ಸ್ವಿಫ್ಟ್ ನಿಂದ ಇನ್ನೋವಾ ವರೆಗೆ – ಹೊಸ GST 2.0 ಕಾರು ಮಾರುಕಟ್ಟೆಗೆ ತಂದಿರುವ ದೊಡ್ಡ ಬದಲಾವಣೆ
ಭಾರತದಲ್ಲಿ ವಾಹನ ಪ್ರಿಯರಿಗೆ ಸಿಹಿ ಸುದ್ದಿ ಬಂದಿದೆ. ಸರಕು ಮತ್ತು ಸೇವಾ ತೆರಿಗೆ (GST) 2.0 ಜಾರಿಗೆ ಬಂದ ನಂತರ, ಸಣ್ಣ ಹ್ಯಾಚ್ಬ್ಯಾಕ್ಗಳಿಂದ ಹಿಡಿದು ದೊಡ್ಡ SUV ಹಾಗೂ MPVಗಳವರೆಗೆ ಬೆಲೆ ಕಡಿತ ಕಾಣಬಹುದು. ಉದ್ಯಮ ತಜ್ಞರ ಅಂದಾಜು ಪ್ರಕಾರ, ಕೆಲವು ಮಾದರಿಗಳಲ್ಲಿ ಕಾರಿನ ದರವು ಅತ್ಯಧಿಕ 9% ವರೆಗೆ ಇಳಿಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಜನಪ್ರಿಯ ಮಾದರಿಗಳ ಬೆಲೆಯಲ್ಲಿ ಬದಲಾವಣೆ
ಹೊಸ ತೆರಿಗೆ ರಚನೆಯ ಪರಿಣಾಮವಾಗಿ ಗ್ರಾಹಕರ ಮೆಚ್ಚಿನ ಕೆಲವು ಕಾರುಗಳು ಅಗ್ಗವಾಗಲಿವೆ:
ಮಾರುತಿ ಸುಜುಕಿ ವ್ಯಾಗನ್ಆರ್(Maruti Suzuki WagonR): ಮೂಲ ರೂಪಾಂತರದಲ್ಲಿ ಶೇ. 8.6 ರಷ್ಟು ಇಳಿಕೆಯಿಂದ ದರ ರೂ. 5.29 ಲಕ್ಷಕ್ಕೆ ತಲುಪುವ ಸಾಧ್ಯತೆ.
ಮಾರುತಿ ಸುಜುಕಿ ಸ್ವಿಫ್ಟ್(Maruti Suzuki Swift): ಇಳಿಕೆಯ ನಂತರ ಬೆಲೆ ರೂ. 5.93 ಲಕ್ಷ.
ಮಾರುತಿ ಸುಜುಕಿ ಡಿಜೈರ್(Maruti Suzuki Dzire): ದರ ರೂ. 6.25 ಲಕ್ಷ.
ಹ್ಯೂಂಡೈ ಕ್ರೆಟಾ(Hyundai Creta): ಶೇ. 3.6 ಇಳಿಕೆಯಿಂದ ಆರಂಭಿಕ ದರ ರೂ. 10.71 ಲಕ್ಷ.
ಮಾರುತಿ ಬ್ರೆಝಾ(Maruti Brezza): ಹೊಸ ಬೆಲೆ ರೂ. 8.37 ಲಕ್ಷ.
ವೋಕ್ಸ್ವ್ಯಾಗನ್ ವರ್ಟಸ್(Volkswagen Virtus): ಮೂಲ ಮಾದರಿಯ ದರ ರೂ. 11.14 ಲಕ್ಷ.
ಮಾರುತಿ ಸುಜುಕಿ ಎಸ್-ಪ್ರೆಸ್ಸೋ(Maruti Suzuki S-Presso): ₹4.26 ಲಕ್ಷದಿಂದ ಇಳಿದು ₹3.83 ಲಕ್ಷ.
ಹುಂಡೈ ಗ್ರ್ಯಾಂಡ್ i10(Hyundai Grand i10): ₹5.98 ಲಕ್ಷದಿಂದ ಇಳಿದು ₹5.51 ಲಕ್ಷ.
ಟಾಟಾ ಟಿಯಾಗೋ(Tata Tiago): ₹5.65 ಲಕ್ಷದಿಂದ ಇಳಿದು ₹5.15 ಲಕ್ಷ.
ಮಾರುತಿ ಸುಜುಕಿ ಆಲ್ಟೋ K10 (Maruti Suzuki Alto K10): ಪ್ರಸ್ತುತ ದರ ₹4.23 ಲಕ್ಷ, ಹೊಸ ದರವು ಸುಮಾರು ₹3.81 ಲಕ್ಷ (ಎಕ್ಸ್-ಶೋರೂಂ).
SUV ಮತ್ತು MPV ವಿಭಾಗ:
ದೊಡ್ಡ ಕಾರುಗಳ ಮೇಲೂ GST 2.0 ಪರಿಣಾಮ ಸ್ಪಷ್ಟವಾಗಿದೆ. ಹಿಂದಿನ ತೆರಿಗೆ ವ್ಯವಸ್ಥೆಯಲ್ಲಿ SUV ಮತ್ತು MPV ಗಳಿಗೆ 43–50% ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಇದೀಗ 40% ಫ್ಲಾಟ್ ಸ್ಲಾಬ್ ಅನ್ವಯವಾಗುವುದರಿಂದ ಬೆಲೆಯಲ್ಲಿ ಇಳಿಕೆ ಕಂಡುಬರುತ್ತದೆ. ಮಹೀಂದ್ರ ಥಾರ್(Thar), ಮಹೀಂದ್ರ ಸ್ಕಾರ್ಪಿಯೋ(Scorpio)ಮತ್ತು ಟೊಯೋಟಾ ಇನ್ನೋವಾ ಕ್ರಿಸ್ಟಾ(Toyota Innova Cresta), ಈ ಕಾರುಗಳ ಬೆಲೆಗಳಲ್ಲಿ ಇನ್ನಷ್ಟು ಕಡಿತ ಕಾಣುವ ನಿರೀಕ್ಷೆ.
ಕಾರು ಉದ್ಯಮದ ದೃಷ್ಟಿಕೋನ:
ಹೊಸ ಜಿಎಸ್ಟಿ 2.0 ಯಲ್ಲಿ ಸಣ್ಣ ಮತ್ತು ದೊಡ್ಡ ಕಾರುಗಳಿಗೆ ಸಮಾನ ಪ್ರಮಾಣದಲ್ಲಿ ತೆರಿಗೆ ಕಡಿತ ಅನ್ವಯವಾಗಲಿದೆ. ಇದರಿಂದ ಕಾರು ಉದ್ಯಮದಲ್ಲಿ ಮಹತ್ವದ ಬದಲಾವಣೆ ಕಂಡುಬರುವ ಸಾಧ್ಯತೆ ಇದೆ. ಹ್ಯಾಚ್ಬ್ಯಾಕ್ ವಿಭಾಗದಲ್ಲಿ ಬಜೆಟ್ ಕಾರು ಹುಡುಕುವ ಮಧ್ಯಮ ವರ್ಗದವರಿಗೆ ಇದು ಹೆಚ್ಚು ಅನುಕೂಲವಾಗಲಿದ್ದು, ಅವರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅದೇ ರೀತಿ SUV ಮತ್ತು MPV ವಿಭಾಗದಲ್ಲಿ ಬ್ರೆಝಾ, ಎಕ್ಸ್ಯುವಿ 700, ಇನ್ನೋವಾ ಕ್ರಿಸ್ಟಾ ಹೀಗೆ ಹೆಚ್ಚಿನ ಬೇಡಿಕೆಯ ಕಾರುಗಳು ಈಗ ಹೆಚ್ಚು ಸ್ಪರ್ಧಾತ್ಮಕ ಬೆಲೆಯಲ್ಲಿ ಲಭ್ಯವಾಗಲಿವೆ. ಇಂತಹ ಹೊಸ ದರ ತಂತ್ರವು ಆಟೋಮೋಟಿವ್ ಮಾರುಕಟ್ಟೆಯಲ್ಲಿ ಮಾರಾಟವನ್ನು ಉತ್ತೇಜಿಸಿ, ಕಂಪನಿಗಳಿಗೆ ಹೆಚ್ಚುವರಿ ಬೆಳವಣಿಗೆಗೆ ಕಾರಣವಾಗುವ ನಿರೀಕ್ಷೆ ಇದೆ.
ಗ್ರಾಹಕರಿಗೆ ಲಾಭ:
ಗ್ರಾಹಕರಿಗೆ ಈ ಬದಲಾವಣೆ ಹಲವು ರೀತಿಯಲ್ಲಿ ಲಾಭಕರವಾಗಲಿದೆ. ಕಡಿಮೆ ದರದಲ್ಲಿ ಹೆಚ್ಚು ಆಯ್ಕೆಗಳು ಲಭ್ಯವಾಗುವುದರಿಂದ ಕಾರು ಖರೀದಿಸಲು ಬಯಸುವವರಿಗೆ ಅನುಕೂಲವಾಗುತ್ತದೆ. ವಿಶೇಷವಾಗಿ, ಎಂಟ್ರಿ ಲೆವೆಲ್ ಕಾರು ಖರೀದಿಸುವ ಕನಸು ಹೊಂದಿರುವ ಮಧ್ಯಮ ವರ್ಗದ ಕುಟುಂಬಗಳು ಇದರಿಂದ ತಮ್ಮ ಕನಸನ್ನು ಸಾಕಾರಗೊಳಿಸಬಹುದು. ಅಲ್ಲದೇ SUV ಹಾಗೂ MPV ಮಾದರಿಯ ವಾಹನಗಳನ್ನು ಸಹ ಹೋಲಿಕೆಯಂತೆ ಕಡಿಮೆ ಬೆಲೆಯಲ್ಲಿ ಪಡೆಯಲು ಸಾಧ್ಯವಾಗುವುದರಿಂದ, ಹೆಚ್ಚಿನವರು ತಮ್ಮ ಬಜೆಟ್ಗೆ ತಕ್ಕಂತೆ ಉತ್ತಮ ಮಾದರಿಯ ವಾಹನವನ್ನು ಆರಿಸಿಕೊಳ್ಳಲು ಸಾಧ್ಯವಾಗುತ್ತದೆ.
ಉದ್ಯಮ ತಜ್ಞರ ಪ್ರಕಾರ, GST 2.0 ಪರಿಣಾಮವು ಕೇವಲ ತಾತ್ಕಾಲಿಕ ಬೆಲೆ ಇಳಿಕೆಗೆ ಸೀಮಿತವಾಗದೇ, ವಾಹನ ಮಾರುಕಟ್ಟೆಯ ಸಮಗ್ರ ವೃದ್ಧಿಗೆ ದಾರಿ ಮಾಡಿಕೊಡಬಹುದು. ಹೆಚ್ಚುವರಿ ಬೇಡಿಕೆಯೊಂದಿಗೆ, ದೇಶೀಯ ತಯಾರಕರು ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುವ ನಿರೀಕ್ಷೆಯೂ ಇದೆ.
ಸರಳವಾಗಿ ಹೇಳುವುದಾದರೆ, GST 2.0 ಭಾರತದ ಕಾರು ಮಾರುಕಟ್ಟೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಮಹತ್ತರ ಸುಧಾರಣೆ. ಸ್ವಿಫ್ಟ್, ಬ್ರೆಝಾ ಹೀಗಾದ ಸಣ್ಣ ಕಾರುಗಳಿಂದ ಹಿಡಿದು ಇನ್ನೋವಾ, ಎಕ್ಸ್ಯುವಿ 700 ಮಾದರಿಯ ದೊಡ್ಡ ವಾಹನಗಳವರೆಗೆ ಅಗ್ಗವಾಗುವ ದಾರಿ ಇದೀಗ ತೆರೆದಿದೆ.

ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




