Picsart 25 10 29 22 43 04 887 scaled

ರಾಜ್ಯ ಸರ್ಕಾರಿ ನೌಕರರೇ ಗಮನಿಸಿ: ಆರೋಗ್ಯ ಸಂಜೀವಿನಿ ಯೋಜನೆಗೆ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ 

Categories:
WhatsApp Group Telegram Group

ಕರ್ನಾಟಕ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆಗೆ “ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS)” ಎಂಬ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ನೌಕರರು ಹಾಗೂ ಅವರ ಅವಲಂಬಿತರು ಸರ್ಕಾರಿ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ನಗದು ರಹಿತ (Cashless) ಚಿಕಿತ್ಸೆ ಪಡೆಯಬಹುದು. ಆದರೆ ಇದರ ಪ್ರಯೋಜನ ಪಡೆಯಲು ನೌಕರರು ಮತ್ತು ಅವರ ಕುಟುಂಬ ಸದಸ್ಯರು ಯೋಜನೆಗೆ ಸರಿಯಾಗಿ ನೊಂದಾಯಿಸಿಕೊಳ್ಳುವುದು ಕಡ್ಡಾಯ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಈಗ ಸರ್ಕಾರದಿಂದ ಹೊಸ ಸೂಚನೆ ಹೊರಬಂದಿದ್ದು, ಎಲ್ಲಾ ಸರ್ಕಾರಿ ನೌಕರರು ತಮ್ಮ ಕುಟುಂಬ ಸದಸ್ಯರ ವಿವರಗಳೊಂದಿಗೆ ಅರ್ಜಿಯನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಲಾಗಿದೆ. ಕೆಳಗಿನಂತೆ ಈ ಯೋಜನೆಗೆ ಸಂಬಂಧಿಸಿದ ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಪ್ರಮುಖ ಸೂಚನೆಗಳನ್ನು ವಿವರವಾಗಿ ತಿಳಿದುಕೊಳ್ಳಿ.

ಅರ್ಜಿ ಸಲ್ಲಿಸುವ ವಿಧಾನ

ಅನುಬಂಧ-1 (Annexure-I) ಅನ್ನು ಕಛೇರಿಗೆ ಎರಡು ಪ್ರತಿಗಳಲ್ಲಿ ಸಲ್ಲಿಸಬೇಕು.

ಅರ್ಜಿಯಲ್ಲಿನ ಎಲ್ಲಾ ಮಾಹಿತಿಯನ್ನು ಕನ್ನಡ ಮತ್ತು ಆಂಗ್ಲ (CAPITAL LETTERS) ಭಾಷೆಗಳಲ್ಲಿ ಸ್ಪಷ್ಟವಾಗಿ ತುಂಬಬೇಕು.

ನೌಕರ ಮತ್ತು ಅವರ ಎಲ್ಲಾ ಅವಲಂಬಿತರ ಆಧಾರ್ ಕಾರ್ಡ್‌ನ ಪ್ರತಿಗಳನ್ನು ಲಗತ್ತಿಸಬೇಕು.

ಪ್ರತಿ ಅವಲಂಬಿತನ ಪಾಸ್‌ಪೋರ್ಟ್ ಅಳತೆಯ ಬಣ್ಣದ ಫೋಟೋ (White Background) ಇರಬೇಕು.

ನೌಕರರು ಮತ್ತು ಅವಲಂಬಿತರ ಫೋಟೋಗಳ ಹಿಂಭಾಗದಲ್ಲಿ ಸಹಿ ಮತ್ತು ದಿನಾಂಕ ನಮೂದಿಸಬೇಕು.

ಅನುಬಂಧ-1 ನಲ್ಲಿ ಉಲ್ಲೇಖಿಸಿದ ಅವಲಂಬಿತರ ವಿವರಗಳನ್ನು FORM-C ಯಲ್ಲಿಯೂ ತುಂಬಿ ಬ್ಲಾಕ್ ಶಿಕ್ಷಣಾಧಿಕಾರಿ (BEO) ಅವರ ಸಹಿಗೆ ಸಲ್ಲಿಸಬೇಕು.

ಫೋಟೋ ಮತ್ತು ಮಾಹಿತಿಯ ಮಹತ್ವ

ನೌಕರರ ಹಾಗೂ ಅವಲಂಬಿತರ ಫೋಟೋಗಳು ಒಮ್ಮೆ ಅಪ್‌ಲೋಡ್ ಆದ ಬಳಿಕ 5 ವರ್ಷಗಳವರೆಗೆ ಬದಲಾಯಿಸಲು ಅವಕಾಶ ಇರುವುದಿಲ್ಲ.

5 ವರ್ಷಗಳ ನಂತರ ಮಾತ್ರ ಹೊಸ ಫೋಟೋಗಳನ್ನು ಸಲ್ಲಿಸಬಹುದು.

ಆಧಾರ್ ಕಾರ್ಡ್‌ನಲ್ಲಿರುವಂತೆ ಹೆಸರುಗಳು ಸರಿಯಾಗಿ ಹೊಂದಿಕೆಯಾಗಿರಬೇಕು. ಯಾವುದೇ ವ್ಯತ್ಯಾಸ ಇದ್ದರೆ ನೋಂದಣಿ ತಿರಸ್ಕೃತವಾಗಬಹುದು.

ಅವಲಂಬಿತರ ಪಟ್ಟಿ ಕುರಿತು ನಿಯಮಗಳು

ಪುರುಷ ನೌಕರರು – ಹೆಂಡತಿ, ಮಕ್ಕಳು, ತಂದೆ-ತಾಯಿ ಹಾಗೂ ಮಲತಾಯಿ ಮಾತ್ರ ಅವಲಂಬಿತರಾಗಬಹುದು. (ಹೆಂಡತಿಯ ತಂದೆ-ತಾಯಿ ಸೇರೋದಿಲ್ಲ.)

ಮಹಿಳಾ ನೌಕರರು – ಗಂಡ, ಮಕ್ಕಳು, ತಮ್ಮ ತಂದೆ-ತಾಯಿ ಹಾಗೂ ಮಲತಾಯಿ ಮಾತ್ರ ಅವಲಂಬಿತರಾಗಬಹುದು. (ಗಂಡನ ತಂದೆ-ತಾಯಿ ಅಂದರೆ ಅತ್ತೆ-ಮಾವ ಸೇರೋದಿಲ್ಲ.)

ಎರಡು ಮದುವೆ ಮಾಡಿಕೊಂಡಿದ್ದಲ್ಲಿ ಮೊದಲ ಹೆಂಡತಿ ಮತ್ತು ಆಕೆಯ ಮಕ್ಕಳು ಮಾತ್ರ ಯೋಜನೆಗೆ ಅರ್ಹರಾಗುತ್ತಾರೆ.

ಯೋಜನೆಗೆ ಸೇರಿದ ನಂತರದ ಬದಲಾವಣೆಗಳು

ಅರ್ಜಿಯನ್ನು ಸಲ್ಲಿಸಿದ ನಂತರ, ಕುಟುಂಬದಲ್ಲಿ ವಿವಾಹ, ಮಗುವಿನ ಜನನ ಅಥವಾ ಮರಣ ನಡೆದಿದ್ದರೆ, ಹೊಸ ಸದಸ್ಯರನ್ನು ಸೇರಿಸಲು ಅಥವಾ ತೆಗೆಯಲು FORM-44 ಬಳಸಿ ತಿದ್ದುಪಡಿ ಮಾಡಬಹುದು.

ಯೋಜನೆಯ ಪ್ರಾಮುಖ್ಯತೆ:

ಆರೋಗ್ಯ ಸಂಜೀವಿನಿ ಯೋಜನೆಗೆ ನೊಂದಾಯಿಸದ ನೌಕರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಕೇವಲ ತಮ್ಮ ಹೆಸರೇ ವೆಬ್‌ಸೈಟ್‌ನಲ್ಲಿ ಗೋಚರಿಸುತ್ತದೆ. ಇದರ ಪರಿಣಾಮವಾಗಿ ಅವಲಂಬಿತರಿಗೆ ಚಿಕಿತ್ಸೆ ನೀಡಲು ತೊಂದರೆ ಉಂಟಾಗಬಹುದು. ಆದರೆ ಯೋಜನೆಯಲ್ಲಿ ಒಳಗೊಂಡಿರುವ ನೌಕರರ ಎಲ್ಲ ಕುಟುಂಬ ಸದಸ್ಯರ ಹೆಸರು ಮತ್ತು ಫೋಟೋಗಳು ಜ್ಯೋತಿ ಸಂಜೀವಿನಿ ಯೋಜನೆ (Jyothi Sanjeevini) ಆಸ್ಪತ್ರೆ ಪೋರ್ಟಲ್‌ನಲ್ಲಿ ಗೋಚರಿಸುತ್ತವೆ, ಇದರಿಂದ ಎಲ್ಲರಿಗೂ ನಿರ್ವಿಘ್ನವಾಗಿ ಚಿಕಿತ್ಸೆ ಸಿಗುತ್ತದೆ.

ನೌಕರರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ಸ್ವಯಂ ದೃಢೀಕರಿಸಿ, ನಿಗದಿತ ನಮೂನೆಗಳನ್ನು ಮೇಲಾಧಿಕಾರಿಗಳ ಮೂಲಕ ವೇತನ ಬಟವಾಡೆ ಅಧಿಕಾರಿಗಳಿಗೆ ತಕ್ಷಣ ಸಲ್ಲಿಸಬೇಕು. ವಿಳಂಬ ಮಾಡಿದರೆ ಯೋಜನೆಯ ಪ್ರಯೋಜನ ಪಡೆಯಲು ತೊಂದರೆ ಉಂಟಾಗುವ ಸಾಧ್ಯತೆ ಇದೆ.

ಒಟ್ಟಾರೆ , ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ ರಾಜ್ಯ ಸರ್ಕಾರಿ ನೌಕರರ ಮತ್ತು ಅವರ ಕುಟುಂಬದ ಆರೋಗ್ಯ ರಕ್ಷಣೆಗೆ ಜೀವಾಳವಾದ ಯೋಜನೆ. ಸರಿಯಾದ ರೀತಿಯಲ್ಲಿ ನೋಂದಣಿ ಮಾಡಿ, ಅಗತ್ಯ ದಾಖಲೆಗಳು ಹಾಗೂ ಫೋಟೋಗಳನ್ನು ನಿಗದಿತ ಸಮಯದಲ್ಲಿ ಸಲ್ಲಿಸುವುದು ಅತ್ಯಂತ ಅಗತ್ಯ. ಸರ್ಕಾರ ನೀಡಿರುವ ಸೂಚನೆಗಳನ್ನು ಪಾಲನೆ ಮಾಡಿದರೆ, ಭವಿಷ್ಯದಲ್ಲಿ ಯಾವುದೇ ತೊಂದರೆ ಇಲ್ಲದೆ ಎಲ್ಲ ಸದಸ್ಯರು ಉಚಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ.

n6867495361761757795866892073b814b8057ec4ddc976aafb4bbf4dc94effb30614b0391c1ecc3951a804
n6867495361761757801650b5d3ce1566e42ca4005aff92fa081a257c22e8766bc59b363460519b936e79f4
n68674953617617578278818de4b9f5f45d8fb6a16d79fb71e2b417ee976386da7fec42f59cd05556a5cb66
n68674953617617578240274f477d47ecd3765f02c8063ad3209272b66d21fd1d69b9e4f488b039909cbc9f
n686749536176175780544367ee735a7240ba2cba39f462936da78ea07dc5d2939e7aaf59f07c64639436ac
n686749536176175781786799a764db59cc23f72e0c1330c6fb4f24f7a08c833422f99068ae279d9fa4ee06
n68674953617617578141189abb0fbe2eae672cd257c10c7df7b9b960ec50d858aa5faa6e918b2aa2a6552d
n6867495361761757835767cc4de82e2e0cf50f1f004c2ab3f89834c3adf4023e393c0b9df2c2660e288ab6
n686749536176175783184780972a77eaeb97cd84fa0e1284e3ee6a05a8c6e34f7a06b332dfddb615c23b40
n6867495361761757809465c31ec345aac962a2c96e6e1240e1e0979481d70313bc99d737977a9d9f664191
n68674953617617577916892516e4ffbaeac6f8f49cd915135f0e4c8ca429a993c08e46fb1642657cc3998c
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories