Picsart 25 10 27 23 32 58 905 scaled

ಕಳಶದ ಮೇಲಿನ ತೆಂಗಿನಕಾಯಿ ಪೂಜೆಯ ನಂತರ ಏನು ಮಾಡಬೇಕು? ಶಾಸ್ತ್ರ ಹೇಳುವುದೇನು?

WhatsApp Group Telegram Group

ದೇವರ ಪೂಜೆ, ಹೋಮ, ಹವನ, ಗೃಹಪ್ರವೇಶ ಅಥವಾ ಯಾವುದೇ ಮಂಗಳಕಾರ್ಯಗಳಲ್ಲಿ ಕಳಶ ಸ್ಥಾಪನೆ ಒಂದು ಮುಖ್ಯ ಸಂಪ್ರದಾಯವಾಗಿದೆ. ಕಳಶವು ಶುದ್ಧತೆ, ಶ್ರೇಷ್ಠತೆ ಹಾಗೂ ದೈವಿಕ ಶಕ್ತಿಯ ಪ್ರತೀಕವೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಕಳಶದ ಮೇಲೆ ತೆಂಗಿನಕಾಯಿ ಇಡುವುದು ಈ ಸಂಪ್ರದಾಯದ ಅವಿಭಾಜ್ಯ ಭಾಗ. ಆದರೆ, ಈ ಕಳಶದ ಮೇಲೆ ಇಟ್ಟ ತೆಂಗಿನಕಾಯಿಯನ್ನು ಪೂಜೆ ಮುಗಿದ ನಂತರ ಏನು ಮಾಡಬೇಕು ಎಂಬುದರ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿ ಇಲ್ಲ. ಹಾಗಿದ್ದರೆ ಕಳಶದ ಮೇಲೆ ಇಟ್ಟ ತೆಂಗಿನಕಾಯಿಯನ್ನು ಪೂಜೆ ಮುಗಿದ ನಂತರ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕಳಶಕ್ಕೆ ಇಟ್ಟ ತೆಂಗಿನಕಾಯಿಯ ಮಹತ್ವವೇನು?:

ಕಳಶದ ಮೇಲೆ ಇಡುವ ತೆಂಗಿನಕಾಯಿ ದೈವ ಸ್ವರೂಪದ್ದಾಗಿರುತ್ತದೆ. ದೇವರನ್ನು ಆಮಂತ್ರಿಸಿ ಪೂಜೆ ಮಾಡಿದ ನಂತರ ಆ ತೆಂಗಿನಕಾಯಿಯು ಶಕ್ತಿಯುತವಾಗುತ್ತದೆ. ಆದ್ದರಿಂದ ಅದನ್ನು ಸಾಮಾನ್ಯ ಆಹಾರ ಪದಾರ್ಥಗಳಂತೆ ಬಳಸುವುದು ಸೂಕ್ತವಲ್ಲ.

ಮಾಂಸಾಹಾರ ಅಡುಗೆಗೆ ಬಳಸಬಾರದು:

ಕಳಶ ವಿಸರ್ಜನೆಯ ನಂತರ ಆ ತೆಂಗಿನಕಾಯಿಯನ್ನು ಮಾಂಸಾಹಾರ ಅಥವಾ ಉಪ್ಪು ಆಹಾರ ತಯಾರಿಸಲು ಬಳಸುವುದು ಶಾಸ್ತ್ರವಿರುದ್ಧ. ಇದರಿಂದ ಪೂಜೆಯ ಪಾವಿತ್ರ್ಯ ಕಳೆದುಕೊಳ್ಳುತ್ತದೆ ಎಂಬ ನಂಬಿಕೆ ಇದೆ.

ಸಿಹಿ ಪದಾರ್ಥ ತಯಾರಿಸುವುದು ಶ್ರೇಷ್ಠ:

ಕಳಶಕ್ಕೆ ಇಟ್ಟ ತೆಂಗಿನಕಾಯಿಯನ್ನು ಸಿಹಿ ಪದಾರ್ಥ ತಯಾರಿಸುವುದಕ್ಕೆ ಬಳಸುವುದು ಉತ್ತಮ. ಈ ಸಿಹಿ ತಿನಿಸನ್ನು ಮನೆ ಸದಸ್ಯರು, ಬಂಧುಬಳಗ ಹಾಗೂ ನೆರೆಹೊರೆಯವರಿಗೆ ಹಂಚುವುದರಿಂದ ಶುಭ ಫಲ ದೊರೆಯುತ್ತದೆ. ಇದರಿಂದ ಪೂಜೆಯ ಫಲವೂ ಹೆಚ್ಚಾಗಿ ದೊರೆಯುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಇನ್ನು, ಕಳಶಕ್ಕೆ ಇಡುವ ತೆಂಗಿನಕಾಯಿ ಸಂಪೂರ್ಣವಾಗಿ ಒಣಗಿದದ್ದಾಗಿರಬಾರದು. ಪೂಜೆಗೆ ಇಂತಹ ತೆಂಗಿನಕಾಯಿ ಬಳಸಿದರೆ ಮನೆಯವರಿಗೆ ಕೆಲವು ಅಡೆತಡೆಗಳು ಅಥವಾ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ.

ಪೂಜೆಯ ಸಮಯದಲ್ಲಿ ತೆಂಗಿನಕಾಯಿ ಬಿದ್ದರೆ ಅಥವಾ ಬಿರುಕು ಬಿಟ್ಟರೆ ಏನಾಗುತ್ತದೆ?:

ಪೂಜೆಯ ವೇಳೆ ಕಳಶದ ಮೇಲಿನ ತೆಂಗಿನಕಾಯಿ ಬಿದ್ದರೆ ಅದು ಆರ್ಥಿಕ ಸಂಕಷ್ಟದ ಸೂಚನೆ ಎಂದು ಹೇಳಲಾಗುತ್ತದೆ. ಅದೇ ರೀತಿಯಲ್ಲಿ, ತೆಂಗಿನಕಾಯಿ ಬಿರುಕು ಬಿಟ್ಟರೆ ಮನೆಯ ಸದಸ್ಯರಲ್ಲಿ ಯಾರಿಗಾದರೂ ಅಪಘಾತ ಅಥವಾ ಅಸ್ವಸ್ಥತೆ ಉಂಟಾಗುವ ಸೂಚನೆ ಎಂದು ಜ್ಯೋತಿಷ ನಂಬಿಕೆ ಇದೆ.

ತೆಂಗಿನಕಾಯಿಯಲ್ಲಿ ನೀರು ಇಲ್ಲದಿದ್ದರೆ ಯಾವ ಕಷ್ಟಗಳು ಬರುತ್ತವೆ:

ತೆಂಗಿನಕಾಯಿಯೊಳಗೆ ನೀರು ಇರದಿದ್ದರೆ ಅದು ಶುಭ ಸೂಚಕವಲ್ಲ. ಅಂತಹ ತೆಂಗಿನಕಾಯಿಯನ್ನು ಕಳಶಕ್ಕೆ ಇಟ್ಟರೆ ಸಂತಾನ ಭಾಗ್ಯದಲ್ಲಿ ತೊಂದರೆ ಅಥವಾ ಮಕ್ಕಳ ಜೀವನದಲ್ಲಿ ಅಡೆತಡೆಗಳು ಎದುರಾಗಬಹುದು ಎಂದು ಹೇಳಲಾಗುತ್ತದೆ.

ಇನ್ನು, ಪೂಜೆಯ ನಂತರ ಆ ತೆಂಗಿನಕಾಯಿಯನ್ನು ಯಾರಿಗಾದರೂ, ವಿಶೇಷವಾಗಿ ಅರ್ಚಕರಿಗೆ ನೀಡಬಾರದು. ಹೀಗೆ ಮಾಡಿದರೆ ನಾವು ಮಾಡಿದ ಪೂಜೆಯ ಫಲ ನಮ್ಮಿಂದ ದೂರವಾಗಿ, ಅದನ್ನು ಸ್ವೀಕರಿಸಿದವರ ಪಾಲಾಗುತ್ತದೆ ಎಂಬ ನಂಬಿಕೆ ಇದೆ.

ಒಟ್ಟಾರೆಯಾಗಿ, ಕಳಶಕ್ಕೆ ಇಟ್ಟ ತೆಂಗಿನಕಾಯಿ ದೇವರ ಆಶೀರ್ವಾದದ ಪ್ರತೀಕ. ಅದನ್ನು ಗೌರವದಿಂದ ನಿರ್ವಹಿಸುವುದು ಅತ್ಯವಶ್ಯಕ. ಪೂಜೆಯ ನಂತರ ಸಿಹಿ ತಿನಿಸು ತಯಾರಿಸಿ ಹಂಚುವುದು ಅತ್ಯುತ್ತಮ ವಿಧಾನವೆಂದು ಶಾಸ್ತ್ರ ಮತ್ತು ಜ್ಯೋತಿಷ ಹೇಳುತ್ತದೆ.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories