ರಾಜ್ಯ ಸರ್ಕಾರವು ಪರಿಶಿಷ್ಟ ಜಾತಿ (SC) ಸಮುದಾಯದ ಯುವಕರ ಕೌಶಲ್ಯಾಭಿವೃದ್ಧಿಗೆ ಮಹತ್ವದ ಹೆಜ್ಜೆ ಇಟ್ಟಿದೆ. ಇಂದಿನ ಕಾಲದಲ್ಲಿ ಡ್ರೋನ್ ತಂತ್ರಜ್ಞಾನವು ಕೃಷಿ, ಲಾಜಿಸ್ಟಿಕ್ಸ್, ಮೇಲ್ವಿಚಾರಣೆ (Surveillance), ಮೂಲಸೌಕರ್ಯ ಅಭಿವೃದ್ಧಿ, ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಕೃಷಿ ಬೆಳವಣಿಗೆಗೆ ನವೀನ ತಂತ್ರಜ್ಞಾನ, ಭದ್ರತಾ ವ್ಯವಸ್ಥೆಗಳಲ್ಲಿ ವೇಗ ಮತ್ತು ನಿಖರತೆ, ಹಾಗು ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಸುಧಾರಿತ ಸೇವೆಗಳಿಗಾಗಿ ಡ್ರೋನ್ ತಂತ್ರಜ್ಞಾನ ಬಹುಮುಖ್ಯವಾಗಿದ್ದು, ಭವಿಷ್ಯದ ಉದ್ಯೋಗ ಮಾರುಕಟ್ಟೆಯಲ್ಲಿ ಡ್ರೋನ್ ಪೈಲಟ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇದೇ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಡ್ರೋನ್ ಉಪಕರಣದ ಬಳಕೆಯಲ್ಲಿ ಪರಿಣತಿ ಕಲಿಸಲು ರಾಜ್ಯ ಸರ್ಕಾರವು ಉಚಿತ 15 ದಿನಗಳ ವಸತಿಯುತ ತರಬೇತಿ ಕಾರ್ಯಕ್ರಮವನ್ನು ಕೈಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಈ ತರಬೇತಿಯನ್ನು ಇಂದಿರಾ ಗಾಂಧಿ ವೃತ್ತಿ ಅಭಿವೃದ್ಧಿ ಕೇಂದ್ರ (Indira Gandhi Vocational Training Centre) 2025-26 ನೇ ಸಾಲಿನಲ್ಲಿ ಅರ್ಜಿ ಆಹ್ವಾನಿಸಿದ್ದು, ಉತ್ತರ ಕರ್ನಾಟಕ (ಬೆಳಗಾವಿ ಮತ್ತು ಕಲಬುರಗಿ ಕಂದಾಯ ವಿಭಾಗಗಳು) ಹಾಗೂ ದಕ್ಷಿಣ ಕರ್ನಾಟಕ (ಬೆಂಗಳೂರು ಮತ್ತು ಮೈಸೂರು ಕಂದಾಯ ವಿಭಾಗಗಳು) ಪ್ರದೇಶಗಳಿಗೆ ಪ್ರತ್ಯೇಕ ತರಬೇತಿ ಶಿಬಿರಗಳನ್ನು ನಡೆಸಲಾಗುವುದು.
ತರಬೇತಿ ವಿವರಗಳು ಹೀಗಿವೆ:
ಅವಧಿ : 15 ದಿನಗಳು (ವಸತಿಯುತ ತರಬೇತಿ)
ತರಬೇತಿ ಕ್ಷೇತ್ರಗಳು :
ಲಾಜಿಸ್ಟಿಕ್ಸ್ ಸರ್ವೇಲೆನ್ಸ್ (Logistics Surveillance)
ಕೃಷಿ (Agriculture)
ಇತರೆ ತಾಂತ್ರಿಕ ಹಾಗೂ ಉದ್ಯಮ ಸಂಬಂಧಿತ ಕ್ಷೇತ್ರಗಳುಳು.
ಅರ್ಜಿ ಸಲ್ಲಿಕೆ:
ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯು ಆಯ್ಕೆ ಮಾಡಿದ ವಿಭಾಗಕ್ಕೆ ಅನುಗುಣವಾಗಿ ತರಬೇತಿ ಕೇಂದ್ರವನ್ನು ನಿಯೋಜಿಸಲಾಗುತ್ತದೆ.
ಇಲಾಖೆಗೆ ಅಗತ್ಯವಿದ್ದಲ್ಲಿ ತರಬೇತಿ ವಿಭಾಗವನ್ನು ಬದಲಾಯಿಸುವ ಹಕ್ಕು ಇದೆ.
ಅರ್ಜಿ ಸಲ್ಲಿಸಲು ಅಗತ್ಯವಿರುವ ವೆಬ್‌ಸೈಟ್ ವಿಳಾಸ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಹಾಗೂ ತರಬೇತಿ ವೇಳಾಪಟ್ಟಿ ಸಂಬಂಧಿಸಿದ ಮಾಹಿತಿಯನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.
ತರಬೇತಿಯ ನಿಯಮಗಳು ಮತ್ತು ಷರತ್ತುಗಳು:
ಅಭ್ಯರ್ಥಿಯು ತರಬೇತಿಯ ಸಮಯದಲ್ಲಿ ನೀಡಲಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
15 ದಿನಗಳ ತರಬೇತಿಯನ್ನು ಪೂರ್ಣಗೊಳಿಸದ ಅಭ್ಯರ್ಥಿ ಅನರ್ಹರಾಗಿರುತ್ತಾರೆ.
ತರಬೇತಿ ಸಂಸ್ಥೆಯ ಅಧ್ಯಾಪಕರಿಗೆ ಅವಿಧೇಯತೆ ಅಥವಾ ದುರ್ನಡತೆ ತೋರಿದಲ್ಲಿ ಅಭ್ಯರ್ಥಿಯನ್ನು ತಕ್ಷಣವೇ ಅನರ್ಹಗೊಳಿಸಲಾಗುತ್ತದೆ.
ತುರ್ತು ಪರಿಸ್ಥಿತಿಯಲ್ಲಿ ಮಾತ್ರ, ತರಬೇತಿ ಸಂಸ್ಥೆ ಹಾಗೂ ಇಲಾಖೆಯ ಅನುಮತಿಯಿಂದ ಹೊರಗೆ ಹೋಗಲು ಅವಕಾಶ ನೀಡಲಾಗುತ್ತದೆ.
ಅಂತಿಮ ಆಯ್ಕೆ ಪ್ರಕ್ರಿಯೆಗೆ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ಅದರ ಫಲಿತಾಂಶವೇ ಅಂತಿಮವಾಗಿರುತ್ತದೆ.
ಮುಖ್ಯ ಸೂಚನೆಗಳು:
ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾಗುವ ಮಾಹಿತಿಯೇ ಅಂತಿಮವಾಗಿರುತ್ತದೆ.
ಯಾವುದೇ ಪ್ರತ್ಯೇಕ ಪತ್ರ ವ್ಯವಹಾರವನ್ನು ಇಲಾಖೆ ನಡೆಸುವುದಿಲ್ಲ, ಆದ್ದರಿಂದ ಅಭ್ಯರ್ಥಿಗಳು ಕಾಲಕಾಲಕ್ಕೆ ವೆಬ್‌ಸೈಟ್ ವೀಕ್ಷಿಸುವುದು ಕಡ್ಡಾಯ.
ಅರ್ಜಿ ಸಲ್ಲಿಕೆ ವೇಳೆ ಅಭ್ಯರ್ಥಿಗಳಿಂದಾದ ದೋಷಗಳಿಗೆ ಅಭ್ಯರ್ಥಿಗಳೇ ಹೊಣೆಗಾರರು.
ಈ ಕಾರ್ಯಕ್ರಮವು ಪರಿಶಿಷ್ಟ ಜಾತಿ ಸಮುದಾಯದ ಯುವಕರಿಗೆ ನವೀನ ತಂತ್ರಜ್ಞಾನದಲ್ಲಿ ಪರಿಣತಿ ಪಡೆಯಲು, ಉದ್ಯೋಗಾವಕಾಶಗಳನ್ನು ವಿಸ್ತರಿಸಿಕೊಳ್ಳಲು ಹಾಗೂ ಸ್ವಾವಲಂಬನೆ ಸಾಧಿಸಲು ಮಹತ್ವದ ಅವಕಾಶವಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.