ರಾಜ್ಯ ಸರ್ಕಾರದ ಪ್ರಮುಖ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯಡಿ, ಮನೆಯ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿಗಳನ್ನು ವರ್ಗಾಯಿಸಲಾಗುತ್ತಿದೆ. ಈ ಯೋಜನೆಯ ಮೂಲಕ ಕರ್ನಾಟಕದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಸಬಲೀಕರಣದ ಗುರಿಯನ್ನು ಸಾಧಿಸಲಾಗುತ್ತಿದೆ. ಈ ಲೇಖನದಲ್ಲಿ, ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ, ಇದುವರೆಗೆ ಜಮಾ ಆಗಿರುವ ಕಂತಿನ ಹಣವನ್ನು ಹೇಗೆ ಪರಿಶೀಲಿಸಬೇಕು, ಮುಂಬರುವ ಕಂತುಗಳ ಬಿಡುಗಡೆ ವಿವರಗಳು ಮತ್ತು ಈ ಯೋಜನೆಯ ಲಾಭವನ್ನು ಪಡೆಯಲು ಅಗತ್ಯವಾದ ಮಾಹಿತಿಯನ್ನು ವಿವರವಾಗಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದುವರೆಗೆ ಜಮಾ ಆಗಿರುವ ಕಂತುಗಳ ವಿವರ
ಗೃಹಲಕ್ಷ್ಮೀ ಯೋಜನೆಯಡಿ ಈಗಾಗಲೇ 22 ಕಂತುಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ. ಇದರಲ್ಲಿ ಪ್ರಾರಂಭದ ದಿನಾಂಕದಿಂದ ಬಾಕಿ ಉಳಿದಿರುವುದು 5 ಕಂತುಗಳು ಅಂದರೇ ಜೂನ್, ಜುಲೈ, ಅಗಸ್ಟ್ ಸೆಪ್ಟೆಂಬರ್ ,ಅಕ್ಟೋಬರ್ ಹಣವು ಇನ್ನೂ ಬಾಕಿ ಇದೆ .ಇತ್ತೀಚಿಗೆ, ದೇಪಾವಳಿ ಹಬ್ಬದ ಸಂದರ್ಭದಲ್ಲಿ 22ನೇ ಕಂತಿನ ಹಣವನ್ನು ವರ್ಗಾಯಿಸಲಾಗಿತ್ತು. ಸಚಿವರ ಹೇಳಿಕೆಯ ಪ್ರಕಾರ, 22ನೇ ಕಂತಿನ ಹಣವು ಆಗಸ್ಟ್ ತಿಂಗಳು ಎಂದು ಹೇಳಿದ್ದಾರೆ ಜನರೂ ಕೂಡಾ ಹಾಗೆ ಭಾವಿಸಿದ್ದಾರೆ.
ಹಾಗೆಯೇ ಇನ್ನುಳಿದ 23ನೇ ಕಂತಿನ ಬಾಕಿ ₹2000ಹಣ ಇದೇ ನವಂಬರ್ ತಿಂಗಳ ಕೊನೆಯ ವಾರದಲ್ಲಿ ಮಹಿಳೆಯರ ಬ್ಯಾಂಕ್ ಖಾತೆಗೆ ಸೇರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕೆಳಗಂಡಂತೆ ವಿವರಣೆ ಹೀಗಿದೆ
| ಕಂತು | ಸಂಬಂಧಿಸಿದ ತಿಂಗಳು | ಸ್ಥಿತಿ | ಬಿಡುಗಡೆ ದಿನಾಂಕ |
|---|---|---|---|
| 24ನೇ ಕಂತು | ಅಕ್ಟೋಬರ್ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
| 24ನೇ ಕಂತು | ಸೆಪ್ಟೆಂಬರ್ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
| 24ನೇ ಕಂತು | ಅಗಸ್ಟ್ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
| 24ನೇ ಕಂತು | ಜುಲೈ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
| 23ನೇ ಕಂತು | ಜೂನ್ 2025 | ಬಾಕಿ ಉಳಿದಿದೆ | ನವೀಕರಿಸಲಾಗುವುದು |
| 22ನೇ ಕಂತು | ಮೇ 2025 | ಪೂರ್ಣಗೊಂಡಿದೆ | 20-10-2025 |
| 21ನೇ ಕಂತು | ಏಪ್ರಿಲ್ 2025 | ಪೂರ್ಣಗೊಂಡಿದೆ | 08-08-2025 |
| 20ನೇ ಕಂತು | ಮಾರ್ಚ್ 2025 | ಪೂರ್ಣಗೊಂಡಿದೆ | 05-06-2025 |
| 19ನೇ ಕಂತು | ಫೆಬ್ರವರಿ 2025 | ಪೂರ್ಣಗೊಂಡಿದೆ | 17-05-2025 |
| 18ನೇ ಕಂತು | ಜನವರಿ 2025 | ಪೂರ್ಣಗೊಂಡಿದೆ | 30-03-2025 |
| 17ನೇ ಕಂತು | ಡಿಸೆಂಬರ್ 2024 | ಪೂರ್ಣಗೊಂಡಿದೆ | 11-03-2025 |
| 16ನೇ ಕಂತು | ನವೆಂಬರ್ 2024 | ಪೂರ್ಣಗೊಂಡಿದೆ | 26-02-2025 |
23 ಮತ್ತು 24ನೇ ಕಂತುಗಳ ಬಿಡುಗಡೆಯ ದಿನಾಂಕವನ್ನು ಸರ್ಕಾರ ಶೀಘ್ರದಲ್ಲೇ ಘೋಷಿಸುವ ಸಾಧ್ಯತೆಯಿದೆ. ಈ ಯೋಜನೆಯ ಫಲಾನುಭವಿಗಳಿಗೆ ತಡವಾಗಿ ಹಣವನ್ನು ಜಮಾ ಮಾಡಲಾಗುತ್ತಿದ್ದು, ಇದು ಉಳಿದ 3 ಕಂತುಗಳನ್ನು ಯೆತ್ತಿ ತೋರಿಸುತ್ತದೆ ..
ಇದುವೆರೆಗೆ ಮಹಿಳೆಯರ ಖಾತೆಗೆ ಬಂದ ಹಣ 22ಕಂತುಗಳು ಅಂದರೆ 22×2000=44000ರೂಪಾಯಿಗಳು ಇದುವರೆಗೆ ಖಾತೆಗೆ ಜಮೆ ಆಗಿದೆ
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ (Senior Editor). ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರೂ, ಮಾಧ್ಯಮ ಕ್ಷೇತ್ರದ ಮೇಲಿರುವ ಅತೀವ ಆಸಕ್ತಿಯಿಂದಾಗಿ 2019 ರಲ್ಲಿ ಡಿಜಿಟಲ್ ಜಗತ್ತಿಗೆ ಕಾಲಿಟ್ಟರು. ಇವರು ಆರಂಭಿಸಿದ “Suddi No.1 Kannada” ಯೂಟ್ಯೂಬ್ ಚಾನೆಲ್ ಪ್ರಸ್ತುತ 300K ಗೂ ಹೆಚ್ಚು ಸಬ್ಸ್ಕ್ರೈಬರ್ಗಳನ್ನು ಹೊಂದುವ ಮೂಲಕ ಜನಪ್ರಿಯವಾಗಿದೆ. ಡಿಜಿಟಲ್ ಮಾಧ್ಯಮದಲ್ಲಿ ಉತ್ತಮ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ಸರಳವಾಗಿ ವಿಶ್ಲೇಷಿಸಿ, ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪಿಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು ಮತ್ತು ನಿಖರ ಮಾಹಿತಿ ನೀಡುವ ವಿಡಿಯೋ ಕಂಟೆಂಟ್ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಇವರ ಬರವಣಿಗೆಯ ವಿಶಿಷ್ಟ ಶೈಲಿಯಾಗಿದೆ.


WhatsApp Group




Leave a Reply