Picsart 25 10 19 22 46 00 931 scaled

ವೈದ್ಯರ 8 ವರ್ಷದ ಹೋರಾಟಕ್ಕೆ ಜಯ: ‘ORS’ ಹೆಸರಿನಲ್ಲಿ ಪಾನೀಯ ಮಾರಾಟಕ್ಕೆ FSSAI ಬ್ರೇಕ್‌

Categories:
WhatsApp Group Telegram Group

ಆರೋಗ್ಯ ರಕ್ಷಣೆ ಮತ್ತು ಮಕ್ಕಳ ಜೀವಭದ್ರತೆಗಾಗಿ ಹೋರಾಟ ನಡೆಸುವ ವೈದ್ಯರು ಎಷ್ಟೋ ಬಾರಿ ಎದುರಿಸಿದ ತೊಂದರೆಗಳು ಕೆಲವೊಮ್ಮೆ ದೊಡ್ಡ ಗೆಲುವಿಗೆ ದಾರಿ ಮಾಡಿಕೊಡುತ್ತವೆ. ಇಂತಹದ್ದೊಂದು ಘಟನೆ ಇದೀಗ ಹೈದರಾಬಾದ್‌ನ ಶಿಶುವೈದ್ಯೆ ಡಾ. ಶಿವರಂಜನಿ(Hyderabad Pediatrician Dr. Shivaranjani) ಅವರ ಶ್ರಮದ ಫಲವಾಗಿ ಮುಂದೆ ಬಂದಿದೆ. ಎಂಟು ವರ್ಷಗಳ ಕಾನೂನು ಹೋರಾಟ, ಅನೇಕ ವಿಫಲ ಪ್ರಯತ್ನಗಳ ನಂತರ, ಭಾರತೀಯ ಆಹಾರ ಸುರಕ್ಷತಾ ಪ್ರಾಧಿಕಾರ (FSSAI) ತಂಪು ಪಾನೀಯಗಳಲ್ಲಿ ‘ORS’ ಎಂಬ ಹೆಸರನ್ನು ಬಳಸುವುದನ್ನು ನಿಷೇಧಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ORS ತಪ್ಪು ಬಳಕೆಗೆ ಕಡಿವಾಣ:

ORS (Oral Rehydration Solution) ಎಂದರೆ ದೇಹದಲ್ಲಿ ನೀರಿನ ಕೊರತೆಯನ್ನು ತಕ್ಷಣ ನೀಗಿಸುವುದಕ್ಕೆ ತೆಗೆದುಕೊಳ್ಳುವ ಔಷಧಿ. ಅದರಲ್ಲಿಯೂ ORS ಎಂಬ ಪದವು (Oral Rehydration Solution) ಆರೋಗ್ಯ ಮತ್ತು ಜೀವ ರಕ್ಷಣೆಯ ಸಂಕೇತವಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಈ ದ್ರಾವಣವು ಅತಿಸಾರ ಅಥವಾ ನೀರಿನಾಂಶದ ಕೊರತೆಯ ಸಮಯದಲ್ಲಿ ಜೀವ ಉಳಿಸುವ ಔಷಧೀಯ ಪರಿಹಾರವಾಗಿದ್ದು, WHO ನಿಗದಿಪಡಿಸಿದ ಪ್ರಮಾಣದಂತೆ ಮಾತ್ರ ಬಳಕೆಗೆ ಮಾಡಬೇಕಾಗಿದೆ.
ಆದರೆ, ಕೆಲವು ಕಂಪನಿಗಳು ಇದೇ ಹೆಸರಿನಲ್ಲಿ ಗ್ಲುಕೋಸ್(Glucose) ಅಂಶ ತುಂಬಾ ಹೆಚ್ಚಿರುವ ಪ್ಯಾಕೇಜ್ ಪಾನೀಯಗಳನ್ನು ಮಾರಾಟ ಮಾಡುತ್ತಿದ್ದು, ಸಾಮಾನ್ಯ ಗ್ರಾಹಕರು ಅದನ್ನು ನಿಜವಾದ ORS ಎಂದೇ ನಂಬಿ ಸೇವಿಸುತ್ತಿದ್ದರು. ಇದು ವಿಶೇಷವಾಗಿ ಮಕ್ಕಳ ಆರೋಗ್ಯಕ್ಕೆ ಗಂಭೀರ ಹಾನಿ ಉಂಟುಮಾಡುವ ಸಾಧ್ಯತೆಯಿತ್ತು.

ಡಾ. ಶಿವರಂಜನಿ ಅವರ ಹೋರಾಟ :

ಹೈದರಾಬಾದ್‌ನ ಶಿಶುವೈದ್ಯೆ ಡಾ. ಶಿವರಂಜನಿ ಅವರು ಈ ವಂಚನೆಯನ್ನು ಮೊದಲಿಗೆ ಗಮನಿಸಿದರು. ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದ ಕೆಲವು ಪ್ಯಾಕೇಜ್ ಪಾನೀಯಗಳಲ್ಲಿ ORS ಎಂಬ ಹೆಸರು ಇದ್ದರೂ, ಅವುಗಳಲ್ಲಿ WHO ಪ್ರಮಾಣಕ್ಕಿಂತ ಹೆಚ್ಚು ಪಟ್ಟು ಗ್ಲುಕೋಸ್ ಇತ್ತು. ಈ ವಿಷಯವನ್ನು ಅವರು ವಿವಿಧ ಸಂಸ್ಥೆಗಳ ಗಮನಕ್ಕೆ ತಂದರೂ ಯಾರೂ ತಕ್ಷಣ ಕ್ರಮ ಕೈಗೊಂಡಿರಲಿಲ್ಲ.
ಆದರೆ ಅವರು ಹಿಂದೆ ಸರಿಯದೇ ನ್ಯಾಯಾಲಯದ ಮೊರೆ ಹೋಗಿ, ಎಂಟು ವರ್ಷಗಳ ಕಾಲ ನಿರಂತರ ಹೋರಾಟ ನಡೆಸಿ, ಕೊನೆಗೆ ನ್ಯಾಯಾಲಯದಲ್ಲಿ ಜಯಗಳಿಸಿ, FSSAI ಯಿಂದ ಸ್ಪಷ್ಟ ಆದೇಶ ಹೊರಬರುವಂತೆ ಮಾಡಿದರು.

FSSAI ನ ಸ್ಪಷ್ಟನೆ:

FSSAI ಸ್ಪಷ್ಟವಾಗಿ ಹೇಳಿರುವ ಪ್ರಕಾರ, ORS ಎಂಬ ಹೆಸರು ವೈದ್ಯಕೀಯ ಉದ್ದೇಶಕ್ಕೆ ಮೀಸಲಾಗಿದ್ದು, ಅದನ್ನು ಯಾವುದೇ ರೀತಿಯ ತಂಪು ಪಾನೀಯಗಳ ಬ್ರಾಂಡ್ ಹೆಸರು ಅಥವಾ ಮಾರ್ಕೆಟಿಂಗ್ ಟ್ಯಾಗ್(Marketing tag) ಹಾಕಿ ಬಳಸುವುದು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ, 2006 ರ ಉಲ್ಲಂಘನೆಯಾಗಿದೆ.
ಈ ಹಿನ್ನೆಲೆಯಲ್ಲಿ, ORS ಹೆಸರಿನಲ್ಲಿ ಪಾನೀಯ ಮಾರಾಟ ಮಾಡುತ್ತಿದ್ದ ಕಂಪನಿಗಳು ಇದೀಗ ತಮ್ಮ ಉತ್ಪನ್ನದ ಹೆಸರನ್ನು ಬದಲಾಯಿಸಬೇಕಾಗಿದೆ.

ಒಟ್ಟಾರೆಯಾಗಿ, ಮಕ್ಕಳ ಆರೋಗ್ಯ ಮತ್ತು ಜೀವದ ಬಗ್ಗೆ ಕಾಳಜಿ ತೋರಿದ ಡಾ. ಶಿವರಂಜನಿ ಅವರ ಸಾಮಾಜಿಕ ಜವಾಬ್ದಾರಿ, ದೃಢತೆ ಮತ್ತು ನ್ಯಾಯದ ಹೋರಾಟ ಇಂದು ಸಾವಿರಾರು ಪೋಷಕರು ಮತ್ತು ಮಕ್ಕಳಿಗೆ ಉಪಯುಕ್ತವಾಗಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories