ಡಯಾಬಿಟೀಸ್ ಶಾಶ್ವತ ಪರಿಹಾರಕ್ಕೆ ದಾರಿ: ಚೀನಾದ ವಿಜ್ಞಾನಿಗಳು ಟೈಪ್ 1 ಮತ್ತು ಟೈಪ್ 2 ಡಯಾಬಿಟೀಸ್‌ಗೆ ಸ್ಟೆಮ್ ಸೆಲ್ ಥೆರಪಿಯ ಯಶಸ್ವಿ ಪ್ರಯೋಗಗಳು
ಸಕ್ಕರೆ ಕಾಯಿಲೆ (Disabilities) ಎಂದರೆ ಇಂದಿನ ಯುಗದ ಸೈಲೆಂಟ್ ಕಿಲ್ಲರ್. ಇದು ಶತಮಾನಗಳಿಂದ ಜನಮಾನಸವನ್ನು ಕಾಡುತ್ತಿರುವ ಒಂದು ಗಂಭೀರ ಹಾಗೂ ಜಟಿಲ ಆರೋಗ್ಯ ಸಮಸ್ಯೆಯಾಗಿದ್ದು, ಇತ್ತೀಚಿನ ಯಾಂತ್ರೀಕೃತ ಜೀವನ ಶೈಲಿಯ (Mechanized life style) ಪರಿಣಾಮವಾಗಿ ಈಗ ಪುಟ್ಟ ಮಕ್ಕಳಲ್ಲೂ ಕಾಣಿಸಿಕೊಳ್ಳುತ್ತಿದೆ. ತೀವ್ರ ಆರೋಗ್ಯ ಸಮಸ್ಯೆಗಳ ನಡುವೆ ಸಕ್ಕರೆ ಕಾಯಿಲೆಯು ಬಹುಮಾನ್ಯಸ್ಥಾನ ಪಡೆದಿದ್ದು, ದೇಹದ ಅನೇಕ ಮುಖ್ಯ ಅಂಗಗಳು – ಕಣ್ಣು, ಕಿಡ್ನಿ, ಹೃದಯ, ಲಿವರ್ ಮುಂತಾದವುಗಳಿಗೆ ಅಪಾಯಕಾರಿ ಪರಿಣಾಮಗಳನ್ನು ಉಂಟುಮಾಡುತ್ತಿದೆ. ಟೈಪ್ 1 ಮತ್ತು ಟೈಪ್ 2 ಡಯಾಬಿಟೀಸ್ ಎರಡೂ ಪ್ರಬಲವಾಗಿ ವ್ಯಕ್ತವಾಗುತ್ತಿದ್ದು, ಇವುಗಳಿಂದ ಪೀಡಿತರಾದವರ ಸಂಖ್ಯೆ ವಿಶ್ವದೆಲ್ಲೆಡೆ ಹೆಚ್ಚಾಗಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಇದೀಗ, ಕಳೆದ 15 ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ (Health field) ಚೀನಾದಿಂದ ಎರಡು ಅತ್ಯಂತ ಶ್ರೇಷ್ಠವಾದ ಸಂಶೋಧನೆಗಳ ಶುಭಸುದ್ದಿಗಳು ಬಂದಿದೆ. ಇವು ಶತಮಾನಗಳಿಂದ ಮನುಷ್ಯ ಜಗತ್ತಿನ ಮುಂದಿನ ತಲೆಮಾರಿಗೆ ನಿರಂತರವಾಗಿ ಭೀಕರ ಸಂಕಷ್ಟವಾಗಿ ಉಳಿದಿರುವ ಟೈಪ್ 1 ಮತ್ತು ಟೈಪ್ 2 ಡಯಾಬಿಟೀಸ್ ರೋಗಗಳಿಗೆ ಶಾಶ್ವತ ಪರಿಹಾರ ನೀಡುವ ಮಹತ್ವಪೂರ್ಣ ಸಾಧನೆಗಳಾಗಿವೆ. ಈ ಸಂಶೋಧನೆಗಳು (Research’s) ಮನುಕುಲದ ಆರೋಗ್ಯ ಪ್ರಗತಿಗೆ ಹೊಸ ದಿಕ್ಕು ತೋರಿಸುವಂಥವು, ಜನಜೀವನವನ್ನು ಸಂಪೂರ್ಣವಾಗಿ ಪರಿವರ್ತಿಸುವ ಸಾಮರ್ಥ್ಯ ಹೊಂದಿವೆ.
ಟೈಪ್ 1 ಡಯಾಬಿಟೀಸ್ ಗೆ ಹೊಸ ದಾರಿ: CIPSC-ಆಧಾರಿತ ಸ್ಟೆಮ್ ಸೆಲ್ ಥೆರಪಿ,
ಟೈಪ್ 1 ಡಯಾಬಿಟೀಸ್ ಎಂದರೆ ಪ್ಯಾಂಕ್ರಿಯಾಸ್‌ನ ಬಿಟಾ ಸೆಲ್ಸ್ (Beta cells of the pancreas) ನಾಶವಾಗುವುದರಿಂದ ಇನ್ಸುಲಿನ್ ಉತ್ಪಾದನೆ ಅಸಾಧ್ಯವಾಗುವ ಸನ್ನಿವೇಶ. ಇದಕ್ಕಾಗಿ ಚೀನಾದ ಪೆಕಿಂಗ್ ವಿಶ್ವವಿದ್ಯಾಲಯದ ಟಿಯಾಂಜಿನ್ ಫಸ್ಟ್ ಸೆಂಟ್ರಲ್ ಆಸ್ಪತ್ರೆಯಲ್ಲಿ (At Tianjin First Central Hospital, Peking University, China) ನಡೆದ ಸಂಶೋಧನೆ ಜಗತ್ತಿನ ಗಮನ ಸೆಳೆದಿದೆ. 25 ವರ್ಷದ ಮಹಿಳೆಯೊಬ್ಬರು, 11 ವರ್ಷಗಳಿಂದ ಟೈಪ್ 1 ಡಯಾಬಿಟೀಸ್ ನಿಂದ ಬಳಲುತ್ತಿದ್ದ ಅವರು, ಈ ವಿಶಿಷ್ಟ ಸಂಶೋಧನೆಗೆ ಒಳಗಾದರು.
ಈ ಸಂಶೋಧನೆಯಲ್ಲಿ, ಮಹಿಳೆಯ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಮಾಡಲು ಅಸಮರ್ಥವಾಗಿದ್ದ ಬಿಟಾ ಜೀವಕೋಶಗಳನ್ನು ಸ್ಟೆಮ್ ಸೆಲ್ ಗಳಿಂದ ಬದಲಿಸಲಾಗಿದೆ. CIPSC-derived islet cell transplant ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು, ಆಕೆಯ ಅಡಿಪೋಸ್ ಟಿಶ್ಯುಗಳಿಂದ ಸ್ಟೆಮ್ ಸೆಲ್ ಗಳನ್ನು ಬೇರ್ಪಡಿಸಿ ಪ್ಯಾಂಕ್ರಿಯಾಸ್ ನಲ್ಲಿ ಅಳವಡಿಸಲಾಗಿದೆ. ಈ ಪ್ರಕ್ರಿಯೆಯು ಅತ್ಯಂತ ಜಟಿಲವಾದುದಾಗಿದ್ದು, ಶುದ್ಧ ಪರಿಸ್ಥಿತಿಯಲ್ಲಿಯೇ ನಿರ್ವಹಿಸಲಾಯಿತು.
ಸಂಶೋಧನೆಯ ಪ್ರಕಾರ, 2.5 ತಿಂಗಳಲ್ಲಿ ಆ ಮಹಿಳೆ ಸಂಪೂರ್ಣವಾಗಿ ಇನ್ಸುಲಿನ್ ಉತ್ಪಾದನೆಯಲ್ಲಿ (In insulin production) ಸ್ವತಂತ್ರಳಾದರು. ನಿರಂತರ 5 ತಿಂಗಳ ಅಧ್ಯಯನದ ನಂತರ, ಆಕೆ ಯಾವುದೇ ಇನ್ಸುಲಿನ್ ಮಾತ್ರೆ ಅಥವಾ ಔಷಧಿಯ ಅವಶ್ಯಕತೆ ಇಲ್ಲದೆ, ಸ್ವಾಭಾವಿಕವಾಗಿ ರಕ್ತದಲ್ಲಿ ಶುಗರ್ ನಿಯಂತ್ರಣದಲ್ಲಿಟ್ಟುಕೊಂಡು, ಆರೋಗ್ಯಕರ ಜೀವನವನ್ನು (Healthy Lifestyle) ಸಾಗಿಸುತ್ತಿದ್ದಾರೆ. ಈ ಯಶಸ್ವಿ ಸಂಶೋಧನೆ, 2025 ರ ಅಂಕಿ-ಅಂಶಗಳ ಪ್ರಕಾರ, ಜಗತ್ತಿನಲ್ಲಿ ಟೈಪ್ 1 ಡಯಾಬಿಟೀಸ್‌ನಿಂದ ಬಳಲುತ್ತಿರುವ ಸುಮಾರು 95 ಲಕ್ಷ ಜನರಿಗೆ ಹೊಸ ನಂಬಿಕೆಯ ದಾರಿ ತೋರಲಿದೆ.
ಟೈಪ್ 2 ಡಯಾಬಿಟೀಸ್ ಗೆ ಶಾಶ್ವತ ಪರಿಹಾರ: ಶಾಂಫೈ ಚಾಂಗ್ ಝಂಗ್ ಆಸ್ಪತ್ರೆಯ (Shanfai Changzhang Hospital) ಯಶಸ್ಸು,
ಟೈಪ್ 2 ಡಯಾಬಿಟೀಸ್, ಹೆಚ್ಚು ಜನರು ಪೀಡಿತರಾಗಿರುವ ಇನ್ನೊಂದು ಪ್ರಬಲ ಕಾಯಿಲೆ. ಇತ್ತೀಚೆಗೆ ಶಾಂಫೈ ಚಾಂಗ್ ಝಂಗ್ ಆಸ್ಪತ್ರೆಯ ವಿಜ್ಞಾನಿಗಳು ಈ ಕಾಯಿಲೆಗೆ ಶಾಶ್ವತ ಪರಿಹಾರ ಒದಗಿಸುವ ಪ್ರಯೋಗದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. 59 ವರ್ಷದ ವ್ಯಕ್ತಿಯೊಬ್ಬರು, 25 ವರ್ಷಗಳಿಂದ ಟೈಪ್ 2 ಡಯಾಬಿಟೀಸ್‌ನಿಂದ ಬಳಲುತ್ತಿದ್ದ ಅವರು, ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದರು.
ಸ್ಟೆಮ್ ಸೆಲ್ ಥೆರಪಿಯು (Stem cell therapy) ಮೊದಲನೆಯದಾಗಿ ಸ್ವ-ಜೀವಕೋಶಗಳಿಂದ ಇಲ್ಲವೇ ಅಸ್ಥಿಮಜ್ಜೆಯಿಂದ ಪಡೆಯುವ ಬದಲು, ಆರೋಗ್ಯವಂತ ಡೋನರ್‌ನಿಂದ ಪಡೆದ ಐಲೆಟ್ಸ್ ಆಫ್ ಲ್ಯಾಂಗರ್ ಹ್ಯಾನ್ಸ್ ಮಾದರಿಯ ವಿಶೇಷ ಜೀವಕೋಶಗಳನ್ನು (Specialized cells called islets of Langerhans) ಬಳಸಿಕೊಂಡು ಮಾಡಿದ ಪ್ರಯೋಗವಾಗಿದೆ. 33 ತಿಂಗಳುಗಳ ಅವಧಿಯಲ್ಲಿ, ಈ ಜೀವಕೋಶಗಳು ಸ್ವತಃ ಶರೀರ ಪರಿಸರಕ್ಕೆ ಹೊಂದಿಕೊಂಡು ಇನ್ಸುಲಿನ್ ಉತ್ಪಾದನೆ ಆರಂಭಿಸಿದವು. ಪ್ರಾರಂಭದಲ್ಲಿ ನಿಧಾನವಾಗಿ ಸಾಗಿದ ಪ್ರಕ್ರಿಯೆಯು ಕ್ರಮೇಣ ಫಲಕಾರಿ ಆಗಿ, 59 ವರ್ಷದ ವ್ಯಕ್ತಿಯ ರಕ್ತದಲ್ಲಿ ಗ್ಲೂಕೋಸ್ ನಿಯಂತ್ರಣ ಸಾಧನೆಯಾಯಿತು.
ಸ್ಟೆಮ್ ಸೆಲ್ ಥೆರಪಿಯ ಸವಾಲುಗಳು :
ಈ ಎರಡೂ ಮಹತ್ವದ ಪ್ರಯೋಗಗಳು ಸಕ್ಕರೆ ಕಾಯಿಲೆಯ ವಿರುದ್ಧದ ಯುದ್ಧದಲ್ಲಿ ದೈತ್ಯ ಹೆಜ್ಜೆಯಾಗಿವೆ. ಆದರೆ, ಇವುಗಳನ್ನು ಎಲ್ಲರಿಗೂ ಅನ್ವಯಿಸಲು ಇನ್ನೂ ಹಲವಾರು ಪ್ರಯೋಗಗಳು ಮತ್ತು ಅನುಮೋದನೆಗಳು ಬೇಕಾಗಿವೆ. ಕೆಲವೊಮ್ಮೆ ಈ ತಂತ್ರಜ್ಞಾನಗಳು(Technologies) ಆರಂಭದಲ್ಲಿ ಯಶಸ್ವಿಯಾಗಿದ್ದರೂ, ಕೆಲ ತಿಂಗಳು ಅಥವಾ ವರ್ಷಗಳಲ್ಲಿ ಫಲಿತಾಂಶ ಕಡಿಮೆಯಾಗುವ ಸಾಧ್ಯತೆಗಳಿವೆ.
ಸಾಮಾನ್ಯ ಅಡಚಣೆಗಳು:
ರೋಗ ನಿರೋಧಕ ವ್ಯವಸ್ಥೆಯ ದಾಳಿ: ವಿಶೇಷವಾಗಿ ಟೈಪ್ 1 ಡಯಾಬಿಟೀಸ್ ಪ್ರಕರಣದಲ್ಲಿ, ಶರೀರದ ರೋಗ ನಿರೋಧಕ ವ್ಯವಸ್ಥೆ ಸ್ಟೆಮ್ ಸೆಲ್ ಗಳನ್ನು ಅನ್ಯಜೀವಿಯಾಗಿ ಪರಿಗಣಿಸಿ ಅವುಗಳನ್ನು ನಾಶ ಮಾಡಬಹುದು.
ಗೆಡ್ಡೆ ರಚನೆ (ಟೆರಾಟೋಮಾ): ಸ್ಟೆಮ್ ಸೆಲ್ ಗಳು ಸಂಪೂರ್ಣವಾಗಿ ಬೆಳೆಯದಿದ್ದಲ್ಲಿ ಗೆಡ್ಡೆಗಳಾಗಿ ಪರಿವರ್ತನೆಯ ಸಾಧ್ಯತೆ.
ಸೋಂಕು ಅಥವಾ ಅಂಗ ಹಾನಿ: ಅತ್ಯಂತ ಹೈಜೆನಿಕ್ (Hygenic) ಪರಿಸ್ಥಿತಿಯಲ್ಲಿ ಥೆರಪಿಯನ್ನು ನಿರ್ವಹಿಸದೇ ಇದ್ದಲ್ಲಿ ಗಂಭೀರ ಸೋಂಕು ಉಂಟಾಗಬಹುದು.
ಅತಿಯಾದ ಇನ್ಸುಲಿನ್ ಉತ್ಪತ್ತಿ: ನಿರೀಕ್ಷೆಗಿಂತ ಹೆಚ್ಚು ಇನ್ಸುಲಿನ್ ಉತ್ಪತ್ತಿಯಾಗಿ, ಹೈಪೊಗ್ಲಿಸಿಮಿಯಾ ಉಂಟಾಗುವ ಅಪಾಯ.
ಡಯಾಬಿಟೀಸ್ ಸಮಸ್ಯೆಯು ಈಗಾಗಲೇ ಅನೇಕ ಜನರ ಜೀವನವನ್ನು ಪೀಡಿಸುತ್ತಿದ್ದು, ಇದರ ಶಾಶ್ವತ ಪರಿಹಾರಕ್ಕಾಗಿ ವಿಜ್ಞಾನಿಗಳು ಇತಿಹಾಸ ಉಲ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚೀನಾದ ವಿಜ್ಞಾನಿಗಳ (China scientists) ಈ ಸಾಧನೆ, ಮನುಷ್ಯರು ಬಹುಶಃ ನಿಕಟ ಭವಿಷ್ಯದಲ್ಲಿ ಸಕ್ಕರೆ ಕಾಯಿಲೆಯಿಂದ ಮುಕ್ತರಾಗಲು ದಾರಿ ತೋರಲಿದೆ. ಭಾರತದಲ್ಲಿಯೂ, 2024ರ ಅಂಕಿ-ಅಂಶಗಳ ಪ್ರಕಾರ, ಟೈಪ್ 1 ಡಯಾಬಿಟೀಸ್ ಪೀಡಿತರ ಸಂಖ್ಯೆ 10 ಕೋಟಿ 1 ಲಕ್ಷಕ್ಕೆ ಏರಿಕೆ ಹೊಂದಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ಅತ್ಯಂತ ಅಗತ್ಯವಾಗಿರುವುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ, ಇದು ಒಂದು ಕ್ರಾಂತಿಕಾರಿ ಯುಗದ ಆರಂಭವೇ ಎಂಬುದನ್ನು ನಾವು ಮನಗಾಣಿಸಬೇಕಾಗಿದೆ. ವೈದ್ಯಕೀಯ ಕ್ಷೇತ್ರದ (Medical feild) ಮುಂದಿನ ಹಂತದಲ್ಲಿ, ಈ ತಂತ್ರಜ್ಞಾನಗಳ ಅಭಿವೃದ್ದಿ ಮತ್ತು ಸಾಮಾನ್ಯೀಕರಣದ ಪ್ರಯತ್ನಗಳು ಜಾಗತಿಕ ಮಟ್ಟದಲ್ಲಿ ವೇಗವಾಗಿ ನಡೆಯಲಿದ್ದು, ಕೆಲವು ವರ್ಷಗಳಲ್ಲಿ ನಮ್ಮ ದೇಶಕ್ಕೂ ಪ್ರಬಲವಾಗಿ ಲಭ್ಯವಾಗಬಹುದು. ಆದರೆ, ಇದು ಎಲ್ಲರಿಗೂ ಸಮಾನವಾಗಿ ಲಭ್ಯವಾಗಲು, ದೀರ್ಘಕಾಲಿಕ ಪ್ರಯೋಗಗಳು, ಸುರಕ್ಷತಾ ಪರೀಕ್ಷೆಗಳು, ಮತ್ತು ಸರಿಯಾದ ನಿಯಂತ್ರಣ ವ್ಯವಸ್ಥೆಗಳು ಅತ್ಯಗತ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಆರೋಗ್ಯ: ಡಯಾಬಿಟೀಸ್, ಕೊಲೆಸ್ಟ್ರಾಲ್, ಬಿಪಿ ಎಲ್ಲದಕ್ಕೂ ಈ ಹಣ್ಣಿನ ಬೀಜವೇ ರಾಮಬಾಣ.! ವರ್ಷದಲ್ಲಿ ಒಂದೇ ತಿಂಗಳು ಸಿಗುವ ಹಣ್ಣಿದು!
- ನಿಮಗೆ ಬಿಕ್ಕಳಿಕೆ ಬರುತ್ತಾ.? ಯಾರೋ ನೆನೆಪು ಮಾಡಿಕೊಳ್ತಿದಾರೆ ಅಂತ ಮಾತ್ರ ಅನ್ಕೋಬೇಡಿ ಇದು ಗಂಭೀರ ಸಮಸ್ಯೆಯ ಸೂಚನೆ.!
- ರಾತ್ರಿ ಊಟದ ನಂತರ ಹೊಟ್ಟೆಮೇಲೆ ಮಲಗುವುದು ಎಷ್ಟು ಅಪಾಯಕಾರಿ ಗೊತ್ತಾ ! ಈ 6 ಗಂಭೀರ ಸಮಸ್ಯೆಗಳನ್ನು ತಿಳಿದುಕೊಳ್ಳಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.