Picsart 25 10 28 22 57 22 346 scaled

ರಾತ್ರಿ ಸರಿಯಾಗಿ ಈ ಸಮಯಕ್ಕೆ ಊಟ ಮುಗಿಸಿದರೆ 100 ವರ್ಷ ಆಯಸ್ಸು ಖಚಿತ!

WhatsApp Group Telegram Group

ಆರೋಗ್ಯವೆಂದರೆ ಮಾನವನ ಅಮೂಲ್ಯ ಸಂಪತ್ತು. ನಮ್ಮ ಜೀವನದ ಗುಣಮಟ್ಟ, ಉತ್ಸಾಹ, ಶಕ್ತಿ ಹಾಗೂ ದೀರ್ಘಾಯುಷ್ಯವು ನಮ್ಮ ಆಹಾರ ಮತ್ತು ಜೀವನಶೈಲಿಯ ಮೇಲೆ ಅವಲಂಬಿತವಾಗಿದೆ. ಇಂದಿನ ತ್ವರಿತ ಜೀವನಶೈಲಿ, ಅಸಮತೋಲಿತ ಆಹಾರ ಪದ್ಧತಿ ಮತ್ತು ಒತ್ತಡಪೂರ್ಣ ದಿನಚರಿಯ ಪರಿಣಾಮವಾಗಿ ಅನೇಕರು ಅಕಾಲಿಕವಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಆಯುರ್ವೇದ ಮತ್ತು ಪೌಷ್ಠಿಕ ತಜ್ಞರ ಪ್ರಕಾರ, ಪ್ರತಿನಿತ್ಯ ಸರಿಯಾದ ಸಮಯದಲ್ಲಿ, ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಸರಿಯಾದ ರೀತಿಯ ಆಹಾರವನ್ನು ಸೇವಿಸಿದರೆ, ದೇಹದ ಕಾರ್ಯನಿರ್ವಹಣೆ ಸುಧಾರಿಸಿ, ನೀವು ದೀರ್ಘಕಾಲ ಆರೋಗ್ಯಕರ ಜೀವನವನ್ನು ನಡೆಸಬಹುದು. ಹಾಗಿದ್ದರೆ ಯಾವರೀತಿಯ ಆಹಾರ ಪದ್ಧತಿಯನ್ನು ಅನುಸರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೌದು, ನಾವು ಏನು ತಿನ್ನುತ್ತೇವೆ ಎಂಬುದಕ್ಕಿಂತಲೂ ಯಾವ ಸಮಯದಲ್ಲಿ ತಿನ್ನುತ್ತೇವೆ ಎಂಬುದೇ ಹೆಚ್ಚು ಪರಿಣಾಮಕಾರಿಯಾಗಿದೆ. ರಾತ್ರಿಯ ಸಮಯದಲ್ಲಿ ದೇಹದ ಮೆಟಬಾಲಿಸಂ ನಿಧಾನಗೊಳ್ಳುತ್ತದೆ. ಆದ್ದರಿಂದ, ಈ ವೇಳೆಯಲ್ಲಿ ತಿನ್ನುವ ಆಹಾರ ಹಗುರವಾಗಿದ್ದು, ಪೋಷಕಾಂಶಗಳಲ್ಲಿ ಸಮೃದ್ಧವಾಗಿರಬೇಕು. ದೀರ್ಘಾಯುಷ್ಯಕ್ಕೆ ಸಹಾಯಕವಾಗಬಲ್ಲ ನಾಲ್ಕು ಪ್ರಮುಖ ಆಹಾರ ಪದಾರ್ಥಗಳು ಹಾಗೂ ಆಹಾರ ಪದ್ಧತಿಗಳು ಹೀಗಿವೆ:

ಸಂಜೆ 7 ಗಂಟೆಯೊಳಗೆ ಊಟ ಮುಗಿಸಿ:

ಸಂಜೆ 7 ಗಂಟೆಯೊಳಗೆ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಈ ವೇಳೆಗೆ ಊಟ ಮಾಡಿದರೆ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ, ಪೋಷಕಾಂಶಗಳು ದೇಹದಲ್ಲಿ ಸರಿಯಾಗಿ ಹೀರಿಕೊಳ್ಳುತ್ತವೆ. ಇದು ದೇಹದ ಕೋಶಗಳ ಪುನರ್ನಿರ್ಮಾಣ ಪ್ರಕ್ರಿಯೆಗೆ ಸಹಕಾರಿಯಾಗುತ್ತದೆ. ತಡವಾಗಿ ಊಟ ಮಾಡುವ ಅಭ್ಯಾಸವು ದೇಹದ ಹಾರ್ಮೋನ್ ಸಮತೋಲನಕ್ಕೂ, ನಿದ್ರಾ ಗುಣಮಟ್ಟಕ್ಕೂ ಹಾನಿ ಉಂಟುಮಾಡುತ್ತದೆ.

ಸಂಸ್ಕರಿಸದ ಕಾರ್ಬೋಹೈಡ್ರೇಟ್‌ಗಳ ಸೇವನೆ ಬಹಳ ಮುಖ್ಯ:

ಪೂರ್ಣ ಧಾನ್ಯಗಳು (ಬ್ರೌನ್ ರೈಸ್, ಗೋಧಿ, ಓಟ್ಸ್), ಬೇಳೆಕಾಳುಗಳು (ಹುರಳಿಕಾಳು, ತೊಗರಿ, ಚಣದಾಳು), ತರಕಾರಿಗಳು ಮತ್ತು ಹಣ್ಣುಗಳು ಇವುಗಳು ಶುದ್ಧ, ಪೌಷ್ಠಿಕ ಮತ್ತು ನೈಸರ್ಗಿಕ ಕಾರ್ಬೋಹೈಡ್ರೇಟ್‌ಗಳ ಮೂಲ. ಇವು ಹೃದಯ, ಲಿವರ್ ಮತ್ತು ಕಿಡ್ನಿ ಆರೋಗ್ಯವನ್ನು ಕಾಪಾಡುತ್ತವೆ. ಇನ್ನು, ಸಸ್ಯ ಪ್ರೋಟೀನ್‌ಗಳು ಮಾಂಸಕ್ಕಿಂತಲೂ ದೀರ್ಘಾಯುಷ್ಯಕ್ಕೆ ಉತ್ತಮವೆಂದು ಸಂಶೋಧನೆಗಳು ಹೇಳುತ್ತವೆ.

ಕಡಿಮೆ ಕೊಬ್ಬಿನ ಮೀನು ಪ್ರೋಟೀನ್ ಇರಹವಂತಹ ಆಹಾರ ಸೇವಿಸುವುದು ಮುಖ್ಯ:

ಪ್ರತಿದಿನದ ಆಹಾರದಲ್ಲಿ ಸರಿಯಾದ ಪ್ರಮಾಣದ ಪ್ರೋಟೀನ್ ಅಗತ್ಯ. ಸಸ್ಯ ಮೂಲದ ಪ್ರೋಟೀನ್ ಅಥವಾ ಕಡಿಮೆ ಕೊಬ್ಬಿನ ಮೀನು (ಸಾಲ್ಮನ್, ಸಾರ್ಡಿನ್, ರೋಹು ಇತ್ಯಾದಿ) ದೇಹಕ್ಕೆ ಅಗತ್ಯ ಅಮಿನೋ ಆಮ್ಲಗಳನ್ನು ಪೂರೈಸುತ್ತದೆ. ಇವು ಹೃದಯದ ರೋಗ, ಡಯಾಬಿಟಿಸ್ ಮತ್ತು ಅತಿಯಾದ ತೂಕದ ಅಪಾಯವನ್ನು ಕಡಿಮೆ ಮಾಡುತ್ತವೆ.

ರಾತ್ರಿ ಹಗುರವಾದ, ಕಡಿಮೆ ಕ್ಯಾಲೊರಿಯ ಆಹಾರ:

ರಾತ್ರಿಯಲ್ಲಿ ಭಾರವಾದ, ತೈಲಯುಕ್ತ ಅಥವಾ ಸಂಸ್ಕರಿಸಿದ ಆಹಾರಗಳನ್ನು ತಪ್ಪಿಸಬೇಕು. ಬದಲು, ತರಕಾರಿ ಸೂಪ್, ಹಸಿರು ಸಲಾಡ್, ಹಣ್ಣುಗಳು ಅಥವಾ ಬೇಳೆಕಾಳು ಆಧಾರಿತ ಉಪಹಾರ ತೆಗೆದುಕೊಳ್ಳುವುದು ಉತ್ತಮ. ಇದು ದೇಹದ ಮೆಟಬಾಲಿಸಂ ಸುಧಾರಿಸಿ ನಿದ್ರೆಯ ಗುಣಮಟ್ಟ ಹೆಚ್ಚಿಸುತ್ತದೆ.

ಇಂಟರ್ಮಿಟೆಂಟ್ ಫಾಸ್ಟಿಂಗ್ ಅನುಸರಿಸಿ:

ನೀವು ಪಾಲಿಸಬೇಕಾದ ಮತ್ತೊಂದು ವಿಧಾನವೆಂದರೆ, ಬೆಳಿಗ್ಗೆ 12 ಗಂಟೆಯ ಮೊದಲು ಆಹಾರ ಸೇವಿಸಿ, ಉಳಿದ 12 ಗಂಟೆಗಳ ಕಾಲ ಉಪವಾಸ ಇರಬೇಕು. ಇದು ದೇಹದ ಡಿಟಾಕ್ಸಿಫಿಕೇಶನ್(Detoxification) ಪ್ರಕ್ರಿಯೆಯನ್ನು ಉತ್ತೇಜಿಸಿ, ಕೋಶ ಪುನರುತ್ಪಾದನೆಯನ್ನು ಸಹಕರಿಸುತ್ತದೆ. ಇಂತಹ ಉಪವಾಸ ಪದ್ಧತಿಯನ್ನು ನಿರಂತರವಾಗಿ ಅನುಸರಿಸಿದರೆ ದೀರ್ಘಾಯುಷ್ಯ ಖಚಿತ.
ಇನ್ನು, ಆಹಾರದ ಜೊತೆಗೆ ಪ್ರತಿದಿನ ಕನಿಷ್ಠ 30 ನಿಮಿಷಗಳ ದೈಹಿಕ ಚಟುವಟಿಕೆ, ಯೋಗ ಅಥವಾ ನಡಿಗೆ ಮಾಡುವುದು ಅನಿವಾರ್ಯ. ಇದು ಹೃದಯ ಆರೋಗ್ಯ, ರಕ್ತಸಂಚಾರ ಮತ್ತು ಮಾನಸಿಕ ಸಮತೋಲನಕ್ಕೆ ಸಹಕಾರಿಯಾಗುತ್ತದೆ.

ಒಟ್ಟಾರೆಯಾಗಿ, ರಾತ್ರಿಯ ಆಹಾರ ಪದ್ಧತಿಯನ್ನು ಸರಿಪಡಿಸುವುದು ನಿಮ್ಮ ಆಯಸ್ಸಿನ ಕೀಲಿ. ಸಂಜೆ 7 ಗಂಟೆಯೊಳಗೆ ಹಗುರವಾದ, ಸಸ್ಯ ಆಧಾರಿತ, ಪೋಷಕಾಂಶಪೂರ್ಣ ಆಹಾರ ಸೇವಿಸುವ ಅಭ್ಯಾಸ ಬೆಳೆಸಿಕೊಂಡರೆ 100 ವರ್ಷಗಳವರೆಗೆ ಆರೋಗ್ಯಕರ ಜೀವನ ನಡೆಸಬಹುದು.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories