Picsart 25 10 13 22 53 23 365 scaled

ಆಧಾರ್ ಕಾರ್ಡ್ ಕಳೆದುಹೋಗಿದೆಯಾ? UIDAI ನೀಡಿದ ಈ ಸುಲಭ ಮಾರ್ಗದಿಂದ ಕೆಲವೇ ನಿಮಿಷಗಳಲ್ಲಿ ಮರಳಿ ಪಡೆಯಿರಿ!

Categories:
WhatsApp Group Telegram Group

ಇಂದಿನ ಡಿಜಿಟಲ್ ಯುಗದಲ್ಲಿ ಆಧಾರ್ ಕಾರ್ಡ್‌ (Aadhaar Card) ಎಂಬುದು ಪ್ರತಿಯೊಬ್ಬ ಭಾರತೀಯ ನಾಗರಿಕರಿಗೂ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಜನನದ ನಂತರ ಶಾಲಾ ಪ್ರವೇಶದಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವ ತನಕ, ಮೊಬೈಲ್ ಸಿಮ್ ಖರೀದಿಯಿಂದ ಪಾಸ್‌ಪೋರ್ಟ್ ಸಿದ್ಧಪಡಿಸುವ ತನಕ, ಪ್ರತಿಯೊಂದು ಹಂತದಲ್ಲೂ ಆಧಾರ್ ನಂಬರಿನ ಮಹತ್ವ ಅಪಾರವಾಗಿದೆ. ಸರ್ಕಾರ ನೀಡುವ ಸಬ್ಸಿಡಿ ಯೋಜನೆಗಳು, ತೆರಿಗೆ ಸಲ್ಲಿಕೆ (ITR), ಬ್ಯಾಂಕಿಂಗ್ ವ್ಯವಹಾರಗಳು, ಪಿಂಚಣಿ, ಸರಕಾರಿ ನೆರವು ಮತ್ತು ಅನೇಕ ಸೇವೆಗಳಲ್ಲಿ ಆಧಾರ್ ಪ್ರಮುಖ ಗುರುತಿನ ದಾಖಲೆ ಆಗಿ ಪರಿಣಮಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಆದರೆ ಕೆಲವೊಮ್ಮೆ ಆಧಾರ್ ಕಾರ್ಡ್ ಕಳೆದುಹೋಗುವುದು, ಅಥವಾ ಆಧಾರ್ ನಂಬರನ್ನೇ ಮರೆತಿರುವಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಕೆಲವು ವೇಳೆ ಜೆರಾಕ್ಸ್ ಕಾಪಿಗಳೂ ಲಭ್ಯವಿರದೇ, ತುರ್ತು ಸಂದರ್ಭಗಳಲ್ಲಿ ಜನರು ಸಂಕಷ್ಟಕ್ಕೆ ಸಿಲುಕುವ ಸ್ಥಿತಿಯೂ ಉಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹೊಸ ಆಧಾರ್ ಕಾರ್ಡ್ ಪಡೆಯುವುದು ಅಥವಾ ನಂಬರನ್ನು ಮರಳಿ ಹುಡುಕುವುದು ಕಷ್ಟಕರ ಕೆಲಸವೆಂದು ಬಹುತೇಕರು ಭಾವಿಸುತ್ತಾರೆ.
ಆದರೆ ಈಗ ಈ ಸಮಸ್ಯೆಗೆ UIDAI (Unique Identification Authority of India) ಅತ್ಯಂತ ಸುಲಭ ಮತ್ತು ವೇಗವಾದ ಪರಿಹಾರವನ್ನು ತಂದಿದೆ. ಕೇವಲ ಒಂದು ಕಾಲ್ ಅಥವಾ ಆನ್‌ಲೈನ್‌ನಲ್ಲಿ ಕೆಲವು ಹಂತಗಳನ್ನು ಅನುಸರಿಸುವ ಮೂಲಕ, ನಿಮ್ಮ ಕಳೆದುಹೋದ ಆಧಾರ್ ಸಂಖ್ಯೆ ಅಥವಾ ಎನ್‌ರೋಲ್‌ಮೆಂಟ್ ಐಡಿ (EID) ಅನ್ನು ಕೆಲವೇ ನಿಮಿಷಗಳಲ್ಲಿ ಮರಳಿ ಪಡೆಯಬಹುದು.

UIDAI ನ ಹೊಸ ಟೋಲ್-ಫ್ರೀ ಕಾಲ್ ಸೌಲಭ್ಯ :

UIDAI ಈಗ ನಾಗರಿಕರ ಅನುಕೂಲಕ್ಕಾಗಿ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1947 ಅನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆಗೆ ಯಾವುದೇ ನೆಟ್‌ವರ್ಕ್‌ನಿಂದ ಕರೆ ಮಾಡಿ, 24×7 ಸಮಯದಲ್ಲಿ ಆಧಾರ್ ಸಂಬಂಧಿತ ಮಾಹಿತಿಯನ್ನು ಪಡೆಯಬಹುದು.
ಮೊದಲಿಗೆ ನಿಮ್ಮ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್‌ನಿಂದ 1947 ಗೆ ಕರೆ ಮಾಡಿ.
ನಂತರ ಮಾತನಾಡಲು ಬಯಸುವ ಭಾಷೆಯನ್ನು (ಹಿಂದಿ/ಇಂಗ್ಲಿಷ್/ಪ್ರಾದೇಶಿಕ ಭಾಷೆ) ಆಯ್ಕೆಮಾಡಿ.
ತದನಂತರ “Aadhaar Services” ಅಥವಾ “Aadhaar Status” ಆಯ್ಕೆಯನ್ನು ಆರಿಸಿ.
ಏಜೆಂಟ್ ಜೊತೆ ಮಾತನಾಡಲು ಆಯ್ಕೆ ಮಾಡಿ.
ನಿಮ್ಮ ಗುರುತಿನ ದೃಢೀಕರಣಕ್ಕಾಗಿ ಹೆಸರು, ಜನ್ಮದಿನಾಂಕ ಅಥವಾ ಪಿನ್‌ಕೋಡ್ ಮುಂತಾದ ಮಾಹಿತಿ ನೀಡಿ.
ಎಲ್ಲಾ ವಿವರಗಳನ್ನು ದೃಢಪಡಿಸಿದ ನಂತರ, ಏಜೆಂಟ್ ನಿಮ್ಮ UID (Aadhaar Number) ಅಥವಾ EID ಯನ್ನು(Enrollment ID) SMS ಮೂಲಕ ಕಳುಹಿಸುತ್ತಾರೆ.
ಈ ಪ್ರಕ್ರಿಯೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಎಲ್ಲ ರೀತಿಯ ಮೊಬೈಲ್ ನೆಟ್‌ವರ್ಕ್‌ಗಳಿಂದ ಮಾಡಬಹುದು.

UIDAI ವೆಬ್‌ಸೈಟ್ ಮೂಲಕವೂ ಮರಳಿ ಪಡೆಯಬಹುದು Aadhaar/EID:

ಫೋನ್ ಮೂಲಕವಷ್ಟೇ ಅಲ್ಲ, UIDAI ಅಧಿಕೃತ ವೆಬ್‌ಸೈಟ್‌ನಲ್ಲಿ ಕಳೆದುಹೋದ ಆಧಾರ್ ಅಥವಾ ಎನ್‌ರೋಲ್‌ಮೆಂಟ್ ಐಡಿಯನ್ನು ಮರಳಿ ಪಡೆಯುವ ಆಯ್ಕೆಯೂ ಇದೆ.
ಆನ್‌ಲೈನ್‌ನಲ್ಲಿ ಹೀಗೆ ಮಾಡಿ,
ಬ್ರೌಸರ್‌ನಲ್ಲಿ https://uidai.gov.in ಗೆ ತೆರಳಿ.
My Aadhaar ಟ್ಯಾಬ್‌ನಲ್ಲಿ Retrieve Lost or Forgotten UID/EID ಆಯ್ಕೆಮಾಡಿ.
Aadhaar Number ಅಥವಾ Enrollment ID ಎಂಬ ಆಯ್ಕೆಯೊಂದನ್ನು ಆರಿಸಿ.
ನಿಮ್ಮ ಹೆಸರು ಹಾಗೂ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿ ನಮೂದಿಸಿ.
ಕ್ಯಾಪ್ಟಾ ಕೋಡ್ ನಮೂದಿಸಿ Send OTP ಕ್ಲಿಕ್ ಮಾಡಿ.
ಬಂದ OTP ಅನ್ನು ನಮೂದಿಸಿ Verify OTP ಕ್ಲಿಕ್ ಮಾಡಿ.
ಪರಿಶೀಲನೆ ಮುಗಿದ ಕೂಡಲೇ ನಿಮ್ಮ Aadhaar ಅಥವಾ EID ನಂಬರ್‌ನ್ನು ನಿಮ್ಮ ಮೊಬೈಲ್‌ಗೆ SMS ಮೂಲಕ ಕಳುಹಿಸಲಾಗುತ್ತದೆ.

ಇನ್ನು, ಆಧಾರ್ ಕಾರ್ಡ್ ಕಳೆದುಹೋದಾಗ, ಆತಂಕಪಡುವ ಬದಲು UIDAI ನೀಡಿರುವ ಈ ಸರಳ ಹಾಗೂ ಅಧಿಕೃತ ಮಾರ್ಗಗಳನ್ನು ಬಳಸುವುದು ಅತ್ಯಂತ ಸುರಕ್ಷಿತ ಮತ್ತು ವೇಗವಾದ ವಿಧಾನವಾಗಿದೆ. ಅಕ್ರಮವಾಗಿ ವೆಬ್‌ಸೈಟ್‌ಗಳು ಅಥವಾ ಏಜೆಂಟ್ಸ್ ಮೂಲಕ ಮಾಹಿತಿ ನೀಡುವ ಪ್ರಯತ್ನಗಳನ್ನು ತಪ್ಪಿಸಿಕೊಳ್ಳಿ. UIDAI ನ ಅಧಿಕೃತ ಪ್ಲಾಟ್‌ಫಾರ್ಮ್‌ಗಳ ಮೂಲಕವೇ ಕಾರ್ಯಾಚರಣೆ ಮಾಡಿದರೆ, ನಿಮ್ಮ ವೈಯಕ್ತಿಕ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿರುತ್ತದೆ.

ಗಮನಿಸಿ:
UIDAI ಟೋಲ್-ಫ್ರೀ ಸಂಖ್ಯೆ: 1947
ವೆಬ್‌ಸೈಟ್: https://uidai.gov.in
ಸೇವೆ: 24×7 ಲಭ್ಯ

ಒಟ್ಟಾರೆಯಾಗಿ, ಮುಂದೆ ಆಧಾರ್ ಕಾರ್ಡ್ ಕಳೆದುಹೋದ್ರೂ ಚಿಂತಿಸಬೇಕಾಗಿಲ್ಲ. ಫೋನ್ ಅಥವಾ ಇಂಟರ್‌ನೆಟ್ ಮೂಲಕ ಕೆಲವೇ ನಿಮಿಷಗಳಲ್ಲಿ ನಿಮ್ಮ Aadhaar ಅಥವಾ Enrollment ID ಮರಳಿ ಪಡೆದುಕೊಳ್ಳಬಹುದು.!

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories