಯೂ ನಡುಕ ಕಾಣಿಸಬಹುದು ಇವು ನರಗಳಿಗೆ ಸಮರ್ಪಕ ಪೋಷಕಾಂಶಗಳು ಸಿಗದಿರುವ ಸ್ಪಷ್ಟ ಲಕ್ಷಣಗಳು.
ಪಾದಗಳಲ್ಲಿ ಜುಮ್ಮೆನಿಸುವಿಕೆ (Pins and Needles Feeling):
ಪಾದಗಳಲ್ಲಿ ಸೂಜಿ ಚುಚ್ಚಿದಂತಿರುವ, ಚುರುಕುಂಟಾದ ಅನುಭವವು ವಿಟಮಿನ್ ಬಿ12 ಕೊರತೆಯ ಅತ್ಯಂತ ಸಾಮಾನ್ಯ ಲಕ್ಷಣ.
ಸಾಮಾನ್ಯವಾಗಿ ಪಾದಗಳ ಅಡಿಭಾಗದಿಂದ ಆರಂಭ.
ಕಾಲ್ಬೆರಳುಗಳಿಂದ ಮೇಲಕ್ಕೆ ಹರಡಬಹುದು.
ನರವ್ಯವಸ್ಥೆಯ ಮೇಲೆ ನೇರ ಪರಿಣಾಮ ಇರುವ ಸೂಚನೆ ಈ ರೀತಿಯ ಲಕ್ಷಣಗಳು ಪದೇಪದೇ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ನಡೆಯಲು ತೊಂದರೆ:
ವಿಟಮಿನ್ ಬಿ12 ಕೊರತೆಯು ನರ ಕೋಶಗಳ ರಚನೆಗೆ ತೊಂದರೆ ಉಂಟುಮಾಡುತ್ತದೆ. ಇದರ ಪರಿಣಾಮ ನರಗಳು ದುರ್ಬಲಗೊಳ್ಳುತ್ತವೆ, ದೇಹದ ಮೇಲೆ ನಿಯಂತ್ರಣ ಕಡಿಮೆಯಾಗುತ್ತದೆ, ನಡೆದುಹೋಗುವಾಗ ಸಮತೋಲನ ತಪ್ಪುವುದು, ಕೆಲವೊಮ್ಮೆ ಹಠಾತ್ ಬೀಳುವ ಸಾಧ್ಯತೆ ಇದು ನರಮಂಡಲದ ಗಂಭೀರ ಅಲರ್ಮ್ ಸಿಗ್ನಲ್ ಎಂದು ನಾವು ಭಾವಿಸಬಹುದು.
ಕಾಲಿನ ಸ್ನಾಯುಗಳಲ್ಲಿ ದೌರ್ಬಲ್ಯ:
ವಿಟಮಿನ್ ಬಿ12 ಕೊರತೆಯಿಂದ ಸ್ನಾಯುಗಳ ಸಮನ್ವಯ ದುರ್ಬಲಗೊಳ್ಳುತ್ತದೆ. ಕಾಲಿನಲ್ಲಿ ಬಿಗಿತ, ಸ್ನಾಯು ಒತ್ತಡ, ನಡೆಯುವಾಗ ಕಾಲುಗಳು ಬಲಹೀನ ಎಂದು ಅನಿಸುವುದು, ದೀರ್ಘ ಕಾಲ ನಿಂತರೆ ನೋವು, ಸ್ನಾಯು-ನರಗಳ ಜಾಲ ದುರ್ಬಲಗೊಳ್ಳುತ್ತಿದೆ ಎಂಬ ಸೂಚನೆ.
ಪಾದಗಳು ತಣ್ಣಗಾಗುವುದು ಮತ್ತು ಬಿಳಿಯಾಗುವುದು:
ರಕ್ತದ ಕೆಂಪುಕಣಗಳ ನಿರ್ಮಾಣಕ್ಕೆ ಬಿ12 ಅಗತ್ಯ. ಇದರ ಕೊರತೆಯಿಂದ ರಕ್ತಹೀನತೆ (Anemia) ಉಂಟಾಗಬಹುದು.
ಪಾದಗಳು ಯಾವುದೇ ಋತುವಿನಲ್ಲಿಯೂ ತಣ್ಣಗೆ ಅನಿಸುವುದು.
ಚರ್ಮ ಬಿಳಿಯಾಗುವುದು ಅಥವಾ ಬಿಗಿಯಾಗುವುದು ಈ ಲಕ್ಷಣಗಳು ಅನೀಮಿಯಾ ಮತ್ತು ನರ ಸಮಸ್ಯೆಗಳಿಗೆ ಸಂಪರ್ಕ ಹೊಂದಿರಬಹುದು.
ಪಾದಗಳಲ್ಲಿ ಉರಿಯುವಿಕೆ ಅಥವಾ ಸುಡುವ ಭಾವನೆ:
ಕೆಲವರಿಗೆ ಪಾದಗಳ ಅಡಿಭಾಗದಲ್ಲಿ ತೀವ್ರ ಉರಿಯುವ (Burning Sensation) ಭಾವನೆ ಕಾಣಿಸಬಹುದು.
ಇದು ನರವ್ಯವಸ್ಥೆಗೆ ಹಾನಿಯ ಆರಂಭಿಕ ಸೂಚನೆ
ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಗಂಭೀರ Peripheral Neuropathyಗೆ ಕಾರಣವಾಗಬಹುದು.
ವಿಟಮಿನ್ ಬಿ12 ಕೊರತೆಯನ್ನು ನಿವಾರಿಸುವುದು ಹೇಗೆ?:
ವಿಟಮಿನ್ ಬಿ12 ಅನ್ನು ಮುಖ್ಯವಾಗಿ ಕೆಳಗಿನ ಆಹಾರಗಳಿಂದ ಪಡೆಯಬಹುದು.
ವಿಟಮಿನ್ ಬಿ12 ಹೊಂದಿರುವ ಆಹಾರಗಳು.
ಹಾಲು ಮತ್ತು ಹಾಲು ಉತ್ಪನ್ನಗಳು (ಮೊಸರು, ಚೀಸ್).
ಮೊಟ್ಟೆ.
ಮೀನು, ಮಾಂಸ.
ಬಲವರ್ಧಿತ ಉಪಹಾರ ಧಾನ್ಯಗಳು (Fortified Cereals).
ಬೀಟ್ ರೂಟ್, ಆಲೂಗಡ್ಡೆ.
ಅಣಬೆಗಳು.
ಹಸಿರು ತರಕಾರಿಗಳು.
ತಾಜಾ ಹಣ್ಣುಗಳು.
ವೈದ್ಯರ ಸಲಹೆಯ ಮೇರೆಗೆ ಅಗತ್ಯವಿದ್ದರೆ ವಿಟಮಿನ್ ಬಿ12 ಟ್ಯಾಬ್ಲೆಟ್‌ಗಳು ಅಥವಾ ಇಂಜೆಕ್ಷನ್‌ಗಳು ಕೂಡ ಪಡೆಯಬಹುದು.
ಗಮನಿಸಿ:
ಈ ಮಾಹಿತಿ ಕೇವಲ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಔಷಧಿ ಸೇವನೆ ಅಥವಾ ಚಿಕಿತ್ಸೆಗೆ ಮೊದಲು ವೈದ್ಯರ ಸಲಹೆ ಅವಶ್ಯಕ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




