Picsart 25 08 31 00 17 07 579 scaled

ಸಂಬಳದ ಪ್ರಶ್ನೆಗೆ ನೇರ ಉತ್ತರ ಬೇಡ: ಬಿಲ್ ಗೇಟ್ಸ್ ನೀಡಿದ ಅಮೂಲ್ಯ ಸಂದರ್ಶನದ ಸಲಹೆ ಇಲ್ಲಿದೆ.

Categories:
WhatsApp Group Telegram Group

ಉದ್ಯೋಗ ಹುಡುಕುವ ಪ್ರತಿಯೊಬ್ಬರಿಗೂ ಸಂದರ್ಶನ (Interview) ಅತಿ ಮುಖ್ಯ ಹಂತ. ಹೊಸಬರಾಗಿರಲಿ ಅಥವಾ ಹಲವು ವರ್ಷಗಳ ಅನುಭವ (Experience) ಹೊಂದಿರುವವರಾಗಿರಲಿ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಿದಾಗ ಕಂಪನಿ ಕೇಳುವ ಮೊದಲ ಪ್ರಶ್ನೆಗಳಲ್ಲೊಂದು “ನಿಮಗೆ ಸಂಬಳ (Salary) ಎಷ್ಟು ಬೇಕು?” ಎಂಬುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 

ಇದು ಸಾಮಾನ್ಯ ಪ್ರಶ್ನೆಯಾದರೂ, ಉತ್ತರಿಸಲು ಬಹುತೇಕರು ತಡಕಾಡುತ್ತಾರೆ. ಏಕೆಂದರೆ ಹೆಚ್ಚು ಕೇಳಿದರೆ ಅವಕಾಶ ತಪ್ಪಬಹುದೇ? ಕಡಿಮೆ ಕೇಳಿದರೆ ತಮ್ಮ ಮೌಲ್ಯ (Value) ತಗ್ಗಿಸಿಕೊಳ್ಳಬೇಕೇ? ಎಂಬ ಗೊಂದಲದಲ್ಲಿ ಹಲವರು ಇರುವರು. ಈ ಕಾರಣಕ್ಕಾಗಿ ಉದ್ಯೋಗ ಕ್ಷೇತ್ರದವರಿಗೆ ಮಹತ್ವದ ಸಲಹೆಯನ್ನು ಮೈಕ್ರೋಸಾಫ್ಟ್ (Microsoft) ಸಹ-ಸಂಸ್ಥಾಪಕ ಹಾಗೂ ವಿಶ್ವದ ಅತಿ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್‌ ಗೇಟ್ಸ್ (Bill Gates) ನೀಡಿದ್ದಾರೆ.

ಬಿಲ್ ಗೇಟ್ಸ್ ಸಲಹೆ: ನೇರ ಸಂಖ್ಯೆಯಲ್ಲಿ ಉತ್ತರಿಸಬೇಡಿ:

ಗೇಟ್ಸ್ ಅಭಿಪ್ರಾಯದ ಪ್ರಕಾರ, ಸಂದರ್ಶನದಲ್ಲಿ “ನಿಮಗೆ ಎಷ್ಟು ಸಂಬಳ ಬೇಕು?” ಎಂಬ ಪ್ರಶ್ನೆಗೆ ನೇರವಾಗಿ ಸಂಖ್ಯೆಯಲ್ಲೋ ಅಥವಾ ಶೇಕಡಾವಾರು (Percentage) ಹೆಚ್ಚಳದಲ್ಲೋ ಉತ್ತರಿಸುವುದನ್ನು ತಪ್ಪಿಸಬೇಕು. ಬದಲಿಗೆ, ಹೆಚ್ಚು ಆಳವಾಗಿ ಹಾಗೂ ಸಮರ್ಥವಾಗಿ ಉತ್ತರ ನೀಡುವುದು ಸೂಕ್ತ.

ಅವರ ಅಭಿಪ್ರಾಯದಲ್ಲಿ, ನಿಮ್ಮ ಉತ್ತರವು “ಕಂಪನಿಯ ಜೊತೆ ದೀರ್ಘಾವಧಿ (Long-term) ಸಂಬಂಧ ಬೆಳೆಸುವ ಆಸಕ್ತಿ ಇದೆ” ಎಂಬುದನ್ನು ತೋರಿಸಬೇಕು. ಅಂದರೆ, ಕೇವಲ ಸಂಬಳಕ್ಕಾಗಿ ಅಲ್ಲ, ಕಂಪನಿಯ ಬೆಳವಣಿಗೆ, ಭವಿಷ್ಯ (Future) ಮತ್ತು ಅವಕಾಶಗಳ ಕಡೆಗೆ ನಿಮ್ಮ ಮನಸ್ಸಿದೆ ಎನ್ನುವ ವಿಶ್ವಾಸವನ್ನು ಉದ್ಯೋಗದಾತರಿಗೆ ನೀಡಬೇಕು.

ಸ್ಟಾಕ್‌ಗೆ (Stock) ಒತ್ತು – ಕೇವಲ ಸಂಬಳಕ್ಕಲ್ಲ:

ಗೇಟ್ಸ್ ಮತ್ತೊಂದು ಪ್ರಮುಖ ಅಂಶವನ್ನು ತಿಳಿಹೇಳುತ್ತಾರೆ, ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ಅನೇಕರು ಮೂಲ ಸಂಬಳಕ್ಕಿಂತ ಕಂಪನಿಯ ಷೇರು (Stock Options) ಪಡೆಯುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಇಂಟರ್ವ್ಯೂ (Interview) ಸಂದರ್ಭದಲ್ಲಿ “ಸಂಬಳ ಎಷ್ಟು ಬೇಕು?” ಎಂದು ಕೇಳಿದರೆ, ನೀವು ಈ ರೀತಿ ಉತ್ತರಿಸಬಹುದು,
ಪ್ಯಾಕೇಜ್ (Package) ಉತ್ತಮವಾಗಿರುತ್ತದೆ ಎಂದು ನಾನು ನಂಬಿದ್ದೇನೆ.
ಈ ಕಂಪನಿಯ ಭವಿಷ್ಯ (Future) ಉಜ್ವಲವಾಗಿರುವುದರಿಂದ, ಕೇವಲ ಕ್ಯಾಶ್ (Cash) ಸ್ಯಾಲರಿಗಿಂತ ಸ್ಟಾಕ್ ಆಯ್ಕೆಗಳಿಗೆ ಆದ್ಯತೆ ನೀಡಲು ನಾನು ಇಷ್ಟಪಡುತ್ತೇನೆ.
ಅನೇಕ ಕಂಪನಿಗಳು ಉತ್ತಮ ಆಫರ್ (Offer) ನೀಡಿವೆ, ಆದರೆ ನೀವು ನನ್ನೊಂದಿಗೆ ನ್ಯಾಯಯುತವಾಗಿ ವರ್ತಿಸುತ್ತೀರಿ ಮತ್ತು ಸ್ಟಾಕ್ ಆಯ್ಕೆಯನ್ನು ನೀಡುತ್ತೀರಿ ಎಂಬ ವಿಶ್ವಾಸ ನನಗಿದೆ.

ಇದರ ಪರಿಣಾಮ ಏನು?:

ನೀವು ಈ ರೀತಿಯ ಉತ್ತರ ನೀಡಿದರೆ, ಕಂಪನಿ ನಿಮ್ಮನ್ನು ಕೇವಲ ಸಂಬಳಕ್ಕಾಗಿ ಬಂದ ಅಭ್ಯರ್ಥಿಯೆಂದು ನೋಡುವುದಿಲ್ಲ. ಬದಲಿಗೆ, ಈ ವ್ಯಕ್ತಿ ನಮ್ಮ ಕಂಪನಿಯ ಬೆಳವಣಿಗೆಗೆ ದೀರ್ಘಾವಧಿಯಲ್ಲಿ (Long-term) ಬೆಂಬಲ ನೀಡಲು ತಯಾರಿದ್ದಾರೆ ಎಂಬ ನಂಬಿಕೆ ಬೆಳೆಸುತ್ತದೆ. ಇದು ಉದ್ಯೋಗದಾತರಿಗೆ ನಿಮ್ಮ ಮೇಲೆ ಹೆಚ್ಚುವರಿ ವಿಶ್ವಾಸ ಮೂಡಿಸುತ್ತದೆ.

ಒಟ್ಟಾರೆಯಾಗಿ, ಹೊಸಬರಾಗಿರಲಿ ಅಥವಾ ಅನುಭವಿಗಳು (Experienced) ಆಗಿರಲಿ ಮುಂದೆ ನೀವು ಕೆಲಸಕ್ಕೆ ಅರ್ಜಿ ಸಲ್ಲಿಸಿದಾಗ ಸಂಬಳದ ಪ್ರಶ್ನೆಗೆ ನೇರ ಸಂಖ್ಯೆಯಲ್ಲಿ ಉತ್ತರಿಸದೆ, ಬಿಲ್ ಗೇಟ್ಸ್ (Bill Gates) ಶಿಫಾರಸು ಮಾಡಿದ ರೀತಿಯಲ್ಲಿ ತಂತ್ರಜ್ಞಾನದ (Strategic) ಉತ್ತರ ನೀಡುವುದರಿಂದ ನಿಮ್ಮ ಅವಕಾಶಗಳು ಹೆಚ್ಚುವ ಸಾಧ್ಯತೆ ಇದೆ..

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories