6307683177178270645

EPFO ಗ್ರಾಹಕರಿಗೆ ಗುಡ್ ನ್ಯೂಸ್: ಇಪಿಎಫ್ ಖಾತೆಯಿಂದ ಶೇ.75 ರಷ್ಟು ಹಣ ತಕ್ಷಣವೇ ಡ್ರಾ: ಸರ್ಕಾರದಿಂದ ಸ್ಪಷ್ಟನೆ.!

Categories:
WhatsApp Group Telegram Group

ಇಪಿಎಫ್ (EPF) ಹಣ ಹಿಂಪಡೆಯುವಿಕೆ ಬಗ್ಗೆ ಇರುವ ಗೊಂದಲಗಳು, ತಪ್ಪು ಕಲ್ಪನೆ ಮತ್ತು ಅಪೂರ್ಣ ಮಾಹಿತಿಯನ್ನು ಹೋಗಲಾಡಿಸುವ ಉದ್ದೇಶದಿಂದ ಕೇಂದ್ರ ಕಾರ್ಮಿಕ ಸಚಿವಾಲಯ ಬುಧವಾರ ಮಹತ್ವದ ಸ್ಪಷ್ಟೀಕರಣ ನೀಡಿದೆ. ಉದ್ಯೋಗವನ್ನು ತೊರೆದ ತಕ್ಷಣವೇ ಇಪಿಎಫ್ ಖಾತೆಯಲ್ಲಿನ ಶೇ. 75ರಷ್ಟು ಹಣವನ್ನು ಹಿಂಪಡೆಯಲು ಹೊಸ ನಿಯಮಗಳು ಅವಕಾಶ ನೀಡುತ್ತವೆ ಎಂದು ಸಚಿವಾಲಯ ತಿಳಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

“ಒಂದು ವೇಳೆ ವ್ಯಕ್ತಿಯು ಒಂದು ವರ್ಷದವರೆಗೆ ನಿರುದ್ಯೋಗಿಯಾಗಿ ಉಳಿದರೆ, ಅವರು ಇಪಿಎಫ್ ಖಾತೆಯಲ್ಲಿರುವ ಸಂಪೂರ್ಣ ಬಾಕಿ ಹಣವನ್ನು ಹಿಂಪಡೆಯಲು ಅರ್ಹರಾಗಿರುತ್ತಾರೆ” ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

“ಈ ಹೊಸ ನಿಬಂಧನೆಗಳು ಸೇವೆಯಲ್ಲಿನ ನಿರಂತರತೆ, ಉತ್ತಮ ಅಂತಿಮ ಪಿಎಫ್ ಇತ್ಯರ್ಥ ಮೊತ್ತ ಮತ್ತು ಕುಟುಂಬಕ್ಕೆ ಯಾವುದೇ ಆರ್ಥಿಕ ತೊಂದರೆ ಉಂಟಾಗದಂತೆ ಖಚಿತಪಡಿಸುತ್ತವೆ” ಎಂದು ಸಚಿವಾಲಯ ಮಾಹಿತಿ ನೀಡಿದೆ.

ಇಪಿಎಫ್ ಚಂದಾದಾರರಿಗೆ ಹೆಚ್ಚಿನ ಅನುಕೂಲ ಒದಗಿಸುವ ದೃಷ್ಟಿಯಿಂದ, ಕೇಂದ್ರ ಟ್ರಸ್ಟಿಗಳ ಮಂಡಳಿ (CBT) ಈ ಮೊದಲು ಇದ್ದ 13 ಸಂಕೀರ್ಣ ನಿಯಮಗಳನ್ನು ಒಂದೇ ನಿಯಮದ ಅಡಿಯಲ್ಲಿ ತಂದಿದೆ. ಇದರ ಅನ್ವಯ ಅನಾರೋಗ್ಯ, ಶಿಕ್ಷಣ, ಮದುವೆ, ವಸತಿ ಅಗತ್ಯಗಳು ಮತ್ತು ಇತರ ವಿಶೇಷ ಸಂದರ್ಭಗಳಂತಹ ತುರ್ತು ಪರಿಸ್ಥಿತಿಗಳಲ್ಲಿ ಪಿಎಫ್ (PF) ಹಣವನ್ನು ಶೇ. 100ರಷ್ಟು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈಗ ಉದ್ಯೋಗಿಗಳು ತಮ್ಮ ಪಾಲಿನ ಜೊತೆಗೆ ಉದ್ಯೋಗದಾತರು ಠೇವಣಿ ಇಟ್ಟಿರುವ ಪಿಎಫ್ ಹಣವನ್ನೂ ಸಹ ಹಿಂಪಡೆಯಬಹುದಾಗಿದೆ.

ಈ ಹಿಂದೆ ಮದುವೆ ಮತ್ತು ಶಿಕ್ಷಣ ಎರಡಕ್ಕೂ ಪಿಎಫ್ ಖಾತೆಯಿಂದ ಭಾಗಶಃ ಹಣ ಹಿಂಪಡೆಯುವಿಕೆಯನ್ನು ಕೇವಲ 3 ಬಾರಿ ಮಾತ್ರ ಅನುಮತಿಸಲಾಗಿತ್ತು. ಆದರೆ, ಈಗ ಈ ನಿಯಮವನ್ನು ಮತ್ತಷ್ಟು ಸರಳೀಕರಿಸಲಾಗಿದೆ. ಈಗ ಶಿಕ್ಷಣದ ಅಗತ್ಯಗಳಿಗಾಗಿ 10 ಬಾರಿ ಮತ್ತು ಮದುವೆ ಉದ್ದೇಶಕ್ಕಾಗಿ 5 ಬಾರಿ ಭವಿಷ್ಯ ನಿಧಿಯನ್ನು (Provident Fund) ಹಿಂಪಡೆಯಲು ಅನುಮತಿ ನೀಡಲಾಗಿದೆ. ಆದಾಗ್ಯೂ, ಯಾವುದೇ ಉದ್ಯೋಗಿ ಪಿಎಫ್ ಹಿಂಪಡೆಯಲು ಬಯಸಿದರೆ, ಅವರು ಕನಿಷ್ಠ 12 ತಿಂಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories