ಇಂದಿನ ಕಾಲದಲ್ಲಿ ವಿದ್ಯುತ್ ವೆಚ್ಚ (Electricity cost) ಸಾಮಾನ್ಯ ಮನೆಮಂದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪ್ರತಿಮಾಸದ ವಿದ್ಯುತ್ ಬಿಲ್ಲು ಕುಟುಂಬದ ಖರ್ಚಿನ ಒಂದು ಪ್ರಮುಖ ಭಾಗವಾಗುತ್ತದೆ. ವಿಶೇಷವಾಗಿ ಮಧ್ಯಮ ವರ್ಗ ಹಾಗೂ ನಿವೃತ್ತ ನಾಗರಿಕರಿಗೆ ವಿದ್ಯುತ್ ವೆಚ್ಚ ಕಡಿಮೆ ಮಾಡುವ ಮಾರ್ಗಗಳನ್ನು ಹುಡುಕುವುದು ಅನಿವಾರ್ಯವಾಗಿದೆ. ಇದೇ ಸಂದರ್ಭದಲ್ಲಿ, ಪರಿಸರ ಸಂರಕ್ಷಣೆ ಹಾಗೂ ನವೀಕರಿಸಬಹುದಾದ ಶಕ್ತಿಯ ಬಳಕೆಯ ಅಗತ್ಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಎರಡು ಪ್ರಮುಖ ಸಮಸ್ಯೆಗಳಿಗೆ (Problems) ಸಮಗ್ರ ಪರಿಹಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಜಿ ಯೋಜನೆಯನ್ನು ಜಾರಿಗೊಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಕೇಂದ್ರ ಸರ್ಕಾರವು 2024ರ ಫೆಬ್ರವರಿಯಲ್ಲಿ “ಪ್ರಧಾನಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಜಿ ಯೋಜನೆ” (PM Surya Ghar Muft Bijli Yojana) ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಂದ ಅಧಿಕೃತವಾಗಿ ಆರಂಭಿಸಲಾಯಿತು. ಇದರ ಅಡಿಯಲ್ಲಿ, ದೇಶದಾದ್ಯಂತ ಒಂದು ಕೋಟಿ ಮನೆಗಳಲ್ಲಿ ಸೌರ ಘಟಕಗಳನ್ನು (Solar units in one crore homes) ಅಳವಡಿಸುವ ಗುರಿ ಹೊಂದಲಾಗಿದೆ. ವಿಶೇಷವೆಂದರೆ, ಈ ಯೋಜನೆ ಅಳವಡಿಸಿಕೊಂಡರೆ ಮನೆಮಂದಿಗೆ 20 ವರ್ಷಗಳ ಕಾಲ ಉಚಿತ ವಿದ್ಯುತ್ ಬಳಕೆಯ ಹಕ್ಕು ಸಿಗುತ್ತದೆ. ಜೊತೆಗೆ, ಹೆಚ್ಚುವರಿ ಉತ್ಪಾದನೆಯಾಗುವ ವಿದ್ಯುತ್ ಅನ್ನು ಸ್ಥಳೀಯ ವಿದ್ಯುತ್ ಪೂರೈಕೆ ಕಂಪನಿಗಳಿಗೆ (DISCOM) ಮಾರಾಟ ಮಾಡುವ ಮೂಲಕ ಆದಾಯ ಗಳಿಸುವ ಅವಕಾಶವೂ ಒದಗುತ್ತದೆ.
ಸೌರ ಘಟಕದಿಂದ ಸಿಗುವ ಪ್ರಮುಖ ಪ್ರಯೋಜನಗಳು(important Benefits)?:
20 ವರ್ಷಗಳ ಕಾಲ ಉಚಿತ ವಿದ್ಯುತ್ ಬಳಕೆ.
ವಿದ್ಯುತ್ ಬಿಲ್ಲು ಶೂನ್ಯಕ್ಕೆ ಸಮಾನ.
ಹೆಚ್ಚುವರಿ ಉತ್ಪಾದನೆಯಾದ ವಿದ್ಯುತ್ ಮಾರಾಟದ ಮೂಲಕ ಆದಾಯ.
5 ವರ್ಷಗಳ ಉಚಿತ ತಾಂತ್ರಿಕ ನಿರ್ವಹಣೆ.
25 ವರ್ಷಗಳ ದೀರ್ಘಾವಧಿಯ ಉಪಯೋಗ.
ಕೇಂದ್ರ ಸರ್ಕಾರದಿಂದ ಆಕರ್ಷಕ ಸಬ್ಸಿಡಿ(Subsidy).
ಕೇವಲ 5 ನಿಮಿಷಗಳಲ್ಲಿ ಡಿಜಿಟಲ್ ಅರ್ಜಿ ಪ್ರಕ್ರಿಯೆ.
ಪರಿಸರ ಸ್ನೇಹಿ – ಹಸಿರು ಶಕ್ತಿ ಬಳಕೆ.
ವೆಚ್ಚ, ಸಬ್ಸಿಡಿ ಮತ್ತು ಉಳಿತಾಯ ಲೆಕ್ಕಾಚಾರ:
ಸೌರ ಘಟಕ ಅಳವಡಿಸಲು ಮನೆಯ ಮೇಲ್ಚಾವಣಿಯಲ್ಲಿ ಪ್ರತಿ 1 ಕಿಲೋವಾಟ್ (KW) ಘಟಕಕ್ಕೆ 10×10 ಅಡಿ ಜಾಗ ಅಗತ್ಯ.
1 KW ಘಟಕ:
ತಿಂಗಳಿಗೆ 100 ಯೂನಿಟ್ ಉತ್ಪಾದನೆ
ವೆಚ್ಚ: ₹60,000 – ₹80,000
ಸಬ್ಸಿಡಿ: ₹30,000
ವಾರ್ಷಿಕ ಉಳಿತಾಯ: ₹9,600
2 KW ಘಟಕ:
ತಿಂಗಳಿಗೆ 200 ಯೂನಿಟ್ ಉತ್ಪಾದನೆ
ವೆಚ್ಚ: ₹1,20,000 – ₹1,60,000
ಸಬ್ಸಿಡಿ: ₹60,000
ವಾರ್ಷಿಕ ಉಳಿತಾಯ: ₹21,600
3 KW ಘಟಕ:
ತಿಂಗಳಿಗೆ 300 ಯೂನಿಟ್ ಉತ್ಪಾದನೆ
ವೆಚ್ಚ: ₹1,80,000 – ₹2,40,000
ಸಬ್ಸಿಡಿ: ₹60,000
ವಾರ್ಷಿಕ ಉಳಿತಾಯ: ₹35,000
ಈ ಯೋಜನೆಗೆ ಅರ್ಹರು ಯಾರು?:
ಖಾಸಗಿ ಮನೆಮಾಲೀಕರು (ಗ್ರಾಮ ಮತ್ತು ನಗರ ಪ್ರದೇಶ).
ಅಪಾರ್ಟ್ಮೆಂಟ್ / ವಸತಿ ಸಮೂಹಗಳ ಸಂಘಗಳು.
ಚಾವಣಿಯಲ್ಲಿ ಖಾಲಿ ಸ್ಥಳವಿರುವವರು.
ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು(Documents) ಯಾವುವು?:
ಆಧಾರ್ ಕಾರ್ಡ್
ಇತ್ತೀಚಿನ ವಿದ್ಯುತ್ ಬಿಲ್
ಬ್ಯಾಂಕ್ ಪಾಸ್‌ಬುಕ್ ಪ್ರತಿಗೆ
ಚಾವಣಿಯ ಮೇಲಿನ ಸ್ಥಳದ ಫೋಟೋ
ಅರ್ಜಿ ಸಲ್ಲಿಸುವ ವಿಧಾನ:
ಮೊದಲಿಗೆ ಅಧಿಕೃತ ವೆಬ್‌ಸೈಟ್ pmsuryaghar.gov.in ಗೆ ಭೇಟಿ ನೀಡಿ.
Apply for Rooftop Solar ಆಯ್ಕೆ ಮಾಡಿ.
ನಿಮ್ಮ ರಾಜ್ಯ ಹಾಗೂ ವಿದ್ಯುತ್ ಪೂರೈಕೆ ಕಂಪನಿಯನ್ನು (ಉದಾ: BESCOM, MESCOM, HESCOM) ಆಯ್ಕೆ ಮಾಡಿ.
ಗ್ರಾಹಕ ಐಡಿ ನಮೂದಿಸಿ, ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್ಲೋಡ್ ಮಾಡಿ.
ಅರ್ಜಿಯನ್ನು ಸಲ್ಲಿಸಿದ ನಂತರ Application ID ಪಡೆಯಿರಿ.
ಅರ್ಜಿ ಸ್ಥಿತಿಯನ್ನು ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದು.
ನೋಂದಣಿ ನಂತರದ ಹಂತಗಳು:
ಸಂಬಂಧಿಸಿದ DISCOM ಅಧಿಕಾರಿಗಳು ತಾಂತ್ರಿಕ ಪರಿಶೀಲನೆ ನಡೆಸುತ್ತಾರೆ.
ಅನುಮೋದನೆ ಬಳಿಕ ಮಾನ್ಯ ಏಜೆನ್ಸಿ (Agency) ಮೂಲಕ ಸೌರ ಘಟಕ ಅಳವಡಿಸಲಾಗುತ್ತದೆ.
ಸರ್ಕಾರ ನೀಡುವ ಸಬ್ಸಿಡಿ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಯೋಜನೆಯ ಮಹತ್ವ:
ಈ ಯೋಜನೆ ಕೇವಲ ಉಚಿತ ವಿದ್ಯುತ್ ಒದಗಿಸುವುದಲ್ಲದೆ, ಮನೆಮಂದಿಯ ಆರ್ಥಿಕ ಭಾರವನ್ನು (The financial burden of the family) ಕಡಿಮೆ ಮಾಡುವಲ್ಲಿ ಹಾಗೂ ಪರಿಸರ ಸಂರಕ್ಷಣೆಗೆ ಸಹಕಾರ ನೀಡುವಲ್ಲಿ ಮಹತ್ತರ ಪಾತ್ರವಹಿಸುತ್ತದೆ. ನಿವೃತ್ತ ನಾಗರಿಕರು, ಮಧ್ಯಮ ವರ್ಗದ ಕುಟುಂಬಗಳು ಹಾಗೂ ಪರಿಸರ ಜಾಗೃತಿಯುಳ್ಳ ಜನರಿಗೆ ಇದು ಅಪರೂಪದ ಸುವರ್ಣಾವಕಾಶ. ಸೌರ ಶಕ್ತಿಯ (Solar energy) ಅಳವಡಿಕೆ ಮೂಲಕ ನಿಮ್ಮ ಮನೆಗೆ ದೀರ್ಘಾವಧಿಯ ಆರ್ಥಿಕ ಭದ್ರತೆ ಹಾಗೂ ನೈಸರ್ಗಿಕ ಬೆಳಕಿನ ಶಾಶ್ವತ ಸೌಲಭ್ಯ ಪಡೆಯಿರಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.