ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ನೇಮಕಾತಿ ಮಂಡಳಿ (RRB) ಮೂಲಕ 2025 ರಲ್ಲಿ 30,307 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸರ್ಕಾರದಡಿಯಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಭಾರತೀಯ ರೈಲ್ವೆ ದೇಶದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರತಿವರ್ಷ ಲಕ್ಷಾಂತರ ಅಭ್ಯರ್ಥಿಗಳು ರೈಲ್ವೆ ನೇಮಕಾತಿಗಾಗಿ ಕಾಯುತ್ತಿರುತ್ತಾರೆ. ಇದೇ ಹಿನ್ನಲೆಯಲ್ಲಿ, ರೈಲ್ವೆ ನೇಮಕಾತಿ ಮಂಡಳಿ (RRB) ಇತ್ತೀಚೆಗೆ ಪ್ರಕಟಿಸಿರುವ NTPC (Non-Technical Popular Categories) ನೇಮಕಾತಿ ಅಧಿಸೂಚನೆ 2025, ಉದ್ಯೋಗಾಕಾಂಕ್ಷಿಗಳಿಗೆ ದೊಡ್ಡ ಅವಕಾಶವಾಗಿ ಪರಿಣಮಿಸಿದೆ.
ಈ ನೇಮಕಾತಿಯಡಿಯಲ್ಲಿ ಒಟ್ಟು 30,307 ಹುದ್ದೆಗಳು ಖಾಲಿ ಇರುವುದಾಗಿ ಪ್ರಕಟಿಸಲಾಗಿದೆ. ಅರ್ಜಿ ಪ್ರಕ್ರಿಯೆ 30 ಆಗಸ್ಟ್ 2025ರಿಂದ ಆರಂಭಗೊಂಡಿದ್ದು, 29 ಸೆಪ್ಟೆಂಬರ್ 2025ರವರೆಗೆ ಮುಂದುವರಿಯಲಿದೆ. ಆಸಕ್ತ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಈ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಪ್ರಮುಖ ದಿನಾಂಕಗಳು ಮತ್ತು ಇತರ ಎಲ್ಲ ಅಗತ್ಯ ವಿವರಗಳನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ
ಈ ಬಾರಿ ಪ್ರಕಟಿಸಿರುವ ಹುದ್ದೆಗಳ ಪೈಕಿ ಪ್ರಮುಖ ಹುದ್ದೆಗಳು ಇಂತಿವೆ:
ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು (Chief Commercial & Ticket Supervisor) – 6,235 ಹುದ್ದೆಗಳು – ₹35,400/-
ಸ್ಟೇಷನ್ ಮಾಸ್ಟರ್ (Station Master) – 5,623 ಹುದ್ದೆಗಳು – ₹35,400/-
ಸರಕು ರೈಲು ವ್ಯವಸ್ಥಾಪಕ (Goods Guard) – 3,562 ಹುದ್ದೆಗಳು – ₹29,200/-
ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ & ಟೈಪಿಸ್ಟ್ (JAA & Typist) – 7,520 ಹುದ್ದೆಗಳು – ₹29,200/-
ಹಿರಿಯ ಗುಮಾಸ್ತ & ಬೆರಳಚ್ಚುಗಾರ (Senior Clerk & Typist) – 7,367 ಹುದ್ದೆಗಳು – ₹29,200/-
ಈ ಎಲ್ಲಾ ಹುದ್ದೆಗಳು ಅಖಿಲ ಭಾರತ ಮಟ್ಟದಲ್ಲಿ ಇರುವುದರಿಂದ, ಅಭ್ಯರ್ಥಿಗಳು ದೇಶದ ಯಾವ ರಾಜ್ಯದಲ್ಲಿದ್ದರೂ ಅರ್ಜಿ ಸಲ್ಲಿಸಬಹುದು.
ಅರ್ಹತೆ ಮತ್ತು ವಯೋಮಿತಿ
ಶೈಕ್ಷಣಿಕ ಅರ್ಹತೆ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು.
ವಯಸ್ಸಿನ ಮಿತಿ: 01-ಜನವರಿ-2025 ರಂದು ಕನಿಷ್ಠ 18 ವರ್ಷ ಮತ್ತು ಗರಿಷ್ಠ 36 ವರ್ಷ.
ವಯೋಮಿತಿ ಸಡಿಲಿಕೆ: SC/ST, OBC ಮತ್ತು ಇತರೆ ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ.
ಸಂಬಳ
ಈ ಹುದ್ದೆಗಳ ಸಂಬಳ ₹29,200 ರಿಂದ ₹35,400/- ಪ್ರತಿಮಾಸ ಇರುತ್ತದೆ. ಜೊತೆಗೆ, ಸರ್ಕಾರಿ ನೌಕರರಿಗೆ ದೊರೆಯುವ ಎಲ್ಲಾ ಸೌಲಭ್ಯಗಳು ಮತ್ತು ಭತ್ಯೆಗಳು ಲಭ್ಯವಾಗುತ್ತವೆ.
ಆಯ್ಕೆ ಪ್ರಕ್ರಿಯೆ
RRB ನೇಮಕಾತಿ 2025ರ ಆಯ್ಕೆ ಪ್ರಕ್ರಿಯೆ ಹಂತಗಳು ಹೀಗಿವೆ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)
ಸಂದರ್ಶನ / ದಾಖಲೆ ಪರಿಶೀಲನೆ
ಅರ್ಹ ಅಭ್ಯರ್ಥಿಗಳನ್ನು ಮೆರುಪಟ್ಟಿ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಮೊದಲು RRB ಅಧಿಕೃತ ವೆಬ್‌ಸೈಟ್ indianrailways.gov.in ಗೆ ಭೇಟಿ ನೀಡಿ.
ಅರ್ಜಿ ಲಿಂಕ್: https://indianrailways.gov.in/
ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಪರಿಶೀಲಿಸಿ.
ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಸರಿಯಾದ ಇಮೇಲ್ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ.
ಅಗತ್ಯ ದಾಖಲೆಗಳನ್ನು (ID Proof, ಶಿಕ್ಷಣ ಪ್ರಮಾಣಪತ್ರ, ಫೋಟೋ, ಸಹಿ ಇತ್ಯಾದಿ) ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
ಅನ್ವಯಿಸಿದರೆ, ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
ಕೊನೆಗೆ Submit ಬಟನ್ ಕ್ಲಿಕ್ ಮಾಡಿ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ/ವಿನಂತಿ ಸಂಖ್ಯೆಯನ್ನು ಉಳಿಸಿಕೊಳ್ಳಿ.
ಪ್ರಮುಖ ದಿನಾಂಕಗಳು
ಅರ್ಜಿಗಳನ್ನು ಸ್ವೀಕರಿಸುವ ಪ್ರಾರಂಭ ದಿನಾಂಕ: 30-08-2025
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 29-09-2025
RRB NTPC ನೇಮಕಾತಿ 2025 ಭಾರತದ ಅತಿ ದೊಡ್ಡ ಸರ್ಕಾರಿ ನೇಮಕಾತಿ ಅಭಿಯಾನಗಳಲ್ಲಿ ಒಂದಾಗಿದೆ. ಸರಿಯಾದ ತಯಾರಿಯೊಂದಿಗೆ, ಈ ಅವಕಾಶವನ್ನು ಬಳಸಿಕೊಂಡರೆ, ಅಭ್ಯರ್ಥಿಗಳು ರೈಲ್ವೆಯೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಬಹುದು. ಪದವಿ ಪೂರೈಸಿರುವ ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯೂ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.


ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.