Picsart 25 09 19 23 02 04 386 scaled

ಬರೀ ಐದು ವರ್ಷ ಪ್ರೀಮಿಯಮ್ ಕಟ್ಟಿದ್ರೆ ಸಿಗುತ್ತೆ ಜೀವನ ಪೂರ್ತಿ ಆದಾಯ ಜೀವನ್ ಉತ್ಸವ್ ಯೋಜನೆ

Categories:
WhatsApp Group Telegram Group

ಭಾರತದಲ್ಲಿ ಜೀವನ ವಿಮೆ (Life Insurance) ಎಂದರೆ ಕೇವಲ ಅಪಘಾತ ಅಥವಾ ಸಾವಿನ ಸಂದರ್ಭದಲ್ಲಿ ಹಣಕಾಸಿನ ಭದ್ರತೆಯನ್ನು ನೀಡುವುದಷ್ಟೇ ಅಲ್ಲ, ಅದು ಕುಟುಂಬಕ್ಕೆ ಭವಿಷ್ಯದಲ್ಲಿ ನಿರಂತರ ಆದಾಯದ ಮೂಲವಾಗಿಯೂ ಕಾರ್ಯನಿರ್ವಹಿಸುತ್ತದೆ. ದೇಶದ ಅತಿದೊಡ್ಡ ಮತ್ತು ವಿಶ್ವಾಸಾರ್ಹ ಇನ್ನೂರೆನ್ಸ್ ಸಂಸ್ಥೆಯಾದ ಎಲ್‌ಐಸಿ (LIC) ಇತ್ತೀಚೆಗೆ ಪರಿಚಯಿಸಿರುವ ಜೀವನ್ ಉತ್ಸವ್ ಪಾಲಿಸಿ ಇದೇ ದೃಷ್ಟಿಕೋನವನ್ನು ಹೊಂದಿದೆ. ಈ ಪಾಲಿಸಿಯ ವಿಶೇಷತೆ ಏನೆಂದರೆ ಕಡಿಮೆ ಅವಧಿಗೆ (ಕೇವಲ 5 ರಿಂದ 16 ವರ್ಷಗಳವರೆಗೆ) ಪ್ರೀಮಿಯಮ್ ಕಟ್ಟಿದರೆ ಸಾಕು, ನಂತರ ಜೀವನಪೂರ್ತಿ ಆದಾಯವನ್ನು ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹಣಕಾಸು ಸುರಕ್ಷತೆ ಹಾಗೂ ನಿಯಮಿತ ಆದಾಯದ ದ್ವಂದ್ವ ಲಾಭಗಳನ್ನು ಒಟ್ಟುಗೂಡಿಸಿರುವುದರಿಂದ, ಜೀವನ್ ಉತ್ಸವ್ ಹೂಡಿಕೆದಾರರು ಹಾಗೂ ಕುಟುಂಬದ ಭವಿಷ್ಯವನ್ನು ಭದ್ರಪಡಿಸಲು ಬಯಸುವವರಿಬ್ಬರಿಗೂ ಆಕರ್ಷಕ ಆಯ್ಕೆಯಾಗುತ್ತಿದೆ. ವಿಶೇಷವಾಗಿ ನಿವೃತ್ತಿ ಜೀವನದಲ್ಲಿ ನಿಯಮಿತ ಪೇಔಟ್ ಪಡೆಯಲು ಬಯಸುವವರಿಗೆ ಇದು ಅತ್ಯುತ್ತಮ ಯೋಜನೆ.

ಜೀವನ್ ಉತ್ಸವ್ ಪಾಲಿಸಿ ಎಂದರೇನು?:

ಇದು ನಾನ್-ಲಿಂಕ್ಸ್ ಮತ್ತು ನಾನ್-ಪಾರ್ಟಿಸಿಪೇಟಿಂಗ್ ಲೈಫ್ ಇನ್ಸೂರೆನ್ಸ್ ಯೋಜನೆ.
ನಾನ್-ಲಿಂಕ್ಸ್ ಎಂದರೆ, ಈ ಪಾಲಿಸಿಯ ಲಾಭ ಮಾರುಕಟ್ಟೆಯ ಏರಿಳಿತಗಳಿಗೆ ಅವಲಂಬಿತವಿರುವುದಿಲ್ಲ.
ಪಾಲಿಸಿಯನ್ನು ತೆಗೆದುಕೊಳ್ಳುವ ಸಮಯದಲ್ಲೇ ನಿಗದಿಪಡಿಸಿದ ಖಾತ್ರಿ ಮೊತ್ತವನ್ನು ಗ್ರಾಹಕರು ಪಡೆಯುತ್ತಾರೆ.

ಯಾರಿಗೆ ಲಭ್ಯ?

ಕನಿಷ್ಠ 90 ದಿನಗಳ ಮಗುವಿನಿಂದ ಹಿಡಿದು 65 ವರ್ಷದವರೆಗೂ ಯಾರೂ ಪಾಲಿಸಿಯನ್ನು ಪಡೆಯಬಹುದು.
ಕನಿಷ್ಠ ಖಾತ್ರಿ ಮೊತ್ತ (Basic Sum Assured) – ₹5 ಲಕ್ಷ.
ಪ್ರೀಮಿಯಮ್ ಪಾವತಿ ಅವಧಿ – ಕನಿಷ್ಠ 5 ವರ್ಷ, ಗರಿಷ್ಠ 16 ವರ್ಷ.

ಹೇಗೆ ಕೆಲಸ ಮಾಡುತ್ತದೆ?:

ಉದಾಹರಣೆಗೆ, ನೀವು ₹5 ಲಕ್ಷ ರೂ ಖಾತ್ರಿ ಮೊತ್ತವನ್ನು ಆಯ್ದುಕೊಂಡರೆ,
ವರ್ಷಕ್ಕೆ ಸುಮಾರು ₹1.16 ಲಕ್ಷ ರೂ ಪ್ರೀಮಿಯಮ್ ಪಾವತಿಸಬೇಕು.
5 ವರ್ಷಗಳಲ್ಲಿ ಒಟ್ಟಾರೆ ಸುಮಾರು ₹5.80 ಲಕ್ಷ ರೂ ಪಾವತಿಸುತ್ತೀರಿ.
ನಂತರ 5 ವರ್ಷದ ವೇಯಿಂಗ್ ಪೀರಿಯಡ್ ಇರುತ್ತದೆ, ಅಂದರೆ ಈ ಅವಧಿಯಲ್ಲಿ ಯಾವುದೇ ಪೇಔಟ್ ಸಿಗುವುದಿಲ್ಲ.
ಅದರ ಬಳಿಕ, ಜೀವನಪೂರ್ತಿ ಪ್ರತಿ ವರ್ಷ ₹50,000 ರೂ ಪೇಔಟ್ ಪಡೆಯಬಹುದು.
ಅಕಸ್ಮಾತ್ ಸಾವಿನ ಸಂದರ್ಭ ನಾಮಿನಿಗಳಿಗೆ ₹5 ಲಕ್ಷ ರೂ ಪರಿಹಾರ ಲಭ್ಯ.

ಹೆಚ್ಚಿನ ಪೇಔಟ್ ಬೇಕೆಂದರೆ ಏನು ಮಾಡಬೇಕು?:

ಹೆಚ್ಚಿನ ಪೇಔಟ್ ಪಡೆಯಲು ಹೆಚ್ಚಿನ ಸಮ್ ಅಶೂರ್ಡ್ ಆಯ್ಕೆ ಮಾಡಬೇಕು.
ಉದಾಹರಣೆ: ವರ್ಷಕ್ಕೆ ₹5 ಲಕ್ಷ ರೂ ಆದಾಯ ಬೇಕಾದರೆ, ₹50 ಲಕ್ಷ ರೂ ಬೇಸಿಕ್ ಸಮ್ ಅಶೂರ್ಡ್ ಇರುವ ಯೋಜನೆ ಆಯ್ಕೆ ಮಾಡಬೇಕು.
ಇದಕ್ಕಾಗಿ ವರ್ಷಕ್ಕೆ ಸುಮಾರು ₹11 ಲಕ್ಷ ರೂ ಪ್ರೀಮಿಯಮ್, 5 ವರ್ಷಗಳ ಕಾಲ ಪಾವತಿಸಬೇಕು.

ಏಕೆ ಜೀವನ್ ಉತ್ಸವ್ ಆಕರ್ಷಕ?:

ಕಡಿಮೆ ಅವಧಿ ಪಾವತಿ – ಜೀವನಪೂರ್ತಿ ಲಾಭ.
ಮಾರುಕಟ್ಟೆಯ ಏರಿಳಿತಗಳಿಂದ ಮುಕ್ತ.
ನಿವೃತ್ತಿ ಜೀವನಕ್ಕೆ ಸ್ಥಿರ ಆದಾಯ.
ಕುಟುಂಬಕ್ಕೆ ಸುರಕ್ಷಿತ ಭವಿಷ್ಯ.

ಹೀಗಾಗಿ, ನಿಯಮಿತ ಆದಾಯ ಹಾಗೂ ಭದ್ರತೆ ಎರಡನ್ನೂ ಬಯಸುವವರಿಗೆ ಎಲ್‌ಐಸಿಯ ಜೀವನ್ ಉತ್ಸವ್ ಪಾಲಿಸಿ ಅತ್ಯುತ್ತಮ ಆಯ್ಕೆಯಾಗಬಹುದು.

ಒಟ್ಟಾರೆಯಾಗಿ, ಜೀವನ್ ಉತ್ಸವ್ ಪಾಲಿಸಿ ಕೇವಲ ವಿಮೆ ಮಾತ್ರವಲ್ಲ, ಹೂಡಿಕೆಯೊಂದಿಗೆ ಜೀವನಪೂರ್ತಿ ಸ್ಥಿರ ಆದಾಯವನ್ನು ಒದಗಿಸುವ ಯೋಜನೆ. ಕಡಿಮೆ ಅವಧಿಯಲ್ಲಿ ಪ್ರೀಮಿಯಮ್ ಕಟ್ಟಲು ಬಯಸುವವರು ಮತ್ತು ವಯೋವೃದ್ಧಾವಸ್ಥೆಯಲ್ಲಿ ನಿರಂತರ ಆದಾಯದ ಭದ್ರತೆ ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಬಹುದು.

WhatsApp Image 2025 09 05 at 11.51.16 AM 12

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories