Picsart 25 10 27 23 20 18 052 scaled

ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಹಗರಣ: l ಬಾಡಿಗೆ ಮನೆ ಪಡೆಯುವವರು ಹುಷಾರ್‌!

Categories:
WhatsApp Group Telegram Group

ಸಿಲಿಕಾನ್ ಸಿಟಿ ಎಂದೇ ಹೆಸರಾದ ಈ ನಗರದಲ್ಲಿ ಕೆಲಸ, ಶಿಕ್ಷಣ ಮತ್ತು ಜೀವನೋಪಾಯಕ್ಕಾಗಿ ದೇಶದ ನಾನಾ ಭಾಗಗಳಿಂದ ಜನ ಇಲ್ಲಿ ಬಂದು ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಆದರೆ ಈ ನಗರದಲ್ಲಿ ಮನೆ ಬಾಡಿಗೆಗೆ ಪಡೆಯುವುದು ಒಂದು ಟೆಕ್ ಜಾಬ್‌ ಸಿಗುವುದಕ್ಕಿಂತಲೂ ಕಷ್ಟ ಎನ್ನುವ ಮಾತು ಈಗ ಜನರ ನಡುವೆ ಚರ್ಚೆಯಾಗಿದೆ. ಮನೆ ಬಾಡಿಗೆಗೆ ಪಡೆಯಲು ಬರುವವರು ಹೆಚ್ಚು ಸಂಬಳವಿರುವವರು ಅಥವಾ ಕುಟುಂಬ ಸಮೇತರಾಗಿ ಬರುವವರಾಗಿರಲಿ ಎಲ್ಲರಿಗೂ ಒಂದೇ ವಿಷಯ ತಲೆನೋವು ಅದುವೇ ಅಡ್ವಾನ್ಸ್ ಹಣವನ್ನು ಹಿಂತಿರುಗಿಸುವುದು.  ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು ಬಾಡಿಗೆ ಮಾರುಕಟ್ಟೆ ಈಗ ಒಂದು ರೀತಿ ಬಿಸಿನೆಸ್ ಇಂಡಸ್ಟ್ರಿ ಆಗಿಬಿಟ್ಟಿದೆ. ಪ್ರತಿ ಏರಿಯಾಗಳಲ್ಲೂ ಬಾಡಿಗೆ ದರ ದಿನದಿಂದ ದಿನಕ್ಕೆ ಏರುತ್ತಿದ್ದು, ಮಾಲೀಕರು ತಮ್ಮ ನಿಯಮಗಳ ಪ್ರಕಾರ ಬಾಡಿಗೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ಬಾಡಿಗೆಗೂ ಮುನ್ನ 6 ತಿಂಗಳಿಂದ 1 ವರ್ಷದವರೆಗೆ ಬಾಡಿಗೆ ಮೊತ್ತವನ್ನು ಅಡ್ವಾನ್ಸ್ ರೂಪದಲ್ಲಿ ಪಡೆಯುವುದು ರೂಢಿಯಾಗಿದೆ. ಈ ಹಣವನ್ನು ಬಾಡಿಗೆದಾರರು ಮನೆ ಖಾಲಿ ಮಾಡುವಾಗ ಹಿಂದಿರುಗಿಸುವುದು ಒಪ್ಪಂದದ ಪ್ರಕಾರ ಕಡ್ಡಾಯ. ಆದರೆ ಈಗ ಈ ನಿಯಮದ ಪಾಲನೆಗೆ ತೀವ್ರ ಕೊರತೆ ಕಾಣಿಸುತ್ತಿದೆ.

ಅಡ್ವಾನ್ಸ್ ಹಣ ಹಿಂತಿರುಗಿಸುವಲ್ಲಿ ಮೋಸ :

ಇತ್ತೀಚಿನ ದಿನಗಳಲ್ಲಿ ಅನೇಕ ಬಾಡಿಗೆದಾರರು ತಮ್ಮ ಮಾಲೀಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ಬಾಡಿಗೆದಾರರು ಹೇಳುವ ಪ್ರಕಾರ ಮನೆ ಖಾಲಿ ಮಾಡಿದ ನಂತರವೂ ಠೇವಣಿ ಹಣವನ್ನು ವಾಪಸ್ ಕೊಡದೇ ಮಾಲೀಕರು ನಾಪತ್ತೆಯಾಗುತ್ತಿದ್ದಾರೆ. ಕೆಲವರು ಫೋನ್ ಕರೆಗೂ ಉತ್ತರಿಸುತ್ತಿಲ್ಲ, ಮೆಸೇಜ್‌ಗೂ ಪ್ರತಿಕ್ರಿಯಿಸುತ್ತಿಲ್ಲ. ಕೆಲವು ಘಟನೆಗಳಲ್ಲಿ ಮಾಲೀಕರು ಹೊಸ ಬಾಡಿಗೆದಾರರಿಗೆ ಮನೆ ಬಾಡಿಗೆಗೆ ಕೊಟ್ಟು ಹಿಂದಿನವರ ಠೇವಣಿ ಹಣವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾರೆ.

ಒಬ್ಬ ಬಿಟಿಎಂ ಲೇಔಟ್‌ನ ಬಾಡಿಗೆದಾರರು ತಮ್ಮ ಅಳಲನ್ನು ತೋಡಿಕೊಂಡಿದ್ದು, ನಾವು ಒಪ್ಪಂದದ ಪ್ರಕಾರ ಮನೆ ಖಾಲಿ ಮಾಡಿದೆವು. ಆದರೆ ಮಾಲೀಕರು ನಮ್ಮ ಠೇವಣಿ ಹಣವನ್ನು ನೀಡದೇ ಕಾಣೆಯಾಗಿದ್ದಾರೆ. ಫೋನ್ ಕರೆಗಳಿಗೆ ಉತ್ತರ ಇಲ್ಲ, ಮೆಸೇಜ್‌ಗಳಿಗೂ ಪ್ರತಿಕ್ರಿಯೆ ಇಲ್ಲ. ಕೊನೆಗೆ ನಾವು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇವೆ ಎಂದು ತಿಳಿಸಿದ್ದಾರೆ. 

ಇದೇ ರೀತಿ ಅನೇಕರು ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆವಶ್ಯಕತೆ ಇದ್ದರೆ ಎಲ್ಲ ಸಾಕ್ಷಿಗಳನ್ನು, ಒಪ್ಪಂದದ ಪ್ರತಿಗಳು, ಬ್ಯಾಂಕ್ ವಹಿವಾಟು ದಾಖಲೆಗಳು, ಕರೆಗಳ ರೆಕಾರ್ಡ್‌ಗಳು  ಎಲ್ಲವನ್ನೂ ಕೊಡಲು ಸಿದ್ಧ ಎಂದು ಕೆಲವರು ತಿಳಿಸಿದ್ದಾರೆ.

ಹೊಸ ದಂಧೆ ಶುರುಮಾಡಿಕೊಂಡ ಮಾಲೀಕರು?:

ನಗರದ ಅನೇಕ ಭಾಗಗಳಲ್ಲಿ, ಇಂದಿರಾನಗರ, ಬಿಟಿಎಂ, ಜಯನಗರ, ವೈಟ್‌ಫೀಲ್ಡ್ ಮುಂತಾದ ಪ್ರದೇಶಗಳಲ್ಲಿ ಕೆಲವು ಮಾಲೀಕರು ಈ ಠೇವಣಿ ಹಣವನ್ನೇ ದಂಧೆಯಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಗಳು ಕೇಳಿಬಂದಿವೆ. ಲಕ್ಷಾಂತರ ರೂಪಾಯಿ ಅಡ್ವಾನ್ಸ್ ಪಡೆಯುವುದು, ಆದರೆ ವಾಪಸ್ ಕೊಡದಿರುವುದು ಈಗ ಬೆಂಗಳೂರಿನ ಹೊಸ ಬಾಡಿಗೆ ಹಗರಣ ಎಂದು ಜನ ಹೇಳುತ್ತಿದ್ದಾರೆ.

ನ್ಯಾಯಕ್ಕಾಗಿ ಜನರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದು, ಠೇವಣಿ ಹಣ ವಾಪಸ್ ಕೊಡದ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಯಲ್ಲಿ ಬಾಡಿಗೆದಾರರ ಹಕ್ಕು ರಕ್ಷಿಸುವ ಕಾನೂನು ತರುವ ಅಗತ್ಯವಿದೆ ಎಂಬ ಬೇಡಿಕೆಗಳು ಇಡುತ್ತಿದ್ದಾರೆ.

ಪೊಲೀಸ್ ಮತ್ತು ಸರ್ಕಾರದ ಕ್ರಮ ಅಗತ್ಯ:

ಈ ರೀತಿಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆದರೆ ತಾತ್ಕಾಲಿಕ ಪರಿಹಾರಕ್ಕಿಂತ, ಸ್ಪಷ್ಟ ಕಾನೂನು ನಿಯಮಗಳು ಮತ್ತು ಬಾಡಿಗೆ ಒಪ್ಪಂದ ನೋಂದಣಿಯ ಕಡ್ಡಾಯತೆ ಅಗತ್ಯ ಎಂದು ವಕೀಲರು ಸೂಚಿಸುತ್ತಿದ್ದಾರೆ. ಸರ್ಕಾರ ಬಾಡಿಗೆದಾರರ ಹಿತಕ್ಕಾಗಿ ನಿಯಮಾವಳಿಗಳನ್ನು ರೂಪಿಸುವ ಕಾಲ ಬಂದಿದೆ.

ಒಟ್ಟಾರೆಯಾಗಿ, ಬೆಂಗಳೂರು ನಗರದಲ್ಲಿ ಬಾಡಿಗೆ ಮನೆ ಪಡೆಯುವುದು ಈಗ ಒಂದು ದೊಡ್ಡ ಸವಾಲು. ಠೇವಣಿ ಹಣವನ್ನು ಇಟ್ಟುಕೊಂಡು ಕೆಲ ಮಾಲೀಕರ  ಬಾಡಿಗೆದಾರರಿಗೆ ಮೋಸ ಮಾಡುತ್ತಿದ್ದಾರೆ. ಈ ಹಗರಣದ ವಿರುದ್ಧ ಸರ್ಕಾರ ಮತ್ತು ಪೊಲೀಸರು ತ್ವರಿತ ಕ್ರಮ ಕೈಗೊಂಡರೆ ಮಾತ್ರ ಬಾಡಿಗೆ ಮಾರುಕಟ್ಟೆಯಲ್ಲಿ ವಿಶ್ವಾಸ ಮೂಡಲು ಸಾಧ್ಯ ಎಂದು ಹೇಳಲಾಗುತ್ತಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories