ಬೆಂಗಳೂರು:
ಶಾಖಾ ಸಂಘಗಳ ಅಧ್ಯಕ್ಷರು ತಮ್ಮ ಶಾಖೆಯ ಪದಾಧಿಕಾರಿಗಳ ವರ್ಗಾವಣೆಗೆ ವಿನಾಯಿತಿ ಕೋರಿ ನೇರವಾಗಿ ಇಲಾಖಾ ಮುಖ್ಯಸ್ಥರಿಗೆ ಪತ್ರ ವ್ಯವಹರಿಸದಿರುವ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಎಚ್. ಗಿರಿಗೌಡ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಕೆಲವು ಜಿಲ್ಲೆ, ತಾಲ್ಲೂಕು ಮತ್ತು ಯೋಜನಾ ಶಾಖೆಗಳ ಅಧ್ಯಕ್ಷರು ತಮ್ಮ ಶಾಖೆಯ ಪದಾಧಿಕಾರಿಗಳಿಗೆ ವರ್ಗಾವಣೆಯಿಂದ ವಿನಾಯಿತಿ ಕೋರಿ, ಸಂಬಂಧಿತ ಇಲಾಖಾ ಮುಖ್ಯಸ್ಥರಿಗೆ ಅಥವಾ ಸರ್ಕಾರಕ್ಕೆ ಶಾಖಾ ಸಂಘಗಳ ಲೆಟರ್‌ಹೆಡ್ ಮೂಲಕ ನೇರವಾಗಿ ಪತ್ರ ವ್ಯವಹರಿಸಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ, ಸಾರ್ವತ್ರಿಕ ವರ್ಗಾವಣೆ/ವರ್ಗಾವಣೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಸರ್ಕಾರದ ಸುತ್ತೋಲೆಯನ್ವಯ ವಿನಾಯಿತಿ ಕಲ್ಪಿಸಲಾಗಿದೆ. ಆದರೆ, ಈ ಅವಕಾಶವನ್ನು ಬಳಸಿಕೊಳ್ಳಲು ಶಾಖಾ ಸಂಘಗಳು ರಾಜ್ಯ ಸಂಘದ ಗಮನಕ್ಕೆ ತರದೇ, ಚುನಾಯಿತರಲ್ಲದ ನಿರ್ದೇಶಕರು ಸೇರಿದಂತೆ ಪದಾಧಿಕಾರಿಗಳಿಗೆ ವಿನಾಯಿತಿ ನೀಡುವಂತೆ ಇಲಾಖಾ ಮುಖ್ಯಸ್ಥರಿಗೆ ಮತ್ತು ಸರ್ಕಾರಕ್ಕೆ ನೇರವಾಗಿ ಪತ್ರ ವ್ಯವಹರಿಸಿರುವ ಬಗ್ಗೆ ಕೆಲವು ಇಲಾಖಾ ಮುಖ್ಯಸ್ಥರು ರಾಜ್ಯಾಧ್ಯಕ್ಷರಿಂದ ಸ್ಪಷ್ಟನೆ ಕೋರಿದ್ದಾರೆ.
ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯು ಈಗಾಗಲೇ ಶಾಖಾ ಸಂಘಗಳು ರಾಜ್ಯ ಮಟ್ಟದ ಇಲಾಖಾ ಮುಖ್ಯಸ್ಥರಿಗೆ ಅಥವಾ ಸರ್ಕಾರಕ್ಕೆ ನೇರವಾಗಿ ಪತ್ರ ವ್ಯವಹರಿಸದಂತೆ ನಿರ್ಣಯ ದಾಖಲಿಸಿ ಅನುಮೋದನೆ ಮಾಡಿದೆ.
ಆದ್ದರಿಂದ, ಎಲ್ಲಾ ಜಿಲ್ಲೆ/ತಾಲ್ಲೂಕು ಮತ್ತು ಯೋಜನಾ ಶಾಖಾ ಸಂಘಗಳ ಅಧ್ಯಕ್ಷರು ಸಾಮಾನ್ಯ ವರ್ಗಾವಣೆ, ವರ್ಗಾವಣೆ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ರಾಜ್ಯ ಮಟ್ಟದ ಇಲಾಖಾ ಮುಖ್ಯಸ್ಥರಿಗೆ ಅಥವಾ ಸರ್ಕಾರಕ್ಕೆ ನೇರವಾಗಿ ಪತ್ರ ವ್ಯವಹರಿಸದಂತೆ ಸೂಚಿಸಲಾಗಿದೆ. ರಾಜ್ಯ ಮಟ್ಟದ ಕಛೇರಿಗಳಿಗೆ ಸಂಬಂಧಿತ ವಿಷಯಗಳಿಗಾಗಿ ರಾಜ್ಯಾಧ್ಯಕ್ಷರಿಗೆ ಪತ್ರ ವ್ಯವಹರಿಸಬೇಕು ಎಂದು ತಿಳಿಸಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ, ರಾಜ್ಯ ಕಾರ್ಯಕಾರಿ ಸಮಿತಿಯ ನಿರ್ಣಯ ಹಾಗೂ ಸಂಘದ ಬೈಲಾ ನಿಯಮದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಜ್ಯ ಸರ್ಕಾರಿ ನೌಕರರ ಸಂಘದಿಂದ ವರ್ಗಾವಣೆ ಸಂಬಂಧಿತ ‘ಪತ್ರ ವ್ಯವಹಾರ’ದ ಬಗ್ಗೆ ಮಹತ್ವದ ಆದೇಶ.!
- 2024-25ನೇ ಸಾಲಿನ `ಶಿಕ್ಷಕರ ವರ್ಗಾವಣೆ’ಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ.!
- ರಾಜ್ಯದ ರೈತರ ಪೌತಿ ಖಾತೆ ಕುರಿತು ಬಂಪರ್ ಗುಡ್ ನ್ಯೂಸ್, ಜಮೀನು ವರ್ಗಾವಣೆಗೆ ಹೊಸ ರೂಲ್ಸ್
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.